Kavya Gowda ; ಶ್ರೇಷ್ಠಾ ಪಾತ್ರದ ಬಗ್ಗೆ ನಟಿ ಕಾವ್ಯಾ ಗೌಡ ಅವರ ಮಾತುಗಳು..!

By ಪ್ರಿಯಾ ದೊರೆ

ಭಾಗ್ಯಲಕ್ಷ್ಮೀ ಧಾರಾವಾಹಿ ಈಗ ಕುತೂಹಲದ ಘಟ್ಟವನ್ನು ತಲುಪಿದೆ. ಶ್ರೇಷ್ಠಾಳಿಗಂತೂ ಹುಚ್ಚು ಹಿಡಿದಿದ್ದು, ವೀಕ್ಷಕರಂತೂ ಸೀರಿಯಲ್ ನೋಡಿ ಬೈದಿದ್ದೇ ಬೈದಿದ್ದು. ಆದರೆ, ಶ್ರೇಷ್ಠಾ ನಿಜ ಜೀವನದಲ್ಲೂ ಹೀಗೆ ಇರುತ್ತಾರಾ..? ಇಲ್ಲ ಅವರ ರಿಯಲ್ ಲೈಫ್ ಹೇಗಿದೆ ಎಂಬ ಕುತೂಹಲ ಹಲವರಿಗಂತೂ ಇದ್ದೇ ಇರುತ್ತದೆ. ಶ್ರೇಷ್ಠಾ ಅವರ ನಿಜವಾದ ಹೆಸರು ಕಾವ್ಯಾ ಗೌಡ. ಕಾವ್ಯಾ ಅವರು ಕಿರುತೆರೆಗೆ ಹೊದಬರೇನು ಅಲ್ಲ. ಆದರೆ, ಭಾಗ್ಯಲಕ್ಷ್ಮೀ ಧಾರಾವಾಹಿಯಿಂದ ಫೇಮಸ್ ಆಗಿರುವುದು ಸುಳ್ಳಲ್ಲ.

ಶ್ರೇಷ್ಠಾ ಪಾತ್ರದಲ್ಲಿ ನಟಿ ಕಾವ್ಯಾ ಗೌಡ

ನಟಿ ಕಾವ್ಯಾ ಗೌಡ ಅವರಿಗೆ ಶ್ರೇಷ್ಠಾ ಪಾತ್ರದಿಂದ ಒಳ್ಳೆಯ ಬ್ರೇಕ್ ಸಿಕ್ಕಿದ್ದು, ಈಗಂತೂ ಈ ನಟಿ ದಿನವೂ ಸುದ್ದಿಯಲ್ಲಿರುತ್ತಾರೆ. ವೀಕ್ಷಕರು ಈ ನಟಿಯ ಪಾತ್ರವನ್ನು ನೋಡಿ ನಿತ್ಯ ಬೈಯುತ್ತಲೇ ಇರುತ್ತಾರೆ. ಈಗಾಗಲೇ ಮದುವೆಯಾಗಿ ಎರಡು ಮಕ್ಕಳಿರುವ ತಾಮಡವ್ ಜೊತೆಗೆ ಪ್ರೀತಿಯಲ್ಲಿ ಬಿದ್ದ ಶ್ರೇಷ್ಠಾ ಮದುವೆಯಾಗಲು ಮುಂದಾದಳು. ಆದರೆ, ಈಗ ತಾಂಡವ್ ತಾಯಿ ಮತ್ತು ಅವರ ಹೆಂಡತಿ ಭಾಗ್ಯಳ ಮಾತುಗಳಿಂದ ಇರಿಟೇಟ್ ಆಗಿ ಅವರ ಸಂಸಾರವನ್ನು ಹಾಳು ಮಾಡಲೇ ಬೇಕು. ಹಾಗಾಗ ಬೇಕು ಎಂದರೆ ತಾನು ತಾಂಡವ್ ನ ಮದುವೆಯಾಗಲೇಬೇಕು ಎಂದು ಹಠಕ್ಕೆ ಬಿದ್ದಿದ್ದಾಳೆ. ಧಾರಾವಾಹಿಯಲ್ಲಿ ಶ್ರೇಷ್ಠ ದುರಹಂಕಾರದಿಂದ ನಡೆದುಕೊಳ್ಳುತ್ತಾ, ಸದ್ಯ ಹುಚ್ಚಿ ಆಗಿರುವುದಂತೂ ನಿಜ ಆದರೆ, ನಿಜ ಜೀವನದಲ್ಲಿ ನಟಿ ಕಾವ್ಯಾ ಅವರು ಬಹಳ ಸಾಫ್ಟ್ ವ್ಯಕ್ತಿತ್ವದವರಂತೆ.

