Seetha Rama ; ಸಿಹಿಗೆ ಜೊತೆಯಾದ ಪುಟಾಣಿ ಹುಡುಗಿ ಯಾರು..? ಹೊಸ ಟ್ವಿಸ್ಟ್ ಗೆ ಕಂಗಾಲಾದರೇ ವೀಕ್ಷಕರು
ಸೀತಾರಾಮ ಧಾರಾವಾಹಿಯಲ್ಲಿ ಸಿಹಿ ತಂದೆ-ತಾಯಿಗಾಗಿ ಕಣ್ಣೀರಿಟ್ಟಿದ್ದಾಗಿದೆ. ಸೀತಾ-ರಾಮ ಮದುವೆಯಾಯ್ತು, ಇನ್ನು ಅವರ ಬದುಕಿನಲ್ಲಿ ಮತ್ತೊಂದು ಪುಟಾಣಿ ಮಗುವಿನ ಆಗಮನವಷ್ಟೇ ಬಾಕಿ ಎಂದು ಎಲ್ಲರೂ ಊಹಿಸಿದ್ದರು. ಆದರೆ, ವೀಕ್ಷಕರ ಊಹೆಗೂ ಮೀರಿದಂತೆ ಕಥೆಯಲ್ಲಿ ಟ್ವಿಸ್ಟ್ ಒಂದು ಬಂದಿತ್ತು. ಸೀತಾ ಸಿಹಿಗೆ ಬಾಡಿಗೆ ತಾಯಿ ಎಂಬ ಸತ್ಯ ತಿಳಿದು ಎಲ್ಲರೂ ಶಾಕ್ ಆಗಿದ್ದರು.ಅದೇನೇ ಆಗಿದ್ದರೂ ಸಿಹಿ ಸೀತಾ ಜೊತೆಗೆ ಇರಲಿ. ಅವರ ಜೋಡಿಯೇ ಸರಿ ಇದೆ. ಸಿಹಿಯನ್ನು ಬಯಾಲಾಜಿಕಲ್ ಪೋಷಕರ ಜೊತೆಗೆ ಕಳಿಸಬೇಡಿ ಎಂದು ವೀಕ್ಷಕರು ಕೇಳಿದ್ದರು.
ಮುಗಿಯದ ಸಿಹಿಯ ಹುಟ್ಟಿನ ಕಥೆ
ಸಿಹಿಯೂ ಕೂಡ ಶ್ಯಾಮ್ ಮತ್ತು ಶಾಲಿನಿ ಜೊತೆಗೆ ಇರಲು ಇಷ್ಟವಿಲ್ಲ. ತನಗೆ ಅಲ್ಲಿ ಕಷ್ಟವಾಗುತ್ತಿದೆ ಎಂದು ಸಾಕಷ್ಟು ಸಂಕಷ್ಟವನ್ನು ಎದುರಿಸಿದ್ದಾಳೆ. ಆದರೂ ಅಪ್ಪ ರಾಮ್ ಹೇಳಿದಂತೆ ಸತ್ಯ ಗೆಲ್ಲಬೇಕು ಎಂದು ಸಿಹಿಯೂ ಕೂಡ ತಾಳ್ಮೆಯಿಂದ ಕಾದಿದ್ದಾಳೆ. ಶಾಲಿನಿ ತನಗೆ ಮಗು ಬೇಕು ಎನ್ನುವುದಕ್ಕಿಂತಲೂ ಸೀತಾಳ ಸೊಕ್ಕು ಮುರಿಯಬೇಕು ಎಂದು ಸಿಹಿಯನ್ನು ತನ್ನ ವಶ ಮಾಡಿಕೊಳ್ಳಲು ಯತ್ನಿಸಿದಳು. ಸೀತಾಳನ್ನು ಅಪಾರ್ಥ ಮಾಡಿಕೊಂಡ ಶಾಲಿನಿಯ ಆಟ ಹೆಚ್ಚು ದಿನ ನಡೆಯಲೇ ಇಲ್ಲ. ಕೋರ್ಟ್ ನಲ್ಲಿ ಸೀತಾ ಮತ್ತು ಸಿಹಿಯ ಬಾಂಧವ್ಯವನ್ನು ಕಂಡು ಹಾಗೂ ಶಾಲಿನಿಯ ನಡವಳಿಕೆಗೆ ಬೇಸರಗೊಂಡು ಸಿಹಿಯನ್ನು ಸೀತಾಳಿಗೆ ವಾಪಸ್ ನೀಡಿದ್ದಾರೆ.

