Swathi ;ಕಿರುತೆರೆ ಮತ್ತು ಸಿನಿಮಾ ಎರಡೂ ಕ್ಷೇತ್ರಗಳಲ್ಲಿ ಬ್ಯುಸಿಯಾಗಿರುವ ನಟಿ ಸ್ವಾತಿ ..!

By ಪ್ರಿಯಾ ದೊರೆ

ತಾಯಿ ಪಾತ್ರದ ಮೂಲಕ ಸೆಕೆಂಡ್ ಇನ್ನಿಂಗ್ಸ್ ಪ್ರಾರಂಭಿಸಿ, ಈಗಲೂ ಬಿಡುವಿಲ್ಲದಂತೆ ನಟಿಸುತ್ತಿರುವ ಸ್ವಾತಿ ಅವರು ಅಭಿಮಾನಿಗಳ ಫೇವರಿಟ್ ನಟಿ ಎಂದರೆ ತಪ್ಪಾಗಲಾರದು.ಕಳೆದ ಎರಡು ದಶಕಗಳಿಂದ ಕಿರುತೆರೆಯಿಂದ ದೂರವಾಗದೇ, ತಮ್ಮ ನಟನೆ, ಮೌನ, ನಗು ಮುಖದೊಂದಿಗೆ ಅಭಿಮಾನಿಗಳನ್ನು ರಂಜಿಸುತ್ತಲೇ ಬಂದಿದ್ದಾರೆ. ನಟಿ ಸ್ವಾತಿ ಅವರ ನಟನೆಯ ಬಗ್ಗೆ ಎರಡು ಮಾತನಾಡಿದವರು ಯಾರೂ ಇಲ್ಲ. ಹಾಗಾದರೆ ಬನ್ನಿ, ಇವರ ಕಿರುತೆರೆ ಹಾಗೂ ಸಿನಿಮಾ ಪಯಣ ಹೇಗಿದೆ ಎಂದು ತಿಳಿಯೋಣ.

1995ರಿಂದ ಕಿರುತೆರೆಯಲ್ಲಿ ಸಕ್ರಿಯ

ನಟಿ ಸ್ವಾತಿ ಅವರು 1995 ರಿಂದ ಇಂದಿನವರೆಗೂ ಸ್ಯಾಂಡಲ್ ವುಡ್ ಹಾಗೂ ಕಿರುತೆರೆಯಲ್ಲಿ ಸಕ್ರಿಯರಾಗಿದ್ದಾರೆ. ಸ್ವಾತಿ ಅವರು ನೂರಾರು ಧಾರಾವಾಹಿಗಳಲ್ಲಿ ನಟಿಸಿದ್ದು, ಮೊದಲು ನಾಯಕಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ಈಗ ತಾಯಿ ಪಾತ್ರದಲ್ಲಿ ನಟಿಸುತ್ತಿರುವ ಸ್ವಾತಿಯವರು ನೋಡುವುದಕ್ಕೆ ಈಗಲೂ ಅಂದಿನಂತೆಯೇ ಕಾಣುತ್ತಾರೆ. ಮುಖದಲ್ಲಿ ಸ್ವಲ್ಪ ಸುಕ್ಕು ಬಿಟ್ಟರೆ ಈಗಲೂ ಅದೇ ಪರ್ಸನಾಲಿಟಿಯನ್ನು ಕಾಪಾಡಿಕೊಂಡು ಬಂದಿದ್ದಾರೆ. ನಟಿ ಸ್ವಾತಿ ಅವರು ಕಾಲೇಜಿನಲ್ಲಿ ಓದುತ್ತಿದ್ದಾಗ, ಅದೇ ಕಾಲೇಜಿನ ಲ್ಯಾಬ್ ಗೆ ಟೆಕ್ನಿಷಿಯನ್ ಆಗಿ ನಟ ಕರಿಬಸವಯ್ಯ ಅವರು ಕೆಲಸ ಮಾಡುತ್ತಿದ್ದರು. ಅವರ ಮೂಲಕ ಸುನೀಲ್ ಪುರಾಣಿಕ್ ಅವರ ಪೊಲೀಸ್ ಡೈರಿ ಧಾರಾವಾಹಿಗೆ ಮೊದಲ ಬಾರಿಗೆ ಬಣ್ಣ ಹಚ್ಚಿದರು. ಇದು ಸ್ವಾತಿ ಅವರ ಮೊದಲ ಧಾರಾವಾಹಿ. ಆದರೆ ಮೊದಲು ಪ್ರಸಾರವಾಗಿದ್ದು ಮಾತ್ರ ನೀ ಬರೆದ ಪಾತ್ರ ನಾನಲ್ಲ ಎಂಬ ಧಾರಾವಾಹಿ.

