Sathya : ತಾಜ್ ಮಹಲ್ ಎದುರು ನಿಂತ ಸತ್ಯಾ, ಪತಿ ಜೊತೆ ಗೌತಮಿ ಪ್ರವಾಸ...!

By ಪ್ರಿಯಾ ದೊರೆ

ಸತ್ಯಾ ಧಾರಾವಾಹಿ ಮೂಲಕ ಜನಪ್ರಿಯತೆ ಗಳಿಸಿದವರು ಗೌತಮಿ ಜಾಧವ್. ತೆರೆ ಮೇಲೆ ಗೌತಮಿ ಅವರನ್ನು ನೋಡೋದಕ್ಕೂ, ತೆರೆ ಹಿಂದೆ ನೋಡೋದಕ್ಕೂ ತುಂಬಾನೇ ವ್ಯತ್ಯಾಸವಿದೆ. ಗೌತಮಿ ಜಾಧವ್ ಅವರು ನಾಗಪಂಚಮಿ ಎಂಬ ಧಾರಾವಾಹಿ ಮೂಲಕ ಕಿರುತೆರೆ ಲೋಕಕ್ಕೆ ಪಾದರ್ಪಣೆ ಮಾಡಿದರು. ಸತ್ಯ ಧಾರಾವಾಹಿಯಲ್ಲಿ ರಗಡ್ ಲುಕ್ ಮೂಲಕ ಜನಪ್ರಿಯತೆ ಪಡೆದಿರುವ ಗೌತಮಿ ಜಾಧವ್ ಅಭಿನಯಕ್ಕೆ ಮನಸೋಲದವರಿಲ್ಲ. ಗೌತಮಿ ಅವರಿಗೆ ಸತ್ಯಾ ಲುಕ್ ಸಕತ್ ಆಗಿ ಒಪ್ಪುತ್ತದೆ. ಅವರನ್ನ ನಾರ್ಮಲ್ ಆಗಿ ನೋಡಿದರೆ ಯಾರಿಗೂ ಇವರೇ ಸತ್ಯ ನಟಿ ಎಂದು ಗುರುತಿದುವುದು ಬಹಳ ಕಷ್ಟ.


ದಂಪತಿಗಳ ಸುತ್ತಾಟ

ಸದ್ಯ ಸತ್ಯ ಧಾರಾವಾಹಿಯಲ್ಲಿ ಸಬ್ ಇನ್ ಸ್ಪೆಕ್ಟರ್ ಆಗಿ ಕಾಣಿಸಿಕೊಂಡಿದ್ದು, ಸೀರಿಯಲ್ ನಿಂದ ಬ್ರೇಕ್ ಪಡೆದಿದ್ದಾರೆ. ನಟಿ ಗೌತಮಿ ಅವರು ತಮ್ಮ ಪತಿರಾಯನ ಜೊತೆಗೆ ಲಾಂಗ್ ಟ್ರಿಪ್ ಹೋಗಿದ್ದಾರೆ. ಜೈಪುರ, ದೆಹಲಿ, ತಾಜ್ ಮಹಲ್ ಎಲ್ಲಾ ಕಡೆಗಳಲ್ಲೂ ಸುತ್ತಾಡುತ್ತಿದ್ದಾರೆ. ಬಹಳ ದಿನಗಳ ಬಳಿಕ ದಂಪತಿಗಳು ನಾರ್ತ್ ಇಂಡಿಯಾ ಟ್ರಿಪ್ ಅನ್ನು ಎಂಜಾಯ್ ಮಾಡುತ್ತಿದ್ದಾರೆ. ಗೌತಮಿ ಅವರು ತಾವು ಭೇಟಿ ಕೊಟ್ಟ ಸ್ಥಳಗಳ ಫೋಟೋ ಜೊತೆಗೆ ಒಂದೊಂದು ರೀಲ್ಸ್ ಗಳನ್ನು ಕೂಡ ಮಾಡಿ ಅಪ್ ಲೋಡ್ ಮಾಡುತ್ತಿದ್ದಾರೆ. ತಾಜ್ ಮಹಲ್ ನಲ್ಲಿ ಪತಿ ಜೊತೆಗೆ ಫೊಟೋ ತೆಗೆಸಿಕೊಂಡಿದ್ದಾರೆ.

written-update-on-sathya-kannada-serial-gouthami-jadav

ಬಣ್ಣದ ಲೋಕದವರನ್ನೇ ವರಿಸಿದ ಗೌತಮಿ

ಗೌತಮಿ ಅವರು ಮದುವೆಯಾಗಿರುವುದು ಸಿನಿಮಾ ಲೋಕದಲ್ಲಿರುವವರನ್ನೇ. ಆದರೆ ಗೌತಮಿ ಜಾಧವ್ ಪತಿ ನಟರಲ್ಲ. ಬದಲಿಗೆ ಅವರು ಸಿನಿಮ್ಯಾಟೋಗ್ರಫರ್. ಹೌದು.. ಛಾಯಾಗ್ರಾಹಕ ಅಭಿಷೇಕ್ ಕಾಸರಗೂಡು ಅವರನ್ನ ಗೌತಮಿ ವಿವಾಹವಾಗಿದ್ದಾರೆ. ಅಭಿಷೇಕ್ ಮಾಯಾ ಬಜಾರ್, ಅನಂತು ವರ್ಸಸ್ ನುಸ್ರತ್, ಆಪರೇಷನ್ ಅಲಮೇಲಮ್ಮ ಸೇರಿದಂತೆ ಹಲವು ಸಿನಿಮಾಗಳಿಗೆ ಸಿನಿಮ್ಯಾಟೋಗ್ರಫರ್ ಆಗಿ ಕೆಲಸ ಮಾಡಿದ್ದಾರೆ. ಈಗ ಅಭಿಷೇಕ್ ಕೈಯಲ್ಲಿ ಹಲವು ಚಿತ್ರಗಳಿವೆ. ಗೌತಮಿ ಹಾಗೂ ಅಭಿಷೇಕ್ ಇಬ್ಬರೂ ಸಿನಿಮಾ ಕ್ಷೇತ್ರದಲ್ಲೇ ಕೆಲಸ ಮಾಡುತ್ತಿದ್ದಾರೆ.


