ದೊಡ್ಡದಾಗಿ ಸಿಗ್ನಲ್ ನೀಡಿದ ಜೀ ಕನ್ನಡ ವಾಹಿನಿ, ಬಿಗ್ ಬಾಸ್‌ಗೆ ಸವಾಲಾ ಎಂದ ಕಿರುತೆರೆ ಪ್ರೇಮಿಗಳು..!
ಜೀ ಕನ್ನಡ ವಾಹಿನಿ ಈಗಾಗಳೇ ತನ್ನ ರಿಯಾಲಿಟಿ ಶೋಗಳ ಮೂಲಕವೇ ವೀಕ್ಷಕರನ್ನು ಅತೀ ಹೆಚ್ಚಾಗಿ ರಂಜಿಸಿದೆ ಎಂದರೆ ತಪ್ಪಾಗಲಾರದು. ಕೆಲ ತಿಂಗಳ ಹಿಂದಷ್ಟೇ ಮಹಾನಟಿ ಎಂಬ ಹೊಸ ರಿಯಾಲಿಟಿ ಶೋ ಮೂಲಕ ತಮ್ಮದೇ ಪ್ರೊಡಕ್ಷನ್ ನಲ್ಲಿ ಹೊಸ ಸಿನಿಮಾ ತಯಾರಿಸಲು ಸಜ್ಜಾಗಿದೆ.ಮಹಾನಟಿ ರಿಯಾಲಿಟಿ ಶೋ ಮೂಲಕ ಸಾಕಷ್ಟು ಪ್ರತಿಭೆಗಳನ್ನು ಪರಿಚಯಿಸಿರುವ ಜೀ ಕನ್ನಡ ವಾಹಿನಿ, ಇದೀಗ ಮತ್ತೊಂದು ಹೊಸ ಮೈಲಿಗಲ್ಲಿಗೆ ಸಾಕ್ಷಿಯಾಗುವ ಮುನ್ಸೂಚನೆ ನೀಡಿದೆ.
ಹೊಸ ರಿಯಾಲಿಟಿ ಶೋ ಬಗ್ಗೆ ಮಾಹಿತಿ
ಈಗಾಗಲೇ ಭಾರತದ ಪ್ರತಿಯೊಬ್ಬರೂ ಬಹಳ ಇಷ್ಟಪಡುವ ರಿಯಾಲಿಟಿ ಶೋ ಎಂದರೆ ಅದು ಬಿಗ್ ಬಾಸ್ ಶೋ. ಮೂರು ದಿನಗಳ ಹಿಂದಷ್ಟೇ ಬಿಗ್ ಬಾಸ್ ಸೀಸನ್ 11 ಪ್ರಾರಂಭವಾಗಿದೆ. ಪ್ರತಿಯೊಬ್ಬ ವೀಕ್ಷಕನೂ ಕೂಡ ಸೀರಿಯಲ್ ಗಳನ್ನು ಪಕ್ಕಕ್ಕಿಟ್ಟು ಈಗ ಬಿಗ್ ಬಾಸ್ ನೋಡಲು ಮುಂದಾಗಿದ್ದಾರೆ. ಹೀಗಿರುವಾಗಲೇ ಜೀ ಕನ್ನಡ ವಾಹಿನಿ ಹೊಸ ಅಪ್ ಡೇಟ್ ಒಂದನ್ನು ನೀಡಿದೆ. ಅದೇನೆಂದರೆ ಹೊಸ ಪ್ರೊಮೋ ಒಂದನ್ನು ಬಿಟ್ಟಿದ್ದು, ಬಿಗ್ಗೆಸ್ಟ್ ಎಂಟರ್ ಟೈನ್ಮೆಂಟ್ ರೀಯಾಲಿಟಿ ಶೋ ಬರ್ತಿದೆ ಎಂದು ಹೇಳಿದೆ. ಆದರೆ, ಯಾವಾಗ ಎಂಬುದನ್ನು ಹೇಳಿಲ್ಲ. ಇದರೊಂದಿಗೆ ಹೊಸ ರಿಯಾಲಿಟಿ ಶೋ ಬಗ್ಗೆ ಯಾವ ವಿಚಾರವನ್ನೂ ಹಂಚಿಕೊಂಡಿಲ್ಲ. ಪ್ರೊಮೋವನ್ನು ನೋಡಿ ಸಾಕಷ್ಟು ಮಂದಿ ಕಮೆಂಟ್ ಗಳನ್ನು ಮಾಡಿದ್ದಾರೆ.

