Shobha Shetty ; ನಿಶ್ಚಿತಾರ್ಥದ ಬಗ್ಗೆ ಮಾಹಿತಿ ನೀಡಿದ ನಟಿ ಶೋಭಾ ಶೆಟ್ಟಿ
ಹಾಟ್ ಸಮ್ಮರ್ ಇರುವಾಗ ತಂಪಾದ ಗಾಳಿಯಂತೆ ನಟಿ ಶೋಭಾ ಶೆಟ್ಟಿ ಅವರು ಕಂಗೊಳಿಸುತ್ತಿದ್ದಾರೆ. ಯಾವಾಗಲೂ ಟ್ರೆಡಿಷನಲ್ ಲುಕ್ ನಲ್ಲಿ ಕಾಣಿಸಿಕೊಳ್ಳುವ ನಟಿ ಶೋಭಾ ಈಗ ಮಾಡ್ರನ್ ಲುಕ್ ನಲ್ಲಿ ಕಂಡಿದ್ದಾರೆ.ನೀಲಿ ಬಣ್ಣ ಹೈಲೈಟ್ ಆಗುವಂಹ ಗೌನ್ ಧರಿಸಿ, ವಿವಿಧ ಭಂಗಿಯಲ್ಲಿ ಫೋಟೋಗಳನ್ನು ತೆಗೆಸಿಕೊಂಡಿದ್ದಾರೆ. ಶೋಭಾ ಅವರ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.ಹಲವು ವರ್ಷಗಳಿಂದ ತೆಲುಗು ಕಿರುತೆರೆಯಲ್ಲೇ ಉಳಿದಿದ್ದರೂ ಕೂಡ ಶೋಭಾ ಶೆಟ್ಟಿ ಅವರ ಕನ್ನಡ ಅಭಿಮಾನಿಗಳ ಸಂಖ್ಯೆ ಕೊಂಚವೂ ಕಡಿಮೆ ಆಗಿಲ್ಲ.
ಏಪ್ರಿಲ್ ನಲ್ಲಿ ಶೋಭಾ ನಿಶ್ಚಿತಾರ್ಥ
ಕನ್ನಡ ಧಾರಾವಾಹಿಯ ಮೂಲಕ ಕಿರುತೆರೆಗೆ ಕಾಲಿಟ್ಟು ಇಂದು ಪರಭಾಷೆಯ ಕಿರುತೆರೆಯಲ್ಲಿ ಸಕ್ರಿಯರಾಗಿದ್ದಾರೆ. ನಟನೆಯ ಜೊತೆಗೆ ನಿರೂಪಣೆಯನ್ನು ಕೂಡ ಮಾಡಿದ್ದಾರೆ. ಕಾಫಿ ವಿತ್ ಶೋಭಾ ಶೆಟ್ಟಿ ಎಂಬ ಕಾರ್ಯಕ್ರಮವನ್ನು ನಿರೂಪಣೆ ಮಾಡಿದ್ದಾರೆ. ಇತ್ತೀಚೆಗಷ್ಟೇ ತಮ್ಮ ಪ್ರಿಯಕರ ಯಶವಂತ್ ರೆಡ್ಡಿಯವರೊಂದಿಗೆ ತಾಂಬೂಲವನ್ನು ಬದಲಾಯಿಸಿಕೊಂಡಿದ್ದರು.. ಶೋಭಾ ಶೆಟ್ಟಿ ಅವರು ಈಗ ತಮ್ಮ ನಿಶ್ಚಿತಾರ್ಥದ ಬಗ್ಗೆ ಹೇಳಿದ್ದಾರೆ. ಬೆಂಗಳೂರಿನಲ್ಲಿ ಏಪ್ರಿಲ್ ತಿಂಗಳಿನಲ್ಲೇ ನಡೆಯಲಿದ್ದು, ಬಹಳ ಸಿಂಪಲ್ ಆಗಿ ನಡೆಯುತ್ತಿರುವುದರಿಂದ ಕಲಾವಿದರು, ಇಂಡಸ್ಟ್ರಿ ಅವರು ಯಾರನ್ನೂ ಕರೆದಿಲ್ಲ ಎಂದು ಹೇಳಿದ್ದಾರೆ. ನಿಶ್ಚಿತಾರ್ಥ ಮುಗಿಯುತ್ತಿದ್ದಂತೆ ಹೈದರಾಬಾದ್ ನಲ್ಲಿ ತಮ್ಮ ಮನೆಯ ನಿರ್ಮಾಣ ಕಾರ್ಯ ಮುಕ್ತಾಯಗೊಳ್ಳುತ್ತಿದ್ದು ಅದರ, ಗೃಹಪ್ರವೇಶವೂ ಇದೇ ತಿಂಗಳು ನಡೆಯಲಿದೆ ಎಂದು ಹೇಳಿದ್ದಾರೆ.