Written update on senior kannada tv actress swathi

ಸಾಲು ಸಾಲು ಧಾರಾವಾಹಿಗಳಲ್ಲಿ ನಟನೆ

ಮನೆತನ ಧಾರಾವಾಹಿಯಲ್ಲಿ ಪೂಜಾ ಎಂಬ ನಾಯಕಿ ಪಾತ್ರದಲ್ಲಿ ಸ್ವಾತಿ ನಟಿಸಿದ್ದರು. ಇದೇ ಸಂದರ್ಭದಲ್ಲಿ ಜನನಿ ಧಾರಾವಾಹಿಯಲ್ಲಿಯೂ ಕಾಣಿಸಿಕೊಂಡಿದ್ದರು. ಇದಾದ ನಂತರ ಹುಲಿವಾನ್ ಚಂದ್ರಶೇಖರ ಅವರ ನಿರ್ದೇಶನದ ಮಲೆಗಳಲ್ಲಿ ಮದುಮಗಳು ಧಾರಾವಾಹಿಯಲ್ಲೂ ನಟಿಸಿದರು. ಹೀಗೆ ಸಾಲು ಸಾಲಾಗಿ ಧನಲಕ್ಷ್ಮೀ, ಸುಮಂಗಲಿ, ಮೋಹನ್ ಮಾಡಿದ ಮರ್ಡರ್, ಪಿ. ಶೇಷಾದ್ರಿ ಅವರ ಪ್ರಿಯಾ, ಟಿ ಎನ್ ಸೀತಾರಾಮ್ ಅವರ ಪತ್ತೇದಾರಿ ಪ್ರಭಾಕರ್, ಉಯ್ಯಾಲೆ ಧಾರಾವಾಹಿಗಳಲ್ಲಿ ನಟಿಸಿದರು. ಈ ಕಿರುತೆರೆ ಪಯಣದಲ್ಲಿ ಸ್ವಾತಿ ಅವರು ಇಂದಿನವರೆಗೂ ಸುಮಾರು 460ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ಸ್ವಾತಿ ಅವರು ನಟಿಸಿದ್ದಾರೆ.

ಸಿನಿಮಾಗಳಲ್ಲೂ ಬ್ಯುಸಿ ಇರುವ ನಟಿ

ಸ್ವಾತಿ ಅವರು ಮೊದಲು ನಟಿಸಿದ ಸಿನಿಮಾ ಕ್ರೌರ್ಯ. ಪುನೀತ್ ರಾಜ್ ಕುಮಾರ್ ಅವರ ಚಕ್ರವ್ಯೂಹ ಚಿತ್ರದಲ್ಲೂ ತಾಯಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇಷ್ಟೇ ಅಲ್ಲದೇ, ಪಡ್ಡೆಹುಲಿ, ತಾರಕ್, ಅನಂತು ವರ್ಸಸ್ ನಸ್ರುತ್, ರಾಜ್ ವಿಷ್ಣು, ಹರಿಶ್ಚಂದ್ರ, ಗೀತಾ, ರಾಮಾರ್ಜುನ, ಯುವರತ್ನ, ಐ ಲವ್ ಯೂ ರಚ್ಚು, ಬೆಂಕಿ, ಕಾಗದದ ದೋಣಿ, ರೇಸರ್, ಗಜರಾಮ, ಫಾರ್ ರಿಜಿಸ್ಪ್ರೇಷನ್ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಸ್ವಾತಿ ಅವರು ಗುರುದತ್ ಅವರನ್ನು ಮದುವೆಯಾಗಿದ್ದು, ಇವರಿಗೆ ಈಗಾಗಲೇ 20 ಹರೆಯದ ಮಗನಿದ್ದಾನೆ ಎಂದರೆ ನೀವು ನಂಬುತ್ತೀರಾ. ನಂಬದಿದ್ದರೂ ಇದು ಸತ್ಯ. ತಮ್ಮೆತ್ತರಕ್ಕೆ ಬೆಳೆದ ಮಗನಿದ್ದರೂ ಇನ್ನೂ ಯಂಗ್ ಆಗಿ ಕಾಣುತ್ತಾರೆ ಸ್ವಾತಿ. ಸುಮಾರು ಹತ್ತು ವರ್ಷಗಳ ಕಾಲ ಮದುವೆ, ಮನೆ, ಸಂಸಾರ, ಮಕ್ಕಳು ಅಂತ ಸ್ವಾತಿ ಅವರು ನಟನೆಯಿಂದ ಬ್ರೇಕ್ ತೆಗೆದುಕೊಂಡಿದ್ದರು.

ನಟಿ ಸ್ವಾತಿ ಅವರ ಸೆಕೆಂಡ್ ಇನ್ನಿಂಗ್ಸ್

2003 ರಿಂದ 2014ರ ವರೆಗೆ ನಟನೆಯಿಂದ ದೂರ ಉಳಿದಿದ್ದರು. ಮತ್ತೆ ಕಿರುತೆರೆಗೆ ಬಂದು ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ ಸ್ವಾತಿ ಅವರು ನಿಜ ಜೀವನದಲ್ಲೂ ತಾಯ್ತನದ ಸುಖ ಅನುಭವಿಸಿದ್ದಾರೆ. ಅಭಿನಯದಲ್ಲೂ ತಾಯಿ ಪಾತ್ರಕ್ಕೆ ಬಡ್ತಿ ಪಡೆದಿದ್ದಾರೆ. ಶ್ರೀದೇವಿ ಮಹಾತ್ಮೆ, ನೀನಾದೆನಾ, ಶ್ರೀರಸ್ತು ಶುಭಮಸ್ತು, ಬ್ರಹ್ಮಗಂಟು, ಮನಸಾರೆ, ನಮ್ಮನೆ ಯುವರಾಣಿ, ಬೆಟ್ಟದ ಹೂ, ಗಟ್ಟಿಮೇಳ ಸೇರಿದಂತೆ ಹಲವು ಧಾರಾವಾಹಿಗಳಿಗೆ ಬಣ್ಣ ಹಚ್ಚಿದ್ದಾರೆ. ಪ್ರಸ್ತುತ ಕೃಷ್ಣ ಜನ್ಮಾಷ್ಟಮಿಯ ಹಿನ್ನೆಲೆ ಮಗನೊಂದಿಗೆ ತೆಗೆಸಿಕೊಂಡ ಫೋಟೋವೊಂದನ್ನು ಅಪ್ ಲೋಡ್ ಮಾಡಿ ಸಂತಸಗೊಂಡಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X