Year Ender 2024 ; ಚೊಚ್ಚಲ ಮಗುವಿನೊಂದಿಗೆ ಹೊಸ ವರ್ಷಕ್ಕೆ ಕಾಲಿಡುತ್ತಿರುವ ಕಿರುತೆರೆ ನಟ-ನಟಿಯರು
ಇನ್ನು ಕೆಲವೇ ಗಂಟೆಗಳಲ್ಲಿ 2024ಕ್ಕೆ ಗುಡ್ ಬಾಯ್ ಹೇಳಲು ಇಡೀ ಜಗತ್ತೇ ಕಾಯುತ್ತಿದೆ. ಈ ವರ್ಷ ನಡೆದ ಕೆಟ್ಟ ಘಟನೆಗಳನ್ನು ಮರೆತು, ಖುಷಿ ಸಂಗತಿಗಳೊಂದಿಗೆ 2025 ಅನ್ನು ಆಹ್ವಾನಿಸಲು ಸಜ್ಜಾಗಿದ್ದಾರೆ. ಸೆಲೆಬ್ರಿಟಿಗಳು ಸೇರಿದಂತೆ ಪ್ರತಿಯೊಬ್ಬರೂ ಕೂಡ ಸದ್ಯ ಜಾಲಿ ಮೂಡ್ ನಲ್ಲಿದ್ದಾರೆ. ತಮ್ಮದೇ ರೀತಿಯಲ್ಲಿ ಪ್ರತಿಯೊಬ್ಬರೂ ಹೊಸ ವರ್ಷವನ್ನು ಆಹ್ವಾನಿಸುತ್ತಿದ್ದಾರೆ. ಕನ್ನಡ ಕಿರುತೆರೆಯ ಕೆಲ ನಟ-ನಟಿಯರು ಪೋಷಕರಾಗಿ 2024ರಲ್ಲಿ ಬಡ್ತಿ ಪಡೆದಿದ್ದು, ತಮ್ಮ ಮಕ್ಕಳ ಜೊತೆಗೆ 2025ಕ್ಕೆ ಕಾಲಿಡುತ್ತಿದ್ದಾರೆ. ಯಾರೆಲ್ಲಾ ಪೋಷಕರಾಗಿ ಬಡ್ತಿ ಪಡೆದಿದ್ದಾರೆ ಎಂದು ತಿಳಿಯೋಣ ಬನ್ನಿ.
ಚೊಚ್ಚಲ ಮಗುವಿಗೆ ತಾಯಿಯಾದ ಕಾವ್ಯಾ ಗೌಡ
ಕನ್ನಡದ ಕೆಲವೇ ಕೆಲವು ಧಾರಾವಾಹಿಯಲ್ಲಿ ನಟಿಸಿ ಹಲವು ವರ್ಷಗಳು ಕಲೆದರೂ ಇನ್ನೂ ಜನಮಾನಸದಲ್ಲಿ ಉಳಿದಿರುವ ನಟಿ ಕಾವ್ಯ ಗೌಡ ಅವರು ಈ ವರ್ಷ ತಾಯಿಯಾಗಿದ್ದಾರೆ. ವರ್ಷದ ಆರಂಭದಲ್ಲಿಯೇ ಹೆಣ್ಣು ಮಗುವಿಗೆ ನಟಿ ಕಾವ್ಯಾ ಗೌಡ ಅವರು ಜನ್ಮ ನೀಡಿದ್ದಾರೆ. ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣಪ್ರತಿಷ್ಠಾಪನೆ ದಿನದಂದೇ ಮಗಳು ಜನಿಸಿದ್ದು, ಮಗಳಿಗೆ ಸೀತಾ ಎಂಬ ಅರ್ಥ ನೀಡುವ ಹೆಸರನ್ನು ಇಟ್ಟಿದ್ದಾರೆ. ಮಗಳಿಗೆ ಸಿಯಾ ಎಂದು ನಾಮಕರಣ ಮಾಡಿದ್ದು, ಈ ವರ್ಷದ ಹಬ್ಬಗಳಲ್ಲಿ ಮಗಳ ಜೊತೆಗೆ ಮುದ್ದು ಮುದ್ದಾಗಿ ಫೋಟೋಶೂಟ್ ಗಳನ್ನು ಮಾಡಿಸಿಕೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಹೆಣ್ಣು ಮಗುವಿಗೆ ಜನ್ಮ ನೀಡಿದ ಗೊಂಬೆ
ಹಲವು ವರ್ಷಗಳ ಹಿಂದೆ ಕನ್ನಡ ಕಿರುತೆರೆಯಲ್ಲಿ ಪ್ರಸಾರವಾದ ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಗೊಂಬೆ ಪಾತ್ರದಲ್ಲಿ ಚಿರಪರಿಚಿತರಾಗಿರುವ ನಟಿ ನೇಹಾ ಗೌಡ ಅವರು ಮದುವೆಯಾಗಿ ಆರು ವರ್ಷಗಳೇ ಕಳೆದಿವೆ. ಇದೀಗ ತಮ್ಮ ಚೊಚ್ಚಲ ಮಗುವಿಗೆ 2024 ರಲ್ಲಿ ಜನ್ಮ ನೀಡಿದ್ದು, ತಾಯಿಯಾಗಿ ಬಡ್ತಿ ಪಡೆದಿದ್ದಾರೆ. ಹೆಣ್ಣು ಮಗುವಿಗೆ ಜನ್ಮ ನೀಡಿರುವಚ ನಟಿ ನೇಹಾ ಗೌಡ ಅವರ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಇನ್ನು ನಟಿ ನೇಹಾ ಗೌಡ ಅವರ ಪತಿ ಕೂಡ ಕಿರುತೆರೆ ನಟರಾಗಿದ್ದಾರೆ.
