Seetharama ; ಕಿರುತೆರೆ ಇತಿಹಾಸದಲ್ಲಿಯೇ ಹೊಸ ದಾಖಲೆ ಬರೆದ ಸೀತಾರಾಮ ತಂಡ..!
ಸದ್ಯ ಸೀತಾರಾಮ ಧಾರಾವಾಹಿಯಲ್ಲಿ ಸುಬ್ಬಿ ಸಿಹಿ ಅವತಾರದಲ್ಲಿ ನಮನೆಗೆ ಬಂದು ಸೇರಿದ್ದಾಗಿದೆ. ಆದರೆ, ಇನ್ನೂ ತಾನ್ಯಾರು, ಸಿಹಿಗೂ ತನಗೂ ಏನು ಸಂಬಂಧ ಎಂಬ ಬಗ್ಗೆ ಹೆಚ್ಚು ಮಾಹಿತಿ ಸುಬ್ಬಿಗೆ ತಿಳಿದಿಲ್ಲ. ಸೀತಮ್ಮನ ಜೊತೆಗೆ ಇರುವ ಆಸೆಯಿಂದ ಸುಬ್ಬಿ ರಾಮ್ ಜೊತೆಗೆ ಮನೆಗೆ ಬಂದಿದ್ದಾಳೆ. ತನ್ನ ಕಣ್ಣಿಗೆ ಮಾತ್ರ ಕಾಣುವ ಸಿಹಿಯ ಜೊತೆಗೆ ಮಾತನಾಡುತ್ತಾ ಮನೆಯವರನ್ನು ಮ್ಯಾನೇಜ್ ಮಾಡುತ್ತಿದ್ದಾಳೆ. ಏನೇ ಆದರೂ ಮನೆಯವರಿಗೆಲ್ಲಾ ಸುಬ್ಬಿಯ ನಡವಳಿಕೆಯಲ್ಲಿ ಅನುಮಾನಗಳು ಕಾಡುತ್ತಲೇ ಇದೆ. ಸುಬ್ಬಿಯ ಭಾಷೆ, ಅವಳ ಮೌನದ ಗುಣ ಎಲ್ಲವೂ ಭಾರ್ಗವಿ ತಲೆಯನ್ನಂತೂ ಕನ್ಫ್ಯೂಸ್ ಮಾಡಿ ಬಿಟ್ಟಿದೆ.
ಸುಬ್ಬಿ ಬಗ್ಗೆ ತಲೆ ಕೆಡಿಸಿಕೊಂಡಿರುವ ಭಾರ್ಗವಿ
ಸುಬ್ಬಿ ಮನೆಗೆ ಬಂದ ಬಳಿಕ ಸೀತಾಳಲ್ಲಿ ಬದಲಾವಣೆಗಳು ಕಂಡಿದ್ದು, ರಾಮ್ ಖುಷಿಯಾಗಿದ್ದಾನೆ. ಆದರೆ, ಭಾರ್ಗವಿ ಪದೇ ಪದೇ ಈ ಹುಡುಗಿ ಯಾರು ಎಂದು ತಿಳಿದುಕೊಳ್ಳುವ ಕುತೂಹಲದಲ್ಲಿ ಒದ್ದಾಡುತ್ತಿದ್ದಾಳೆ. ಸತ್ತಿರುವ ಸಿಹಿಯಂತೂ ವಾಪಸ್ ಬಂದಿಲ್ಲ. ಆದರೆ ಈ ಹುಡುಗಿ ಸಿಹಿಯಂತೆಯೇ ಇದ್ದು, ಇವಳು ಎಲ್ಲಿನವಳು ಎಂದು ತಲೆ ಕೆಡಿಸಿಕೊಂಡಿದ್ದಾಳೆ. ಇನ್ನು ಧಾರಾವಾಹಿ ಹೊಸ ಪ್ರೊಮೋ ಒಂದು ಪ್ರಸಾರವಾಗಿದೆ. ಈ ಪ್ರೊಮೋದಲ್ಲಿ ಸೀತಾ, ರಾಮ್ ಮತ್ತು ಸುಬ್ಬಿ ಮೂವರು ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಭಾಗಿಯಾಗಿದ್ದಾರೆ.

