ಶ್ರೀರಸ್ತು ಶುಭಮಸ್ತು ದತ್ತ ತಾತನ ನೋಡಿದ ಏರ್ ಇಂಡಿಯಾ ಸಿಬ್ಬಂದಿ ಮಾಡಿದ್ದೇನು ಗೊತ್ತಾ..?

By ಪ್ರಿಯಾ ದೊರೆ

ಶ್ರೀರಸ್ತು ಶುಭಮಸ್ತು ಧಾರಾವಾಹಿ ಈಗಾಗಲೇ 500 ಎಪಿಸೋಡ್ ಗಳನ್ನು ಕಂಪ್ಲೀಟ್ ಮಾಡಿದೆ. 2022 ರ ಅಕ್ಟೋಬರ್ 31 ರಿಂದ ಈ ಧಾರಾವಾಹಿ ಶುರುವಾಗಿದ್ದು, ಜನರು ಧಾರಾವಾಹಿಯ ಕಥೆಯನ್ನು ಮೆಚ್ಚಿಕೊಂಡಿದ್ದಾರೆಆದರೆ, ಈಗ ಧಾರಾವಾಹಿಯ ಕತೆ ಬಹಳ ದೊಡ್ಡ ಮಟ್ಟದ ಟ್ವಿಸ್ಟ್ ಪಡೆದಿದ್ದು, ಹಲವರು ಬೇಸರವನ್ನೂ ಕೂಡ ವ್ಯಕ್ತಪಡಿಸಿದ್ದಾರೆ. ಆದರೆ ಇದರಲ್ಲಿ ದತ್ತ ತಾತನ ಪಾತ್ರ ಎಲ್ಲರಿಗೂ ಅಚ್ಚುಮೆಚ್ಚು ಎಂದರೆ ಸುಳ್ಳಾಗುವುದಿಲ್ಲ. ಇನ್ನೂ ಧಾರಾವಾಹಿ ಶುರುವಿನಿಂದಲೂ ದತ್ತ ತಾತನ ಪಾತ್ರವನ್ನು ನೋಡುವ ಸಲುವಾಗಿಯೇ ಹಲವರು ಮುಂದಾಗುತ್ತಾರೆ. ಧಾರಾವಾಹಿ ಎಂದರೆ ಮೂಗು ಮುರಿಯುತ್ತಿದ್ದವರೂ ಕೂಡ ತಾತನ ಪಾತ್ರಕ್ಕೆ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ.

ತಮಾಷೆ ಮಾಡುತ್ತಲೇ ಪಾಠ ಹೇಳುವ ತಾತ

ತುಳಸಿ ಬಳಿ ಬಹಳ ಸ್ಟ್ರಿಕ್ಟ್ ಆಗಿ ದತ್ತ ತಾತ ನಡೆದುಕೊಂಡಿದ್ದರೂ ಕೂಡ. ಎಂದಿಗೂ ಸೊಸೆಯ ಏಳಿಗೆಯನ್ನು ತಿರಸ್ಕರಿಸಿದವರಲ್ಲ. ಸೊಸೆ ಚೆನ್ನಾಗಿರಬೇಕು. ಅವಳ ಬದುಕು ಸಖಮಯವಾಗಿರಲಿ ಎಂದು ಬಯಸಿದವರು. ಹೀಗಾಗಿ ಮಾಧವ್ ಎಂಬಾತನ ಪರಿಚಯವನ್ನು ಪಾಸಿಟಿವ್ ಆಗಿ ತೆಗೆದುಕೊಂಡ ದತ್ತ ತಾತ, ಸೊಸೆಯನ್ನು ಮಗಳನ್ನಾಗಿ ಸ್ವೀಕರಿಸಿ, ಮಾಧವ್ ಗೆ ಧಾರೆ ಎರೆದು ಕೊಟ್ಟರು. ಮಗಳಂತೆ ತನ್ನ ಸೇವೆ ಮಾಡಿದ ಸೊಸೆಯ ಬಾಳು ಹಸನಾಗಿರಲಿ ಎಂದು ಇಡೀ ಸಮಾಜವನ್ನೇ ಎದುರಿಸಿದವರು ದತ್ತ ತಾತ. ದತ್ತ ತಾತ ಸ್ಟ್ರಿಕ್ಟ್ ಆಗಿ ಕಂಡರೂ ತುಂಬಾ ತಮಾಷೆ ಹಾಗೂ ಮೃದು ಮನಸಿನವರು. ದತ್ತ ತಾತನ ಒಂದೊಂದು ಡೈಲಾಗ್ ಗಳನ್ನು ಕೇಳಲು ಚೆನ್ನಾಗಿರುತ್ತದೆ. ಪ್ರೇಕ್ಷಕರಂತೂ ದತ್ತ ತಾತ ಇರುವ ಸೀನ್ ಗಳನ್ನು ಎಂಜಾಯ್ ಮಾಡುತ್ತಿರುತ್ತಾರೆ.

