ಮತ್ತೆ ಬರುತ್ತಿದೆ ಮಹಾನಟಿ ಸೀಸನ್–2 : ಆಡಿಷನ್ ಗಾಗಿ ಕಾಯುತ್ತಿರುವ ವೀಕ್ಷಕರು

By ಪ್ರಿಯಾ ದೊರೆ

ಕಳೆದ ವರ್ಷ ಇದೇ ಮಾರ್ಚ್ ತಿಂಗಳ ಆಸುಪಾಸಿನಲ್ಲಿ ಜೀ ಕನ್ನಡ ವಾಹಿನಿ ಹೊಸ ರಿಯಾಲಿಟಿ ಶೋ ಬಗ್ಗೆ ಮೊದಲ ಪ್ರೊಮೋವನ್ನು ಹಂಚಿಕೊಂಡಿತ್ತು. ಇದೀಗ ಮತ್ತೆ ಜೀ ವಾಹಿನಿ ಅದೇ ಶೋನ ಎರನೇ ಸೀಸನ್ ಅನ್ನು ಆರಂಭಿಸಲು ಮನಸ್ಸು ಮಾಡಿದೆ. ಹೌದು, ಕಳೆದ ವರ್ಷ ಜೀ ವಾಹಿನಿಯಲ್ಲಿ ಮಹಾನಟಿಯರಿಗಾಗಿ ಹುಡುಕಾಟ ನಡೆದಿತ್ತು. ಒಂದಷ್ಟು ಹೊಸ ಪ್ರತಿಭೆಗಳಿಗೆ ಹೊಸ ವೇದಿಕೆ ಮೂಲಕ ಅವಕಶವನ್ನು ಕಲ್ಪಿಸಿಕೊಟ್ಟಿತ್ತು. ಇದೀಗ ಮತ್ತದೇ ಸಾಹಸಕ್ಕೆ ಜೀ ಕನ್ನಡ ವಾಹಿನಿ ಕೈ ಹಾಕಿದೆ.

ಮತ್ತೆ ಬರಲಿದೆ ಮಹಾನಟಿ ರಿಯಾಲಿಟಿ ಶೋ

ಈ ಬಾರಿ ಕೂಡ ವೀಕ್ಷಕರಿಗೆ ಇಷ್ಟವಾಗುವಂತೆ ನೂತನ ಆಲೋಚನೆಗಳೊಂದಿಗೆ ಬರುವ ಜೀ ಕನ್ನಡ ವಾಹಿನಿ ಮಹಾನಟಿ ಎಂಬ ಹೊಸ ರಿಯಾಲಿಟಿ ಶೋ ಅನ್ನು ಪ್ರಸಾರ ಮಾಡಿ ಎಲ್ಲರ ಮನ ಗೆದ್ದಿತ್ತು. ಈಗಲೂ ಮತ್ತದೇ ಹೊಸ ಆಲೋಚನೆಯನ್ನು ಹೊತ್ತು ತಂದಿದೆ. ಸರಿಗಮಪ, ಡ್ರಾಮಾ ಜ್ಯೂನಿಯರ್ಸ್, ಡ್ಯಾನ್ಸ್ ಶೋ, ಕಾಮಿಡಿ ಶೋಗಳ ಮೂಲಕ ರಾಜ್ಯವನ್ನು ಮೀರಿ ಹೊರ ದೇಶಗಳಿಂದಲೂ ಹೊಸ ಹೊಸ ಪ್ರತಿಭೆಗಳಿಗೆ ಜೀ ಕನ್ನಡ ವಾಹಿನಿ ವೇದಿಕೆಯಾಗಿದೆ. ಈಗಾಗಲೇ ಸಾಕಷ್ಟು, ನಟ-ನಟಿಯರು, ಹಾಸ್ಯ ನಟರು, ಬಾಲ ನಟರನ್ನು ಪರಿಚಯಿಸಿದೆ. ಅವಕಾಶ ವಂಚಿತರಾಗಿರುವ ಪ್ರತಿಭಾವಂತರಿಗೆ ಈ ವೇದಿಕೆ ಭವಿಷ್ಯವನ್ನು ಕಲ್ಪಿಸಿಕೊಡುವುದರಲ್ಲಿ ಅನುಮಾನವೇ ಇಲ್ಲ. ಇದೀಗ ಮತ್ತೆ ಮಹಾನಟಿ ಸೀಸನ್-2 ಆರಂಭಿಸುವ ಬಗ್ಗೆ ಜೀ ಕನ್ನಡ ವಾಹಿನಿ ಮಾಹಿತಿ ನೀಡಿದೆ.

