Muddhu Sose ; ಪರೀಕ್ಷೆ ಬರೆಯಲು ಬಂದ ಮುದ್ದು ಸೊಸೆ ನಟಿ ಪ್ರತಿಮಾ..!

By ಪ್ರಿಯಾ ದೊರೆ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಈಗಾಗಲೇ ಭಾಗ್ಯಲಕ್ಷ್ಮೀ, ಲಕ್ಷ್ಮೀ ಬಾರಮ್ಮ ಹಾಗೂ ರಾಮಾಚಾರಿ ಧಾರಾವಾಹಿಗಳು ಬೋರ್ ಆಗ್ತಿದೆ ಎಂದು ವೀಕ್ಷಕರು ಬೇಸರ ಪಟ್ಟುಕೊಂಡಿದ್ದಾರೆ. ಈ ಮೂರು ಸೀರಿಯಲ್ ರಬ್ಬರ್ ಥರಾ ಕಥೆಯಲ್ಲಿ ಕಥೆ ಹುಟ್ಟಿಕೊಳ್ಳುತ್ತಿದೆ. ಈ ಮೂರು ಸೀರಿಯಲ್ ಗಳು ತನ್ನ ಸಾರಾಂಶವನ್ನೇ ಕಳೆದುಕೊಂಡಿದೆ ಎಂದು ಸಾಕಷ್ಟು ಕಮೆಂಟ್ ಗಳನ್ನು ನೆಟ್ಟಿಗರು ಮಾಡುತ್ತಲೇ ಇದ್ದಾರೆ. ಈ ಸೀರಿಯಲ್ ಗಳ ಜಾಗಕ್ಕೆ ಈಗಷ್ಟೇ ಹೊಸದಾಗಿ ಶುರುವಾಗಿರುವ ವಧು, ಯಜಮಾನ ಸೀರಿಯಲ್ ಬರಬಹುದು ಎಂದು ಗೆಸ್ ಕೂಡ ಮಾಡಿದ್ದರು. ಆದರೆ ಅದು ಸುಳ್ಳಾಗಿತ್ತು.

ಎರಡು ಹೊಸ ಧಾರಾವಾಹಿಗಳ ಪ್ರೊಮೋ

ಈಗ ಕಲರ್ಸ್ ಕನ್ನಡ ವಾಹಿನಿಯೂ ಮತ್ತೆ ಎರಡು ಹೊಸ ಧಾರಾವಾಹಿಗಳ ಪ್ರೊಮೋವನ್ನು ಹರಿ ಬಿಟ್ಟಿವೆ. ಕಳೆದ ತಿಂಗಳು ಭಾರ್ಗವಿ llb ಎಂಬ ಹೊಸ ಧಾರಾವಾಹಿಯ ಪ್ರೊಮೋವನ್ನು ರಿಲೀಸ್ ಮಾಡಿತ್ತು. ಈ ಧಾರಾವಾಹಿಯಲ್ಲಿ ನಟಿ ರಾಧಾ ಭಾಗವತಿ ಅವರು ನಾಯಕಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಸ್ವಪ್ನಾ ಕೃಷ್ಣ ಅವರು ನಿರ್ದೇಶನದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಇದೀಗ ಮತ್ತೊಂದು ಹೊಸ ಧಾರಾವಾಹಿಯ ಪ್ರೊಮೋವನ್ನು ಕಲರ್ಸ್ ಕನ್ನಡ ವಾಹಿನಿ ಪ್ರಸಾರ ಮಾಡಿದೆ. ಈ ಧಾರಾವಾಹಿಯೂ ಕೂಡ ಮಹಿಳಾಧರಿತವಾಗಿದೆ. ಪಿಯುಸಿ ಪರೀಕ್ಷೆ ಮುಗಿಸಿಕೊಂಡು ಹುಡುಗೆ ಮದುವೆಯಾಗಲು ಹೊರಟಿದ್ದಾಳೆ.

