Nooru Janmaku ; ನೂರು ಜನ್ಮಕೂ ಧಾರಾವಾಹಿ ಪ್ರಸಾರದ ಸಮಯ ರಿವೀಲ್..!

By ಪ್ರಿಯಾ ದೊರೆ

ಕಲರ್ಸ್ ಕನ್ನಡ ವಾಹಿನಿಯಲ್ಲಿ ನೂರು ಜನ್ಮಕೂ ಧಾರಾವಾಹಿ ಪ್ರಾರಂಭವಾಗಲಿದೆ. ಇದು ಆತ್ಮದ ಕಥೆಯಾಗಿದ್ದು, ವೀಕ್ಷಕರು ಕಾಯುತ್ತಿದ್ದಾರೆ.ಇದೀಗ ಕಲರ್ಸ್ ಕನ್ನಡ ವಾಹಿನಿ ಹೊಸ ಪ್ರೊಮೋವನ್ನು ಪ್ರಸಾರ ಮಾಡಿದೆ. ಅದರ ಪ್ರಕಾರ ಇದೇ ತಿಂಗಳು ನೂರು ಜನ್ಮಕೂ ಧಾರಾವಾಹಿಯು ಪ್ರಸಾರವಾಗಲಿದೆ. ನೂರು ಜನ್ಮಕೂ ಧಾರಾವಾಹಿಗೆ ಸ್ಲಾಟ್ ದೊರೆತಿದ್ದು, ಹೊಸ ಪ್ರೊಮೋದಲ್ಲಿ ಕುಟುಂಬವನ್ನು ತೋರಿಸಲಾಗಿದೆ. ಧಾರಾವಾಹಿಯಲ್ಲಿ ಯಾರೆಲ್ಲಾ ಇದ್ದಾರೆ ಎಂಬುದನ್ನು ಮುಂದೆ ತಿಳಿಯೋಣ.

ನೂರು ಜನ್ಮಕೂ ಪ್ರಸಾರ ಯಾವಾಗ..?

ಈಗಾಗಲೇ ನೂರು ಜನ್ಮಕೂ ಧಾರಾವಾಹಿಯ ಮೂರು ಪ್ರೋಮೋಗಳು ರಿಲೀಸ್ ಆಗಿವೆ. ಈ ಪ್ರೋಮೋದಲ್ಲಿ ಧಾರಾವಾಹಿ ಹಾರರ್ ಎಂಬುದಂತೂ ಪಕ್ಕಾ ಆಗಿದೆ. ನಾಯಕನ್ನು ಕಾಡುವ ಆತ್ಮಕ್ಕೆ ನಾಯಕಿ ಶಾಂತಿ ಕೊಡಿಸುತ್ತಾಳಾ ಎಂಬುದು ತಿಳಿದು ಬರಲಿದೆ. ಹಾರರ್ ಕಥಾ ಹಂದರವನ್ನೊಳಗೊಂಡ ಈ ಹೊಸ ಧಾರಾವಾಹಿ ನೂರು ಜನ್ಮಕೂ ಧಾರಾವಾಹಿ ಇದೇ ತಿಂಗಳು ಅಂದರೆ ಡಿಸೆಂಬರ್ 23 ರಂದು ಸಂಜೆ 8.30ಕ್ಕೆ ಪ್ರಸಾರವಾಗಲಿದೆ.

written update on nooru janmaku serial

ನಾಯಕ, ನಾಯಕಿ ಯಾರು ಗೊತ್ತಾ..?

ನೂರು ಜನ್ಮಕೂ ಧಾರಾವಾಹಿ ಮೂಲಕ ನಾಯಕನಾಗಿ ನಟಿಸಲು ಧನುಷ್ ಗೌಡ ಮುಂದಾಗಿದ್ದಾರೆ. ಗೀತಾ ಧಾರಾವಾಹಿಯಲ್ಲಿ ನಾಯಕ ವಿಜಯ್ ಪಾತ್ರದ ಮೂಲಕ ಧನುಷ್ ಗೌಡ ಕಮಾಲ್ ಮಾಡಿದ್ದರು. ನಂತರ ಗೌರಿಶಂಕರ ಧಾರಾವಾಹಿಯಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ನೂರು ಜನ್ಮಕೂ ಧಾರಾವಾಹಿಯಲ್ಲಿ ಬಣ್ಣ ಹಚ್ಚಿದ್ದಾರೆ. ನಾಯಕಿ ಪಾತ್ರದಲ್ಲಿ ನಟಿಸುತ್ತಿರುವ ನಟಿಯ ಹೆಸರು, ಶಿಲ್ಪಾ ಕಾಮತ್ ಮಂಗಳೂರು ಮೂಲದವರು. ಮಿಸ್ ಮಂಗಳೂರು ಪಟ್ಟವನ್ನು ಅಲಂಕರಿಸಿದ್ದಾರೆ. ಧಾರಾವಾಹಿಯಲ್ಲಿ ಆತ್ಮವಾಗಿ ಕಾಡುವ ನಟಿ ಬೇರೆ ಯಾರೂ ಅಲ್ಲ. ಈ ಹಿಂದೆ ಕನ್ಯಾದಾನ ಧಾರಾವಾಹಿಯಲ್ಲಿ ನಟಿಸಿದ್ದ ನಟಿ ಚಂದನಾ ಗೌಡ. ಇವರು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ಮಹಾನಟಿ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು. ತಮ್ಮ ಕಣ್ಣುಗಳ ಮೂಲಕವೇ ನಟಿಸಿ ಜಡ್ಜ್ ಗಳ ಮನ ಗೆದ್ದಿದ್ದರು. ಇದೀಗ ಚಂದನಾ ಅವರು ಆತ್ಮದ ರೂಪದಲ್ಲಿ ನೂರು ಜನ್ಮಕೂ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.


