ಧಾರಾವಾಹಿಯ ಪ್ರೋಮೋದಲ್ಲಿ ಶ್ರುತಿ-ಸಪ್ತಮಿಗೌಡ, ಆದರೂ ಕೆರಳಿದ್ದೇಕೆ ಸೀರಿಯಲ್​ ಪ್ರೇಮಿಗಳು..?

By ಪ್ರಿಯಾ ದೊರೆ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಇನ್ನೇನು ಬಿಗ್ ಬಾಸ್ ಸೀಸನ್ 11 ಮುಗಿಯುವ ಹಂತ ತಲುಪಿದೆ. ಇನ್ನೆರಡು ವಾರಗಳಲ್ಲಿ ಬಿಗ್ ಬಾಸ್ ಆಟ ಫೈನಲ್ ತಲುಪಲಿದೆ ಎಂದು ಹೇಳಲಾಗಿದೆ. ಅಲ್ಲಿಗೆ ಈ ತಿಂಗಳ ಕೊನೆಯ ವಾರದಲ್ಲಿ ಬಿಗ್ ಬಾಸ್ ರಿಯಾಲಿಟಿ ಶೋ ಮುಕ್ತಾಯಗೊಳ್ಳಲಿದ್ದು, ಆ ಸ್ಲಾಟ್ ಅನ್ನು ತುಂಬಲು ವಾಹಿನಿ ಹೊಸ ಧಾರಾವಾಹಿಗಳನ್ನು ಪ್ರಸಾರ ಮಾಡಲು ಸಜ್ಜಾಗುತ್ತಿದೆ. ಈಗಾಗಲೇ ಹೊಸ ಧಾರಾವಾಹಿಯೊಂದರ ಎರಡು ಪ್ರೊಮೋಗಳನ್ನು ಪ್ರಸಾರ ಮಾಡಿದ್ದು, ಇದೀಗ ಮತ್ತೊಂದು ಹೊಸ ಧಾರಾವಾಹಿಯ ಪ್ರೊಮೋ ರಿಲೀಸ್ ಆಗಿದೆ.

ಹೊಸ ಧಾರಾವಾಹಿಯ ಪ್ರೊಮೋ ರಿಲೀಸ್

ವೀಕೆಂಡ್ ಸ್ಲಾಟ್ ಫಿಲ್ ಮಾಡಲು ವಾಹಿನಿ ಬಾಯ್ಸ್ ವರ್ಸಸ್ ಗರ್ಲ್ಸ್ ಎಂಬ ಹೊಸ ರಿಯಾಲಿಟಿ ಶೋ ಅನ್ನು ಬಿಗ್ ಬಾಸ್ ಮನೆಯಲ್ಲಿ ಲಾಂಚ್ ಮಾಡಲಾಗಿದೆ. ಇನ್ನು ಸೃಜನ್ ಲೋಕೇಶ್ ಅವರ ಕಾಮಿಡಿ ಶೋ ಮಜಾ ಟಾಕೀಸ್ ಕೂಡ ಪ್ರಸಾರವಾಗುವ ಬಗ್ಗೆ ಈಗಾಗಲೇ ಹಲವು ದಿನಗಳಿಂದ ಪ್ರೊಮೋ ತೋರಿಸಲಾಗಿದೆ. ಇನ್ನು ವಧು ಎಂಬ ಧಾರಾವಾಹಿಯ ಮೊದಲ ಪ್ರಮೋದಲ್ಲಿ ಟಿಎನ್ ಸೀತಾರಾಮ್ ಅವರು ಕಾಣಿಸಿಕೊಂಡಿದ್ದು, ಇದೀಗ ಪ್ರಸಾರವಾಗಿರುವ ಮತ್ತೊಂದು ಹೊಸ ಧಾರಾವಾಹಿಯನ್ನು ನಟಿ ಶೃತಿ ಮತ್ತು ಸಪ್ತಮಿ ಗೌಡ ಅದ್ಧೂರಿಯಾಗಿ ಲಾಂಚ್ ಮಾಡಿದ್ದಾರೆ. ಶೃತಿ ಮತ್ತು ಸಪ್ತಮಿ ಗೌಡ ಧಾರಾವಾಹಿಯ ನಾಯಕ ಮತ್ತು ನಾಯಕಿ ಬಗ್ಗೆ ಇಂಟ್ರೊಡಕ್ಷನ್ ನೀಡಿದ್ದಾರೆ.