ಪುಣ್ಯಸ್ನಾನ ಮಾಡಿದ ಧಾರಾವಾಹಿ ತಂಡ
ಈಗಾಗಲೇ ಸ್ಟಾರ್ ನಟರಿಂದ ಹಿಡಿದು ಹಲವರು ಮಹಾಕುಂಭಮೇಳದಲ್ಲಿ ಪುಣ್ಯಸ್ನಾನ ಮಾಡಿದ್ದಾರೆ. ಇದೇ ಮೊದಲಬಾರಿಗೆ ಧಾರಾವಾಹಿಯ ತಂಡವೊಂದು ಕುಂಭಮೇಳಕ್ಕೆ ತೆರಳಿದೆ. ಈ ಮೂಲಕ ಇಡೀ ಧಾರಾವಾಹಿಯ ತಂಡವೇ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿ ಪುಣ್ಯವನ್ನು ಗಳಿಸಿದ್ದಾರೆ. ಇನ್ನು ಧಾರಾವಾಹಿಯ ಹೊಸ ಪ್ರೊಮೋ ಪ್ರಕಾರ, ಸೀತಾ, ರಾಮ ಹಾಗೂ ಮುದ್ದಾದ ಪುಟಾಣಿ ಸುಬ್ಬಿ ತ್ರಿವೇಣಿ ಸಂಗಮದಲ್ಲಿ ಮೂರು ಜನ ಪುಣ್ಯ ಸ್ನಾನ ಮಾಡಿದ್ದಾರೆ. ರಾಮ ಪುಣ್ಯ ಸ್ನಾನದ ಬಳಿಕ ಸಿಹಿಯ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಕೈ ಮುಗಿದು ಬೇಡಿಕೊಂಡಿದ್ದಾನೆ. ಇದನ್ನು ಕೇಳಿಸಿಕೊಂಡ ಸೀತಾಳಿಗೆ ಶಾಕ್ ಆಗಿದೆ.
ಸೀತಮ್ಮನನ್ನು ಅಪ್ಪಿದ ಸಿಹಿ
ಇತ್ತ ಸಿಹಿಯನ್ನು ಸಾಧುವೊಬ್ಬರು ನೋಡಿದ್ದು, ಸಿಹಿಯ ಕೈ ಹಿಡಿದು ಮಾತನಾಡಿಸಿದ್ದಾರೆ. ಸಿಹಿ ಸಾಧು ಬಳಿ ನಾನು ನಿಮಗೆ ಕಾಣಿಸುತ್ತಿದ್ದೀನಾ ಎಂದು ಕೇಳಿದ್ದು, ನೀನು ಮಾತ್ರ ಅಲ್ಲ ನನಗೆ ಎಲ್ಲರೂ ಕಾಣಿಸುತ್ತಿದ್ದಾರೆ ಎಂದು ಹೇಳುತ್ತಾರೆ. ಸಿಹಿ ಸೀತಮ್ಮ ಹಾಗೂ ಅಪ್ಪನನ್ನು ಒಂದು ಸಲವಾದರೂ ಅಪ್ಪಿಕೊಳ್ಳಬೇಕು ಎಂದು ಆಸೆ ಪಟ್ಟಿದ್ದಾಳೆ. ಸಿಹಿ ಆಸೆಗೆ ತತಾಸ್ತು ಎಂದು ಸಶಧುಗಳು ಹೇಳಿದ್ದು, ಸಿಹಿ ದಡದಲ್ಲಿ ನಿಂತಿರುವ ಸೀತಮ್ಮ ಮತ್ತು ರಾಮ್ ನನ್ನು ಹೋಗಿ ಹಿಂದಿನಿಂದ ಅಪ್ಪಿಕೊಂಡಿದ್ದಾಳೆ.
ಸಿಹಿಗೆ ಮೋಕ್ಷ ಕೊಡಿಸುತ್ತಾರಾ ಸಾಧುಗಳು..?
ಆದರೆ, ಸೀತಾ ಮತ್ತು ರಾಮ್ ಮುಂದೆ ಸುಬ್ಬಿ ನೀರಿನಲ್ಲಿ ಆಟವಾಡುತ್ತಿದ್ದು, ಸೀತಾಳಿಗೆ ತನ್ನ ಮಗಳ ಸಾವಿನ ಬಗ್ಗೆ ಸತ್ಯ ಗೊತ್ತಾಗುತ್ತಾ ಎಂಬ ಕುತೂಹಲ ಮೂಡಿದೆ. ಅಷ್ಟೇ ಅಲ್ಲದೇ, ಸಿಹಿ ತಾನು ಆತ್ಮವಾಗಿ ಅಲೆದಾಡುತ್ತಿದ್ದು, ತನ್ನ ಹಾಗೂ ತನ್ನ ಅಜ್ಜಿಯ ಸಾವಿಗೆ ಭಾರ್ಗವಿಯೇ ಕಾಋಣ ಎಂಬ ಸತ್ಯವನ್ನು ಹೇಳುತ್ತಾಳಾ ಎಂಬ ಕುತೂಹಲವೂ ಹೆಚ್ಚಾಗಿದೆ. ಸಿಹಿಯೇ ನೇರವಾಗಿ ತನ್ನ ತಂದೆ ತಾಯಿಗೆ ಸತ್ಯ ಹೇಳಿದರೆ ಏನಾಗಬಹದು, ಇಲ್ಲವೇ ಸುಬ್ಬಿ ಮೂಲಕ ಹೇಳಿಸಿದರೆ ಏನೆಲ್ಲಾ ನಡೆಯಬಹುದು ಅಥವಾ ಸಾಧುಗಳು ಸಿಹಿ ಆತ್ಮಕ್ಕೆ ಮೋಕ್ಷ ಕೊಡಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.


Click it and Unblock the Notifications