ಧಾರಾವಾಹಿಯಲ್ಲಿ ಇರುವ ಪಾತ್ರಗಳು

ಇವರನ್ನು ಹೊರತುಪಡಿಸಿ ಹಿರಿಯ ನಟಿ ಗಿರಿಜಾ ಲೋಕೇಶ್, ನಟಿ ಶಾಲಿನಿ ಎಸ್ ರಾವ್ ಸೇರಿದಮತೆ ಹಲವರು ಕಾಣಿಸಿಕೊಂಡಿದ್ದಾರೆ. ನಾಯಕಿ ಮತ್ತು ನಾಯಕ ಪ್ರೀತಿಸುತ್ತಿರುತ್ತಾರೆ. ನಾಯಕ ಶ್ರೀಮಂತ ಕುಟುಂಬದವರಾಗಿದ್ದು, ನಾಯಕಿ ಬಡ ಕುಟುಂಬದ ಹೆಣ್ಣು ಮಗಳು. ಆದರೆ, ಮನೆ ಮಗ ಇಷ್ಟ ಪಟ್ಟಿದ್ದಾನೆ ಎಂದು ಗಿರಿಜಾ ಲೋಕೇಶ್ ನಾಯಕಿಯನ್ನು ತನ್ನ ಮನೆಗೆ ಸೊಸೆಯಾಗಿ ಸ್ವೀಕರಿಸಲು ಮುಂದಾಗಿದ್ದಾರೆ. ಈ ಜೋಡಿಗಳು ಒಂದಾಗಲು ಆತ್ಮ ಅಡ್ಡಗಾಲು ಹಾಕುತ್ತಿದೆ.


ಪ್ರೀತಿಗಾಗಿ ದ್ವೇಷಿಸುತ್ತಿರುವ ಆತ್ಮ

ನೂರು ಜನ್ಮಕೂ ಕಥೆಯಲ್ಲಿ ನಾಯಕನ ಮೇಲೆ ಆತ್ಮವೊಂದು ಧ್ವೇಷ ಕಾರುತ್ತಿದೆ. ಈ ಆತ್ಮಕ್ಕೆ ನಾಯಕನ ಮೇಲೆ ಯಾಕೆ ಧ್ವೇಷವಿದೆ. ನಾಯಕನ ತಪ್ಪೇನಿದೆ. ಇನ್ನು ನಾಯಕಿ ಮೈತ್ರಿ ತನ್ನ ಪ್ರೀತಿಯನ್ನು ಹೇಗೆ ಉಳಿಸಿಕೊಳ್ಳುತ್ತಾಳೆ ಎಂಬುದೇ ಕಥೆಯಾಗಿದೆ. ಇನ್ನು ನಾಯಕಿ ಮೈತ್ರಿ ರಾಯರ ಅಪ್ಪಟ ಭಕ್ತೆ. ಸದಾ ರಾಯರನ್ನು ಧ್ಯಾನಿಸುವ ಮೈತ್ರಿ ಆತ್ಮವನ್ನು ತೊಲಗಿಸಲು ರಾಘವೇಂದ್ರ ಸ್ವಾಮಿಗಳೇ ಸಹಾಯ ಮಾಡುತ್ತಾರಾ ಎಂಬುದು ಪ್ರೊಮೋದಲ್ಲಿ ಸ್ಪಷ್ಟವಾಗಿದೆ. ಆತ್ಮಕ್ಕೂ ನಾಯಕನ ಮೇಲೆ ಪ್ರೀತಿ ಇರುವುದು ವಿಶೇಷವಾಗಿದ್ದು, ಇವರಿಬ್ಬರ ಹಿಂದಿನ ಕಥೆ ಕುತೂಹಲ ಮೂಡಿಸಿದೆ. ಇನ್ನು ಇದು ಹಿಂದಿಯ ಸುಹಗಾನ್ ಚುಡೈಲ್ ಎಂಬ ಧಾರಾವಾಹಿಯ ರಿಮೇಕ್ ಎಂದು ಹೇಳಲಾಗಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X