written update on new serial yajamana

ಹೊಸ ಧಾರಾವಾಹಿಯ ಕಥೆ

ನಾಯಕಿ ಜಾನ್ಸಿ ಶ್ರೀಮಂತರ ಕುಟುಂಬದ ಹುಡುಗಿಯಾಗಿರುತ್ತಾಳೆ. ಇವಳಿಗೆ ಗಂಡಸರು ಎಂದರೆ ಆಗೋದಿಲ್ಲ. ಗಂಡಸರನ್ನು ದ್ವೇಷಿಸುವ ಜಾನ್ಸಿಗೆ ನಾಯಕ ಆಗಿ ಬರುವ ವ್ಯಕ್ತಿ ಬಡ ಕುಟುಂಬದವನಾಗಿದ್ದಾನೆ. ನಾಯಕ ಬಡ ಕುಟುಂಬದವನಾಗಿದ್ದು, ತನ್ನವರಿಗೋಸ್ಕರ ಕಷ್ಟಪಟ್ಟು ದುಡಿಯುವ ನಾಯಕನ ಮೇಲೆ ತನ್ನ ಮನೆಯವರಿಗೆ ಪ್ರೀತಿ ಇರುವುದಿಲ್ಲ. ಇನ್ನು ಜೀವನದಲ್ಲಿ ಪ್ರೀತಿ, ಸಂಬಂಧಗಳಿಗೆ ಬೆಲೆ ಕೊಡುವ ನಾಯಕ ಹಾಗೂ ಹಣದ ಮುಂದೆ ಬೇರೆ ಎಲ್ಲವೂ ನಶ್ವರ ಎನ್ನುವ ನಾಯಕಿ ಹೇಗೆ ಜೋಡಿಯಾಗುತ್ತಾರೆ ಎಂಬುದೇ ಧಾರಾವಾಹಿಯ ಕಥೆ. ಆದರೆ, ಇದೇ ಎಳೆಯನ್ನು ಹೊಂದಿರುವ ಸಾಕಷ್ಟು ಧಾರಾವಾಹಿಗಳು ಪ್ರಸಾರವಾಗಿದೆ. ಹಾಗಾಗಿ ವೀಕ್ಷಕರು ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಇದರ ಬದಲು ಅಂತರಪಟ-2 ಶುರು ಮಾಡಿ ಎಂದು ಹೇಳುತ್ತಿದ್ದಾರೆ.


ರೀಲ್ಸ್ ನಟರು ಬೇಡ ಎನ್ನುತ್ತಿರುವ ನೆಟ್ಟಿಗರು

ಅಷ್ಟೇ ಅಲ್ಲದೇ, ರೀಲ್ಸ್ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಿರುವ ನಾಯಕ ಮತ್ತು ನಾಯಕಿ ಎಂದು ಕರೆದುಕೊಂಡು ಬಂದು ಸೀರಿಯಲ್ ಮಾಡುತ್ತೀರಾ. ಇದು ಸರಿಯಿಲ್ಲ. ರಂಗಭೂಮಿಯಲ್ಲಿ ನಟನೆ ಕಲಿತು ಒಳ್ಳೆಯ ಅವಕಾಶಕ್ಕಾಗಿ ಕಾಯುತ್ತಿರುವ ಸಾಕಷ್ಟು ಕಲಾವಿದರಿದ್ದಾರೆ. ಅವರುಗಳಿಗೆ ಅವಕಾಶ ಕೊಡುವುದು ಬಿಟ್ಟು, ರೀಲ್ಸ್ ನೋಡಿ ನಟನೆಯ ಆಫರ್ ಕೊಡುವುದು ಸರಿ ಇಲ್ಲ ಎಂದು ಹೇಳಿದ್ದಾರೆ. ನೆಟ್ಟಿಗರು ಧಾರಾವಾಹಿಯ ಕಥೆಯ ಬಗ್ಗೆಯೂ ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಜೊತೆಗೆ ನಾಯಕ ಮತ್ತು ನಾಯಕಿಯನ್ನು ತಿರಸ್ಕಾರದಿಂದ ಕಾಣುತ್ತಿದ್ದಾರೆ. ಎಲ್ಲಾ ಧಾರಾವಾಹಿಗಳ ಕಥೆ ಒಂದೇ ರೀತಿ ಆಗುತ್ತಿದೆ ಎಂದು ಬೇಸರಗೊಂಡಿದ್ದಾರೆ. ಈ ಹಿಂದೆ ರಾಮಾಚಾರಿ ಧಾರಾವಾಹಿಯಲ್ಲೂ ಚಾರುಲತಾ ಮತ್ತು ರಾಮಾಚಾರಿಯ ಕಥೆ ಹೀಗೆ ಇತ್ತು ಎಂದು ಬೇಸರಗೊಂಡಿದ್ದಾರೆ.


ಕಥೆಯಲ್ಲಿ ಬದಲಾವಣೆ ಬಯಸಿದ ವೀಕ್ಷಕರು

ಇನ್ನು ಕೆಲವರು ಅಂಕಿತಾ ಮತ್ತು ಅಮರ್ ನಾಯಕ-ನಾಯಕಿ ಆಗಲಿ ಎಂದು ಕೇಳಿದ್ದಾರೆ. ಇಷ್ಟು ದಿನ ಹುಡುಗಿ ಬಡವಳ ಮನೆಯವಳಾಗಿರುತ್ತಿದ್ದಳು, ಹುಡುಗ ಶ್ರೀಮಂತನಾಗಿರುತ್ತಾನೆ. ಈಗ ಉಲ್ಟಾ ಕಥೆ ಬರೆಯುತ್ತಿದ್ದಾರೆ ಅಷ್ಟೇ ವ್ಯತ್ಯಾಸ ಎಂದು ಹೇಳಿದ್ದಾರೆ. ಒಟ್ನಲ್ಲಿ ಹೊಸ ಧಾರಾವಾಹಿ ಶುರುವಾಗುತ್ತಿದೆ ಎಂಬುದಕ್ಕಿಂತಲೂ ವೀಕ್ಷಕರಿಗೆ ಕಥೆಯ ರೀತಿಯಲ್ಲಿ ಬದಲಾವಣೆ ಬೇಕಿದೆ ಎಂಬುದು ಸ್ಪಷ್ಟವಾಗಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X