written-update-on-reality-show-mahanati-season-2

ಪ್ರತಿಭೆಗಳಿಗೆ ಇದು ಸದಾವಕಾಶ

ಪ್ರತಿಭಾವಂತ ನಟಿಯರನ್ನು ಕರ್ನಾಟಕದ ಮಹಾನಟಿಯರನ್ನಾಗಿ ಮಾಡೋಕೆ ಮತ್ತೊಮ್ಮೆ ಬರ್ತಿದೆ ಮಹಾನಟಿ ಸೀಸನ್-2 ಶೀಘ್ರದಲ್ಲೇ ಆರಂಭವಾಗಲಿದೆ ಎಂದು ಜೀ ಕನ್ನಡ ವಾಹಿನಿ ಪ್ರೊಮೋ ಹರಿ ಬಿಟ್ಟಿದೆ. ಸಾಮಾನ್ಯರು ಕೂಡ ನಾಯಕಿಯಾಗಲು ಇಚ್ಛಿಸಿದರೆ, 'ಮಹಾನಟಿ' ರಿಯಾಲಿಟಿ ಶೋಗೆ ಆಡಿಷನ್ ನೀಡಬಹುದಾಗಿದೆ. ಆದರೆ, ಆಡಿಷನ್ ಯಾವಾಗ ಇರುತ್ತದೆ ಎಂಬ ಬಗ್ಗೆ ಇನ್ನೂ ವಾಹಿನಿ ಯಾವುದೇ ಮಾಹಿತಿಯನ್ನು ನೀಡಿಲ್ಲ. ಕಳೆದ ಬಾರಿ ಆಡಿಷನ್ ಮಾಡಿ ರಿಯಾಳಿಟಿ ಶೋಗೆ 16 ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗಿತ್ತು. ನಟಿಸಲು ಬಯಸುವವರಿಗೆ ಜೀ ಕನ್ನಡ ಅದ್ಭುತ ವೇದಿಕೆಯೊಂದನ್ನು ನೀಡಿದೆ. ಅದುವೆ ಮಹಾನಟಿ ಆಡಿಷನ್. ಶೋಗೆ ಮೊದಲೇ ಹೇಳಿದಂತೆ ರಾಜ್ಯಾದ್ಯಂತ ಆಡಿಷನ್ ನಡೆದಿದೆ. ಆದರೆ ಫೈನಲ್ ರೌಂಡ್ನಲ್ಲಿ ಬೆಂಗಳೂರು, ಶಿವಮೊಗ್ಗದ ತೀರ್ಥಹಳ್ಳಿ, ಶಿರಸಿ, ಚಿತ್ರದುರ್ಗ, ಮಂಗಳೂರು, ಮೈಸೂರು, ಚಿಕ್ಕಮಗಳೂರಿನ ತರಿಕೆರೆ, ದಾವಣಗೆರೆಯ ಹೊನ್ನಾಳಿ, ರಾಜಸ್ಥಾನದಿಂದ ಬಂದ ಪ್ರತಿಭೆಗಳಿಗೆ ಅವಕಶ ಸಿಕ್ಕಿತ್ತು.

ಮೊದಲ ಸೀಸನ್ ನ ವಿನ್ನರ್ ಯಾರು..?

ಜೀ ಕನ್ನಡದಲ್ಲಿ ಮಹಾನಟಿ ರಿಯಾಲಿಟಿ ಶೋ ಶುರುವಾಗಿ ಒಳ್ಳೆ ಮನರಂಜನೆ ನೀಡಿತ್ತು. ವಿಭಿನ್ನವಾದ ರೀತಿಯಲ್ಲಿ ಕಂಟೆಂಟ್ ಗಳನ್ನು ನೀಡುವ ಮೂಲಕ ವೀಕ್ಷಕರಿಗೆ ಖುಷಿಕೊಟ್ಟಿತ್ತು. ಹದಿಮೂರು ವಾರಗಳನ್ನು ಪೂರೈಸಿದ ಈ ಶೋನಲ್ಲಿ ಸ್ಫರ್ಧಿಗಳು ಜಡ್ಜಸ್ ನೀಡಿದ ಟಾಸ್ಕ್ ಗಳನ್ನು ಅಚ್ಚುಕಟ್ಟಾಗಿ ಪೂರೈಸಿದ್ದರು. ಫಿನಾಲೆಯಲ್ಲಿ ವಿನ್ನರ್ ಕಿರೀಟವೂ ಪ್ರಿಯಾಂಕಾ ಆಚಾರ್ ಮುಡಿಗೇರಿತ್ತು. 15 ಲಕ್ಷ ಮೌಲ್ಯದ ಪ್ಯೂರ್ ಚಿನ್ನದ ಕಿರೀಟವನ್ನು ಪ್ರಿಯಾಂಕಾ ಮುಡಿಗೇರಿಸಿಕೊಂಡಿದ್ದರು. ಇವರ ಜೊತೆಗೆ ರನ್ನರ್ ಅಪ್ ಆಗಿ ಹತ್ತು ಲಕ್ಷ ಬಹುಮಾನವನ್ನು ಧನ್ಯಶ್ರೀ ಪಡೆದಿದ್ದರು.

ಸ್ಟಾರ್ ಸಿನಿಮಾ ನಾಯಕಿಯಾಗುವ ಅವಕಾಶ

ಇಷ್ಟೇ ಅಲ್ಲದೇ, ಉಳಿದವರಿಗೆ ತಮ್ಮ ನಟನಾ ಕೌಶಲ್ಯದಿಂದಲೇ ಅವಕಾಶಗಳನ್ನು ಪಡೆಯುತ್ತಿದ್ದಾರೆ. ಕೆಲವರು ಇಂದಿಗೂ ಕನ್ನಡ ವಾಹಿನಿಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಏಳುಮಲೆಯ ಮಡಿಲಲ್ಲಿ ಎದೆ ನಡುಗಿಸಿದ ಪ್ರೇಮಕಥೆಯ ಟ್ಯಾಗ್ ಲೈನ್ ಇರುವ ಹೆಸರಿಡದ ಚಿತ್ರಕ್ಕೆ ಪ್ರಿಯಾಂಕಾ ಆಚಾರ್ ಅವರು ನಾಯಕಿಯಾಗಿದ್ದಾರೆ. ಇನ್ನು ಇದೀಗ ಮಹಾನಟಿ ಸೀಸನ್- 2 ಆರಭವಾಗುವುದು ಪಕ್ಕಾಗಿದ್ದು, ಈ ಹೊಸ ರಿಯಾಲಿಟಿ ಶೋನಲ್ಲಿ ಆಡಿಷನ್ ನೀಡಲು ಈಗಾಗಲೇ ಹಲವರು ಕಾತುರರಾಗಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X