ಸೀತಾರಾಮ ಖ್ಯಾತಿಯ ಗಗನ್ ಚಿನ್ನಪ್ಪ ಅವರ ಪ್ರೇಯಸಿ ಯಾರು ಗೊತ್ತಾ..?
ಸೀತಾರಾಮ ಧಾರಾವಾಹಿಯಲ್ಲಿ ನಾಯಕನ ಪಾತ್ರದಲ್ಲಿ ನಟ ಗಗನ್ ಚಿನ್ನಪ್ಪ ಅವರು ಹಿರಿಯರಷ್ಟೇ ಅಲ್ಲದೇ, ಪುಟಾಣಿಗಳ ಮನಸನ್ನೂ ಗೆದ್ದಿದ್ದಾರೆ. ಸೀತಾರಾಮದಲ್ಲಿ ರಾಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಗಗನ್ ಅವರ ಪಾತ್ರವನ್ನು ವೀಕ್ಷಕರು ಮೆಚ್ಚಿಕೊಂಡಿದ್ದಾರೆ. ಸಿಹಿ ಜೊತೆಗೆ ರಾಮ ನಡೆದುಕೊಳ್ಳುವ ರೀತಿಯೂ ಬಹಳ ಮುದ್ದಾಗಿದೆ. ರಾಮ ಹಾಗೂ ಸಿಹಿ ಕಾಂಬಿನೇಷನ್ ನ ಸೀನ್ಸ್ ಗಳನ್ನು ನೋಡಲು ಎಲ್ಲರೂ ಬಯಸುತ್ತಾರೆ. ಸಿಹಿಗಾಗಿ ರಾಮ ಮಾಡುವ ಮುಗುಳುನಗೆ ಮ್ಯಾಜಿಕ್ ಮೂಲಕ ಎಲ್ಲರನ್ನೂ ರಂಜಿಸುತ್ತಿದ್ದಾರೆ.
ಪರಭಾಷೆಯಲ್ಲೂ ಗಗನ್ ಚಿನ್ನಪ್ಪ ನಟನೆ
ಇನ್ನು ರಾಜೀವನಾಗಿ ಮಂಗಳಗೌರಿ ಧಾರಾವಾಹಿಯಲ್ಲಿ ನಟಿಸಿ ವೀಕ್ಷಕರ ಮನ ಸೆಳೆದಿರುವ ಗಗನ್ ಚಿನ್ನಪ್ಪ ತದ ನಂತರ ಕಾರಣಾಂತರಗಳಿಂದ ಪಾತ್ರದಿಂದ ಹೊರಬಂದಿದ್ದರು. ಗಗನ್ ಚಿನ್ನಪ್ಪ ಈಗ ರಾಮನಾಗಿ ಕನ್ನಡ ಕಿರುತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದಾರೆ. ತೆಲುಗಿನ ಸ್ಟಾರ್ ಮಾ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕೃಷ್ಣ ಮುಕುಂದ ಮುರಾರಿಯಲ್ಲೂ ಗಗನ್ ಅವರು ನಟಿಸಿದ್ದಾರೆ. ಪರಭಾಷೆಯ ಕಿರುತೆರೆಗೂ ಕಾಲಿಟ್ಟಿರುವ ಗಗನ್ ಚಿನ್ನಪ್ಪ ಮನೋಜ್ಞ ನಟನೆಯ ಮೂಲಕ ವೀಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ವಿಶೇಷವೆಂದರೆ ತೆಲುಗಿನ ಧಾರಾವಾಹಿಯಲ್ಲಿಯೂ ಗಗನ್ ಅವರು ಪೊಲೀಸ್ ಇನ್ಸ್ಪೆಕ್ಟರ್ ಪಾತ್ರದಲ್ಲಿ ಅಭಿನಯಿಸುತ್ತಿರುವುದು ವಿಶೇಷ.

