Brahmagantu ; ಜೀ ವೀಕ್ಷಕರಿಗಾಗಿ ಅಕ್ಕನಿಗಾಗಿ ಬದುಕನ್ನೇ ತ್ಯಾಗ ಮಾಡುವ ತಂಗಿಯ ಕಥೆ

By ಪ್ರಿಯಾ ದೊರೆ

ಬ್ರಹ್ಮಗಂಟು ಎಂಬ ಹೊಸ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಶುರುವಾಗಲಿದೆ. ಸದ್ಯ ಅದರ ಪ್ರೊಮೋ ರಿಲೀಸ್ ಆಗಿದ್ದು, ಕಥೆ ಅದ್ಭುತವಾಗಿದೆ ಎನ್ನಲಾಗಿದೆ. ಇದೊಂದು ಅಕ್ಕ-ತಂಗಿಯರ ಕಥೆಯಾಗಿದ್ದು ಅಕ್ಕನ ಖುಷಿಗೋಸ್ಕರ ಬದುಕನ್ನೇ ಮುಡಿಪಾಗಿಟ್ಟ ದೀಪಾ ಕಥೆ ಎಂದು ಜೀ ಕನ್ನಡ ವಾಹಿನಿ ಪ್ರೋಮೋದಲ್ಲಿ ತಿಳಿಸಿದೆ. ಪ್ರೋಮೋ ನೋಡಿದವರಿಗೆ ಇದೊಂದು ತುಂಬು ಕುಟುಂಬದ ಕಥೆ ಎಂಬುದು ಅರ್ಥವಾಗಿದೆ. ಅಪ್ಪ-ಅಮ್ಮ, ಎರಡು ಮುದ್ದಿನ ಹೆಣ್ಣು ಮಕ್ಕಳು. ಅಪ್ಪ-ಅಮ್ಮನಿಗೆ ಇಬ್ಬರು ಒಂದೇ ಸಮ.

ಅಕ್ಕನಿಗಾಗಿ ಮಿಡಿಯುವ ತಂಗಿ

ಬ್ರಹ್ಮಗಂಟು ಧಾರಾವಾಹಿಯಲ್ಲಿ ಯಾರೂ ಹೆಚ್ಚಲ್ಲ, ಯಾರೂ ಕಡಿಮೆ ಅಲ್ಲ. ಅಕ್ಕ ನೋಡುವುದಕ್ಕೆ ಚೆನ್ನಾಗಿಯೇ ಇದ್ದಾಳೆ. ತಂಗಿಗೆ ಚಿಕ್ಕ ವಯಸ್ಸಿನಲ್ಲಿಯೇ ಕಣ್ಣಿಗೆ ಕನ್ನಡಕ ಬಂದಿದೆ. ನೋಡಲು ಬಣ್ಣದಲ್ಲೂ ಕಪ್ಪಿದ್ದು, ಅಕ್ಕನೇ ಸುಂದರವತಿ ಎಂದು ಜನ ಮಾತನಾಡಿಕೊಳ್ಳುತ್ತಾರೆ. ಇದು ನೋಡುಗರ ಕಣ್ಣಲ್ಲಿ ಬೇರೆಯ ರೀತಿ ಕಾಣುತ್ತಿದೆ. ಅಕ್ಕ ಬ್ಯೂಟಿಫುಲ್, ತಂಗಿ ಅಷ್ಟಕ್ಕೆ ಅಷ್ಟೇ ಎಂದಿದ್ದಾರೆ. ಹೀಗಾಗಿಯೇ ಅಕ್ಕ ತಾನೇ ಸುಂದರಳು ಎಂಬಂತೆ ಸದಾ ತಂಗಿಗೆ ನೋವು ಕೊಡುತ್ತಾಳೆ. ಆದರೆ ತಂಗಿ, ಅಕ್ಕನಿಗಾಗಿಯೇ ತ್ಯಾಗ ಮಾಡುತ್ತಾಳೆ. ಅಕ್ಕ ಏನೇ ಕೇಳಿದರು ಇಲ್ಲ ಎನ್ನುವ ಮಾತೇ ಇಲ್ಲ. ಇಬ್ಬರಿಗೂ ಬಟ್ಟೆ ತಂದರೂ ಅಕ್ಕ ಆದವಳು ಎರಡು ಬಟ್ಟೆಯನ್ನು ಮೊದಲು ನಾನೇ ಹಾಕಿಕೊಳ್ಳುತ್ತೇನೆ ಎಂದರು ತಂಗಿ ಬೇಸರ ಮಾಡಿಕೊಳ್ಳುವುದಿಲ್ಲ. ಅಕ್ಕ ತಾನೇ ಪರವಾಗಿಲ್ಲ ಬಿಡು ಎಂದೇ ಸಮಾಧಾನ ಮಾಡಿಕೊಳ್ಳುತ್ತಾಳೆ. ಇದು ಅಕ್ಕನಿಗೆ ಅಹಂ ಉಂಟಾಗುವುದಕ್ಕೆ ಕಾರಣವಾಗಿದೆ. ತಂಗಿಯನ್ನು ಬಂಡವಾಳ ಮಾಡಿಕೊಂಡೆ ಅಕ್ಕ ತನ್ನ ಜೀವನ ಸಾಗಿಸುತ್ತಿದ್ದಾಳೆ. ತಂಗಿಗೆ ಅಕ್ಕ ಎಂದರೆ ಎಷ್ಟು ಇಷ್ಟ ಎಂದರೆ ದೇವರ ಬಳಿಯೂ ಅಕ್ಕನ ಬಗ್ಗೆಯೇ ಪ್ರಾರ್ಥನೆ ಮಾಡುತ್ತಾಳೆ

