Netra Jadhav ; ಮಗಳ ಜೊತೆ ನೇತ್ರಾ ಜಾಧವ್ ಯುಗಾದಿ ಹಬ್ಬದ ಸಂಭ್ರಮ ಹೇಗಿತ್ತು ?
ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ ಎನ್ನುವ ಈ ಹಾಡು ಎಷ್ಟೇ ಹಳೆಯದಾದರೂ, ಪ್ರತೀ ವರ್ಷ ಹೊಸತಾಗೊಯೇ ಕೇಳುತ್ತದೆ.ಎಲ್ಲರೂ ಇಂದು ಬೇವು ಬೆಲ್ಲ ತಿಂದು ದಿನ ಆರಂಭಿಸಿ, ಬಿಸಿಬಿಸಿ ಹೋಳಿಗೆ ತುಪ್ಪ ಸವಿದು ಹೊಸ ವರ್ಷವನ್ನು ಸ್ವಾಗತಿಸಿದ್ದಾರೆ. ನಟ-ನಟಿಯರಿಂದ ಹಿಡಿದು ಪ್ರತಿಯೊಬ್ಬರ ಮನೆಯಲ್ಲೂ ಹಬ್ಬದ ಕಳೆ ಜೋರಾಗಿಯೇ ಇದೆ. ಯುಗಾದಿ ಹಬ್ಬವನ್ನು ಮುಗಿಸುತ್ತಾ, ನಾಳೆಯ ಹೊಸ ತೊಡಕಿಗೆ ಕಾಯುತ್ತಿದ್ದಾರೆ. ಎಲ್ಲಾ ನಟ-ನಟಿಯರು ಕೂಡ ಹಬ್ಬದ ಸಂಭ್ರಮವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸಂಭ್ರಮಿಸಿದ್ದಾರೆ.
ಮಗಳ ಜೊತೆ ಕಾಣಿಸಿಕೊಂಡ ನಟಿ
ನಟಿ ನೇತ್ರಾ ಜಾಧವ್ ಕೂಡ ಯುಗಾದಿ ಹಬ್ಬದ ಸಂಬ್ರಮದವನ್ನು ದುಪ್ಪಟ್ಟು ಮಾಡಿಕೊಂಡಿದ್ದಾರೆ. ಏನಿದ್ದರೇನು ಹೇಗಿದ್ದರೇನು, ನಮ್ಮವರ ಜೊತೆ ಬೆರೆಯುವುದಕ್ಕಿಂತ ಬೇರೆ ಹಬ್ಬ ಬೇಕೇನು, ಲೈಫ್ ಈಸ್ ಸಿಫಲ್, ಸಿಂಪಲ್ ಆಗೆ ಇರಲಿ, ಸಂಭ್ರಮಗಳು ಶ್ರೀಮಂತವಅಗಲಿ, ಬಂಧಗಳು ಗಟ್ಟಿಯಾಗಿರಲಿ, ಯುಗಾದಿ ಹಬ್ಬದ ಶುಭಾಷಯಗಳು ಎಂದು ಮೊದಲ ಬಾರಿಗೆ ಮಗಳ ಜೊತೆಗೆ ವೀಡಿಯೋ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ. ವರ್ಷದ ಆರಂಬದ ದಿನ, ಜೀವನದಲ್ಲಿ ಹೇಗಿದ್ದರೆ ಚೆನ್ನಾ ಎಂಬುದನ್ನು ಸಿಂಪಲ್ ಆಗಿ ಹೇಳಿದ್ದಾರೆ. ಇದುವರೆಗೂ ಕೇವಲ ತಮ್ಮ ಫೋಟೋ, ವೀಡಿಯೋಗಳನ್ನು ಶೇರ್ ಮಾಡುತ್ತಿದ್ದವರು ಮೊದಲ ಬಾರಿಗೆ ಮಗಳೊಂದಿಗೆ ವೀಡಿಐಓ ಹಂಚಿಕೊಂಡಿದ್ದಾರೆ. ಮಗಳ ಹೆಸರನ್ನು ರಿವೀಲ್ ಮಾಡಿಲ್ಲ.