Written update on srirasthu shubhamasthu serial actor venkat rao

ಎಲ್ಲರಿಗೂ ಹೆಸರಿಟ್ಟು ಹತ್ತಿರವೆನಿಸುವ ನಟನೆ

ಧಾರಾವಾಹಿಯಲ್ಲಿ ಪಾತ್ರಕ್ಕೆ ಕೊಟ್ಟ ಹೆಸರುಗಳು ಒಂದಾದರೆ, ದತ್ತ ತಾತ ಕೊಟ್ಟಿರುವ ಹೆಸರುಗಳು ಬೇರೆಯೇ ಇವೆ. ಅಭಿಗೆ ಉತ್ತರಕುಮಾರ, ಅವಿಗೆ ಮುಂಗೋಪಿ, ಪೂರ್ಣಿಯನ್ನು ಗಿರ್ ಗಿಟ್ಲೆ, ಮೊಮ್ಮಗನನ್ನು ದಂಡಪಿಂಡ, ಸೊಸೆಗೆ ಸೋಗಲಾಡಿ ಎಂದು ಹೆಸರಿಟ್ಟಿದ್ದಾರೆ. ಇನ್ನು ಮೊಮ್ಮಗಳು ಓಡಿ ಹೋಗಿ ಮದುವೆಯಾದಳು ಎಂಬ ಕಾರಣಕ್ಕೆ ಅವಳನ್ನು ಓಡಿ ಹೋದವಳು ಎಂದೇ ಮಾತನಾಡಿಸುವ ತಾತನ ನಡವಳಿಕೆ ನಿಜ ಜೀವನದಲ್ಲಿ ಇರಿಟೇಟ್ ಆದರೂ, ರೀಲ್ ಧಾರಾವಾಹಿಯಲ್ಲಿ ಎಲ್ಲರಿಗೂ ಇಷ್ಟವಾಗಿದೆ. ತಾತನ ವಯಸ್ಸನ್ನು ಕೇಳಿದ ಜನರು ಪಾತ್ರವನ್ನು ಆದಷ್ಟು ಬೇಗ ಅಂತ್ಯಗೊಳಿಸುತ್ತಾರೆ ಎಂದು ಭಾವಿಸಿದ್ದರು. ಆದರೆ ದತ್ತ ತಾತ ಗಟ್ಟಿಯಾಗಿದ್ದು, ಇನ್ನೂ ನಟಿಸುತ್ತಿರುವುದಕ್ಕೆ ವೀಕ್ಷಕರು ಖುಷಿಪಟ್ಟಿದ್ದಾರೆ.

