ನಿನಗ ಹುಷಾರಿಲ್ಲ ಮಗನೇ, ಅಮೃತಧಾರೆ ನಟಿ ಕಣ್ಣೀರು ; ಶಾಂಭವಿ ಬದುಕಿಗೆ ಬಡಿದ ಬರಸಿಡಿಲು..!

By ಪ್ರಿಯಾ ದೊರೆ

ಕಿರುತೆರೆ ನಟಿ ಶಾಂಭವಿ ವರಿಗೆ ಅವಳಿ ಮಕ್ಕಳು.ಒಂದು ಗಂಡು ಮಗು ಮತ್ತೊಂದು ಹೆಣ್ಣು ಮಗು.ಶಾಂಭವಿ ಅವರ ಮಕ್ಕಳಿಗೆ ಈಗಾಗಲೇ ಮೂರು ವರ್ಷ ವಯಸ್ಸು. ಶಾಂಭವಿ ಅವರು ತಮ್ಮ ಮನೆಯಲ್ಲಿ ಪೂಜೆ ನಡೆದರೆ, ಹಬ್ಬವಾದರೆ, ಊರಿಗೆ ಹೋದಾಗ ಹೀಗೆ ಪ್ರತಿಯೊಂದು ವಿಚಾರವನ್ನೂ ಸೋಶಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡುತ್ತಿರುತ್ತಾರೆ. ಸದಾ ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್ ಆಗಿರುವ ಶಾಂಭವಿ ಅವರು ಆಗಾಗ ತಮ್ಮ ಶೂಟಿಂಗ್ ಬಗ್ಗೆಯೂ ಮಾಹಿತಿ ನೀಡುತ್ತಿರುತ್ತಾರೆ. ಸದ್ಯ ಮಕ್ಕಳಿಗೆ ಹೆಚ್ಚು ಸಮಯವನ್ನು ನೀಡುತ್ತಿರುತ್ತಾರೆ.

ಧಾರಾವಾಹಿಯಲ್ಲಿ ನಟಿಸುತ್ತಿದ್ದ ಶಾಂಭವಿ

ಇನ್ನು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ನಿಗೂಢರಾತ್ರಿ ಧಾರಾವಾಹಿಯಲ್ಲಿ ಮಂದಾಕಿನಿಯಾಗಿ ನಟಿಸಿದ್ದ ಶಾಂಭವಿ ಅವರು ಬಳಿಕ ಪಾರು, ಲಕ್ಷ್ಮಿ, ಗೀತಾಂಜಲಿ ಸೀರಿಯಲ್ ನಲ್ಲಿ ಮಿಂಚಿದ್ದಾರೆ. ನೆಗೆಟಿವ್ ಶೇಡ್ ರೋಲ್ ನಲ್ಲಿ ಕಾಣಿಸಿಕೊಂಡರು. ತಮ್ಮ ಸೌಂದರ್ಯದ ಮೂಲಕ ಹೆಚ್ಚು ಸದ್ದು ಮಾಡಿದ್ದರು. ಪಾರು ಧಾರಾವಾಹಿಯಲ್ಲಿ ದಿಶಾ ಆಗಿ ಬದಲಾದ ಆಕೆ ವಿಲನ್ ಆಗಿಯೂ ಕಿರುತೆರೆಯಲ್ಲಿ ಅಬ್ಬರಿಸಿದ್ದರು. ಸ್ಯಾಂಡಲ್ ವುಡ್ನ ಬ್ಲಾಕ್ ಬಾಸ್ಟರ್ ಸಿನಿಮಾ ಕೆಜಿಎಫ್ ಚಾಪ್ಟರ್ 1ರಲ್ಲಿ ವಿಶೇಷ ಪಾತ್ರದ ಮೂಲಕ ಗಮನ ಸೆಳೆದಿದ್ದರು. ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾದಲ್ಲಿಯೂ ನಾಯಕಿಯ ಗೆಳತಿಯಾಗಿ ಶಾಂಭವಿ ಕಾಣಿಸಿಕೊಂಡಿದ್ದರು. ಕಳೆದ ವರ್ಷ ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ದಿವಾನ್ ಎಕ್ಸ್ ಗರ್ಲ್ ಫ್ರೆಂಡ್ ಪಾತ್ರದಲ್ಲಿ ನಟಿಸಿದ್ದರು.

Written update on serial actress shambhavi son dhushyanth

ಪುಟಾಣಿಗೆ ದುಶ್ಯಂತ್ ಗೆ ಬ್ಲಡ್ ಕ್ಯಾನ್ಸರ್..!

