ಬರಹಗಾರರಿಗೆ ಸುವರ್ಣಾವಕಾಶ ; ಕಥೆ, ಸಂಭಾಷಣೆ ಬರೆಯುವವರನ್ನು ಆಡಿಷನ್ ಗೆ ಕರೆದ ಜೀ ಕನ್ನಡ ವಾಹಿನಿ
ಜೀ ಕನ್ನಡ ವಾಹಿನಿ ಪ್ರತಿ ಬಾರಿಯೂ ಹೊಸ ಹೊಸ ಐಡಿಯಾಗಳೊಂದಿಗೆ ಜನ ಸಾಮಾನ್ಯರ ಎದುರಿಗೆ ಬರುತ್ತಾರೆ. ಪ್ರತಿ ಬಾರಿಯೂ ಹೊಸ ಕಾನ್ಸೆಪ್ಟ್ ಮೂಲಕ ಕರ್ನಾಟಕದ ಮೂಲೆ ಮೂಲೆಯಲ್ಲಿರುವ ಸಾವಿರಾರು ಪ್ರತಿಭೆಗಳಿಗೆ ಭವಿಷ್ಯವನ್ನು ಕಲ್ಪಿಸಿಕೊಟ್ಟಿದೆ ಎಂದರೂ ತಪ್ಪಾಗುವುದಿಲ್ಲ.
ಸರಿಗಮಪ, ಡ್ರಾಮಾ ಜ್ಯೂನಿಯರ್ಸ್, ಡಿಕೆಡಿ, ಮಹಾನಟಿ, ಕಾಮಿಡಿ ಕಿಲಾಡಿಗಳು, ಜೋಡಿ ನಂ.1 ಹೀಗೆ ಸಾಲು ಸಾಲು ರಿಯಾಲಿಟಿ ಶೋಗಳನ್ನು ಪ್ರಾರಂಭಿಸಿದ್ದು, ಜನರ ಮನಸ್ಸನ್ನು ಗೆದ್ದಿದೆ. ಇದೀಗ ಮತ್ತೆ ಜೀ ಕನ್ನಡ ವಾಹಿನಿ ಹೊಸ ಪ್ರಯತ್ನಕ್ಕೆ ಕೈ ಹಾಕಿದೆ. ಸಾಮಾನ್ಯವಾಗಿ ವಾಹಿನಿಗಳಲ್ಲಿ ಧಾರಾವಾಹಿ ಕಥೆ ಸೇರಿದಂತೆ, ಸಂಬಾಷಣೆಗಳನ್ನು ಬರೆಯಲು ಹಿರಿಯ ಬರಹಗಾರರು ಇರುತ್ತಾರೆ.

ಬರಹಗಾರರಿಗೆ ಸುವರ್ಣಾವಕಾಶ
ಇದೇ ಮೊಟ್ಟ ಮೊದಲ ಬಾರಿಗೆ ಜೀ ಕನ್ನಡ ವಾಹಿನಿ ಕಥೆ ಮತ್ತು ಸಂಭಾಷಣೆ ಬರೆಯಲು ಸಾಧ್ಯವಿರುವವರಿಗೆ ಸುವರ್ಣಾವಕಾಶವನ್ನು ಕಲ್ಪಿಸಿಕೊಡಲಾಗಿದೆ. ಇಷ್ಟುಕಾಲ ಹಿರಿಯ ಬರಹಗಾರರು ವಾಹಿನಿಗಳಲ್ಲಿ ಕಥೆ ಮತ್ತು ಸಂಭಾಷಣೆಯನ್ನು ಬರೆಯುತ್ತಿದ್ದರು. ಅವರಿಗೆ ಗೊತ್ತಿದ್ದ ವ್ಯಕ್ತಿಗಳಿದ್ದರೆ, ಅವರಿಗೆ ವಾಹಿನಿಗಳಲ್ಲಿ ಕಥೆ ಮತ್ತು ಸಂಭಾಷಣೆ ಬರೆಯಲು ಅವಕಾಶ ಸಿಗುತ್ತಿತ್ತು. ಆದರೆ, ಹಾಡುಗಾರರಿಗೆ, ಹಾಸ್ಯಗಾರರಿಗೆ ಹಾಗೂ ನಟನೆ ಮಾಡಲು ಬಯಸುವವರಿಗೆ ಮಾತ್ರವೇ ಇದುವರೆಗೂ ಎಲ್ಲಾ ವಾಹಿನಿಯು ಆಡಿಷನ್ ಗೆ ಕರೆದು ರಿಯಾಲಿಟಿ ಶೋಗಳನ್ನು ಮಾಡಲಾಗುತ್ತಿತ್ತು. ಆದರೆ, ಇದೇ ಮೊದಲ ಬಾರಿಗೆ ಜೀ ಕನ್ನಡ ವಾಹಿನಿ ಈ ಹೊಸ ಪ್ರಯತ್ನವನ್ನು ಮಾಡಿದೆ.
Writers ಆಡಿಷನ್ ಯಾವತ್ತು..?