written update on new serial muddu sose

ಪರೀಕ್ಷೆಗೆ ಬಂದ ಮಧುಮಗಳೇ ಮುದ್ದು ಸೊಸೆ

ಧಾರಾವಾಹಿಯ ಪ್ರೊಮೋದಲ್ಲಿ ಮಧುಮಗಳಂತೆ ಸಿಂಗಾರ ಮಾಡಿಕೊಂಡು ಬಂದು ಪರೀಕ್ಷೆಯನ್ನು ಬರೆಯುತ್ತಿರುತ್ತಾಳೆ. ಅಡಿಷನಲ್ ಶೀಟ್ ಅನ್ನು ಕೇಳಿದಾಗ ಅವಳ ಮುಖವನ್ನು ತೋರಿಸಲಾಗಿದೆ. ಸರ್ಕಾರಿ ಪದವಿ ಪೂರ್ವ ಕಾಲೇಜು, ಹೊನ್ನೆಮಡು, ಮಂಡ್ಯದಲ್ಲಿ ಪರೀಕ್ಷೆಯನ್ನು ಬರೆದಿದ್ದು, ಈ ಧಾರಾವಾಹಿಗೆ ಮುದ್ದು ಸೊಸೆ ಎಂದು ಹೆಸರಿಡಲಾಗಿದೆ. ಇನ್ನು ಪ್ರೊಮೋ ಪ್ರಸಾರ ಮಾಡಿ ಒಂದು ಗಂಟೆಯಾಗಿದೆ ಅಷ್ಟೇ ಅಷ್ಟರಲ್ಲಾಗಲೇ ನೂರಕ್ಕೂ ಹೆಚ್ಚು ಕಮೆಂಟ್ ಗಳು ಬಂದಿವೆ. ಹದಿನೆಂಟು ಸಾವಿರಕ್ಕೂ ಅಧಿಕ ಲೈಕ್ಸ್ ಬಂದಿವೆ. ಅಲ್ಲದೇ, 800ಕ್ಕೂ ಅಧಿಕ ಶೇರ್ ಆಗಿದ್ದು, ವೀಕ್ಷಕರು ಈ ಧಾರಾವಾಹಿಯ ಬಗ್ಗೆ ಕಮೆಂಟ್ ಮಾಡಿದ್ದಾರೆ.


ಮುದ್ದು ಸೊಸೆಯಾಗಿ ಕಂಡ ನಟಿ ಪ್ರತಿಮಾ

ಮುದ್ದು ಸೊಸೆ ಧಾರಾವಾಹಿಗೆ ನಟಿ ಪ್ರತಿಮಾ ಅವರು ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ನಟಿ ಪ್ರತಿಮಾ ಅವರು ತರ್ಕ, ಡಾಲರ್ಸ್ ಪೇಟೆ, ಅದರಂ ಮಧುರಂ, ಕೆಂಡದ ಸೆರಗು ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇಷ್ಟೇ ಅಲ್ಲದೇ, ಋತು ಎಂಬ ಸಿನಿಮಾ ಕನ್ನಡ, ತೆಲುಗು, ತಮಿಳು ಹಾಗೂ ಮಳಯಾಳಂ ಭಾಷೆಗಳಲ್ಲಿ ಮೂಡಿ ಬಂದಿದ್ದು, ಇದರಲ್ಲೂ ಕಾಣಿಸಿಕೊಂಡಿದ್ದಾರೆ. ಇದನ್ನು ಹೊರತು ಪಡಿಸಿ ನಟಿ ಪ್ರತಿಮಾ ಅವರು ಜೆಮಿನಿ ಟಿವಿಯಲ್ಲಿ ಸಿವಾಂಗಿ ಎಂಬ ಸೀರಿಯಲ್ ನಲ್ಲಿ ನಟಿಸಿದ್ದಾರೆ.


ತಮಿಳಿನ ರಿಮೇಕ್ ಸೀರಿಯಲ್..?

ಇನ್ನು ನೆಟ್ಟಿಗರು ಮುದ್ದು ಸೊಸೆ ಪ್ರೊಮೋವನ್ನು ಕಂಡು ಸಾಕಷ್ಟು ಕಮೆಂಟ್ ಗಳನ್ನು ಮಾಡಿದ್ದಾರೆ. ಕೆಲವರು ಈ ಸೀರಿಯಲ್ ರಿಮೇಕ್ ಎಂದು ಹೇಳಿದ್ದಾರೆ. ತಮಿಳಿನ ಸ್ಟಾರ್ ವಿಜಯ ಚಾನೆಲ್ ನಲ್ಲಿ ಪ್ರಸಾರವಾಗಿದ್ದ ಚಿನ್ನಾ ಮರುಮಗಳ್ ಸೀರಿಯಲ್ ಅನ್ನೇ ಮುದ್ದು ಸೊಸೆ ಎಂದು ರಿಮೇಕ್ ಮಾಡಲಾಗಿದೆ ಎಂದು ಹೇಳಿದ್ದಾರೆ. ಮತ್ತೆ ಕೆಲವರು ಈ ಧಾರಾವಾಹಿಯ ಹೀರೋ ಬಿಗ್ ಬಾಸ್ ಖ್ಯಾತಿಯ ನಟ ತ್ರಿವಿಕ್ರಮ್ ಆಗಿರಲಿ ಎಂದು ಬಯಸಿದ್ದಾರೆ. ಆದರೆ, ಸದ್ಯಕ್ಕಂತೂ ಪ್ರೊಮೋದಲ್ಲಿ ನಾಯಕಿ ನಟಿಯ ಮುಖವನ್ನು ಮಾತ್ರವೇ ತೋರಿಸಲಾಗಿದೆ. ಇನ್ನು ಮಂಡ್ಯದಲ್ಲಿನ ಸರ್ಕಾರಿ ಕಾಲೇಜ್ ಆಗಿರುವುದರಿಂದ ಧಾರಾವಾಹಿಯಲ್ಲಿ ಮಂಡ್ಯ ಮೂಲದ ಭಾಷೆಯನ್ನೇ ಬಳಸಬಹುದು ಎಂದು ಗೆಸ್ ಮಾಡಲಾಗಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X