Seetharama ; ಸೀತಾರಾಮ ಧಾರಾವಾಹಿಯಲ್ಲಿ ಭಯಂಕರ ಟ್ವಿಸ್ಟ್, ಶಾಕ್ ಆದ ಪ್ರೇಕ್ಷಕರು...!
ಆ ಕಡೆ ಸೀತಾರಾಮ ಧಾರಾವಾಹಿಯಲ್ಲಿ ಸೂರಿ ಮೊಮ್ಮಗನ ಬದುಕಿನ ಬಗ್ಗೆ ತೀರಾ ತಲೆಕೆಡಿಸಿಕೊಂಡಿದ್ದಾರೆ. ದೇಸಾಯಿ ಕುಟುಂಬದ ಮರ್ಯಾದೆ ಪ್ರಶ್ನೆ ಎಂದು ಆತಂಕಕೊಂಡಿದ್ದಾರೆ. ಸಿಹಿಗಾಗಿ ನಡೆಯುತ್ತಿರುವ ಜಟಾಪಟಿ ಕೋರ್ಟ್ ಮೆಟ್ಟಿಲೇರುತ್ತಿದೆ ಎಂದು ಆತಂಕಗೊಂಡಿದ್ದಾರೆ. ಈ ಕಡೆ ಸೀತಾ, ರಾಮ್ ಮತ್ತು ಸಿಹಿ ಮೂವರು ಬೆಳಗ್ಗೆದ್ದು, ಸೀದಾ ದೇವಸ್ಥಾನಕ್ಕೆ ತೆರಳಿದ್ದಾರೆ. ತಾವು ಮಾಡದ ತಪ್ಪಿಗೆ ಶಿಕ್ಷೆ ಕೊಡಬೇಡ ತಾಯಿ ಎಂದು ದೇವರ ಬಳಿ ಪ್ರಾರ್ಥನೆ ಮಾಡಿಕೊಂಡಿದ್ದಾರೆ. ಸಿಹಿ ಕೂಡ ದೇವರ ಬಳಿ ನನ್ನ ಅಮ್ಮ ಸೀತಾ, ಅಪ್ಪ ರಾಮ ಇವರಿಬ್ಬರಿಂದ ನನ್ನನ್ನು ದೂರ ಮಾಡಬೇಡ ದೇವರೆ ಎಂದು ಮುಗ್ಧತೆಯಿಂದ ಕೇಳಿಕೊಂಡಿದ್ದಾಳೆ.
ತಾತನಿಗೆ ಅರ್ಥವಾಗದ ನಿಜ ಸಂಗತಿ
ಆದರೆ, ಅಶೋಕ್ ಫೋನ್ ಮಾಡಿ ಮನೆಯಲ್ಲಿ ಏನಾಯ್ತು, ಸೂರಿ ಆತಂಕದಲ್ಲಿದ್ದಾರೆ ಎಂದು ಹೇಳಿದ್ದಾನೆ. ರಾಮ್ ಸೀದಾ ಮನೆಗೆ ಹೋಗಿದ್ದು, ಸೂರಿ ಜೊತೆಗೆ ಮಾತನಾಡಲು ಯತ್ನಿಸಿದ್ದಾನೆ. ಸೂರಿ ತಾತನ ಬಳಿ ಸೀತಾ ಪರಿಸ್ಥಿತಿಯನ್ನು ವಿವರಿಸಲು ಯತ್ನಿಸಿದಾಗ ನಾನು ನನ್ನ ಮೊಮ್ಮಗನ ಜೊತೆಗೆ ಮಾತ್ರವೇ ಮಾತನಾಡಬೇಕು ಎಂದು ಒತ್ತಾಯ ಪೂರ್ವಕವಾಗಿ ಹೇಳಿದ್ದಾರೆ. ಇದರಿಂದ ಸೀತಾ ಹೊರಗೆ ಹೋಗಿದ್ದು, ಸೂರಿ ತಾತ ರಾಮ್ ಗೆ ಸಿಹಿಯನ್ನು ಅವರ ತಂದೆ-ತಾಯಿಗೆ ಕೊಟ್ಟು ಬಿಡು. ಅವಳು ಹೇಗಿದ್ದರೂ ನಮ್ಮ ವಂಶದ ಕುಡಿ ಅಲ್ಲ ಎಂದು ಹೇಳಿದ್ದಾರೆ. ಈ ಮಾತನ್ನು ಕೇಳಿದ ರಾಮ್, ನೀವು ಅಂದುಕೊಂಡ ಹಾಗೆ ಆಗುವುದಿಲ್ಲ. ಸಿಹಿ ನಮ್ಮ ಮಗಳು ಅವಳನ್ನು ಯಾವುದೇ ಕಾರಣಕ್ಕೂ ಶ್ಯಾಮ್ ಮತ್ತು ಶಾಲಿನಿಗೆ ಕೊಡಲು ಸಾಧ್ಯವಿಲ್ಲ ಎಂದು ಅರ್ಥ ಮಾಡಿಸಲು ಪ್ರಯತ್ನಿಸಿದ್ದಾನೆ.