ಶ್ವಾನಗಳನ್ನು ಪ್ರೀತಿಸುವ ಜೋಡಿ

ಗೌತಮಿಗೆ ಕಿನಾರೆ ಸಿನಿಮಾದಲ್ಲಿ ನಟಿಸುವ ಆಫರ್ ಬಂದಿತ್ತು. ಈ ವಿಚಾರವಾಗಿ ಮಾತನಾಡಲು ಕಚೇರಿಗೆ ಹೋದಾಗ ಅಲ್ಲಿ ಅಭಿಷೇಕ್ ಅವರ ಪರಿಚಯವಾಯ್ತು. ಇದಾದ ನಂತರ ಕಿನಾರೆ ಸಿನಿಮಾ ಕೆಲಸಗಳಿಂದಾಗಿ ನಿತ್ಯ ಇಬ್ಬರೂ ಭೇಟಿಯಾಗುತ್ತಿದ್ದರು. ಅಭಿಷೇಕ್ ಗೆ ಗೌತಮಿ ಮೇಲೆ ಲವ್ ಆಗಿ ಮನೆಯಲ್ಲಿ ವಿಷಯ ತಿಳಿಸಿ ಒಪ್ಪಿ ಮದುವೆಯಾದರು. ಇನ್ನು ನಟಿ ಗೌತಮಿ ಅವರಿಗೆ ಶ್ವಾನಗಳು ಎಂದರೆ ಬಹಳ ಇಷ್ಟ, ತಮ್ಮ ಮಕ್ಕಳಂತೆಯೇ ನೋಡಿಕೊಳ್ಳುತ್ತಾರೆ. ಈ ಜೋಡಿಗೆ ನಾಯಿಗಳೆಂದರೆ ತುಂಬಾ ಇಷ್ಟ. ಇಬ್ಬರು ಮನೆಯಲ್ಲಿ ನಾಯಿಗಳನ್ನು ಸಾಕಿದ್ದಾರೆ. ಆಗಾಗ ಈ ಜೋಡಿ ಟ್ರಿಪ್ ಗಳಿಗೆ ಹೋಗಿ ಬರುತ್ತಿರುತ್ತಾರೆ. ಗೌತಮಿ ಅವರ ಮನೆಯಲ್ಲಿ ನಾಲ್ಕು ಗೋಲ್ಡನ್ ರಿಟ್ರೀವರ್ ಇವೆ. ಆಗಾಗ ಇವುಗಳ ಜೊತೆಗೆ ಫೋಟೋ ತೆಗೆಸಿಕೊಂಡು, ಅಪ್ ಲೋಡ್ ಮಾಡುತ್ತಿರುತ್ತಾರೆ. ಇನ್ನು ಈ ನಾಲ್ಕೂ ಶ್ವಾನಗಳಿಗೂ ಹೆಸರಿಟ್ಟಿದ್ದು, ಪ್ರಿನ್ಸಿ, ಕ್ವೀನ್, ಹ್ಯಾಪಿ, ಕಾಫಿ ಎಂದು ಕರೆಯುತ್ತಾರೆ.

written-update-on-sathya-kannada-serial-gouthami-jadav


ಗೌತಮಿ ನಟನೆಯ ಸಿನಿಮಾಗಳು

ಧಾರಾವಾಹಿಗಳಷ್ಟೇ ಅಲ್ಲದೇ ಗೌತಮಿ ಜಾಧವ್ ಕೆಲ ಸಿನಿಮಾಗಳಲ್ಲೂ ನಟಿಸಿದ್ದಾರೆ. ಆಪರೇಷನ್ ಅಲಮೇಲಮ್ಮ, ಕಿನಾರೆ, ಲೂಟಿ, ಆದ್ಯ ಮುಂತಾದ ಸಿನಿಮಾಗಳಲ್ಲಿ ಗೌತಮಿ ಕಾಣಿಸಿಕೊಂಡಿದ್ದಾರೆ. ತಮಿಳಿನ ಸಂತೋಸತ್ತಿಲ್ ಕಲವರಂ ಎಂಬ ಸಿನಿಮಾಗೂ ಬಣ್ಣ ಹಚ್ಚಿದ್ದಾರೆ. ಕಿರಿತೆರೆಯಲ್ಲಿ ನಟಿಸಲು ಒಳ್ಳೆಯ ಅವಕಾಶಕ್ಕಾಗಿ ಕಾಯುತ್ತಿದ್ದ ಗೌತಮಿಗೆ ಸತ್ಯಾ ಸೀರಿಯಲ್ ಒಳ್ಳೆಯ ಬ್ರೇಕ್ ಕೊಟ್ಟಿದೆ.

More from Filmibeat

English summary
kannada sathya serial heroine gouthami jadav north india trip with husband
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X