Ashok Sharma ; ನಟ ಅಶೋಕ್ ಶರ್ಮಾ ಅವರನ್ನು ಕಾಡಿದ ನ್ಯೂಮೋನಿಯಾ..!
ಸೀತಾರಾಮ ಧಾರಾವಾಹಿಯಲ್ಲಿ ಸೀತಮ್ಮ ಮತ್ತು ರಾಮನನ್ನು ಒಂದು ಮಾಡಲು ಸೇತುವೆಯಾಗಿರುವ ಸಿಹಿಯಂತೆಯೇ ರಾಮಗೆ ಹೆಗಲು ಕೊಟ್ಟಿರುವ ಅಶೋಕ್ ಪಾತ್ರವನ್ನು ವೀಕ್ಷಕರು ಮೆಚ್ಚಿಕೊಂಡಿದ್ದಾರೆ. ನಟ ಅಶೋಕ್ ಶರ್ಮ ಅವರು ಸೀತಾರಾಮ ಧಾರಾವಾಹಿಯಲ್ಲಿ ಅದ್ಭುತವಾಗಿ ನಟಿಸಿದ್ದು, ಸೀರಿಯಲ್ ನಲ್ಲೂ ಕೂಡ ಇವರ ಹೆಸರು ಅಶೋಕ್ ಎಂದೇ ಇದೆ. ಸುಮಾರು 15 ದಿನಗಳಿಂದ ಅಶೋಕ್ ಅವರ ಇನ್ ಸ್ಟಾಗ್ರಾಂನಲ್ಲಿ ಒಂದೇ ಒಂದು ಪೋಸ್ಟ್ ಕೂಡ ಹಾಕಿರಲಿಲ್ಲ. ಇದರಿಂದ ಅಭಿಮಾನಿಗಳು ಫುಲ್ ಬೇಸರ ಮಾಡಿಕೊಂಡಿದ್ದರು.
ನ್ಯೂಮೋನಿಯಾದಿಂದ ಬಳಲಿದ ನಟ
ಅಶೋಕ್ ಅವರು ಕೂಡ ಅಭಿಮಾನಿಗಳನ್ನು ಮಿಸ್ ಮಾಡಿಕೊಂಡಿದ್ದು, ಇದೀಗ ಪೋಸ್ಟ್ ಒಂದನ್ನು ಹಾಕಿದ್ದಾರೆ. ಇದರಲ್ಲಿ ಅಶೋಕ್ ಅವರು ಆಸ್ಪತ್ರೆಯ ಬೆಡ್ ಮೇಲೆ ಕುಳಿತಿದ್ದಾರೆ. ಇದನ್ನು ನೋಡಿ ಅಭಿಮಾನಿಗಳು ಬೇಸರ ಮಾಡಿಕೊಂಡಿದ್ದಾರೆ. ನ್ಯೂಮೋನಿಯಾದಿಂದ ಬಳಲುತ್ತಿದ್ದ ಅಶೋಕ್ ಅವರು ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದರಂತೆ. ಹಾಗಾಗಿ ಇಷ್ಟು ದಿನ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರಲಿಲ್ಲ. ಒಂದು ಪೋಸ್ಟ್ ನ ಹಾಕಲು ಸಾಧ್ಯವಾಗಲಿಲ್ಲ. ನಿಮ್ಮೆಲ್ಲರ ಹಾರೈಕೆಯಿಂದ ಬೇಗನೇ ಹುಷಾರಾಗಿದ್ದೇನೆ. ನೀವೂ ಎಲ್ಲರೂ ನಿಮ್ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಎಂದು ಹೇಳಿದ್ದಾರೆ. ಅಭಿಮಾನಿಗಳು ಅಶೋಕ್ ಅವರ ಪೋಸ್ಟ್ ನೋಡಿ ಬೇಸರ ಮಾಡಿಕೊಂಡಿದ್ದಾರೆ.

