ಡಿಕೆ ಶಿವಕುಮಾರ್ ಹೊರಗಡೆ ಟ್ರಬಲ್ ಶೂಟರ್, ಮನೆಯಲ್ಲಿ ಚಿಕ್ಕ ಮಗುವಂತೆ ಎಂದ ಉಶಾ ಶಿವಕುಮಾರ್

By ಶೃತಿ ಹರೀಶ್ ಗೌಡ

ಡಿಕೆ ಶಿವಕುಮಾರ್ ಅವರು ರಾಜಕೀಯದಲ್ಲಿ ಎಂತಹ ಸಾಧನೆಯನ್ನು ಮಾಡಿದ್ದರು ಸಹ ಮನೆಗೆ ಹೋದಾಗ ಅವರ ವ್ಯಕ್ತಿತ್ವವೇ ಬೇರೆಯಾಗಿದೆಯಂತೆ. ಇದರ ಬಗ್ಗೆ ಸ್ವತಃ ಅವರ ಪತ್ನಿ ಉಷಾ ಶಿವಕುಮಾರ್ ವೀಕ್ ಎಂಡ್ ವಿಥ್ ರಮೇಶ್‌ನಲ್ಲಿ ಹೇಳಿಕೊಂಡಿದ್ದಾರೆ. ಡಿಕೆ ಶಿವಕುಮಾರ್ ಅವರು ರಾಜಕೀಯದಲ್ಲಿ ಎಷ್ಟು ಎದುರಾಳಿಗಳನ್ನು ಸೃಷ್ಟಿ ಮಾಡಿಕೊಂಡಿದ್ದರು ಸಹ ಅವರು ಎಲ್ಲರನ್ನು ಸ್ನೇಹಿತರಂತೆ ಕಾಣಲು ಇಷ್ಟಪಡುತ್ತಾರೆ.

ಹಂತ ಹಂತವಾಗಿ ರಾಜಕೀಯದಲ್ಲಿ ಮೇಲೆ ಬಂದಿರುವ ಡಿಕೆ ಶಿವಕುಮಾರ್ ರವರು ನಡೆದು ಬಂದಿರುವ ಹಾದಿ ರೋಚಕವಾಗಿದ್ದರೂ ಸಹ ಅವರು ಮಾಡಿರುವ ಸಾಧನೆ ಅಷ್ಟಿಷ್ಟಲ್ಲ, ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದಿರುವ ಅವರು ನಿಷ್ಠಾವಂತ ಕಾರ್ಯಕರ್ತ ಎಂದೇ ಈಗಲೂ ಸಹ ಗುರುತಿಸಿಕೊಳ್ಳುತ್ತಾರೆ. ಮುಖ್ಯಮಂತ್ರಿ ಸ್ಥಾನದಿಂದ ವಂಚಿತರಾಗಿದ್ದರು ಸಹ ಉಪಮುಖ್ಯಮಂತ್ರಿ ಸ್ಥಾನಕ್ಕೆ ತೃಪ್ತಿ ಕೊಂಡಿರುವ ಅವರು ಎಂದಿಗೂ ಸಹ ಕಾರ್ಯಕರ್ತರಿಂದ ದೂರ ಉಳಿದಿಲ್ಲ ಕಾರ್ಯಕರ್ತರೇ ನನ್ನ ಕುಟುಂಬ ಎಂದು ಡಿಕೆ ಶಿವಕುಮಾರ್ ಅವರು ಹೇಳಿಕೊಳ್ಳುತ್ತಾರೆ.

WWR 5: DK Shivakumar is like little baby at home says Usha Shivakumar

ಇಷ್ಟೆಲ್ಲದರ ನಡುವೆ ಡಿಕೆ ಶಿವಕುಮಾರ್ ಅವರು ತಮ್ಮ ಕುಟುಂಬಕ್ಕೂ ಸಹ ಪ್ರಾಮುಖ್ಯತೆಯನ್ನು ನೀಡುತ್ತಾ ಬರುತ್ತಿದ್ದಾರೆ ಅವರ ಮನೆಯಲ್ಲಿ ಏನೇ ಕಾರ್ಯಕ್ರಮ ಆದರೂ ಸಹ ಅದನ್ನು ಚಾಚೂ ತಪ್ಪದೇ ತಾವೇ ಮುಂದೆ ನಿಂತು ನಡೆಸಿಕೊಡುತ್ತಾರೆ. ಕುಟುಂಬಸ್ಥರನ್ನು ಯಾವತ್ತೂ ಹೊರಗಡೆ ಇಟ್ಟಿಲ್ಲ ಎಲ್ಲರನ್ನೂ ಸಹ ಒಂದೇ ತಕ್ಕಡಿಯಲ್ಲಿ ಇಟ್ಟು ನೋಡುವ ಸ್ವಭಾವ ಡಿಕೆ ಶಿವಕುಮಾರ್ ಅವರದ್ದಾಗಿದೆ.

