ಇವರೇ ನೋಡಿ ಧಾರಾವಾಹಿಗಳಿಂದ ಅರ್ಧಕ್ಕೆ ಹೊರನಡೆದ ನಟಿಯರು !
ಕನ್ನಡದಲ್ಲಿ ಧಾರಾವಾಹಿಗಳಿಗೇನು ಕಡಿಮೆಯಿಲ್ಲ. ಧಾರಾವಾಹಿಗಳು ಒಂದು ಮುಗಿಯುವ ಮುನ್ನವೇ ಮತ್ತೊಂದು ಧಾರಾವಾಹಿ ಪ್ರಾರಂಭವಾಗಲು ಸಾಲಿನಲ್ಲಿ ನಿಂತಿರುತ್ತದೆ.
ಇನ್ನು ಧಾರಾವಾಹಿಗಳಲ್ಲಿ ನಟಿಸುವ ಪಾತ್ರಗಳು ಒಂದೊಕ್ಕೊಂದು ಮ್ಯಾಚ್ ಆಗುವಂತೆಯೇ ಇರುತ್ತದೆ. ಮೊದಲು ಧಾರಾವಾಹಿ ಶುರುವಾದಾಗ ಇದ್ದ ಪಾತ್ರಧಾರಿಗಳು ಬದಲಾಗುವುದು ಹೊಸದೇನೂ ಅಲ್ಲ.
ನಾಯಕ-ನಾಯಕಿ ಹಾಗೂ ಪ್ರಮುಖ ಪಾತ್ರಗಳನ್ನು ಹೊರತು ಪಡಿಸಿ, ಕೆಲ ಪೋಷಕ ಪಾತ್ರಗಳು ಆಗಾಗ ಬದಲಾಗುತ್ತಿರುತ್ತವೆ. ಸಣ್ಣ-ಪುಟ್ಟ ಪಾತ್ರಧಾರಿಗಳು ಬದಲಾದರೆ ಏನೂ ಅನಿಸದು. ಆದರೆ ಮುಖ್ಯ ಪಾತ್ರಧಾರಿಗಳು ಚೇಂಜ್ ಆದರೆ ಧಾರಾವಾಹಿಗೆ ಆ ಪಾತ್ರಧಾರಿ ಅಡ್ಜಸ್ಟ್ ಆಗಲೂ ಸಮಯ ಬೇಕು ಹಾಗೆಯೇ ಅವರನ್ನು ಒಪ್ಪಿಕೊಳ್ಳಲು ಅಭಿಮಾನಿಗಳಿಗೆ ಸಮಯ ಹಿಡಿಯುತ್ತದೆ.

ಇನ್ನು ಕನ್ನಡದಲ್ಲಿ ಸದ್ಯ ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ ಸೂಪರ್ ಹಿಟ್ ಆಗಿರುವ ಸೀರಿಯಲ್ ಪಾತ್ರಧಾರಿಗಳು ಕೂಡ ಸಾಕಷ್ಟು ಸಂಖ್ಯೆಯಲ್ಲಿ ಬದಲಾಗಿವೆ. ಪುಟ್ಟಕ್ಕನ ಮಕ್ಕಳು, ಲಕ್ಷ್ಮೀ ಬಾರಮ್ಮ, ಅಮೃತಧಾರೆ, ಭಾಗ್ಯಲಕ್ಷ್ಮೀ, ಅಣ್ಣಯ್ಯ, ಶ್ರೀರಸ್ತು ಶುಭಮಸ್ತು ಧಾರಾವಾಹಿಗಳು ಸದ್ಯ ಅದ್ಭುತವಾಗಿ ಮೂಡಿ ಬರುತ್ತವೆ. ಈ ಧಾರಾವಾಹಿಗಳಲ್ಲಿ ಕೆಲ ಪಾತ್ರಧಾರಿಗಳು ಈ ಮೊದಲೇ ಬದಲಾಗಿದ್ದಾರೆ.