ಗೃಹಪ್ರವೇಶವೂ ನಡೆಯಲಿದೆ ಎಂದ ನಟಿ
ಶೋಭಾ ಶೆಟ್ಟಿ ಅವರು ತಮ್ಮದೇ ಯೂಟ್ಯೂಬ್ ಚಾನೆಲ್ ಅನ್ನು ಹೊಂದಿದ್ದು, ಯೂಟ್ಯೂಬ್ ನಲ್ಲಿ ತಮ್ಮ ವಯಕ್ತಿಕ ವಿಚಾರಗಳನ್ನು ಅಪ್ ಲೋಡ್ ಮಾಡುತ್ತಿರುತ್ತಾರೆ. ಪ್ರತಿ ಮಂಗಳವಾರ ಹಾಗೂ ಗುರುವಾರ ಹೊಸ ವೀಡಿಯೋವನ್ನು ಅಪ್ ಲೋಡ್ ಮಾಡುತ್ತಿರುತ್ತಾರೆ. ಈಗಾಗಲೇ 552ಕೆ ಗೂ ಅಧಿಕ ಸಬ್ ಸ್ಕ್ರೈಬರ್ಸ್ ಅನ್ನು ಹೊಂದಿದ್ದಾರೆ. 276 ವೀಡಿಯೋಸ್ ಗಳನ್ನು ಅಪ್ ಲೋಡ್ ಮಾಡಿದ್ದು 1.7 ಮಿಲಿಯನ್ ಗೂ ಅಧಿಕ ವ್ಯೂವ್ಸ್ ಗಳು ಸಿಗುತ್ತಿವೆ. ಶೋಭಾ ಶೆಟ್ಟಿ ಅವರು ತಮ್ಮ ಡಯಟ್, ಸ್ಕಿನ್ ಕೇರ್, ರೊಟೀನ್, ವರ್ಕೌಟ್, ಮನೆ ಸ್ವಚ್ಛಗೊಳಿಸುವ ಬಗ್ಗೆ, ಶಾಪಿಂಗ್ ಎಲ್ಲಾ ವೀಡಿಐೋಗಳನ್ನು ಅಪ್ ಲೋಡ್ ಮಾಡುತ್ತಿರುತ್ತಾರೆ. ನೆಕ್ಸ್ಟ್ ನಿಶ್ಚಿತಾರ್ಥದ ಶಾಪಿಂಗ್ ವೀಡಿಯೋವನ್ನು ಅಪ್ ಲೋಡ್ ಮಾಡುವುದಾಗಿ ಹೇಳಿದ್ದಾರೆ.