ಸ್ವೀಟ್ ವಿಲನ್ ಆಗಿದ್ದ ನಟಿ ನೇತ್ರಾ ಜಾಧವ್
ಈಗಾಗಲೇ ಸಾಕಷ್ಟು ಧಾರಾವಾಹಿಗಳಲ್ಲಿ ನಟಿ ನೇತ್ರಾ ಜಾಧವ್ ಅವರು ನಟಿಸಿದ್ದಾರೆ. ಆದರೆ, ಕನ್ನಡದಲ್ಲಿ ಯಾವುದು ಒಳ್ಳೆಯ ಬ್ರೇಕ್ ನೀಡಿರಲಿಲ್ಲ. ನೇತ್ರಾ ಜಾಧವ್ ಅವರು ಕ್ಯಾಮರಾ ಎದುರು ಬಂದಿರುವುದು ಇದೇ ಮೊದಲೇನಲ್ಲ. ಹತ್ತನ್ನೆರಡು ವರ್ಷದ ಹಿಂದೆ ಉದಯ ಟಿವಿಯಲ್ಲಿ ಮೂಡಿ ಬಂದ ರಥಸಪ್ತಮಿ ಧಾರಾವಾಹಿಯಲ್ಲಿ ನಟಿಸಿದ್ದರು. ಈ ಧಾರಾವಾಹಿಯಲ್ಲೂ ಸುಧಾರಾಣಿ, ಜ್ಯೋತಿ ರೈ, ಜಯಶ್ರೀ ಸೇರಿದಂತೆ ಹಲವು ನಟಿಯರಿದ್ದರು. ಬಳಿಕ ಸುಂದರಿ, ಸಾಗುತ ದೂರ ದೂರ, ಆಕೃತಿ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಸ್ವೀಟ್ ವಿಲನ್ ಶಾರ್ವರಿ ಪಾತ್ರಕ್ಕೆ ಬಣ್ಣ ಹಚ್ಚಿದ್ದರು. ಆದರೆ, ಧಾರಾವಾಹಿಯಿಂದ ಅರ್ಧಕ್ಕೆ ಹೊರ ನಡೆದಿದ್ದರು.
ತೆಲುಗು ಅಂಗಳದಲ್ಲೂ ಅಭಿನಯ
ಇನ್ನು ಕನ್ನಡ ಮಾತ್ರವಲ್ಲದೇ, ತೆಲುಗು ಧಾರಾವಾಹಿಗಳಲ್ಲೂ ನೇತ್ರಾ ಅವರು ನಟಿಸಿದ್ದಾರೆ. ತೆಲುಗು ಧಾರಾವಾಹಿ ರಾವೋಯಿ ಚಂದಮಾಮದಲ್ಲಿ ಇಂದ್ರಸೇನಾ ಪಾತ್ರದಲ್ಲಿ ನೇತ್ರಾ ಅವರು ಕಾಣಿಸಿಕೊಂಡಿದ್ದರು. ಇದೀಗ ನೇತ್ರಾ ಅವರು ತೆಲುಗಿನ ಮಗುವಾ ಓ ಮಗುವಾ ಎಂಬ ಧಾರಾವಾಹಿಯಲ್ಲಿ ಲೀಡ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ನೇತ್ರಾ ಜಾಧವ್ ಅವರು ತಮ್ಮ ಪಾತ್ರವನ್ನು ಅದ್ಭುತವಾಗಿ ನಿಭಾಯಿಸುತ್ತಾರೆ. ಅವರ ಕಾಸ್ಟ್ಯೂಮ್, ಆಕ್ಟಿಂಗ್ ಎಲ್ಲವನ್ನೂ ಪ್ರೇಕ್ಷಕರು ಮೆಚ್ಚಿಕೊಳ್ಳುವಮತೆ ಇರುತ್ತದೆ. ನೇತ್ರಾ ಅವರ ಪಾತ್ರವನ್ನು ಮೆಚ್ಚಿಕೊಂಡಿರುವ ವೀಕ್ಷಕರಲ್ಲಿ ಅಭಿಮಾನಿಯೊಬ್ಬರು ಪತ್ರ ಬರೆದಿದ್ದರು. ನಿಮ್ಮ ಸೌಂದರ್ಯ, ಅಭಿನಯ ಹಾಗೂ ಕಾಸ್ಟ್ಯೂಮ್ ಅಂತೂ ಅದ್ಭುತ ಎಂದು ಹೇಳಿದ್ದರು.
ಮನದ ಕಡಲಲ್ಲಿ ಕಂಡ ನಟಿ ನೇತ್ರಾ
ಇನ್ನು ಯೋಗರಾಜ್ ಭಟ್ ಅವರ ತಂಡ ಸೇರಿರುವ ನಟಿ ನೇತ್ರಾ ಜಾಧವ್ ಅವರು, ಮನದ ಕಡಲು ಎಂಬ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಕಳೆದ ವಾರವಷ್ಟೇ ಸಿನಿಮಾ ರಿಲೀಸ್ ಆಗಿದ್ದು, ಸುಮುಖ, ರಾಶಿಕಾ ಶೆಟ್ಟಿ, ಅಂಜಲಿ ಅನೀಶ್, ರಂಗಾಯಣ ರಘು, ದತ್ತಣ್ಣ ಜೊತೆ ಸಿನಿಮಾದಲ್ಲಿ ನಟಿಸಿದ್ದಾರೆ. ನಟಿ ನೇತ್ರಾಜಾಧವ್ ಅವರಿಗೆ ಮತ್ತಷ್ಟು ಸಿನಿಮಾಗಳಲ್ಲಿ ನಟಿಸುವ ಅವಕಾಶ ಸಿಗಲಿ ಎನ್ನುವುದೇ ಎಲ್ಲರ ಆಶಯ.


Click it and Unblock the Notifications