ಅತಿ ದೊಡ್ಡ ಮನರಂಜನೆಯುಳ್ಳ ಶೋ
ಜೀ ಕನ್ನಡ ವಾಹಿನಿ ಈಗಾಗಲೇ ಕಾಮಿಡಿ ಕಿಲಾಡಿಗಳು, ಡ್ರಾಮಾ ಜೂನಿಯರ್ಸ್, ಸರಿಗಮಪ, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್, ಸೂಪರ್ ಕ್ವೀನ್ಸ್, ಮಹಾನಟಿ ಸೇರಿದಂತೆ ಹಲವು ರಿಯಾಲಿಟಿ ಶೋಗಳ ಮೂಲಕ ಸಾಕಷ್ಟು ಪ್ರತಿಭೆಗಳಿಗೆ ವೇದಿಕೆಯಾಗಿದೆ. ಕಾಮಿಡಿ ಕಿಲಾಡಿಗಳು ಶೋ ವೀಕ್ಷಕರ ಅಚ್ಚುಮೆಚ್ಚಿನದ್ದು. ಈ ಶೋ ಅನ್ನು ಮತ್ತೊಂದು ಹೆಜ್ಜೆ ಮೇಲೆ ತೆಗೆದುಕೊಂಡು ಹೋಗುವ ಪ್ರಯತ್ನ ಮಾಡಿದ್ದ ವಾಹಿನಿ ಕಾಮಿಡಿ ಕಿಲಾಡಿಗಳು ಪ್ರೀಮಿಯಂ ಶೋ ಎಂದು ಪ್ರೊಮೋ ನೀಡಿತ್ತು. ಇದರಲ್ಲಿ ನಮ್ಮ ಸ್ಯಾಂಡಲ್ ವುಡ್ ನ ಟಾಪ್ ನಾಯಕ ನಟರು ಈ ರಿಯಾಲಿಟಿ ಶೋ ನಲ್ಲಿ ಜಡ್ಜ್ ಗಳಾಗಿ ಬರುತ್ತಿದ್ದಾರೆ ಎಂದಿದ್ದರು.
ನಿರಾಸೆಗೊಂಡಿದ್ದ ವೀಕ್ಷಕರು
ಅದೂ ಕೂಡ ರಾಕಿಂಗ್ ಸ್ಟಾರ್ ಯಶ್, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೂವರು ಇರಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ವಾಹಿನಿ ಹೇಳಿದಂತೆ ನಡೆಯಲಿಲ್ಲ. ಕಾಮಿಡಿ ಕಿಲಾಡಿಗಳು ಪ್ರಿಮಿಯಂ ಶೋನಲ್ಲಿ ನಿರೂಪಕರಾಗಿರುವ ಅನುಶ್ರೀ, ಶ್ವೇತಾ ಚೆಂಗಪ್ಪ, ಅಕುಲ್ ಬಾಲಾಜಿ, ಮಾಸ್ಟರ್ ಆನಂದ್ ಜಡ್ಜ್ ಹಾಗೂ ಟೀಂ ಹೆಡ್ ಆಗಿ ಕುಳಿತು ಈ ರಿಯಾಲಿಟಿ ಶೋ ಅನ್ನು ನಡೆಸಿಕೊಟ್ಟರು. ಇದರಿಂದಲೇ ವೀಕ್ಷಕರು ನಿರಾಸೆಗೊಂಡಿದ್ದರು.
ಕಾಮೆಂಟ್ ಮಾಡಿರುವ ವೀಕ್ಷಕರು
ಇದೀಗ ಪುನಃ ಅತೀ ದೊಡ್ಡ ರಿಯಾಲಿಟಿ ಶೋ ಎಂದು ಹೇಳಿರುವ ವಾಹಿನಿಗೆ ನೆಟ್ಟಿಗರು ಕಮೆಂಟ್ ಮೂಲಕ ಪ್ರಶ್ನೆ ಮಾಡಿದ್ದಾರೆ. ಈ ಹಿಂದೆ ಹೇಳಿದ್ದ ಆ ಮೂವರು ದಿಗ್ಗಜರ ಶೋ ಏನಾಯ್ತು. ಈಗಲೂ ಏನೋ ಹೇಳುತ್ತಿದ್ದೀರಾ ಎಂದು ಕೆಲವರು ಹೇಳಿದ್ದಾರೆ. ಬಿಗ್ ಬಾಸ್ ಶೋ ಮುಂದೆ ಮತ್ಯಾವ ಶೋ ಕೂಡ ಅತಿ ಹೆಚ್ಚು ಮನರಂಜನೆಯನ್ನು ನೀಡಲಾರದು. ನಂ.1 ರಿಯಾಲಿಟಿ ಶೋ ಎಂದರೆ ಅದು ಬಿಗ್ ಬಾಸ್ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಯಾವ ಶೋ ಇರಬಹುದು ಎಂದು ಗೆಸ್ ಕೂಡ ಮಾಡಿದ್ದಾರೆ.


Click it and Unblock the Notifications











