ಸವಾಲಿನ ಪಾತ್ರಕ್ಕೆ ಸೈ ಎನ್ನುವ ನೀನಾಸಂ ಪ್ರತಿಭೆ ಭವಾನಿ ಪ್ರಕಾಶ್ ಬಗ್ಗೆ ನಿಮಗೆಷ್ಟು ಗೊತ್ತು?

By ಪ್ರಿಯಾ ದೊರೆ

ನಟಿ ಭವಾನಿ ಪ್ರಕಾಶ್ ಎಲ್ಲರಿಗೂ ಚಿರಪರಿಚಿತರೆ. ಹೆಸರಿಗಿಂತಲೂ ತಮ್ಮ ನಟನೆಯ ಮೂಲಕ ಅಭಿಮಾನಿಗಳ ಮನಸ್ಸನ್ನು ಸೈಲೆಂಟ್ ಆಗಿಯೇ ಗೆದ್ದಿದ್ದಾರೆ.ಎಂತಹದ್ದೇ ಪಾತ್ರವನ್ನು ನೀಡಿದರೂ ಕೂಡ ಲೀಲಾಜಾಲವಾಗಿ ನಟಿಸುತ್ತಾರೆ. ಹೆಚ್ಚು ಪೋಷಕ ಪಾತ್ರಗಳೇ ಆದರೂ ಅದರಲ್ಲೂ ಖಳನಾಯಕಿ ನಟಿಯಾಗಿ ಕಾಣಿಸಿಕೊಂಡಿದ್ದೇ ಹೆಚ್ಚು. ಅತಿ ಹೆಚ್ಚು ಬಾಯುಳ್ಳಂತ ಬಜ್ಜಾರಿ ಪಾತ್ರಗಳು, ಖಳನಾಯಕಿ ಪಾತ್ರಗಳನ್ನು ನಿರ್ವಹಿಸುವ ಭವಾನಿ ಪ್ರಕಾಶ್ ಅವರು ಧಾರಾವಾಹಿಗಳ ಜೊತೆಗೆ ಸಾಕಷ್ಟು ಸಿನಿಮಾಗಳಲ್ಲೂ ನಟಿಸಿದ್ದಾರೆ.

ರಂಗಭೂಮಿಯಿಂದ ಕಿರುತೆರೆವರೆಗೆ

ಭವಾನಿ ಪ್ರಕಾಶ್ ಅವರು ರಂಗಭೂಮಿಯಿಂದ ಬಂದವರು. ಹಲವು ವರ್ಷಗಳಿಂದ ಬಣ್ಣದ ಲೋಕದಲ್ಲಿರುವ ಭವಾನಿ ಅವರು ಟಿಎನ್ ಸೀತಾರಾಂ, ಸೇತುರಾಂ ಅವರೊಂದಿಗೂ ಕೆಲಸ ಮಾಡಿದ್ದಾರೆ. ಅನಾವರಣ, ಮಲ್ಲಿಕಾ, ಕುಸಮಬಾಲೆ, ಮಧುಬಾಲಾ, ಕಿಚ್ಚು, ಮಹಾಮಾಯಿ, ಆರುಂಧತಿ, ನಮ್ಮಮ್ಮ ಶಾರದೆ, ದೇವಿ, ಕಥೆಯೊಂದು ಶುರುವಾಗಿದೆ, ದೊರೆಸಾನಿ, ಕನ್ಯಾಕುಮಾರಿ, ಕಮಲಿ ಸೇರಿದಂತೆ ಹತ್ತಾರು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಸದ್ಯ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಶ್ರಾವಣೀ ಸುಬ್ರಹ್ಮಣ್ಯ ಮತ್ತು ಕಲರ್ಸ್ ವಾಹಿನಿಯಲ್ಲಿ ಶುರುವಾಗಿರುವ ನೂರು ಜನ್ಮಕು ಧಾರಾವಾಹಿಯಲ್ಲಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನೂರು ಜನ್ಮಕೂ ಧಾರಾವಾಹಿಯಲ್ಲಿ ಎರಡು ಶೇಡ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಒಂದು ಕಡೆ ಕೇರ್ ಟೇಕರ್ ಆಗಿದ್ದಾರೆ, ಯಾರಿಗೂ ತಿಳಿಯದಂತೆ ಮಾಯ-ಮಾಠವನ್ನು ಕೂಡ ಮಾಡುತ್ತಿದ್ದಾಳೆ. ಹುಲುಚಿ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿರುವ ಭವಾನಿ ಅವರು ಕಾಮಿನಿ ಸಾವನ್ನಪ್ಪಿದ ಬಳಿಕವೂ ಅವಳಲ್ಲಿ ಶಕ್ತಿ ತುಂಬಿ ಜೀವಂತವಾಗಿರುವಂತೆ ಮಾಡಿದ್ದಾಳೆ.