ಗೊಂದಲದಲ್ಲಿರುವ ಸೀತಾ-ರಾಮ
ಇನ್ನು ಸೀತಾ ಎಲ್ಲಿ ತನ್ನ ಹಾಗೂ ಸಿಹಿಯನ್ನು ಈ ಮನೆಯವರೆಲ್ಲಾ ಸೇರಿ ದೂರ ಮಾಡುತ್ತಾರೋ ಎಂಬ ಆತಂಕದಲ್ಲಿದ್ದು, ಮಗುವನ್ನು ತನ್ನ ಜೊತೆಗೆ ಕರೆದುಕೊಂಡು ಮನೆಯಿಂದ ಹೊರಗೆ ಹೋಗಲು ನಿರ್ಧರಿಸಿದ್ದಾಳೆ. ಇದೆಲ್ಲದರ ನಡುವೆ ಭಾರ್ಗವಿ ತನ್ನ ಬೆಳೆಯನ್ನು ಬೇಯಿಸಿಕೊಳ್ಳಲು ಯತ್ನಿಸುತ್ತಿದ್ದಾಳೆ. ಆದರೆ, ಈ ಮಧ್ಯೆ ಜೀ ಕನ್ನಡ ವಾಹಿನಿಯೊಂದು ಪ್ರೊಮೋ ಪ್ರಸಾರ ಮಾಡಿದೆ. ಈ ಪ್ರೊಮೋ ನೋಡಿ, ಎಲ್ಲರಿಗೂ ಶಾಕ್ ಆಗಿದೆ. ಪ್ರೊಮೋದಲ್ಲಿ ಸಿಹಿ, ರಾಮ್ ಮತ್ತು ಸೀತಾ ಮಾತ್ರ ಕಾಣಿಸಿಕೊಂಡಿದ್ದಾರೆ.
ಹೊಸ ಪ್ರೊಮೋದಲ್ಲಿ ಆಘಾತಕಾರಿ ತಿರುವು
ರಸ್ತೆ ಮಧ್ಯೆ ನಿಂತಿರುವ ಕಾರೊಂದು ಸೀತಾ ಬಳಿಸ್ಪೀಡ್ ಆಗಿ ಬಂದಿದ್ದು, ಅಮ್ಮನನ್ನು ಉಳಿಸಲು ಸಿಹಿ ಸೀತಾಳನ್ನು ತಳ್ಳುತ್ತಾಳೆ. ಇದರಿಂದ ಸಿಹಿ ಕಾರು ಅಪಘಾತಕ್ಕೆ ಒಳಗಾಗಿದೆ. ನಂತರ ರಾಮ್ ಬಂದು ಸಿಹಿಯನ್ನು ಹಿಡಿದುಕೊಳ್ಳುತ್ತಾನೆ. ಈ ಸೀನ್ ನಲ್ಲಿ ಸಿಹಿ ಸಾವನ್ನಪ್ಪಿದ್ದಾಳಾ ಇಲ್ಲವಾ ಎಂಬ ಸ್ಪಷ್ಟ ಮಾಹಿತಿ ಇಲ್ಲ. ಆದರೆ, ಪ್ರೋಮೋದಲ್ಲಿ ಸಿಹಿ ಇಲ್ಲದ ಬದುಕೀಗ ಖಾಲಿ ಖಾಲಿ. ಸೀತಾರಾಮರ ಬಾಳಲ್ಲಿ ಶುರುವಾಗುತ್ತಿದೆ ಹೊಸ ಲಾಲಿ..! ಅನಿರೀಕ್ಷಿತ ತಿರುವಲ್ಲಿ ಸೀತಾರಾಮ ಎಂದು ಹೇಳಲಾಗಿದೆ.
ಬೇಸರ ವ್ಯಕ್ತಪಡಿಸಿದ ವೀಕ್ಷಕರು
ಈ ಪ್ರೊಮೋವನ್ನು ನೋಡಿದ ವೀಕ್ಷಕರು ಶಾಕ್ ಆಗಿದ್ದಾರೆ. ಸೀತಾ ಮತ್ತು ರಾಮ್ ಪ್ರೀತಿಯ ಸಂಕೇತವಾಗಿ ಇನ್ನೊಂದು ಮಗು ಅವರ ಬಾಳಲ್ಲಿ ಬರುವುದು ಸರಿ. ಆದರೆ, ಸಿಹಿಯನ್ನು ಇಬ್ಬರಿಂದ ದೂರ ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ. ಅಲ್ಲದೇ, ಹಲವರು ಸಿಹಿ ಇಲ್ಲ ಎಂದರೆ, ಧಾರಾವಾಹಿಯನ್ನು ನಾವು ಖಂಡಿತವಾಗಿಯೂ ನೋಡುವುದಿಲ್ಲ. ಧಾರಾವಾಹಿಯಲ್ಲಿನ ಈ ಟ್ವಿಸ್ಟ್ ಸರಿಯಿಲ್ಲ. ಸಿಹಿ ಇಲ್ಲದೇ ಹೋದರೆ ಧಾರಾವಾಹಿ ಸ್ವಲ್ಪವೂ ಚೆನ್ನಾಗಿರೋದಿಲ್ಲ ಎಂದು ಕಮೆಂಟ್ ಗಳ ಸುರಿ ಮಳೆಗೈದಿದ್ದಾರೆ.ಇದರ ನಡುವೆ ಸೀತಾರಾಮ ಇಂತಹದ್ದೊಂದು ತಿರುವು ಪಡೆದುಕೊಂಡರೆ ಏನಾಗಬಹುದು ಎಂಬ ಕುತೂಹಲವೂ ಸೃಷ್ಟಿಯಾಗಿದೆ.


Click it and Unblock the Notifications











