ಹುಟ್ಟುಹಬ್ಬದ ಸಂಭ್ರಮದಲ್ಲಿ ಒಂದೇ ವಾಹಿನಿಯ ಇಬ್ಬರು ಕಿರುತೆರೆ ನಟಿಯರು..!
ಕನ್ನಡ ಕಿರುತೆರೆಯಲ್ಲಿ ಇಂದು ಇಬ್ಬರು ನಟಿಯರ ಹುಟ್ಟುಹಬ್ಬದ ಸಂಭ್ರಮ. ಮೊನ್ನೆಯಷ್ಟೇ ನಟಿ ಅನುಪಮಾ ಗೌಡ ಅವರು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಇಂದು ಇಬ್ಬರು ನಟಿಯರ ಹುಟ್ಟುಹಬ್ಬವಿದ್ದು, ಕಲಾವಿದರು ಇಬ್ಬರಿಗೂ ಶುಭ ಕೋರಿದ್ದಾರೆ. ನಟಿ ಮೇಘ ಶೆಣೈ ಅವರು ಅಮೃತಧಾರೆ ಧಾರಾವಾಹಿಯಲ್ಲಿ ಸುಧಾ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಧಾರಾವಾಹಿಗೆ ಮೇಘ ಶೆಣೈ ಅವರು ಎಂಟ್ರಿಕೊಟ್ಟಾಗ ಅವರ ಪಾತ್ರ ಪಾಸಿಟಿವ್ ಕಮ್ ನೆಗೆಟಿವ್ ರೋಲ್ ಆಗಿತ್ತು. ಆದರೆ, ಈಗ ಕಂಪ್ಲೀಟ್ ಆಗಿ ಪಾಸಿಟಿವ್ ರೋಲ್ ಆಗಿದೆ.
ಸುಧಾ ಅಲಿಯಾಸ್ ಮೇಘ ಶೆಣೈ ಬರ್ತ್ ಡೇ
ನಟಿ ಮೇಘ ಶೆಣೈ ಅವರಿಗೆ ಅಮೃತಧಾರೆ ಧಾರಾವಾಹಿ ಮೊದಲ ಧಾರಾವಾಹಿ ಏನಲ್ಲ ಈಗಾಗಲೇ ಸಾಕಷ್ಟು ಧಾರಾವಾಹಿಗಳಿಗೆ ಬಣ್ಣ ಹಚ್ಚಿದ್ದಾರೆ. ಕೊಂಕಣಿ ಹುಡುಗಿಯಾಗಿರುವ ಮೇಘ ಶೆಣೈ ಅವರು ಜನುಮದ ಜೋಡಿ, ಮಹಾದೇವಿ, ಜೀವ ಹೂವಾಗಿದೆ, ರಕ್ಷಾಬಂಧನ,ಬ್ರಾಹ್ಮಿನ್ಸ್ ಕೆಫೆ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಮೂಲತಃ ಮಂಗಳೂರಿನವರಾಗಿದ್ದು, ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅಮೃತಧಾರೆ ಧಾರಾವಾಹಿಯಲ್ಲಿ ಸುಧಾ ಪಾತ್ರವನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಇನ್ನು ಇಂದು ನಟಿ ಮೇಘ ಶೆಣೈಯ ಅವರಿಗೆ ಇಂದು ಹಟ್ಟುಹಬ್ಬದ ಸಂಭ್ರಮ.

ಹುಟ್ದಬ್ಬದ ಸಂಭ್ರಮದಲ್ಲಿ ನಟಿ ಮೇಘ
ಮೇಘ ಶೆಣೈ ಅವರು ಹುಟ್ಟುಹಬ್ಬಕ್ಕೆ ಅವರ ಕುಟುಂಬಸ್ಥರು, ಸ್ನೇಹಿತರು ಮಾತ್ರವಲ್ಲದೇ, ಕಿರುತೆರೆಯ ಕಲಾವಿದರು ಎಲ್ಲರೂ ವಿಷ್ ಮಾಡಿದ್ದಾರೆ. ಸಡಗರ ಸಂಭ್ರಮದಿಂದ ನಟಿ ಮೇಘ ಶೆಣಯ ಅವರು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಮೇಘ ಅವರಿಗೆ ವಿಶ್ ಮಾಡಿದ ಪ್ರತಿಯೊಬ್ಬರ ಫೋಸ್ಟ್ ಅನ್ನು ತನ್ನ ಇನ್ ಸ್ಟಾಗ್ರಾಂ ಪೇಜ್ ನ ಸ್ಟೋರೀಸ್ ನಲ್ಲಿ ಹಂಚಿಕೊಂಡಿದ್ದಾರೆ.
