Nooru Janmaku ;ನೂರು ಜನ್ಮಕೂ ಧಾರಾವಾಹಿಯ ಛಾಯಾ ಪಾತ್ರದಲ್ಲಿರುವ ನಟಿ ಯಾರು ಗೊತ್ತಾ..?
ನೂರು ಜನ್ಮಕೂ ಧಾರಾವಾಹಿ ಶುರುವಾಗಿ ಕೆಲವೇ ದಿನಗಳು ಕಳೆದಿದ್ದು, ಅದಾಗಲೇ ರೋಚಕ ತಿರುವುಗಳು ವೀಕ್ಷಕರಲ್ಲಿನ ಕುತೂಹಲವನ್ನು ಹೆಚ್ಚಿಸಿದೆ. ಚಿರು ಮತ್ತು ಮೈತ್ರಿ ಪ್ರೀತಿಸುತ್ತಿದ್ದು, ಇಬ್ಬರ ಮದುವೆಗೆ ವಿರೋಧವಿದೆ. ವಿರೋಧದ ನಡುವೆಯೇ ಮದುವೆ ನಿಶ್ಚಯವಾದರೂ ತಾಳಿ ಕಟ್ಟುವ ಸಮಯಕ್ಕೆ ಸರಿಯಾಗಿ ಬಂದ ಕಾಮಿನಿ ಆತ್ಮ ವಿವಾಹವನ್ನು ತಡೆದಿದ್ದಾಗಿದೆ. ಆದರೆ, ಮದುವೆಯೇನೋ ನಿಂತು ಹೋಗಿದೆ. ಈಗ ಮತ್ತೆ ಇವರಿಬ್ಬರ ಮದುವೆ ನಡೆಯೋದು ಬೇಡ ಎಂದು ಚಿರು ಮನೆಯವರು ಯೋಚಿಸುತ್ತಿದ್ದಾರೆ.
ನೂರು ಜನ್ಮಕೂ ಧಾರಾವಾಹಿಯಲ್ಲಿ ನಟಿ ಅನು ಪಲ್ಲವಿ
ಆದರೆ, ಚಿರು ಅಜ್ಜಿ ಮಾತ್ರ ಮೈತ್ರಿಯೇ ತನ್ನ ಮೊಮ್ಮಗನಿಗೆ ಸರಿಯಾದ ಜೋಡಿ ಎಂದು ನಿರ್ಧರಿಸಿದ್ದಾರೆ. ಇನ್ನು ಕಾಮಿನಿ ಸಾವನ್ನಪ್ಪಿದ್ದು, ಅವಳ ಆತ್ಮ ಪ್ರೇಮಿಗಳು ಒಂದಾಗದಂತೆ ಸಾಕಷ್ಟು ಪ್ರಯತ್ನಗಳು ನಡೆಯುತ್ತಿದೆ. ಇದರ ನಡುವೆಯೇ ಕಾಮಿನಿ ಸಾವಿನ ಸತ್ಯ ಅರಿಯದ ಚಿರು ಕುಟುಂಬ ಕಾಮಿನಿಯನ್ನೇ ಚಿರು ಜೊತೆಗೆ ಮದುವೆ ಮಾಡಿಸಬೇಕು ಎಂದು ಆಲೋಚಿಸುತ್ತಿದ್ದಾರೆ. ಈ ಧಾರಾವಾಹಿಯಲ್ಲಿ ಹಿರಿಯ ನಟ-ನಟಿಯರು ಇದ್ದಾರೆ. ನಟಿ ಗಿರಿಜಾ ಲೋಕೇಶ್, ಶಾಲಿನಿ ಎಸ್ ರಾವ್, ಗಾಯಕಿ ಕಮ್ ನಟಿ ಅರ್ಚನಾ ಉಡುಪಾ, ನಟಿ ಧನುಷ್ ಸೇರಿದಂತೆ ಹಲವರು ನಟಿಸಿದ್ದಾರೆ. ಧಾರಾವಾಹಿಯಲ್ಲಿ ಚಿರು ಬದುಕಿಗೆ ಇಡೀ ಮನೆಯವರೇ ವಿಲನ್ ರೀತಿ ಕಾಣುತ್ತಿದ್ದು, ಧಾರಾವಾಹಿ ಕುತೂಹಲ ಘಟ್ಟವನ್ನು ತಲುಪಿದೆ. ಇನ್ನು ಇದರಲ್ಲಿ ಚಾಯಾ ಪಾತ್ರದಲ್ಲಿ ನಟಿ ಅನುಪಲ್ಲವಿ ಕಾಣಿಸಿಕೊಂಡಿದ್ದಾರೆ. ನಟಿ ಅನುಪಲ್ಲವಿ ಈ ಹಿಂದೆ ಘಾಟಿ ಅತ್ತಿಗೆ ಪಾತ್ರದಲ್ಲಿ ನಟಿಸಿ ವೀಕ್ಷಕರ ಮನ ಗೆದ್ದಿದ್ದರು.