ತಂದೆಯಾದ ಅಮುಲ್ ಬೇಬಿ
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ಸರತ್ಯ ಧಾರಾವಾಹಿಯಲ್ಲಿ ಅಮುಲ್ ಬೇಬಿ ಅಲಿಯಾಸ್ ನಟ ಸಾಗರ್ ಬಿಳಿಗೌಡ ಅವರು ನಟಿ ಸಿರಿ ರಾಜು ಎಂಬುವರನ್ನು 2023 ರಲ್ಲಿ ಪ್ರೀತಿಸಿ ವಿವಾಹವಾದರು. ಈ ಜೋಡಿಗಳು 2024ರಲ್ಲಿ ಹೆಣ್ಣು ಮಗುವನ್ನು ಬರಮಾಡಿಕೊಂಡಿದ್ದಾರೆ. ಇದೇ ತಿಂಗಳ ಆರಂಭದಲ್ಲಿ ಮಗಳಿಗೆ ನಾಮಕರಣವನ್ನು ಮಾಡಿದ್ದು, ಮಗಳಿಗೆ ಪ್ರಹರ್ಷ ಎಂದು ಹೆಸರಿಟ್ಟಿದ್ದಾರೆ.
ಪೋಷಕಾರದ ಕವಿತಾ ಗೌಡ-ಚಂದನ್ ಕುಮಾರ್
ನಟಿ ನೇಹಾ ಗೌಡ ನಟಿಸಿದ್ದ ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿಯೇ ಚಿನ್ನು ಪಾತ್ರದ ಮೂಲಕ ಫೆಮಸ್ ಆಗಿದ್ದ ನಟಿ ಕವಿತಾ ಗೌಡ ಹಾಗೂ ಇದೇ ಧಾರಾವಾಹಿಯಲ್ಲಿ ನಾಯಕನಾಗಿ ನಟಿಸಿದ್ದ ನಟಚಂದನ್ ಕುಮಾರ್ ಪ್ರೀತಿಸಿ ಸಪ್ತಪದಿ ತುಳಿದಿದ್ದರು. 2024ರಲ್ಲಿ ಗುಡ್ ನ್ಯೂಸ್ ಹಂಚಿಕೊಂಡಿದ್ದ ಈ ಜೋಡಿ, ಮುದ್ದಾದ ಗಂಡು ಮಗುವಿಗೆ ತಂದೆ - ತಾಯಿ ಆಗಿದ್ದಾರೆ. ಇವರಲ್ಲಿ ವಿಶೇಷವೆಂದರೆ, ನಟಿ ನೇಹಾ ಗೌಡ ಮತ್ತು ನಟಿ ಕವಿತಾ ಗೌಡ ಅವರು ಒಂದೇ ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟರು. ಅದೇ ಧಾರಾವಾಹಿ ಮೂಲಕ ಫೆಮಸ್ ಆಗಿದ್ದರು, ಇಬ್ಬರೂ ಒಂದು ತಿಂಗಳ ಅಂತರದಲ್ಲಿ ಗುಡ್ ನ್ಯೂಸ್ ನೀಡಿ ಅಭಿಮಾನಿಗಳು ಡಬಲ್ ಖುಷಿ ಕೊಟ್ಟಿದ್ದರು.
ಮುದ್ದು ಮಗಳ ಜೊತೆಗೆ ಭವಾನಿ ಸಿಂಗ್
ಸುಬ್ಬಲಕ್ಷ್ಮೀ ಸಂಸಾರ ಧಾರಾವಾಹಿಯಲ್ಲಿ ನಟಿಸಿದ್ದ ನಟ ಭವಾನಿ ಸಿಂಗ್ ಹಾಗೂ ಪಂಕಜಾ ಶಿವಣ್ಣ ದಂಪತಿಗಳು ಕೂಡ ಈ ವರ್ಷ ಪೋಷಕರಾಗಿದ್ದಾರೆ. ಹೊಸ ವರ್ಷವನ್ನು ತಮ್ಮ ಮುದ್ದು ಮಗಳ ಜೊತೆಗೆ ಆಹ್ವಾನಿಸುತ್ತಿದ್ದು, ಈ ಜೋಡಿಗಳು 2019ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಐದು ವರ್ಷಗಳ ಬಳಿಕ ಪೋಷಕರಾಗಿದ್ದಾರೆ.


Click it and Unblock the Notifications