ವಿದೇಶದಲ್ಲೂ ಕೆಲಸ ಮಾಡಿದ್ದ ಗಗನ್
ಗಗನ್ ಚಿನ್ನಪ್ಪ ಅವರು ಐಟಿ ಉದ್ಯೋಗಿಯಾಗಿದ್ದರು. ಆಟೋಮೊಬೈಲ್ ಇಂಡಸ್ಟ್ರಿಯಲ್ಲಿ ಮಾರ್ಕೆಟಿಂಗ್ ಹೆಡ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಮೂರು ವರ್ಷ ಜರ್ಮನಿ ಮತ್ತು ಓಮನ್ ನಲ್ಲಿ ಕೆಲಸ ಮಾಡಿದ್ದರು. ಮುಂದೆ ಭಾರತಕ್ಕೆ ಮರಳಿದ ಅವರು ಐಟಿ ಕಂಪೆನಿಯೊಂದರಲ್ಲಿ ಕೆಲಸ ಗಿಟ್ಟಿಸಿಕೊಂಡರು. ಬಾಲ್ಯದಿಂದಲೂ ನಟನಾಗಬೇಕು, ಬಣ್ಣದ ಲೋಕದಲ್ಲಿ ಮಿಂಚಬೇಕು ಎಂಬ ಕನಸು ಗಗನ್ ಚಿನ್ನಪ್ಪ ಅವರಿಗಿತ್ತು.
ರೀಲ್ ನಲ್ಲಿ ಅಪ್ಪನ ಆಸೆ ನೆರವೇರಿಸಿದ ಚಿನ್ನಪ್ಪ
ಗಗನ್ ಚಿನ್ನಪ್ಪ ಅವರು ತಮ್ಮ ಆಫೀಸ್ ಕೆಲಸದ ನಡುವೆ ಬಿಡುವು ಸಿಕ್ಕಾಗ ಆಡಿಶನ್ ಗಳಿಗೆ ಹೋಗುತ್ತಿದ್ದರು. ಮಂಗಳಗೌರಿ ಧಾರಾವಾಹಿಗೆ ಆಯ್ಕೆ ಆದರು. ಡಿಟೆಕ್ಟಿವ್ ಆಗಿದ್ದ ಗಗನ್ ಚಿನ್ನಪ್ಪ ಅವರ ತಂದೆಗೆ ಮಗ ಕೂಡಾ ಪೊಲೀಸ್ ಅಧಿಕಾರಿಯಾಗಬೇಕು ಎನ್ನುವ ಆಸೆ ಇತ್ತು. ಆದರೆ ಗಗನ್ ಅವರಿಗೆ ನಟನಾಗಬೇಕು ಎಂಬ ಬಯಕೆಯಿತ್ತು. ಪೊಲೀಸ್ ಪಾತ್ರದ ಮೂಲಕ ಗಗನ್ ಅವರು ರಿಯಲ್ ಆಗಿ ಅಲ್ಲದಿದ್ದರೂ ರೀಲ್ನಲ್ಲಿ ಆದರೂ ಅಪ್ಪನ ಕನಸು ನನಸು ಮಾಡಿದ್ದಾರೆ. ಸದ್ಯ ಕನ್ನಡ ಹಾಗೂ ತೆಲುಗು ಕಿರಿತೆರೆಯಲ್ಲಿ ಬಹುಬೇಡಿಕೆಯ ನಟನಾಗಿ ಅವರು ಗುರುತಿಸಿಕೊಂಡಿದ್ದಾರೆ. ತಮಿಳು ಸೇರಿದಂತೆ ಕೆಲ ಸಿನಿಮಾಗಳಲ್ಲೂ ನಟಿಸಿದ್ದಾರೆ.

ಗಗನ್ ಚಿನ್ನಪ್ಪ ಪ್ರೇಯಸಿ ಪ್ರಾರ್ಥನಾ
ಇನ್ನು ಗಗನ್ ಚಿನ್ನಪ್ಪ ಅವರು ಒಂಟಿಯಲ್ಲವಂತೆ ಎಂಬ ಸುದ್ದಿ ನಿನ್ನೆಯಿಂದ ಎಲ್ಲೆಲ್ಲೂ ವೈರಲ್ ಆಗುತ್ತಿದೆ. ಈ ಹಿಂದೆ ಒಮ್ಮೆ ಗಗನ್ ಚಿನ್ನಪ್ಪ ಅವರು ಇನ್ ಸ್ಟಾಗ್ರಾಂ ಪೇಜ್ ನಲ್ಲಿ ಪ್ರಾರ್ಥನಾ ಎಂಬ ಹುಡುಗಿಯೊಂದಿಗಿನ ಫೋಟೋ ಶೇರ್ ಮಾಡಿಕೊಂಡಿದ್ದರು. ಪ್ರಾರ್ಥನಾ ಹಾಗೂ ಗಗನ್ ಚಿನ್ನಪ್ಪ ಅವರು ಕೆಲ ವರ್ಷಗಳಿಂದ ಒಟ್ಟಿಗೆ ಇದ್ದು, ಇನ್ನಷ್ಟು ವರ್ಷ ಹೀಗೆ ಕಳೆಯಬೇಕು ಎಂಬ ಬಯಕೆಯನ್ನು ಹೇಳಿದ್ದರು. ಪ್ರಾರ್ಥನಾ ಎಂದರೆ ಬೇರೆ ಯಾರೂ ಅಲ್ಲ, ಪ್ರಾರ್ಥನಾ ನಾಣಯ್ಯ. ಪ್ರಾರ್ಥನಾ ಅವರು ಮೇಕಪ್ ಆರ್ಟಿಸ್ಟ್ ಆಗಿದ್ದು, ಹಲವು ನಟಿಯರಿಗೆ ಮೇಕಪ್ ಮಾಡಿದ್ದಾರೆ. ಪ್ರಾರ್ಥನಾ ಹಾಗೂ ಗಗನ್ ಇಬ್ಬರೂ ಕೂಡ ಕೊಡಗು ಮೂಲದವರೇ ಆಗಿದ್ದಾರೆ.


Click it and Unblock the Notifications