ಛಾಯಾ ಆಗಿರುವ ಬೃಂದಾವನದ ಗಿರಿಜಾ
ಹೌದು, ಈ ಹಿಂದೆ ಇದೇ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬಂದ ಬೃಂದಾವನ ಧಾರಾವಾಹಿಯಲ್ಲಿ ನಟಿ ಅನುಪಲ್ಲಿವಿ ಅವರು ಕಾಣಿಸಿಕೊಂಡಿದ್ದರು. ಇದರಲ್ಲಿ ನಾಯಕಿ ಪುಷ್ಪಾಳ ಅತ್ತಿಗೆ ಗಿರಿಜಾ ಪಾತ್ರದಲ್ಲಿ ನಟಿಸಿದ್ದರು. ಹಣದ ದುರಾಸೆಯಿಂದ ನಾದಿನಿಯ ಬದುಕನ್ನೆ ಸಂಕಷ್ಟಕ್ಕೆ ಸಿಲುಕಿಸಿದ್ದ ಘಾಟಿ ಅತ್ತಿಗೆ ಪಾತ್ರ ಇದಾಗಿತ್ತು. ತಮ್ಮ ಪಾತ್ರದ ಮೂಲಕವೇ ಅನುಪಲ್ಲವಿ ಅವರು ವೀಕ್ಷಕರ ಮನ ಗೆದ್ದಿದ್ದರು. ವಯಸ್ಸಿಗೂ ಮೀರಿದ ಪಾತ್ರದಲ್ಲಿ ಕಾಣಿಸಿಕೊಂಡು ಚಿರಪರಿಚಿತರಾಗಿದ್ದರು. ನೋಡಲು ಘಾಟಿಯಾಗಿ ಕಾಣದ ಅನು ಪಲ್ಲವಿ ಅವರು ಪಾತ್ರಕ್ಕೆ ಜೀವ ತುಂಬಿದ್ದರು. ಆದರೆ, ದುರಾದೃಷ್ಟವಶಾತ್ ಧಾರಾವಾಹಿ ಅರ್ಧಕ್ಕೆ ನಿಂತು ಹೋಗಿತ್ತು.
ಹಲವು ಧಾರಾವಾಹಿಗಳಲ್ಲಿ ನಟನೆ
ಇದೀಗ ನಟಿ ಅನುಪಲ್ಲವಿ ಅವರು ನೂರು ಜನ್ಮಕೂ ಧಾರಾವಾಹಿಯಲ್ಲಿ ಚಾಯಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಅನು ಪಲ್ಲವಿ ಅವರು ಈ ಹಿಂದೆ ಪರ್ವ, ಹೂ ಮಳೆ, ನಮ್ಮನೆ ಯುವರಾಣಿ, ಬೃಂದಾವನ ಧಾರಾವಾಹಿಗಳ ಜೊತೆಗೆ ಕೆಲ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಇನ್ನು ಇದರ ಜೊತೆಗೆ ನಟಿ ಅನು ಪಲ್ಲವಿ ಅವರು ರಂಗಭೂಮಿಯಲ್ಲಿ ಹಲವು ವರ್ಷಗಳಿಂದ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಇದಷ್ಟೇ ಅಲ್ಲದೇ, ಅನು ಪಲ್ಲವಿ ಅವರು ಪ್ರೊಫೆಷನಲ್ ಮೇಕಪ್ ಆರ್ಟಿಸ್ಟ್ ಆಗಿದ್ದಾರೆ.
ಗಿರಿಜಾ ಪಾತ್ರಕ್ಕೂ ಛಾಯಾಗೂ ಅಜಗಜಾಂತರ ವ್ಯತ್ಯಾಸ
ಸೋಶಿಯಲ್ ಮೀಡಿಯಾದಲ್ಲೂ ಆ್ಯಕ್ಟೀವ್ ಆಗಿರುವ ಅನು ಪಲ್ಲವಿ ಅವರು ಫೋಟೋಶೂಟ್ ಮಾಡಿಸುತ್ತಿರುತ್ತಾರೆ. ಸಹ ಕಲಾವಿದರ ಜೊತೆಗೆ ರೀಲ್ಸ್, ಕಾಮಿಡಿಗಳನ್ನು ಮಾಡುತ್ತಿರುತ್ತಾರೆ. ಬೃಂದಾವನ ಧಾರಾವಾಹಿಯಲ್ಲಿ ಘಾಟಿ ಪಾತ್ರದಲ್ಲಿ ನಟಿಸಿದ್ದ ಅನು ಪಲ್ಲವಿ ಅವರಿಗೆ ಆ ಪಾತ್ರ ಒಳ್ಳೆಯ ಬ್ರೇಕ್ ನೀಡುತ್ತಿತ್ತು. ಆದರೆ, ಅರ್ಧಕ್ಕೆ ನಿಂತು ಹೋಗಿತ್ತು. ಈಗ ಚಾಯಾ ಪಾತ್ರಕ್ಕೆ ಅನು ಪಲ್ಲವಿ ಅವರ ನಟನೆ ಎಷ್ಟು ಎಫೆಕ್ಟೀವ್ ಆಗಿರುತ್ತದೆ ಎಂಬುದನ್ನು ಕಾದು ನೋಡಬೇಕಿದೆ.


Click it and Unblock the Notifications