ಉಷಾ ಬಗ್ಗೆ ಡಿಕೆ ಶಿವಕುಮಾರ್ ಅವರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ ನನ್ನ ಮೂವರು ಮಕ್ಕಳಿಗೆ ತಾಯಿಯಾಗಿ ಹಾಗೂ ನನ್ನ ಜೀವನದಲ್ಲಿ ಉಷಾ ಪಾತ್ರ ಬಹಳ ಮುಖ್ಯವಾದುದ್ದಾಗಿದೆ ಎಂದು ವೀಕೆಂಡ್ ವಿಥ್ ರಮೇಶ್ ನಲ್ಲಿ ಡಿಕೆ ಶಿವಕುಮಾರ್ ಅವರು ತಿಳಿಸಿದ್ದಾರೆ. ನನ್ನ ರಾಜಕೀಯದ ವಿಷಯಗಳಲ್ಲೂ ಸಹ ಉಷಾ ಬೆನ್ನೆಲುಬಾಗಿ ನಿಂತಿದ್ದಾರೆ. ಅವರು ನನಗೆ ಸಿಕ್ಕಿದ್ದು ಗಾಡ್ ಗಿಫ್ಟ್ ಎಂದು ಪತ್ನಿಯ ಬಗ್ಗೆ ಟ್ರಬಲ್ ಶೂಟರ್ ಮೆಚ್ಚುಗೆಯ ಮಾತನ್ನು ವ್ಯಕ್ತಪಡಿಸಿದ್ದಾರೆ.

ಬನ್ನಿ ಉಷಾ ಅವರು ಡಿಕೆ ಶಿವಕುಮಾರ್ ಬಗ್ಗೆ ಬಹಳ ಮೆಚ್ಚುಗೆಯ ಮಾತನಾಡಿದ್ದಾರೆ ಹೊರಗಡೆ ರಫ್ ಅಂಡ್ ಟಫ್ ಆಗಿರುವ ಡಿಕೆ ಶಿವಕುಮಾರ್ ರವರು ಮನೆಯ ಒಳಗಡೆ ಮಾತ್ರ ಮಗುವಂತೆ ಇರುತ್ತಾರಂತೆ ಹೊರಗಡೆ ಯಾವುದೇ ಕಷ್ಟವನ್ನು ಎದುರಿಸುವ ಟ್ರಬಲ್ ಶೂಟರ್ ಮನೆಗೆ ಬಂದು ಮಗುವಂತೆ ಅಳುತ್ತಾರೆ ಎಂದು ಪತ್ನಿ ಉಷಾ ಅವರು ತಿಳಿಸಿದ್ದಾರೆ.

ಎಷ್ಟೇ ಕಷ್ಟ ಇದ್ದರೂ ಡಿಕೆ ಶಿವಕುಮಾರ್ ಅವರು ಮನೆಯಲ್ಲಿ ಎಕ್ಸ್ಪ್ರೆಸ್ ಮಾಡೋದಿಲ್ಲ ಚಿಕ್ಕ ಮಗುವಂತೆ ಅತ್ತು ಬಿಡ್ತಾರೆ ಎಂದು ಉಷಾ ಅವರು ಹೇಳುತ್ತಿದ್ದರೆ ಡಿಕೆ ಶಿವಕುಮಾರ್ ಕಿರುನಗೆ ಬೀರಿದ್ದಾರೆ. ನನ್ನೆಲ್ಲಾ ಸಕ್ಸಸ್ ಹಿಂದಿ ನನ್ನ ಕುಟುಂಬದ ಪರಿಶ್ರಮವೂ ಇದೆ ಎಂದು ಡಿಕೆ ಶಿವಕುಮಾರ್ ಅವರು ಕುಟುಂಬದ ಬಗ್ಗೆ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.

ಡಿಕೆ ಶಿವಕುಮಾರ್ ಅವರ ಮಗಳು ಐಶ್ವರ್ಯ ತಂದೆಯ ಬಗ್ಗೆ ಮೆಚ್ಚುಗೆಯ ಮಾತನ್ನ ಆಡಿದ್ದಾರೆ. ನನ್ನಿಲ್ಲ ಸಕ್ಸಸ್ ಗೂ ನನ್ನ ತಂದೆಯೇ ಕಾರಣ ನಾನು ಈಗ ಏನಾದರೂ ಮಾಡಿದ್ದೇನೆ ಎಂದರೆ ಅದು ನನ್ನ ತಂದೆ ನನಗೆ ಕೊಟ್ಟ ಅವಕಾಶ ಎಂದು ವೇದಿಕೆಯ ಮೇಲೆ ತಂದೆಯ ಬಗ್ಗೆ ಮಾತನಾಡಿದ್ದಾರೆ. ತಂದೆಯವರು ಕೊಟ್ಟ ಅವಕಾಶವನ್ನು ಬಳಸಿಕೊಂಡ ನಾನು ಈಗ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಲು ಸಾಧ್ಯವಾಯಿತು ಎಂದು ಐಶ್ವರ್ಯ ಹೇಳಿದ್ದಾರೆ.

More from Filmibeat

English summary
weekend with ramesh WeekendWithRameshSeason5 WeekendWithRamesh WWR WWR5 RameshAravind dkshivakumar dcm of Karnataka, dks fans club, dks Congress leader.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X