written update on zee kannada serials

ಮನೆ ಮರ್ಯಾದೆ ಉಳಿಸಿದ ಮಗಳ ಬಾಳು ಕತ್ತಲು

ಮತ್ತೊಂದು ಪ್ರೊಮೋ ಕೂಡ ರಿಲೀಸ್ ಆಗಿದ್ದು, ಇದರಲ್ಲಿ ಅಕ್ಕನಿಗೆ ಮದುವೆ ಮಾಡುವ ವೇಳೆಗೆ ಸರಿಯಾಗಿ ಅಕ್ಕ ಓಡಿ ಹೋಗಿದ್ದಾಳೆ. ತಂಗಿ ಮದುವೆಯಾಗುವ ಸಂದರ್ಭ ಬಂದಿದೆ. ಆದರೆ, ಗಂಡನ ಮನೆಯಲ್ಲಿ ತಂಗಿಯ ಅಂದವನ್ನು ಹೀಯಾಳಿಸಿದ್ದು, ಅವಳಿಗೆ ಮನೆಯಲ್ಲಿ ಜಾಗವಿಲ್ಲ ಎಂದುಬಿಟ್ಟಿದ್ದಾರೆ. ಮನೆಯ ಮರ್ಯಾದೆ ಉಳಿಸುವ ಸಲುವಾಗಿ ಅಕ್ಕನಿಗೆ ನೋಡಿದ ಹುಡುಗನ ಜೊತೆಗೆ ಮದುವೆಯಾಗಿ ಬಂದ ತಂಗಿಗೆ ಗಂಡನ ಮನೆಯಲ್ಲಿ ಮರ್ಯಾದೆ ಇಲ್ಲದಂತಾಗಿದೆ. ಮುಂದೆ ಇವರ ಕಥೆ ಹೇಗೆ ಸಾಗುತ್ತದೆ ಎಂಬ ಕುತೂಹಲ ಈಗ ಮನೆ ಮಾಡಿದೆ.

ಧಾರಾವಾಹಿ ಪ್ರಸಾರದ ಸಮಯ

ಪ್ರೋಮೋ ನೋಡಿದರೆ, ಅಕ್ಕ ತಂಗಿಯ ಈ ಕಥೆ ಹೇಗಿರಲಿದೆ ಎಂಬ ಕುತೂಹಲ ಹಲವರಿಗೆ ಮೂಡಿದ್ದು, ಕೆಲವರು ಇದು ತೆಲುಗಿನಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಯ ರಿಮೇಕ್ ಎಂದಿದ್ದಾರೆ. ಸೀತಾ ರಾಮನ್ ಎಂದು ತೆಲುಗಿನಲ್ಲಿ ಪ್ರಸಾರಗೊಂಡಿದ್ದು, ಈಗ ಕನ್ನಡದಲ್ಲಿ ಮೂಡಿ ಬರಲಿದೆ. ಬ್ರಹ್ಮಗಂಟು ಧಾರಾವಾಹಿ ಇದೇ ಜೂನ್ ತಿಂಗಳು ರಾತ್ರಿ 10 ಗಂಟೆಗೆ ಪ್ರಸಾರವಾಗಲಿದೆ. ಸೋಮವಾರದಿಂದ ಶುಕ್ರವಾರದವರೆಗೂ ಧಾರಾವಾಹಿ ಪ್ರಸಾರ ಕಾಣಲಿದೆ.

written update on zee kannada serials

ಬ್ರಹ್ಮಗಂಟು ಧಾರಾವಾಹಿಯ ನಟ-ನಟಿಯರು

ಇನ್ನು ಧಾರಾವಾಹಿಯಲ್ಲಿ ಭುವನ್ ನಾಯಕನ ಪಾತ್ರದಲ್ಲಿ ನಟಿಸಿದ್ದಾರೆ. ಇನ್ನು ಸೀತಾ ವಲ್ಲಭ, ಗೌರಿ ಶಂಕರ ಧಾರಾವಾಹಿಗಳಲ್ಲಿ ನಟಿಸಿರುವ ಕಾವ್ಯಾ ರಮೇಶ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ನಟಿ ದಿಯಾ ಪಳಕ್ಕಲ್ ಕೂಡ ನಾಯಕಿಯಾಗಿ ನಟಿಸಿದ್ದಾರೆ. ವಿಲನ್ ಪಾತ್ರದಲ್ಲಿ ನಟಿ ಪ್ರೀತಿ ಶ್ರೀನಿವಾಸ್ ಬಣ್ಣ ಹಚ್ಚಿದ್ದಾರೆ. ಪ್ರೀತಿ ಶ್ರೀನಿವಾಸ್ ಅವರು ತೆಲುಗಿನ ಜೀ ವಾಹಿನಿಯಲ್ಲಿ ಪಡಮಟ್ಟಿ ಸಂಧ್ಯಾರಾಗಂ ಮತ್ತು ಜಗಧ್ಧಾತ್ರಿ ಸೀರಿಯಲ್ ಗಳಲ್ಲಿ ನಟಿಸಿದ್ದಾರೆ. ಈಗ ಕನ್ನಡದಲ್ಲಿ ಮೋಡಿ ಮಾಡಲು ಸಿದ್ಧರಾಗಿದ್ದಾರೆ

More from Filmibeat

English summary
Brahmagantu new serial in zee kannada promo release.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X