Puttakkana Makkalu ; ಪುಟ್ಟಕ್ಕನ ಮೆಸ್ ನಲ್ಲಿ ರಾಮ್ ಊಟ : ಅಣ್ಣನ ಸಹಾಯ ಬೇಡುತ್ತಾಳಾ ಸಹನಾ..?

By ಪ್ರಿಯಾ ದೊರೆ

ರಾಮನಿಗೆ ಸಂಕಷ್ಟ ಎದುರಾಗಿದೆ. ಮನೆಯವರನ್ನೂ ಬಿಡಲಾಗದೇ, ಪ್ರೀತಿಸಿದ ಸೀತಾಳನ್ನು ಬಿಟ್ಟುಕೊಡಲಾಗದೇ ಒದ್ದಾಡುತ್ತಿದ್ದಾನೆ. ಸೂರಿ ತಾತ ಸೀತಾಳಿಗೆ ಕಂಡೀಷನ್ ಹಾಕಿ ಮದುವೆಗೆ ಒಪ್ಪಿಗೆ ಕೊಟ್ಟಿದ್ದಾರೆ. ನನಗೆ ನಿನ್ನ ಹಾಗೂ ರಾಮನಿಂದ ವಾರಸುದಾರ ಬೇಕು ಎಂದು ಕೇಳಿದ್ದಾರೆ. ಇದು ಸೀತಾಳನ್ನು ಇಬ್ಬಂದಿಗೆ ಒಡ್ಡಿದೆ. ಸಿಹಿಯನ್ನು ಇಟ್ಟಿರಲಾರದ ಸೀತಾ, ಇನ್ನೊಂದು ಮಗು ತನಗೆ ಬೇಡವೇ ಬೇಡ ಎಂದು ಖಡಾಖಂಡಿತವಾಗಿ ಹೇಳಿದ್ದಾಳೆ.

ಸೀತಾರಾಮ ಬಿಟ್ಟು ಪುಟ್ಟಕ್ಕನ ಮನೆ ಸೇರಿದ ರಾಮ

ಈ ಬಗ್ಗೆ ರಾಮ ಬಳಿಯೇ ಸ್ಪಷ್ಟನೆಯನ್ನು ನೀಡಿದ್ದಾಳೆ. ರಾಮಗೆ ಈಗ ಯಾವ ನಿರ್ಧಾರ ಮಾಡಬೇಕು. ತಾತ ಹಾಗೂ ಸೀತಾ ಇಬ್ಬರನ್ನೂ ಹೇಗೆ ಈ ಮದುವೆಗೆ ಒಪ್ಪಿಸುವುದು ಎಂದು ಗೊತ್ತಾಗದೇ ಒಂಟಿ ಆಗಿದ್ದಾನೆ. ಒಂಟಿಯಾಗಿರುವ ಈ ಸಂದರ್ಭದಲ್ಲಿ ಸೀತಾರಾಮ ಧಾರಾವಾಹಿಯನ್ನು ಬಿಟ್ಟು ರಾಮ ಪುಟ್ಟಕ್ಕನ ಮಕ್ಕಳು ಸೀರಿಯಲ್ ನಲ್ಲಿ ಕಾಣಿಸಿಕೊಂಡಿದ್ದಾನೆ. ಪುಟ್ಟಕ್ಕನ ಮೆಸ್ ಗೆ ತೆರಳಿದ ರಾಮ ಅಲ್ಲಿ ಮುದ್ದೆ, ಪುಳಿಯೋಗರೆ ಊಟ ಮಾಡಿದ್ದಾನೆ. ಸಮಾಳಿಗಂತೂ ಗ್ರೇಟ್ ಬಿಸಿನೆಸ್ ಐಕಾನ್ ತಮ್ಮ ಮೆಸ್ ಗೆ ಬಂದಿದ್ದು ಖುಷಿ ಕೊಟ್ಟಿದೆ.