ಯಶ್ ಗೆಳೆಯನಾಗಿರುವ ಅಶೋಕ
ಬಹಳ ವೈರಲ್ ಆಗಿದ್ದ "ಜಿಂಗಿಚಕ ಜಿಂಗಿಚಕ" ಹಾಡನ್ನು ಹಾಡಿದ್ದು ಇವರೆಂದು ತಿಳಿದ ಮೇಲೆ ಇವರ ಪಾಪುಲ್ಯಾರಿಟಿ ಇನ್ನು ಹೆಚ್ಚಾಗಿದೆ. 'ಮಿಸ್ಟರ್ ಅಂಡ್ ಮಿಸ್ಸೆಸ್ ರಾಮಾಚಾರಿ' ಸಿನಿಮಾದಲ್ಲಿ ನಟ ಯಶ್ ಹಾಗೂ ಅಶೋಕ್ ಅವರು ಭಾವ ಮೈದುನನ ಪಾತ್ರದಲ್ಲಿ ನಟಿಸಿದ್ದರು. ಇವರಿಬ್ಬರದು ಎರಡು ದಶಕವನ್ನು ಮೀರಿದ ಸ್ನೇಹನಟನೆಯ ಹೊರತಾಗಿ ಅಶೋಕ್ ಶರ್ಮ ಅವರು ಗಾಯಕರಾಗಿದ್ದಾರೆ. ಆರಂಭದ ದಿನಗಳಲ್ಲಿ ಆರ್ಕೆಸ್ಟ್ರಾದಲ್ಲಿ ಹಾಡುಗಳನ್ನು ಹಾಡುತ್ತಿದ್ದರು.
ನಟ ಕಂ ಗಾಯಕ
ಇವರ ಕಲೆಯನ್ನು ನೋಡಿ ಬಹಳಷ್ಟು ಆರ್ಕೆಸ್ಟ್ರಾ ಇವರನ್ನು ಹಾಡು ಹೇಳಲು ಕಲಾವಿದನಾಗಿ ಕರೆಸಿಕೊಳ್ಳುತ್ತಿತ್ತು. ಎಲೆಕ್ಟ್ರಾನಿಕ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಇವರು ಆರ್ಕೆಸ್ಟ್ರಾಗಳಲ್ಲಿ ಕಲಾವಿದನಾಗಿ ಹಾಡು ಹೇಳಲು ಶುರು ಮಾಡಿದರು. ಕ್ರಮೇಣ ಅವರಿಗೆ ಸಿನಿಮಾದಲ್ಲಿಯೂ ಹಾಡು ಹಾಡಲು ಅವಕಾಶ ಸಿಕ್ಕಿತ್ತು. ಈಗಾಗಲೇ ಅವರು ಹಲವಾರು ಸಿನಿಮಾಗಳಿಗೆ ಹಾಡಿದ್ದಾರೆ. ಅದರಲ್ಲಿ ಇತ್ತೀಚೆಗಂತೂ ಬಹಳ ವೈರಲ್ ಆಗಿ ಜನರನ್ನು ಮರಳು ಮಾಡಿದ ಹಾಡೆಂದರೆ ಜಿಂಗಿಚಕ ಜಿಂಗಿಚಕ.

ಆಂಕರ್ ಕೂಡ ಆಗಿದ್ದ ನಟ
ಇವರ ವಾಯ್ಸ್ ಹಾಗೂ ಸ್ಟೇಜ್ ಅಪಿಯರೆನ್ಸ್ ನೋಡಿ ಇವರಿಗೆ ಆಂಕರಿಂಗ್ ಮಾಡಲು ಒಂದಷ್ಟು ಜನ ಸಲಹೆ ಇತ್ತರಂತೆ. ನಿಧಾನಕ್ಕೆ ಆ್ಯಂಕರಿಂಗ್ ಕಡೆ ವಾಲಿದ ಅಶೋಕ್ ಶರ್ಮ ಹಲವಾರು ಕಾರ್ಯಕ್ರಮಗಳಲ್ಲಿ ಆ್ಯಂಕರಿಂಗ್ ಕೂಡ ಮಾಡಿದ್ದಾರೆ. ಸುವರ್ಣ ವಾಹಿನಿಯಲ್ಲಿ, ಹೃದಯ ಹೃದಯ ಮ್ಯೂಸಿಕ್ನಲ್ಲಿ ಆ್ಯಂಕರ್ ಆಗಿದ್ದ ಅಶೋಕ್ ಶರ್ಮ ಅದಾದ ಮೇಲೆ ರಾಜ್ ಮ್ಯೂಸಿಕ್ ನಲ್ಲೂ ಆ್ಯಂಕರ್ ಆಗಿ ಕೆಲಸ ಮಾಡಿದ್ದಾರೆ. ನಟ, ನಿರ್ದೇಶಕ, ನಿರೂಪಕ ಮಾಸ್ಟರ್ ಆನಂದ್ ಅವರ ನಿರ್ದೇಶನದ "ಎಸ್ ಎಸ್ ಎಲ್ ಸಿ ನನ್ನ ಮಕ್ಕಳು" ಸೀರಿಯಲ್ ನಿಂದ ಕಿರುತೆರೆಗೆ ಕಾಲಿಟ್ಟ ಇವರು ಇದೀಗ 'ಸೀತಾರಾಮ' ಸೀರಿಯಲ್ನಲ್ಲಿ ಪಾಪ್ಯುಲಾರಿಟಿ ಪಡೆದಿದ್ದಾರೆ. ಸದ್ಯ ಸಿಹಿ ಪುಟಾಣಿಗೆ ಅಶೂ ಅಂಕಲ್ ಆಗಿದ್ದು, ರಾಮನ ಭಂಟನಾಗಿದ್ದಾರೆ.


Click it and Unblock the Notifications