ತಮ್ಮ ಸಮಯವನ್ನು ಮಕ್ಕಳಿಗಾಗಿ ಮೀಸಲಿಡುತ್ತಿದ್ದ ಶಾಂಭವಿ ಅವರು, ಮೂರು ವರ್ಷದ ದುರ್ಗಾ ಮತ್ತು ದುಶ್ಯಂತ್ ಗೆ ಶ್ಲೋಕ ಹೇಳಿ ಕೊಡುವುದು, ಡ್ರಾಯಿಂಗ್, ಪೇಂಟಿಂಗ್, ಆಟ ಪಾಠ ಗಳಲ್ಲಿ ಜೊತೆಯಾಗುತ್ತಿದ್ದರು. ಆದರೆ, ಇದೀಗ ಶಾಂಭವಿ ಅವರು ಕಹಿ ವಿಚಾರವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅದೇನೆಂದರೆ, ತಮ್ಮ ಮಗ ದುಶ್ಯಂತ್ ಬ್ಲಡ್ ಕ್ಯಾನ್ಸರ್ ನಿಂದ ಬಳಲುತ್ತಿದ್ದಾನೆ ಎಂದು ತಿಳಿಸಿದ್ದಾರೆ. ನಾಲ್ಕು ದಿನಗಳ ಹಿಂದೆ ಮಗನ ತಲೆ ಕೂದಲು ಉದುರುತ್ತಿದ್ದು, ಶೇವ್ ಮಾಡುವ ಸಮಯ ಬಂದಿದೆ ಎಂದಿದ್ದರು. ಆದರೆ, ಇದು ಯಾರಿಗೂ ಅರ್ಥವಾಗಿರಲಿಲ್ಲ. ಆದರೆ ಇಂದು ಫೋಟೋ ಮತ್ತು ವೀಡಿಯೋ ಪೋಸ್ಟ್ ಮಾಡಿದ್ದಾರೆ.


ಮಗುವಿಗೆ ಹಾರೈಸಿದ ನೆಟ್ಟಿಗರು

ಅದರಲ್ಲಿ ತಮ್ಮ ಮಗನಿಗೆ ಕ್ಯಾನ್ಸರ್ ಇದೆ. ಮೂರನೇ ಸ್ಟೇಜ್ ನಲ್ಲಿ ಇರುವಾಗ ಗೊತ್ತಾಯ್ತು. ಇದರಿಂದ ನನ್ನ ಮಗ ಆದಷ್ಟು ಬೇಗ ಚೇತರಿಸಿಕೊಳ್ಳಬೇಕು ಎಂದು ಬಯಸಿದ್ದಾರೆ. ಶಾಂಭವಿ ಅವರ ಪೋಸ್ಟ್ ಅನ್ನು ನೋಡಿದ ನೆಟ್ಟಿಗರು ಬೇಸರ ಮಾಡಿಕೊಂಡಿದ್ದಾರೆ. ದುಶ್ಯಂತ್ ಆದಷ್ಟು ಬೇಗ ಗುಣಮುಖವಾಗಲಿ ಎಂದು ಹಾರೈಸಿದ್ದಾರೆ. ಶಾಂಭವಿ ಅವರ ಪೋಸ್ಟ್ ಎಲ್ಲರ ಕಣ್ಣಾಲಿಗಳನ್ನು ಒದ್ದೆಯಾಗಿಸಿದೆ.

ಪುಟ್ಟ ಮಗುವಿಗೆ ದೊಡ್ಡ ಟ್ರೀಟ್ ಮೆಂಟ್

ಕನಸು ಮನಸಿನಲ್ಲೂ ನೆನೆಸದ ವಿಷಯ ನಡೆದುಹೋಗಿದೆ. ಸೆಪ್ಟೆಂಬರ್ 23ರಂದು 3 ವರುಷದ ಪುಟಾಣಿ ಕಂದ ದುಷ್ಯುಗೆ "3rd stage ಬ್ಲಡ್ ಕ್ಯಾನ್ಸರ್" ಇರೋದು ಪತ್ತೆ ಆಯ್ತು. 5-6 ದಿನಗಳಲ್ಲಿ ನಡೆದ ಟೆಸ್ಟ್ ರಿಸಲ್ಟ್ಸ್ ಬರೋ ವರೆಗೆ ಪ್ರತಿ ಕ್ಷಣವೂ "ಇದು ಕ್ಯಾನ್ಸರ್ ಆಗಿರದೆ ಇರಲಿ" ಅಂತಾ ಪ್ರಾರ್ಥಿಸ್ತಾ ಇದ್ವಿ. ಹಣೆಯಲಿ ಬರೆದಿರೋದನ್ನ ಬಲಿಸೋಕೆ ಆಗದಿದ್ದಾಗ ಈ ಪೂಜೆ, ಪ್ರಾರ್ಥನೆ, ಹರೆಗಳೆಲ್ಲ ಯಾಕೆ ಅನ್ಸತ್ತೆ!!! ಎನಗತ್ತೋ ಆಗ್ಲಿ ಅಂತ ರೆಡಿ ಆಗಿ ನಿಂತಿದೀವಿ ಇವಾಗ. ಬೇರೆ ಆಪ್ಷನ್ ಆದ್ರೂ ಏನಿದೆ?? ಇದು 95% curable ಅಂತಾ doctors ಭರವಸೆ ಕೊಟ್ಟಿದ್ದಾರೆ. ದೊಡ್ಡ ಟ್ರೀಟ್ಮೆಂಟ್ ತಗೋಬೇಕಿದೆ" ಅಂತಾ ಅರ್ಥ ಮಾಡಿಸೋಕೆ ಪ್ರಯತ್ನ ಪಡ್ತಾ ಇರ್ತೀನಿ. Chemotherapyಯ ಮೊದಲ ಹಂತ ಮುಗಿದು ಎರಡನೇ ಹಂತ ಶುರುವಾಗಿದೆ. ಸುಮಾರು 40 ದಿನಗಳ ಹಿಂದೆ therapy ಯ ಮೊದಲ ದಿನದಂದು ಕ್ಲಿಕ್ಕಿಸಿದ shots ಇದು. ಅಂತ ಪೋಸ್ಟ್ ಮಾಡಿದ್ದಾರೆ.ಭಾವುಕರಾಗಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X