ಕಥೆ ಬರೆಯೋ ಕೌಶಲ್ಯ, ಸಂಭಾಷಣೆ ಬರೆಯೋ ಟ್ಯಾಲೆಂಟ್ ನಿಮಗಿದ್ರೆ, ನಿಮಗಿಲ್ಲಿದೆ ಅವಕಾಶದ ಹೆಬ್ಬಾಗಿಲು! ನಿಮಗೆ ಕಥೆ ಮತ್ತು ಸಂಭಾಷಣೆ ಬರೆಯೋದಕ್ಕೆ ಬರುತ್ತಾ..? ಹಾಗಿದ್ದರೆ, ಬನ್ನಿ ಜೀ ಕನ್ನಡದ writers ಆಡಿಷನ್ ನಲ್ಲಿ ಭಾಗವಹಿಸಿ ಎಂದು ಜೀ ವಾಹಿನಿ ಹೊಸ ಪ್ರೊಮೋ ಒಂದನ್ನು ಹರಿ ಬಿಟ್ಟಿದೆ. ಜನವರಿ 11ರಂದು ಬೆಳಗ್ಗೆ 9 ಗಂಟೆಗೆ ದಾವಣಗೆರೆ, ಶಿವಮೊಗ್ಗ ಹಾಗೂ ಮಂಗಳೂರಿನಲ್ಲಿ ಆಡಿಷನ್ ನಡೆಯುತ್ತಿದೆ. ಆಡಿಷನ್ ನಡೆಯುವ ಸ್ಥಳದ ಮಾಹಿತಿಯನ್ನು ವಾಹಿನಿ ನೀಡಿದೆ.
ಎಲ್ಲೆಲ್ಲಿ ನಡೆಯಲಿದೆ ಆಡಿಷನ್..?
ದಾವಣಗೆರೆಯ ಬಿ ಎಸ್ ಚೆನ್ನಬಸಪ್ಪ, ಪ್ರಥಮ ಧರ್ಜೆ ಕಾಲೇಜು, ಎಸ್ ಎಸ್ ಲೇಔಟ್ ನಲ್ಲಿ ಆಡಿಷನ್ ನಡೆಯುತ್ತಿದೆ. ಬಸವೇಶ್ವರ ವಿದ್ಯಾ ಸಂಸ್ಥೆ, ತಾಲೂಕು ಕಛೇರಿ ರಸ್ತೆ, ಕಾರ್ಪೋರೇಷನ್ ಹತ್ತಿರ, ಶಿವಮೊಗ್ಗ ಹಾಗೂ MSNIM, ಬೆಸೆಂಟ್ ಕ್ಯಾಂಪಸ್, ಬೊಂದೇಲ್, ಮಂಗಳೂರಿನಲ್ಲಿ ಆಡಿಷನ್ ನಡೆಯುತ್ತಿದೆ ಎಂದು ವಾಹಿನಿ ತಿಳಿಸಿದೆ. ಈ ಪ್ರೊಮೋವನ್ನು ನೋಡಿದ ವೀಕ್ಷಕರು ಬೆಂಗಳೂರು, ಬಳ್ಲಾರಿ, ಹುಬ್ಬಳ್ಳಿ, ತುಮಕೂರು, ಹಾಸನ, ಗುಲ್ಬರ್ಗ ಜಿಲ್ಲೆಗಳಲ್ಲಿ ಯಾವಾಗ ಆಡಿಷನ್ ನಡೆಯುತ್ತದೆ ಎಂದು ಪ್ರಶ್ನೆ ಮಾಡಿದ್ದಾರೆ.
ಆಸಕ್ತಿ ತೋರಿದ ಕನ್ನಡಿಗರು
ಇನ್ನೂ ಕೆಲವರು ಕಥೆ ಎಂದರೆ ಎಷ್ಟು ಅಕ್ಷರಗಳಲ್ಲಿ ಬರೆಯಬೇಕು. ಚಿಕ್ಕ ಕಥೆ ಅಥವಾ ದೊಡ್ಡ ಕಥೆ ಇರಬೇಕಾ. ಕವಿತೆ,, ಡೈಲಾಗ್ ಹೇಗಿರಬೇಕು. ಯಾವರೀತಿ ಬರೆಯಬೇಕು ಎಂದು ಹೇಳಿದರೆ ಸಹಾಯವಾಗುತ್ತದೆ ಎಂದು ಮತ್ತಷ್ಟು ಮಂದಿ ಕೇಳಿದ್ದಾರೆ. ಆಡಿಷನ್ ಕೇವಲ ದಾವಣಗೆರೆ, ಶಿವಮೊಗ್ಗ ಮತ್ತು ಮಂಗಳುರಿನಲ್ಲಿ ಮಾತ್ರವಾ ಅಥವಾ ಬೇರೆ ಕಡೆಗಳಲ್ಲೂ ಇರುತ್ತದೆಯಾ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ. ಒಟ್ನಲ್ಲಿ ವಾಹಿನಿ ಹೊಸ ಸಾಹಸಕ್ಕೆ ಕೈ ಹಾಕಿದ್ದು, ಕನ್ನಡಿಗರು ಕೂಡ ಈ ಅವಕಾಶವನ್ನು ಬಳಸಿಕೊಳ್ಳಲು ಮುಂದಾಗಿದ್ದಾರೆ.


Click it and Unblock the Notifications