written update on Ram in puttakkana mess

ಊಟ ಮಾಡಿ ಖುಷಿ ಪಟ್ಟ ರಾಮ

ರಾಮ ಜೊತೆಗೆ ಸೆಲ್ಫಿ ತೆಗೆದುಕೊಂಡು ಸುಮ ಸಂತಸ ಪಟ್ಟಿದ್ದಾಳೆ. ಪುಟ್ಟಕ್ಕ ಮುದ್ದೆ ಬಡಿಸಿ, ಹೇಗೆ ತಿನ್ನುವುದು ಎಂದು ರಾಮಗೆ ಹೇಳಿಕೊಟ್ಟಿದ್ದಾಳೆ. ಸಹನಾ ಪುಳಿಯೋಗರೆಯ ರುಚಿಯನ್ನು ನೋಡಿ, ಶಬರಿಯಂತೆ ರಾಮನಿಗೆ ಬಡಿಸಿದ್ದಾಳೆ. ರಾಮ ಪುಟ್ಟಕ್ಕನ ಮೆಸ್ ನಲ್ಲಿ ಹೊಟ್ಟೆ ತುಂಬಾ ಊಟ ಮಾಡಿ ಖುಷಿ ಪಟ್ಟಿದ್ದಾನೆ. ನಿಮ್ಮ ಬ್ರ್ಯಾಂಚ್ ಬೆಂಗಳೂರಿನಲ್ಲಿದ್ಯಾ ಎಂದು ಕೇಳುತ್ತಾನೆ. ಸುಮಾ ಇಲ್ಲ ಸರ್ ಇಲ್ಲಿ ಮಾತ್ರವೇ ನಮ್ಮ ಮೆಸ್ ಇರುವುದು ಎಂದು ಹೇಳುತ್ತಾಳೆ. ನಿಮಗೆ ಮುಂದೆಂದಾದರೂ ಕಷ್ಟ ಬಂದರೆ ನನ್ನನ್ನು ನೆನಪಿಸಿಕೊಳ್ಳಿ. ನಾನು ನಿಮ್ಮ ಮಗ ಎಂದುಕೊಳ್ಳಿ ಎಂದು ಪುಟ್ಟಕ್ಕನಿಗೆ ಹೇಳುತ್ತಾನೆ. ನಾನು ನಿಮ್ಮ ಅಣ್ಣ ಎಂದುಕೊಳ್ಳಿ ಎಂದು ಸಹನಾ ಹಾಗೂ ಸುಮಾಳಿಗೆ ಹೇಳುತ್ತಾನೆ. ನಿಮಗೆ ಏನೇ ಸಹಾಯ ಬೇಕಿದ್ದರೂ ನಾನು ಮಾಡುತ್ತೇನೆ ಎಂದು ಕಾರ್ಡ್ ಕೊಟ್ಟು ಹೊಗುತ್ತಾನೆ.

ಮನೆ ಬಿಟ್ಟು ಹೊರಟ ಸಹನಾ

ರಾಮ ಮೆಸ್ ಗೆ ಆಗಮಿಸಿದ್ದು, ಸಹನಾಳಿಗೆ ಸಹಾಯವಾಗುವ ಸಾಧ್ಯತೆ ಇದೆ. ಸಹನಾ ಪ್ರೀತಿಸಿ ಮದುವೆಯಾದರೂ ಅತ್ತೆ ಮನೆಯಲ್ಲಿ ಕಾಟ ಅನುಭವಿಸಿ ಯಾರೊಬ್ಬರ ಸಹಾಯವಿಲ್ಲದೇ ಹೋರಾಟ ಮಾಡಿದ್ದಾಳೆ. ಗಂಡನಿಂದಲೂ ಕೂಡ ದೂರ ಆಗಿರುವ ಸಹನಾಳಿಗೆ ಈಗ ಹೆಗಲು ಕೊಡುವವರು ಯಾರೂ ಇಲ್ಲದಂತಾಗಿದೆ. ಊರಿನಲ್ಲಿ ಕಷ್ಟ ಪಡುತ್ತಿರುವ ಸಹನಾ ಎಲ್ಲರನ್ನೂ ಬಿಟ್ಟು ಬೇರೆ ಎಲ್ಲಾದರೂ ಹೋಗಬೇಕು ಎಂದು ನಿರ್ಧರಿಸಿದ್ದಾಳೆ.

written update on Ram in puttakkana mess

ರಾಮ ಸಹಾಯ ಬೇಡುತ್ತಾಳಾ ಸಹನಾ

ಎಲ್ಲರೂ ಮಲಗಿದ ಬಳಿಕ ಸಹನಾ ಮನೆ ಬಿಟ್ಟು ಬೆಂಗಳೂರಿಗೆ ಹೋಗಲು ನಿರ್ಧಾರ ಮಾಡಿದ್ದಾಳೆ. ಬಟ್ಟೆಗಳನ್ನು ಬ್ಯಾಗ್ ಗೆ ಹಾಕಿಕೊಂಡು, ಊರ ದೇವಿಯ ಕುಂಕುಮವನ್ನೇ ರಕ್ಷಾ ಕವಚ ಎಂದು ಭಾವಿಸಿದ್ದಾಳೆ. ಮನೆಯಲ್ಲಿ ಎಲ್ಲರನ್ನೂ ಮೌನದಲ್ಲೇ ಕ್ಷಮೆ ಕೇಳಿ, ಶ್ರೀರಾಮನ ಕಾರ್ಡ್ ತೆಗೆದುಕೊಂಡು ಮನೆ ಬಿಟ್ಟು ಹೊರಟಿದ್ದಾಳೆ. ರಾತ್ರೋ ರಾತ್ರಿ ಬೆಂಗಳೂರು ಬಸ್ ಹತ್ತಿದ ಸಹನಾ, ರಾಮ ಸಹಾಯ ಪಡೆಯುತ್ತಾಳಾ ಎಂಬುದನ್ನು ಕಾದು ನೋಡಬೇಕಿದೆ. ಇನ್ನು ಪುಟ್ಟಕ್ಕ ಬೆಳಗೆದ್ದು ಸಹನಾಳನ್ನು ಹುಡುಕಾಡಿದ್ದಾಳೆ. ಸಹನಾ ಮನೆಯಲ್ಲಿ ಕಾಣಿಸದಿರುವುದನ್ನು ನೋಡಿ ಪುಟ್ಟಕ್ಕ ಗಾಬರಿಯಾಗಿದ್ದಾಳೆ. ಎಲ್ಲಿಗೆ ಹೋದಳೋ ಎಂದು ಹುಡುಕಾಟವನ್ನು ಶುರು ಮಾಡಿದ್ದಾಳೆ.

More from Filmibeat

English summary
Ram eats food in puttakkana mess and helps sahana
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X