ಮಂಗ್ಳೂರಿಂದ ಬೆಂಗ್ಳೂರಿಗೆ ಬಂದು ಮಿಂಚುತ್ತಿರುವ ಈ ಚೆಲುವೆ ಯಾರು ? ಇವರ ಬಗ್ಗೆ ನಿಮಗೆಷ್ಟು ಗೊತ್ತು ?

By ಪ್ರಿಯಾ ದೊರೆ

ಕಲರ್ಸ್ ಕನ್ನಡ ವಾಹಿನಿಯಲ್ಲಿ ನೂರು ಜನ್ಮಕೂ ಧಾರಾವಾಹಿ ಶುರುವಾಗಿ ಐದು ದಿನಗಳು ಕಳೆದಿವೆ. ಧಾರಾವಾಹಿ ಶುರುವಾಗಿದ್ದೇ ತಡ, ಸದ್ಯ ಮದುವೆ ಸಮಾರಂಭ ನಡೆಯುತ್ತಿದೆ. ಧಾರಾವಾಹಿಯ ಆರಂಭದಲ್ಲಿಯೇ ನಾಯಕ ಮತ್ತು ನಾಯಕಿಯ ಮದುವೆ ನಡೆಯುತ್ತಿದೆ. ಸಿರಿವಂತ ಕುಟುಂಬ ಚಿರು, ಬಡ ಮನೆಯ ಹುಡುಗಿ ಮೈತ್ರಿಯನ್ನು ಪ್ರೀತಿಸಿದ್ದಾನೆ. ಹುಡುಗಿ ತಮ್ಮ ಮನೆಯ ಅಕೌಂಟೆಂಟ್ ಮಗಳಾದರೂ ಕೂಡ ಮೊಮ್ಮಗನ ಬದುಕಿಗೆ ಅವಳ ಅಗತ್ಯವಿದೆ ಎಂದು ತಿಳಿದ ಅಜ್ಜಿ, ಮೊಮ್ಮಗನ ಮದುವೆಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾನೆ.

ಜೋರಾಗಿದೆ ಚಿರು-ಮೈತ್ರಿ ಸಮಾರಂಭ

ಆದರೆ, ಮನೆಯಲ್ಲಿರುವ ಮತ್ಯಾರಿಗೂ ಈ ಮದುವೆ ಇಷ್ಟವಿಲ್ಲ. ತಮ್ಮ ಸ್ಟೇಟಸ್ ಗೆ ಒಪ್ಪುವಂತಹ ಹುಡುಗಿ ಮೈತ್ರಿ ಅಲ್ಲ. ಅಲ್ಲದೇ, ತಮ್ಮ ಕುಟುಂಬದಲ್ಲೇ ಇರುವ ಕಾಮಿನಿಯನ್ನು ಚಿರುಗೆ ತಂದುಕೊಳ್ಳುವ ಆಸೆ ಹಲವರಿಗಿತ್ತು. ಆದರೆ, ಮನೆಯ ಒಡತಿ ಇದೆಲ್ಲವನ್ನೂ ಸುಳ್ಳು ಮಾಡಿದ್ದು, ಮೊಮ್ಮಗನ ಪ್ರೀತಿಗೆ ಜೈ ಎಂದಿದ್ದಾಳೆ. ಇದಕ್ಕೆ ಬಹಳ ಮುಖ್ಯವಾದ ಕಾರಣವೆಂದರೆ, ಮೊಮ್ಮಗನ ಜಾತಕದಲ್ಲಿರುವ ಅಪಾಯ. ಮೊಮ್ಮಗನನ್ನು ಕಾಪಾಡಲು ಮೈತ್ರಿಯ ಜಾತಕ ಹೊಂದಾಣಿಕೆಯಾಗಿದ್ದು, ಚಿರು ಬದುಕು ಸುಖಮಯವಾಗಿರಲಿ ಎಂದು ಅಜ್ಜಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾಳೆ. ಆದರೆ, ಇದು ಚಿರು ಕುಟುಂಬದಲ್ಲಿರುವ ಹಲವರ ಮನಸ್ಸನ್ನು ಕೆಡಿಸಿದೆ. ಕಾಮಿನಿಯಂತೂ ಬಹಳ ಡಿಸ್ಟರ್ಬ್ ಆಗಿದ್ದಾಳೆ.