ಅಮೃಧಾರೆಯಿಂದ ಹೊರನಡೆದ ಕಲಾವಿದರು
ಅಮೃತಧಾರೆ ಧಾರಾವಾಹಿಯಿಂದ ಇತ್ತೀಚೆಗಷ್ಟೇ ನಟಿ ಸಾರಾ ಅಣ್ಣಯ್ಯ ನಿರ್ವಹಿಸುತ್ತಿದ್ದ ಮಹಿಮಾ ಪಾತ್ರದಿಂದ ಹೊರ ನಡೆದಿದ್ದಾರೆ. ಈ ಪಾತ್ರಕ್ಕೆ ಸದ್ಯ ನಟಿ ಇಶಿತಾ ಗೌಡ ಅವರು ಬಂದಿದ್ದಾರೆ. ಇನ್ನು ಜೀವನ್ ಪಾತ್ರದಿಂದ ನಟ ಶಶಿ ಹೆಗಡೆ ಅವರು ಅರ್ಧಕ್ಕೆ ಬಿಟ್ಟಿದ್ದು, ಈ ಜಾಗಕ್ಕೆ ಬೇರೆ ನಟ ಆಗಮಿಸಿದ್ದಾರೆ. ಇನ್ನು ನಟಿ ರಾಧಾ ಭಾಗವತಿ ಅವರು ಇದೇ ಧಾರಾವಾಹಿಯಲ್ಲಿ ಮಲ್ಲಿ ಪಾತ್ರದ ಮೂಲಕ ಫೇಮಸ್ ಆಗಿದ್ದರು. ಇವರು ಕೂಡ ಅರ್ಧಕ್ಕೆ ಧಾರಾವಾಹಿಯನ್ನು ಬಿಟ್ಟಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೇ ರಾಜೇಂದ್ರ ಭೂಪತಿ ಪಾತ್ರಧಾರಿಯಾಗಿರುವ ಹಿರಿಯ ನಟ ಹನುಮಂತೇ ಗೌಡ್ರು ಬದಲಾಗಬಹುದು ಎಂದು ರೂಮರ್ಸ್ ಕೇಳಿ ಬರುತ್ತಿದೆ.
ಅರ್ಧಕ್ಕೆ ಧಾರಾವಾಹಿಯಿಂದ ಹೊರ ನಡೆದ ನಟಿಯರು
ಭಾಗ್ಯಲಕ್ಷ್ಮೀ ಧಾರಾವಾಹಿಯಿಂದ ನಟಿ ಗೌತಮಿ ಗೌಡ ಅವರು ಶುರುವಿನಲ್ಲೇ ಹೊರ ಬಂದಿದ್ದರು. ಗರ್ಭಿಣಿ ಆದ ಕಾರಣ ನಟಿ ಗೌತಮಿ ಗೌಡ ಅವರು ಶ್ರೇಷ್ಠ ಪಾತ್ರಕ್ಕೆ ಗುಡ್ ಬೈ ಹೇಳಿದ್ದರು. ಸದ್ಯ ಈ ಪಾತ್ರವನ್ನು ನಟಿ ಕಾವ್ಯ ಅವರು ಅದ್ಭುತವಾಗಿ ನಿರ್ವಹಿಸುತ್ತಿದ್ದಾರೆ. ಭಾಗ್ಯಲಕ್ಷ್ಮೀ ಧಾರಾವಾಹಿಯ ಬಳಿಕ ಪ್ರಸಾರವಾಗುವ ಲಕ್ಷ್ಮೀಬಾರಮ್ಮ ಧಾರಾವಾಹಿಯೂ ಟಾಪ್ ಲಿಸ್ಟ್ ನಲ್ಲಿದೆ. ಈ ಧಾರಾವಾಹಿಯಲ್ಲೂ ಮನೆ ಕೆಲಸ ಮಾಡುವ ಗಂಗಕ್ಕ ಎಂಬ ಪಾತ್ರ ಕಳೆ ಕೆಲ ತಿಂಗಳ ಹಿಂದೆ ಬದಲಾಗಿದೆ. ಇನ್ನು ಲಕ್ಷ್ಮೀ ನಿವಾಸ ಧಾರಾವಾಹಿಯಿಂದ ಆರಂಭದಲ್ಲೇ ನಟಿ ದಿವ್ಯಾಶ್ರೀ ಅವರು ಹೊರ ನಡೆದಿದ್ದರು. ಈ ಪಾತ್ರಕ್ಕೆ ನಟಿ ರೂಪಿಕಾ ಅವರು ಜೀವ ತುಂಬಿದ್ದಾರೆ. ಇನ್ನು ಭಾವನಾಳ ಸಾಕುಮಗಳಾಗಿ ಖುಷಿಯ ಪಾತ್ರದಲ್ಲಿ ಬಾಲನಟಿ ನಿಶಿತಾ ನಟಿಸುತ್ತಿದ್ದರು. ಕಳೆದ ಕೆಲ ತಿಂಗಳಿನಿಂದ ಈ ಪಾತ್ರವೂ ಬದಲಾಗಿದೆ. ಖುಷಿ ಯಾವ ಕಾರಣಕ್ಕೆ ಧಾರಾವಾಹಿಯಿಂದ ಹೊರ ಬಂದರು ಎಂಬುದು ಯಾರಿಗೂ ಗೊತ್ತಿಲ್ಲ. ಇದೇ ಧಾರಾವಾಹಿಯಲ್ಲಿ ಮತ್ತೊಂದು ಪಾತ್ರ ಬದಲಾಗಿದೆ ಎನ್ನಲಾಗಿದೆ.
ಪ್ರಮುಖ ಪಾತ್ರಧಾರಿಗಳೇ ಬದಲು
ಇನ್ನು ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಶುರುವಿನಲ್ಲಿ ಸಮರ್ಥ್ ಪಾತ್ರದಲ್ಲಿ ನಟ ದೀಪಕ್ ಗೌಡ ಅವರು ನಟಿಸಿದ್ದರು. ನಂತರ ಈ ಪಾತ್ರಕ್ಕೆ ದರ್ಶಿತ್ ಗೌಡ ಅವರು ನಿರ್ವಹಿಸುತ್ತಿದ್ದಾರೆ. ದರ್ಶಿತ್ ಅವರು ಸಮರ್ಥ್ ಪಾತ್ರವನ್ನು ಅದ್ಭುತವಾಗಿ ನಿರ್ವಹಿಸುತ್ತಿದ್ದು, ವೀಕ್ಷಕರು ಈ ಪಾತ್ರವನ್ನು ಮೆಚ್ಚಿಕೊಂಡಿದ್ದಾರೆ. ಇನ್ನು ಇದೇ ಧಾರಾವಾಹಿಯಲ್ಲಿ ಖಳನಾಯಕಿ ಪಾತ್ರದಲ್ಲಿ ನಟಿ ನೇತ್ರಾ ಜಾಧವ್ ಅವರು ನಟಿಸುತ್ತಿದ್ದರು. ಶಾರ್ವರಿಯ ಈ ಪಾತ್ರದಿಂದ ಹೊರ ಬಂದು ಪರಭಾಷೆಯಲ್ಲಿ ನಾಯಕಿಯಾಗಿ ಬ್ಯುಸಿಯಾಗಿದ್ದಾರೆ. ಸದ್ಯ ಶಾರ್ವರಿ ಪಾತ್ರವನ್ನು ನಟಿ ಸ್ವಪ್ನಾ ದೀಕ್ಷಿತ್ ಅವರು ಮುಂದುವರೆಸಿದ್ದಾರೆ.


Click it and Unblock the Notifications