ನಟಿ ಶಿಲ್ಪಾರಿಗೆ ಜನುಮ ದಿನದ ಸಂಭ್ರಮ
ಇನ್ನು ಇಂದು ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ನಟಿಯೊಬ್ಬರ ಹುಟ್ಟುಹಬ್ಬವೂ ಹೌದು. ಸದ್ಯ ಪುಟ್ಟಕ್ಕನ ಮಕ್ಕಳು ಸೀರಿಯಲ್ನಲ್ಲಿ ಸುಮಾ ಪಾತ್ರದಲ್ಲಿ ನಟಿಸುತ್ತಿರುವ ನಟಿ ಶಿಲ್ಪಾ ಸವೆಸೆರೆ ಅವರಿಗೆ ಬರ್ತ್ ಡೇ ದಿನ. ನಟಿ ಶಿಲ್ಪಾ ಅವರು ಮಾಡೆಲ್ ಹಾಗೂ ಫ್ಯಾಷನ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದಾರೆ. ಇದರೊಂದಿಗೆ ಓದು ಮತ್ತು ನಟನೆಯನ್ನೂ ಬ್ಯಾಲೆನ್ಸ್ ಮಾಡುತ್ತಿದ್ದಾರೆ. ನಿಜ ಜೀವನದಲ್ಲೂ ಇಬ್ಬರು ಸಹೋದರಿಯರನ್ನು ಹೊಂದಿರುವ ಶಿಲ್ಪಾ ಅವರಿಗೆ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲೂ ಇಬ್ಬರು ಅಕ್ಕಂದಿರಿದ್ದಾರೆ.ಇನ್ನು ನಟಿ ಶಿಲ್ಪಾ ಅವರ ತಂದೆ ಉಮಾಶಂಕರ್, ಇವರ ತಾಯಿ ಹೆಸರು ಅನಿತಾ. ಶಿಲ್ಪಾಗೆ ಆಶಾ ಮತ್ತು ದೇವಿಕಾ ಎಂಬ ಸೋದರಿಯರಿದ್ದಾರೆ. ಜೊತೆಗೆ ಸಹೋದರನೂ ಇದ್ದು, ಕುಟುಂಬದ ಜೊತೆಗಿನ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚಾಗಿ ಶೇರ್ ಮಾಡುತ್ತಿರುತ್ತಾರೆ.
ಸುಮಾ, ಸುಧಾ ಇಬ್ಬರಿಗೂ ಹುಟ್ಟುಹಬ್ಬ
ಇನ್ನು ನಟಿ ಶಿಲ್ಪಾ ಸವೆಸೆರೆ ಅವರು ಮೊದಲು ಗೀತಾ ಧಾರಾವಾಹಿ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿಕೊಟ್ಟರು. ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಮೊದಲು ಪುಟ್ಟ ಹುಡುಗಿಯಂತೆ ಕಾಣುತ್ತಿದ್ದರು. ಈಗ ಮದುವೆ ವಯಸ್ಸಿನ ಬೆಡಗಿಯಾಗಿದ್ದು, ಸುಮಾ ಪಾತ್ರವನ್ನು ವೀಕ್ಷಕರು ಮೆಚ್ಚಿಕೊಂಡಿದ್ದಾರೆ. ಇಂದು ಶಿಲ್ಪಾ ಅವರದ್ದೂ ಹುಟ್ಟುಹಬ್ಬ. ನಟಿ ಶಿಲ್ಪಾ ಸವೆಸೆರೆ ಅವರಿಗೆ ತಮ್ಮ ಧಾರಾವಾಹಿಯ ತಂಡ ಹುಟ್ಟುಹಬ್ಬಕ್ಕೆ ಸಾಲು ಸಾಲಾಗಿ ವಿಶ್ ಮಾಡಿದ್ದಾರೆ. ನಟಿ ಶಿಲ್ಪಾ ಅವರಿಗೆ ಫೀಲ್ಮೀಬೀಟ್ ವತಿಯಿಂದ ಹ್ಯಾಪಿ ಹುಟ್ದಬ್ಬ. ಇನ್ನು ನಟಿ ಮೇಘ ಶೆಣಯ ಮತ್ತು ನಟಿ ಶಿಲ್ಪಾ ಸವೆಸೆರೆ ಅವರು ಒಂದೇ ದಿನ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು. ಇಬ್ಬರೂ ಕೂಡ ಒಂದೇ ವಾಹಿನಿ ಅಂದರೆ ಜೀ ವಾಹಿನಿಯ ಧಾರಾವಾಹಿಗಳಲ್ಲಿ ನಟಿಸುತ್ತಿರುವುದು ಮತ್ತೊಂದು ವಿಶೇಷ.


Click it and Unblock the Notifications











