Snehada Kadalalli ; ಸ್ನೇಹದ ಕಡಲಲ್ಲಿ ಹೊಸ ಧಾರಾವಾಹಿಯ ಪ್ರೊಮೋ : ಮತ್ತೆ ಜೋಡಿಯಾಗಿ ಬಂದವರು ಯಾರು..?
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಸದ್ಯ ಶಾರದೆ ಧಾರಾವಾಹಿ ಸೂಪರ್ ಹಿಟ್ ಆಗಿದೆ. ಇದರಲ್ಲಿ ಅಮ್ಮ ಮಗಳ ಈ ಕಥೆ ಅದ್ಭುತವಾಗಿ ಮೂಡಿ ಬರುತ್ತಿದೆ. ಈ ಧಾರಾವಾಹಿಗೆ ಸೆಡ್ಡು ಹೊಡೆಯಲು ಈಗ ಹೊಸದೊಂದು ಕಥೆ ಆರಂಭವಾಗಲು ಸಜ್ಜಾಗಿದೆ. ಹೌದು ಇಂದು ಸ್ಟಾರ್ ಸುವರ್ಣ ವಾಹಿನಿಯಲ್ಲಿ ಹೊಸ ಧಾರಾವಾಹಿಯ ಪ್ರೊಮೋ ಶುರುವಾಗಿದೆ. ಪ್ರೊಮೋದಲ್ಲಿ ಪೊಲೀಸ್ ಸ್ಟೇಷನ್ ಬಿಟ್ಟರೆ, ಮದುವೆ ಮನೆಯ ದೃಶ್ಯಗಳನ್ನು ತೋರಿಸಿದ್ದು, ವಧು ನೇರವಾಗಿ ಠಾಣೆಗೆ ಬಂದು ದೂರು ನೀಡಲು ಮುಂದಾಗಿದ್ದಾಳೆ.
ಕನಸನ್ನು ಹೊತ್ತು ಬಂದವಳಿಗೆ ಸಿಕ್ಕ ಸ್ನೇಹ
ಹೌದು, ಕನಸುಗಳನ್ನು ಹೊತ್ತುಕೊಂಡು ಮದುವೆಯಾಗಿರುವ ನಾಯಕಿಗೆ ಮೊದಲ ರಾತ್ರಿಯಲ್ಲೇ ಶಾಕ್ ಆಗಿರುತ್ತದೆ. ಮದುವೆಯಾದವನು ಪ್ರೇಯಸಿಯನ್ನು ಬೆಡ್ ರೂಮ್ ಗೆ ಕರೆದಿದ್ದು, ಕೋಪ ಮಾಡಿಕೊಂಡ ನಾಯಕಿ ಗಂಡನಿಗೆ ಬಾಟಲಿಯಿಂದ ಹೊಡೆದು ನೇರವಾಗಿ ಪೊಲೀಸ್ ಠಾಣೆಗೆ ಬಂದಿದ್ದಾಳೆ. ಮಧುಮಗಳನ್ನು ನೋಡಿದ ಪೊಲೀಸರು ಮಾಮೂಲಿ ಸಮಸ್ಯೆ ಇರಬೇಕು ಎಂದು ಕೊಂಡು ಸಂಸಾರ ಎಂದ ಮೇಲೆ ನೂರು ಬರುತ್ತೆ ನೂರು ಹೋಗುತ್ತೆ. ನೀನು ಅಡ್ಜಸ್ಟ್ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ. ಮಧುಮಗಳು ಬೇರೆ ದಾರಿಯಿಲ್ಲದೇ ಪೊಲೀಸ್ ಸ್ಟೇಷನ್ ನಿಂದ ಹೊರಟಿದ್ದು, ಹೊರಗಡೆ ಮಳೆ ಸುರಿಯುತ್ತಿದೆ. ಆಗ ನಾಯಕ ಬಂದು ಮಧುಮಗಳಿಗೆ ಛತ್ರಿ ಹಿಡಿದಿದ್ದು, ಇಂದಿನಿಂದ ನಾನು ನಿನ್ನ ಜೊತೆಗೆ ಇರುತ್ತೇನೆ ಎಂದು ಹೇಳಿದ್ದಾನೆ.

ಮತ್ತೆ ಜೋಡಿಯಾಗಿ ಬಂದ ನಟ-ನಟಿ
ನಾಯಕ ಸ್ನೇಹಿತನ ರೂಪದಲ್ಲಿ ಬಂದಿದ್ದು, ನಾಯಕಿ ಜೊತೆಗೆ ಪ್ರೀತಿ ಯಾವಾಗ, ಹೇಗೆ ಶುರುವಾಗುತ್ತೆ ಎನ್ನುವುದೇ ಧಾರಾವಾಹಿಯ ಸೀಕ್ರೇಟ್ ಸ್ಟೋರಿ. ಇನ್ನು ನಾಯಕಿ ಪಾತ್ರದಲ್ಲಿ ಎಲ್ಲರ ಮೆಚ್ಚಿನ ನಟಿ ಕಾವ್ಯಾ ಮಹಾದೇವ್ ಕಾಣಿಸಿಕೊಂಡಿದ್ದಾರೆ. ನಾಯಕನ ಪಾತ್ರವೂ ಕೂಡ ಎಲ್ಲರ ಅಚ್ಚುಮೆಚ್ಚು. ಹೌದು, ನಾಯಕನಾಡಿ ಚಂದುಗೌಡ ನಟಿಸಿದ್ದಾರೆ. ಈ ಹಿಂದೆಯೇ ಇವರಿಬ್ಬರು ಜೋಡಿಯಾಗಿ ನಟಿಸಿ ಮೋಡಿ ಮಾಡಿದ್ದರು. ಈ ಮತ್ತೆ ಒಟ್ಟಿಗೆ ತೆರೆ ಹಂಚಿಕೊಳ್ಳಲು ಮುಂದಾಗಿದ್ದಾರೆ. ನಮ್ಮನೆ ಯುವರಾಣಿ ಧಾರಾವಾಹಿಯಲ್ಲಿ ಈ ಜೋಡಿಗಳು ನಟಿಸಿ, ವೀಕ್ಷಕರ ಮನ ಗೆದ್ದಿದ್ದರು.
ಮೋಡಿ ಮಾಡಿದ ನಟಿ ಕಾವ್ಯಾ
ಕಾಲೇಜು ವಿದ್ಯಾರ್ಥಿನಿಯಾಗಿದ್ದಾಗಲೇ ನಾಟಕಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಕಾವ್ಯಾ ಮಹಾದೇವ್ ನಂತರ ಸೇರಿದ್ದು ಅಭಿನಯ ತರಂಗ. ಅಭಿನಯ ತರಂಗದಲ್ಲಿ ತರಬೇತಿ ಮುಗಿಸಿದ್ದೇ ಚರಣ ದಾಸಿ ಧಾರಾವಾಹಿಗೆ ಆಡಿಶನ್ ನೀಡಿ ನಾಯಕಿಯಾಗಿ ಕಿರುತೆರೆಗೆ ಎಂಟ್ರಿ ಕೊಟ್ಟರು. ಚರಣದಾಸಿ ಧಾರಾವಾಹಿಯ ದೀಪಾಳಾಗಿ ಮೋಡಿ ಮಾಡಿದ ನಟಿ ಕಾವ್ಯಾ ಮಹಾದೇವ್ ಅವರು. ನಂತರ ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ನಾ ನಿನ್ನ ಬಿಡಲಾರೆ ಧಾರಾವಾಹಿಯಲ್ಲಿ ಕಾಂಚನಾ ಆಗಿ ಅಭಿನಯಿಸಿದರು. ಬಳಿಕ ನಮ್ಮನೆ ಯುವರಾಣಿ ಧಾರಾವಾಹಿಯಲ್ಲಿ ನಾಯಕಿ ಅಹಲ್ಯಾ ಆಗಿ ಅಭಿನಯಿಸಿ ಕಿರುತೆರೆ ವೀಕ್ಷಕರ ಮನ ಸೆಳೆದ ಚೆಂದುಳ್ಳಿ ಚೆಲುವೆ ಕಾವ್ಯಾ ಮಹಾದೇವ್. ಬಳಿಕ ಪತಿ ಕುಮಾರ್ ಅವರೊಂದಿಗೆ ರಾಜ ರಾಣಿ ಸೀಸನ್ 2 ರಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದರು. ರಾಜಾ ರಾಣಿ ಸೀಸನ್ 2ರ ವಿನ್ನರ್ ಕೂಡ ಆದರು.
ಹಿಂದಿ, ತೆಲುಗು ಧಾರಾವಾಹಿಯ ರಿಮೇಕ್
ಸದ್ಯ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಿರುವ ಸ್ನೇಹದ ಕಡಲಲ್ಲಿ ಧಾರಾವಾಹಿಯಲ್ಲಿ ನಾಯಕಿಯಾಗಿ ಮತ್ತೆ ವೀಕ್ಷಕರನ್ನು ರಂಜಿಸಲು ಮುಂದಾಗಿದ್ದಾರೆ. ಈ ಧಾರಾವಾಹಿಯೂ ರಿಮೇಕ್ ಎಂದು ಹೇಳಲಾಗುತ್ತಿದೆ. ಈ ಧಾರಾವಾಹಿಯಲ್ಲಿ ನಾಯಕನಾಗಿ ಚಂದುಗೌಡ ನಟಿಸಿದ್ದು, ನಾಯಕಿಯನ್ನು ಮದುವೆಯಾದ ಹುಡುಗನ ಪಾತ್ರವನ್ನು ಸಮೀಪ್ ಆಚಾರ್ಯ ಕಾಣಿಸಿಕೊಂಡಿದ್ದಾರೆ.


Click it and Unblock the Notifications