written update on nooru janmaku serial Actress bhavani prakash

ಪಾತ್ರಗಳಿಗೆ ಜೀವ ತುಂಬುವ ಕಲಾವಿದೆ

ಭವಾನಿ ಪ್ರಕಾಶ್ ಅವರು ಯಾವ ಪಾತ್ರಕ್ಕೂ ಕಟ್ಟು ಬಿದ್ದವರಲ್ಲ. ಕಲಾವಿದೆ ಎಂದು ಕರೆಸಿಕೊಳ್ಳುವುದಕ್ಕಾಗಿ ಎಲ್ಲಾ ರೀತಿಯ ಪಾತ್ರಗಳಿಗೂ ಜೀವ ತುಂಬುತ್ತಾರೆ. ಪಾತ್ರದ ಬಗ್ಗೆ ಯಾರು ಏನೇ ಅಂದರೂ ತಲೆ ಕೆಡಿಸಿಕೊಳ್ಳದ ಭವಾನಿ ಅವರು, ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಲು ಬಯಸುತ್ತಾರೆ. ಇಂತಹದ್ದೇ ಪಾತ್ರವನ್ನು ಬಯಸದ ಭವಾನಿ ಅವರಿಗೆ ಸಿಕ್ಕ ಪಾತ್ರಗಳಿಗೆ ಜೀವ ತುಂಬುವ ಹಾಗೂ ತಮ್ಮ ಹಾವಭಾವದಿಂದಲೇ ಎಲ್ಲರನ್ನು ಸೆಳೆಯುವ ಗುಣವಿದೆ. ಇನ್ನು ಭವಾನಿ ಪ್ರಕಾಶ್ ಅವರು ಹಲವು ಸಿನಿಮಾಗಳಲ್ಲೂ ನಟಿಸಿದ್ದಾರೆ.


ಸಿನಿಮಾಗಳಲ್ಲೂ ನಟನೆ

ಪುಟಾಣಿ ಪಾರ್ಟಿ, ಗುಬ್ಬಚ್ಚಿಗಳು, ರಾಟೆ, ಪರಮಾತ್ಮ, ಬೈಸಿಕಲ್ ಬಾಯ್ಸ್, ಅಲೆ, ಊರ್ವಿ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಸದಾ ಆಕ್ಟೀವ್ ಆಗಿರುವ ಭವಾನಿ ಪ್ರಕಾಶ್ ಅವರಿಗೆ ಅತ್ತ್ಯುತ್ತಮ ಪೋಷಕ ನಟಿ ಪ್ರಶಸ್ತಿ, ಫಿಲ್ಮ್ ಫೇರ್ ಪ್ರಶಸ್ತಿ ದೊರಕಿದೆ.. ಇನ್ನು ಹತ್ತಾರು ನಾಟಕಗಳಲ್ಲಿ ನಟಿಸಿ, ಕಲಾಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ. ನಿನಾಸಂನ ಪ್ರತಿಭೆಯಾಗಿರುವ ಕಾರಣ ಭವಾನಿ ಅವರಿಗೆ ನಟಿಸುವುದು ಎಂದರೆ ನೀರು ಕುಡಿದಷ್ಟೇ ಸಲೀಸು. ಅದರಲ್ಲೂ ಭವಾನಿ ಅವರ ಕಂಠವೂ ಕೂಡ ಜೋರಾಗಿಯೇ ಇದೆ.


ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯ

ಇನ್ನು ನಟಿ ಭವಾನಿ ಅವರಿಗೆ ಶೂಟಿಂಗ್ ಸಮಯದಲ್ಲಿ ಸೆಟ್ನಲ್ಲಿ ಸಮಯ ಸಿಕ್ಕರೆ, ನಟನೆಯಷ್ಟೇ ಮಾಡದೆಯೇ ಫನ್ ಆಕ್ಟಿವಿಟೀಸ್ ಕೂಡ ಮಾಡುತ್ತಾರೆ. ಈಗಂತೂ ರಿಳ್ಸ್ ಗೆ ಹೆಚ್ಚು ಪ್ರಾಮುಖ್ಯತೆ ಇರುವುದರಿಂದ ಚಿತ್ರೀಕರಣದ ಸಮಯದಲ್ಲಿ ಬ್ರೇಕ್ ಸಿಕ್ಕರೂ, ರೀಲ್ಸ್ನಲ್ಲಿ ಮುಳುಗಿ ಹೋಗುತ್ತಾರೆ. ಭವಾನಿ ಪ್ರಕಾಶ್ ಅವರ ಸೋಶಿಯಲ್ ಮೀಡಿಯಾಗೆ ಎಂಟ್ರಿ ಕೊಟ್ಟರೆ, ಅವರ ರೀಲ್ಸ್ ಗಳೇ ತುಂಬಿ ಹೋಗಿವೆ. ಭವಾನಿ ಅವರು ತೆರೆಯ ಮೇಲೆ ಹೇಗಿದ್ದರೂ ಕೂಡ ಅವರ ರಿಯಲ್ ಜೀವನವೇ ಡಿಫರೆಂಟ್. ಬಹಳ ಹಂಬಲ್ ಪರ್ಸನ್ ಆಗಿರುವ ಇವರು ತಮ್ಮ ಸುತ್ತಮುತ್ತ ಇರುವವರನ್ನು ಯಾವಾಗಲೂ ನಗಿಸುತ್ತಾರೆ. ಜೊತೆಗೆ ತುಂಬಾ ಕಾಳಜಿ ತೋರುತ್ತಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X