ಬೆಂಗಳೂರಿನಲ್ಲಿ ನೆಲೆಸಿರುವ ವೆಂಕಟ್ ರಾವ್

ಇನ್ನು ದತ್ತ ತಾತನ ನಿಜವಾದ ಜೀವನದ ಬಗ್ಗೆ ಹೇಳಬೇಕು ಎಂದರೆ, ಅವರ ಹೆಸರು ಎಂಪಿ ವೆಂಕಟ್ ರಾವ್. ನಟ ವೆಂಕಟ್ ರಾವ್ ಅವರು, ಬರೋಬ್ಬರಿ ಆರೇಳು ದಶಕಗಳಿಂದ ಅಭಿನಯಿಸುತ್ತಿದ್ದಾರೆ. ಇವರು ತಮ್ಮ ನಟನೆಯ ಆರಂಭಲ್ಲಿ ಬಹಳ ಕಷ್ಟ ಪಟ್ಟಿದ್ದು, ಪುಟ್ಟಣ್ಣಯ್ಯ ಕಣಗಾಲ್ ಅವರ ಬಳಿಯೂ ಕೆಲಸ ಮಾಡಿದ್ದಾರೆ. ವೆಂಕಟ್ ರಾವ್ ಅವರು ಈಗಲೂ ನಟಿಸುವ ಹುಮ್ಮಸ್ಸನ್ನು ತೋರಿಸಿದ್ದಾರೆ ಎಂದರೆಖುಷಿ ಪಡುವ ಸಂಗತಿಯೇ. ಬೆಂಗಳುರಿನಲ್ಲಿ ಸ್ವಂತ ಮನೆ ಹೊಂದಿರುವ ವೆಂಕಟ್ ರಾವ್ ಅವರ ಮನೆಯಲ್ಲಿ ಪತಿ ಮತ್ತು ಪತ್ನಿ ಇಬ್ಬರೇ ಇದ್ದಾರೆ. ಮಗ ಮತ್ತು ಮಗಳು ಫಾರಿನ್ ನಲ್ಲಿ ಸೆಟಲ್ ಆಗಿದ್ದು, ಮೊಮ್ಮಕ್ಕಳು ಕೂಡ ಇದ್ದಾರಂತೆ.

Written update on srirasthu shubhamasthu serial actor venkat rao

ನಟನೆ ಮೆಚ್ಚಿ ಗೌರವಿಸಿದ ಏರ್ ಇಂಡಿಯಾ ಸಿಬ್ಬಂದಿ

ಇನ್ನು ನಟ ವೆಂಕಟ್ ರಾವ್ ಅವರು ಇತ್ತೀಚೆಗೆ ಶೂಟಿಂಗ್ ನಿಂದ ಬ್ರೇಕ್ ಪಡೆದು ಯುಎಸ್ ಗೆ ಪ್ರಯಾಣ ಬೆಳೆಸಿದ್ದಾರೆ. ಈ ವೇಳೆ ಏರ್ ಇಂಡಿಯಾ ಸಿಬ್ಬಂದಿ ಶ್ರೀರಸ್ತು ಶುಭಮಸ್ತು ಧಾರಾವಾಹಿಯ ದತ್ತ ತಾತ ಎಂದು ಗುರುತಿಸಿದ್ದು, ಅವರ ನಟನೆಯನ್ನು ಮೆಚ್ಚಿ ಸಂಭ್ರಮಿಸಿದ್ದಾರೆ. ದತ್ತ ತಾತನಿಗೆ ಸಿಹಿ ತಿನ್ನಿಸಿ, ಗೌರವಿಸಿದ್ದಾರೆ. ಈ ವೀಡಿಯೋವನ್ನು ನಟಿ ಸುಧಾರಾಣಿ, ಲಾವಣ್ಯ ಹಂಚಿಕೊಂಡಿದ್ದು, ನಿಜಕ್ಕೂ ಒಬ್ಬ ನಟನನ್ನು ನೋಡಿದ ಕೂಡಲೇ ಗುರುತಿಸಿ ಗೌರವಿಸುತ್ತಾರೆ ಎಂದರೆ ನಟನಿಗೆ ಇದಕ್ಕಿಂತ ಇನ್ನೇನು ಮುಖ್ಯ ಅಲ್ಲವೇ. ಇನ್ನು ದತ್ತ ತಾತ ಎಲ್ಲರ ಮನದಲ್ಲಿ ಮನೆ ಮಾಡಿರುವುದು ಇದರಿಂದ ಗೊತ್ತಾಗುತ್ತದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X