Written Update on actress kavya gowda

ವ್ಯೆಯಕ್ತಿಕ ವ್ಯಕ್ತಿತ್ವಕ್ಕೂ ಪಾತ್ರಕ್ಕೂ ಅಜಗಜಾಂತರ

ಈ ಬಗ್ಗೆ ಸ್ವತಃ ಕಾವ್ಯಾ ಅವರೇ ಮಾತನಾಡಿದ್ದು, ಧಾರಾವಾಹಿಯಲ್ಲಿರುವ ಪಾತ್ರಕ್ಕೂ ತಮ್ಮ ವ್ಯಕ್ತಿತ್ವಕ್ಕೂ ಸಂಬಂಧವೇ ಇಲ್ಲ. ಆದರೆ, ಸೀರಿಯಲ್ ನೋಡಿದ ಬಹಳಷ್ಟು ಮಂದಿ ನನ್ನನ್ನು ದುರಹಂಕಾರ ಇರುವವಳು ಎಂದೇ ಭಾವಿಸಿದ್ದಾರೆ. ಆದರೆ, ನನ್ನ ಜೊತೆಗೆ ಮಾತನಾಡಿದವರಿಗೆ ಮಾತ್ರವೇ ನನ್ನ ಸ್ವಾಭಾವ ಅರ್ಥವಾಗುತ್ತದೆ. ನನ್ನ ವ್ಯಕ್ತಿತ್ವಕ್ಕೂ ನನ್ನ ಪಾತ್ರಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಪಾತ್ರಕ್ಕಾಗಿ ನಾನು ಸಾಕಷ್ಟು ತಯಾರಿಯನ್ನೂ ಮಾಡಿಕೊಳ್ಳುತ್ತೇನೆ. ಒಮ್ಮೊಮ್ಮೆ ಶೂಟಿಂಗ್ ಮುಗಿಸಿ ಮನೆಗೆ ಹೋದಾಗ ಕೂಗಾಡಿದ್ದೂ ಇದೆ ಎಂದು ಹೇಳಿಕೊಂಡಿದ್ದಾರೆ.

ಟ್ರಾವೆಲ್ ಬಯಸುವ ನಟಿ

ಇನ್ನು ನಟಿ ಕಾವ್ಯಾ ಗೌಡ ಅವರು ಬೆಂಗಳೂರಿನವರಾಗಿದ್ದು, ಬಿಕಾಂ ವ್ಯಾಸಂಗ ಮಾಡಿದ್ದಾರೆ. ಈ ಮೊದಲು ನಟಿ ಕಾವ್ಯಾ ಅವರು ಮಿಸ್ಟರ್ & ಮಿಸ್ಸ್ ರಂಗೇಗೌಡ ದೇವಯಾನಿ ಧಾರಾವಾಹಿಯಲ್ಲಿ ನಟಿಸಿದ್ದರು. ಇನ್ನು ವಿಜಯ್ ರಾಘವೇಂದ್ರ ನಟನೆಯ ರಿಂಗ ರಿಂಗ ರೋಸಸ್ ಮತ್ತು ಶೋಧ ಎಂಬ ಚಿತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಇನ್ನಷ್ಟು ಸಿನಿಮಾಗಳಲ್ಲಿ ನಟಿಸುವ ಆಸೆ ಇದೆ ಎಂದು ಹೇಳಿದ್ದಾರೆ. ಕಾವ್ಯ ಗೌಡ ಅವರಿಗೆ ಟ್ರಾವೆಲ್ ಮಾಡುವುದು ಕೂಡ ಇಷ್ಟವಂತೆ. ಮಳೆಗಾಲದಲ್ಲಿ ಧುಮ್ಮಿಕ್ಕಿ ಹರಿಯುವ ದೂದ್ ಸಾಗರ್ ಗೆ ನಟಿ ಭೇಟಿ ಕೊಟ್ಟಿದ್ದಾರೆ. ಗೋವಾ, ಥೈಲ್ಯಾಂಡ್, ಚಿಕ್ಕಮಗಳೂರು, ಕೂರ್ಗ್, ಊಟಿ, ಗೋಕರ್ಣ, ಮಂಗಳೂರು, ಕೊಡೈಕೆನಲ್ ಹೀಗೆ ಸಾಕಷ್ಟು ಜಾಗಗಳಿಗೆ ಪ್ರವಾಸ ಮಾಡಿದ್ದಾರೆ.

written-update-on-actress-kavya-gowda-sep 15

ಮಾಡ್ರನ್ ಉಡುಗೆಯಲ್ಲಿ ನಟಿ ಕಾವ್ಯಾ

ಮಾಡ್ರನ್ ಬಟ್ಟೆಗಳನ್ನು ಧರಿಸುವ ಶ್ರೇಷ್ಠಾ ಅವರು ಪಾತ್ರಕ್ಕೆ ತಕ್ಕಂತೆ ಉಡುಗೆಯನ್ನು ಧರಿಸುತ್ತಿದ್ದು, ತೀರಾ ಮಾಡ್ರನ್ ಬಟ್ಟೆಗಳನ್ನು ಹೆಚ್ಚಾಗಿ ಧರಿಸುವುದಿಲ್ಲ. ಬೇಸಿಕಲಿ ನಾನು ಮುಜುಗರ ಸ್ವಾಭಾವದವಳು ಎಂದು ಹೇಳಿದ್ದಾರೆ. ಆದರೆ ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಕೊಂಚ ಬೋಲ್ಡ್ ಆಗಿರುವ ಶ್ರೇಷ್ಠಾ ಮಾಡ್ರನ್ ಬಟ್ಟೆಗಳನ್ನು ಧರಿಸುತ್ತಾರೆ. ಇನ್ನು ನಟಿಯ ಪಾತ್ರಕ್ಕೆ ಹಲವು ವೀಕ್ಷಕರು ಪರ್ಸನಲ್ ಆಗಿ ಸೋಶಿಯಲ್ ಮೀಡಿಯಾ ಅಕೌಂಟ್ ಹುಡುಕಿ ತನಗೆ ಬುದ್ಧಿ ಮಾತುಗಳನ್ನು ಹೇಳಿದ್ದಾರೆ. ನನ್ನ ಪಾತ್ರ ಅಷ್ಟರಮಟ್ಟಿಗೆ ವೀಕ್ಷಕರ ಮನ ಮುಟ್ಟಿರುವುದು ಖುಷಿಯ ಸಂಗತಿ. ನನ್ನ ಪಾತ್ರ ಅತ್ತ ವಿಲನ್ ಅಲ್ಲ, ಇತ್ತ ನಾಯಕಿಯೂ ಅಲ್ಲ ಎಂದು ಹೇಳಿಕೊಂಡಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X