written update on nooru janmaku serial heroine


ಕಾಮಿನಿಗೆ ದಕ್ಕದ ಚಿರು

ಪ್ರೊಮೋದಲ್ಲಿ ತೋರಿದ ಪ್ರಕಾರ ಕಾಮಿನಿ ಆತ್ಮವಾಗಿದ್ದಾಳೆ. ಆದರೆ, ಸದ್ಯ ಧಾರಾವಾಹಿಯಲ್ಲಿ ಅವಳಿನ್ನು ಬದುಕಿರುವಂತೆ ತೋರಿದ್ದು, ಅವಳು ಅಪಘಾತದಲ್ಲಿ ಸಾವನ್ನಪ್ಪಿದ ದೃಶ್ಯವನ್ನೂ ತೋರಿಸಲಾಗಿದೆ. ಆದರೆ, ಇಂದು ಮೈತ್ರಿ ಮತ್ತು ಚಿರು ಸಪ್ತಪದಿ ತುಳಿಯಲಿದ್ದು, ಕಾಮಿನಿಯ ನಿಜ ಬಣ್ಣ ಏನು ಎಂಬುದು ವೀಕ್ಷಕರ ಮುಂದೆ ಗೊತ್ತಾಗಲಿದೆ. ಇದೆಲ್ಲದರ ಜೊತೆಗೆ ನಾಯಕಿ ಮೈತ್ರಿ ಅಲಿಯಾಸ್ ಶಿಲ್ಪಾ ಕಾಮತ್ ಅವರ ನಟನೆಯನ್ನು ವೀಕ್ಷಕರು ಮೆಚ್ಚಿಕೊಂಡಿದ್ದಾರೆ. ಮೊದಲ ಧಾರಾವಾಹಿಯಾಗಿದ್ದೂ ಅದ್ಭುತವಾಗಿ ನಟಿಸುತ್ತಿರುವ ಮೈತ್ರಿ ಬಗ್ಗೆ ಸಾಕಷ್ಟು ಕುತೂಹಲಗಳು ಅಭಿಮಾನಿಗಳಲ್ಲಿ ಮೂಡಿದೆ. ಮೈತ್ರಿ ಯಾರಿರಬಹುದು..? ಮೈತ್ರಿ ಅವರು ಎಲ್ಲಿಯವರು, ಅವರ ಹೆಸರೇನು..? ಎಂಬೆಲ್ಲಾ ಪ್ರಶ್ನೆಗಳು ಮೂಡಿವೆ.


ಉಡುಪಿಯ ಶಿಲ್ಪಾ ಮಂಗಳೂರಿನಿಂದ ಈಗ ಬೆಂಗಳೂರಿಗೆ

ನೂರು ಜನ್ಮಕೂ ಧಾರಾವಾಹಿಯಲ್ಲಿ ನಾಯಕಿ ಪಾತ್ರದಲ್ಲಿ ನಟಿಸುತ್ತಿರುವ ನಟಿಯ ಹೆಸರು ಶಿಲ್ಪಾ ಕಾಮತ್.ಶಿಲ್ಪಾ ಕಾಮತ್ ಅವರು ಉಡುಪಿ ಮೂಲದವರು. ಆದರೆ, ಶಿಲ್ಪಾ ಅವರು ಓದಿದ್ದು, ಬೆಳೆದಿದ್ದೆಲ್ಲಾ ಮಂಗಳೂರಿನಲ್ಲಿ. ಮಿಸ್ ಮಂಗಳೂರು ರನ್ನರಪ್ ಆಗಿರುವ ಶಿಲ್ಪಾ ಅವರು ಎಂಕಾಮ್ ಓದಿದ್ದಾರೆ. ಅಲ್ಲದೇ, ಮಂಗಳೂರಿನಲ್ಲಿ ಓದು ಮುಗಿಸಿ ಅಲ್ಲಿಯೇ ಬ್ಯಾಂಕ್ ಒಂದರಲ್ಲಿ ಕೆಲ ದಿನಗಳ ಕಾಲ ಕಾರ್ಯ ನಿರ್ವಹಿಸಿದ್ದು, ಬಳಿಕ ಐಟಿ ಕಂಪನಿಯ ಎಂಪ್ಲಾಯ್ ಕೂಡ ಆಗಿದ್ದರಂತೆ. ಸದ್ಯ ಧಾರಾವಾಹಿಯಲ್ಲಿ ನಟಿಸುವ ಸಲುವಾಗಿ ಬೆಂಗಳೂರಿಗೆ ಬಂದು ನೆಲಸಿದ್ದಾರೆ.


ಮೊದಲ ಧಾರಾವಾಹಿಯಲ್ಲಿ ಶಿಲ್ಪಾ ಕಾಮತ್

ಇನ್ನು ನಟಿ ಶಿಲ್ಪಾ ಕಾಮತ್ ಅವರಿಗೆ ನೂರು ಜನ್ಮಕೂ ಧಾರಾವಾಹಿ ಕಿರುತೆರೆಗೆ ಮೊದಲ ಪಯಣ. ವಿಎಫ್ ಎಕ್ಸ್ ಎಫೆಕ್ಟ್ ಇರುವ ಈ ಹಾರರ್ ಧಾರಾವಾಹಿಯಿಂದ ತಮಗೆ ಉತ್ತಮವಾದ ಅನುಭವ ದೊರೆಯುತ್ತಿದೆ ಎಂದು ಶಿಲ್ಪಾ ಅವರೇ ಹೇಳಿಕೊಂಡಿದ್ದಾರೆ. ಇನ್ನು ಅವರಿಗೆ ಹಾರರ್ ಚಿತ್ರ ಹಾಗೂ ಧಾರಾವಾಹಿಗಳೆಂದರೆ ಭಯವಿದೆಯಂತೆ. ಹಾಗಿದ್ದರೂ ಹಾರರ್ ಕಥೆಗೆ ನಾಯಕಿ ಆಗಿದ್ದಾರೆ. ಇನ್ನು ಇದಕ್ಕೂ ಮುನ್ನ ಶಿಲ್ಪಾ ಅವರು ಮೊದಲು ಕಿರು ಚಿತ್ರವೊಂದರಲ್ಲಿ ನಟಿಸಿದ್ದಾರೆ. ಅದು ಹೊರತುಪಡಿಸಿ, ರಂಗಸ್ಥಳ ಸಿನಿಮಾದಲ್ಲಿ ನಟಿಸಿದ್ದಾರೆ. ಸದ್ಯ ನೂರು ಜನ್ಮಕೂ ಧಾರಾವಾಹಿ ಮೂಲಕ ವೀಕ್ಷಕರಿಗೆ ಹತ್ತಿರವಾಗಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X