ಸೀರಿಯಲ್ ಕಥೆಗೆ ಟ್ವಿಸ್ಟ್ ತಂದ ವಾಹಿನಿ
ಸೀತಾ ರಾಮ ಮತ್ತು ಸಿಹಿ ಒಂದಾಗಿದ್ದಾರೆ. ಇದರಿಂದ ಮನೆಯಲ್ಲಿ ಹಾಗೂ ವೀಕ್ಷಕರಲ್ಲಿ ಎಲ್ಲರಲ್ಲೂ ಮಂದಹಾಸ ಮೂಡಿತ್ತು. ಸಿಹಿ ಕೂಡ ಸಂಭ್ರಮದಲ್ಲಿ ತೇಲಾಡುತ್ತಿದ್ದಳು. ಇದಕ್ಕಾಗಿ ರಾಮ್ ಪಾರ್ಟಿ ಕೂಡ ಅರೇಂಜ್ ಮಾಡಿದ್ದ. ಪಾರ್ಟಿಯಲ್ಲಿ ಶ್ರಾವಣಿ ಸುಬ್ರಮಣ್ಯ ಕುಟುಂಬ ಹಾಗೂ ಸೀತಾ ರಾಮ್ ಕುಟುಂಬ ಸೇರಿ ಎಂಜಾಯ್ ಮಾಡಿದ್ದರು. ಆದರೆ, ಸಿಹಿ ಮತ್ತು ಶ್ರಾವಣಿ ಅನ್ನು ರೌಡಗಳ ತಂಡ ಕಿಡ್ನ್ಯಾಪ್ ಮಾಡಿ ಹೊಸ ಟ್ವಿಸ್ಟ್ ಅನ್ನು ತಂದಿತ್ತು. ವಾಹಿ ನಿ ತೋರಿದ ಪ್ರೋಮೋ ಪ್ರಕಾರ ಸಿಹಿ ಅಪಘಾತದಲ್ಲಿ ಸಾವನ್ನಪ್ಪುತ್ತಾಳೆ. ಆತ್ಮವಾಗಿರುವುದನ್ನು ನೋಡಿದ್ದರು. ಸಿಹಿಯನ್ನು ಕೊಂದು ಸೀತಾ ಮಡಿಲಲ್ಲಿ ಮತ್ತೊಂದು ಪುಟ್ಟ ಮಗುವನ್ನು ತರುವುದೇ ಧಾರಾವಾಹಿಯ ಉದ್ದೇಶ ಎಂದು ಎಲ್ಲರೂ ಭಾವಿಸಿದ್ದರು.
ಸಿಹಿಯ ಸಹೋದರಿ ಎಂಟ್ರಿ
ಆದರೆ, ವಾಹಿನಿ ಈಗ ತಂದ ಟ್ವಿಸ್ಟ್ ಗಳು ಸಾಲದು ಎಂದು ಮತ್ತೊಂದು ಹೊಸ ಟ್ವಿಸ್ಟ್ ಅನ್ನು ತಂದಿದೆ. ಇದೀಗ ವಾಹಿನಿಯು ಹೊಸ ಪ್ರೊಮೋಗಳನ್ನು ಹರಿ ಬಿಟ್ಟಿವೆ ಅದರ ಪ್ರಕಾರ ಮತ್ತೊಂದು ಹೊಸ ಪಾತ್ರ ಧಾರಾವಾಹಿಯಲ್ಲಿ ಮೂಡಿ ಬರಲಿದೆ. ಸೀತಾ ಬಾಡಿಗೆ ತಾಯಿಯಾಗಿದ್ದರೂ ಕೂಡ ಅವಳಿಗೆ ಅವಳಿ ಮಕ್ಕಳ ಜನನವಾಗಿರುತ್ತದೆ. ಒಂದು ಮಗು ಸತ್ತಿದೆ ಎಂದೇ ಸೀತಾ ಭಾವಿಸಿರುತ್ತಾಳೆ. ಸಿಹಿಯೊಬ್ಬಳನ್ನೇ ಸೀತಾ ಸಾಕಿರುತ್ತಾಳೆ. ಆದರೆ, ಇದೀಗ ಧಾರಾವಾಹಿಯಲ್ಲಿ ಸಿಹಿ ತದ್ರೂಪಿ ಆಗಿರುವ ಮತ್ತೊಬ್ಬ ಬಾಲಕಿಯ ಎಂಟ್ರಿಯಾಗಿದೆ.
ಸಿಹಿಯ ಅವತಾರಕ್ಕೆ ಶ್ರಾವಣಿ ಶಾಕ್
ಸಿಹಿಯಂತೆ ಕಾನುವ ಈ ಮತ್ತೊಂದು ಬಾಲಕಿ ಸರ್ಕಸ್ ನಡೆಸುವವರ ಕುಟುಂಬದಲ್ಲಿ ಸೇರಿಕೊಂಡಿದ್ದು, ಅವಳ ಅವತಾರ ಕಂಪ್ಲೀಟ್ ಆಗಿ ಡಿಫರೆಂಟ್ ಆಗಿದೆ. ಶ್ರಾವಣಿ ಕೈಗೆ ಆ ಬಾಲಕಿ ಸಿಕ್ಕಿದು, ಶ್ರಾವಣಿ ಸಿಹಿ ಯಾಕೆ ಈ ರೀತಿ ಡ್ರೆಸ್ ಮಾಡಿಕೊಂಡಿದ್ದಾಳೆ ಎಂದು ಗಾಬರಿಯಾಗಿದ್ದಾಳೆ. ಹುಡುಗಿಯನ್ನು ಶ್ರಾವಣಿ ಮಾತನಾಡಿಸಲು ಮುಂದಾದರೂ ಕೂಡ ಆಕೆ ಶ್ರಾವಣಿ ಕೈಗೆ ಸಿಗುವುದಿಲ್ಲ. ಅಲ್ಲಿಗೆ ವಾಹಿನಿ ಬಹಳ ದೊಡ್ಡ ಟ್ವಿಸ್ಟ್ ಅನ್ನು ಧಾರಾವಾಹಿಗೆ ತರಲಿದ್ದು, ಮುಂದಿನ ಕತೆ ಹೇಗೆ ಸಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.


Click it and Unblock the Notifications