ಕನ್ನಡ, ತೆಲುಗಿನಲ್ಲಿ ಮಿಂಚಿದ ಶೋಭಾ
ಇನ್ನು ತೆಲುಗು ಬಿಗ್ ಬಾಸ್ ಸೀಸನ್ 7ರ ಸ್ಪರ್ಧಿಯಾಗಿ ಅದ್ಭುತವಾಗಿ ಸ್ಪರ್ಧಿಸಿದ್ದಲ್ಲದೇ ಉಳಿದ ಸ್ಪರ್ಧಿಗಳಿಗೆ ಟಫ್ ಕಾಂಪಿಟೀಶನ್ ಕೊಟ್ಟಿದ್ದರು. ಟಾಪ್ ಏಳು ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದ ಶೋಭಾ ಶೆಟ್ಟಿ ಫಿನಾಲೆಗೆ ಕೇವಲ ಒಂದು ವಾರ ಇರುವಾಗ ಹೊರಬಂದಿದ್ದರು. ಕನ್ನಡ ಕಿರುತೆರೆಯಲ್ಲಿ ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ನಾಯಕಿ ಸನ್ನಿಧಿ ತಂಗಿ ತನು ಪಾತ್ರದಲ್ಲಿ ಅಭಿನಯಿಸಿದ್ದರು. ತದನಂತರ ಪರಭಾಷೆಯ ಕಿರುತೆರೆಯಲ್ಲಿ ನಾಯಕಿಯಾಗಿ ಮೋಡಿ ಮಾಡಿದ್ದರು. ರುಕ್ಕು ಧಾರಾವಾಹಿಯಲ್ಲಿ ನಾಯಕಿ ಪಾತ್ರದಲ್ಲಿ ನಟಿಸಿದ್ದ ಈ ನಟಿ ತೆಲುಗಿನ ಒಂದೆರಡು ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ತೆಲುಗಿನ ಕಾರ್ತಿಕ ದೀಪಂನಲ್ಲೂ ನಾಯಕಿ ಮೋನಿತಾ ಪಾತ್ರದಲ್ಲಿ ಬಣ್ಣ ಹಚ್ಚಿದ ಈಕೆ ಆ ಧಾರಾವಾಹಿಯ ಪಾತ್ರಕ್ಕೆ ರಾಷ್ಟ್ರೀಯ ಗೌರವ ಪ್ರಶಸ್ತಿ ಪಡೆದಿದ್ದಾರೆ.
ಧಾರಾವಾಹಿ ಜೋಡಿಯನ್ನೇ ಆರಿಸಿಕೊಂಡ ನಟಿ
ಕನ್ನಡದಲ್ಲಿ ಪಡುವಾರಹಳ್ಳಿ ಪಡ್ಡೆಗಳು ಧಾರಾವಾಹಿ ಮೂಲಕ ಶೋಭಾ ಶೆಟ್ಟಿ ಮೊದಲ ಬಾರಿಗೆ ಬಣ್ಣ ಹಚ್ಚಿದರು. ಕನ್ನಡದಲ್ಲಿ ಶೋಭಾ ಶೆಟ್ಟಿ ಅವರು ಹೆಚ್ಚಾಗಿ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ತೆಲುಗು ಕಿರುತೆರೆಯಲ್ಲಿ ಮಿಂಚುತ್ತಿರುವ ನಟಿ ಶೋಭಾ ಶೆಟ್ಟಿ ಅವರು ನೆಲೆಸಿರುವುದು ಬೆಂಗಳೂರಿನಲ್ಲಿಯೇ. ಕಾರ್ತಿಕ ದೀಪಂ ಧಾರಾವಾಹಿಯಲ್ಲಿ ಜೋಡಿಯಾಗಿ ನಟಿಸಿದ್ದ ಯಶವಂತ್ ರೆಡ್ಡಿ ಎಂಬುವರನ್ನು ಪ್ರೀತಿಸಿ ಮನೆಯಲ್ಲಿ ಒಪ್ಪಿಗೆ ಪಡೆದು ಮದುವೆಯಾಗಲು ಸಜ್ಜಾಗಿದ್ದಾರೆ.


Click it and Unblock the Notifications











