For Quick Alerts
  ALLOW NOTIFICATIONS  
  For Daily Alerts

  ಸಾಧಕರ ಸೀಟ್ ಮೇಲೆ ಕಾಶೀನಾಥ್, ಸಂತೋಷ್ ಹೆಗ್ಡೆ ನೋಡಿ ವೀಕ್ಷಕರು ಫುಲ್ ಖುಷ್

  |

  ಜೀ ಕನ್ನಡ ವಾಹಿನಿಯ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮಕ್ಕೆ ಪ್ರೇಕ್ಷಕರು ಅನೇಕ ಸಾಧಕರ ಹೆಸರನ್ನ ಹೇಳುತ್ತಲಿರುತ್ತಾರೆ. ಅದೇ ರೀತಿ ತಮ್ಮ ಮೆಚ್ಚಿನ ಸಾಧಕರೇ ಕಾರ್ಯಕ್ರಮಕ್ಕೆ ಬಂದರೆ ಅವರಿಗೆ ಆಗುವ ಖುಷಿ ಅಷ್ಠಿಷ್ಟಲ್ಲ.

  ಕಳೆದ ವಾರದ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮ ನಿಜಕ್ಕೂ ಸಾಕಷ್ಟು ಪ್ರೇಕ್ಷಕರಿಗೆ ಖುಷಿ ಕೊಟ್ಟಿದೆ. ಯಾಕಂದ್ರೆ ಕಳೆದ ಶನಿವಾರ ಹಾಗೂ ಭಾನುವಾರ ನಟ, ನಿರ್ದೇಶಕ ಕಾಶೀನಾಥ್ ಹಾಗೂ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಭಾಗವಹಿಸಿದ್ರು.

  'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದ ಕೆಲ ಸಂಚಿಕೆಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬೇಸರ ವ್ಯಕ್ತಪಡಿಸಿದ್ದ ವೀಕ್ಷಕರು, ಈಗ ಅದೇ ಜೀ ವಾಹಿನಿ ಹಾಗೂ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದ ಬಗ್ಗೆ ಕೊಂಡಾಡುತ್ತಿದ್ದಾರೆ. ಮುಂದೆ ಓದಿ....

  ಆಸೆ ನೆರವೇರಿತು

  ಆಸೆ ನೆರವೇರಿತು

  ಕಾಶೀನಾಥ್ ಮತ್ತು ಸಂತೋಷ್ ಹೆಗ್ಡೆ ಅವರು 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂಬುದು ಅನೇಕರ ಆಸೆ ಆಗಿತ್ತು. ಅದರಂತೆ ಕಳೆದ ವಾರ ಇಬ್ಬರು ಸಾಧಕರು ಕಾರ್ಯಕ್ರಮದಲ್ಲಿದ್ದರು.

  ದಾಖಲೆಯ ಮೆಚ್ಚುಗೆ

  ದಾಖಲೆಯ ಮೆಚ್ಚುಗೆ

  ಕಾಶೀನಾಥ್ ಮತ್ತು ಸಂತೋಷ್ ಹೆಗ್ಡೆ ಅವರ ಕಾರ್ಯಕ್ರಮಕ್ಕೆ ಜನರಿಂದ ತುಂಬ ದೊಡ್ಡ ಮಟ್ಟದ ರೆಸ್ಪಾನ್ಸ್ ಸಿಕ್ಕಿದೆ. ಜೀ ಕನ್ನಡ ಫೇಸ್ ಬುಕ್ ಪೇಜ್ ನಲ್ಲಿ ಈ ಇಬ್ಬರು ಸಾಧಕರ ಪೋಸ್ಟ್ ಹಾಕಿದ ಕ್ಷಣದಲ್ಲಿಯೇ ದಾಖಲೆಯ ಮಟ್ಟದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.

  ಟ್ರೋಲ್ ಮೂಲಕ ಸಂದೇಶ

  ಟ್ರೋಲ್ ಮೂಲಕ ಸಂದೇಶ

  ಅನೇಕ ಟ್ರೋಲ್ ಪೇಜ್ ಗಳು 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮಕ್ಕೆ ಇಂತಹ ಸಾಧಕರು ಬರಬೇಕು ಅಂತ ಹೇಳುತ್ತಿದ್ದಾರೆ. ಅಷ್ಟೆ ಅಲ್ಲದೆ ಕಾರ್ಯಕ್ರಮದಲ್ಲಿ ಈ ಸಾಧಕರು ಹೇಳಿದ ಸಂದೇಶಗಳನ್ನ ಟ್ರೋಲ್ ಗಳ ಮೂಲಕ ಅನೇಕರಿಗೆ ತಲುಪಿಸುತ್ತಿದ್ದಾರೆ.

  ಜನರ ಪ್ರತಿಕ್ರಿಯೆ

  ಜನರ ಪ್ರತಿಕ್ರಿಯೆ

  ವಿಶೇಷವಾಗಿ ಕಾಶೀನಾಥ್ ಮತ್ತು ಸಂತೋಷ್ ಹೆಗ್ಡೆ ಅವರ ಸಂಚಿಕೆಗಳಿಗೆ ದೊಡ್ಡ ಮಟ್ಟದ ಪ್ರತಿಕ್ರಿಯೆ ಸಿಕ್ಕಿದೆ. ಸಾವಿರಾರು ಜನರು ಕಾಮೆಂಟ್ ಗಳ ಮೂಲಕ ಈ ಸಂಚಿಕೆಯ ಬಗ್ಗೆ ತಮ್ಮ ಮನಸ್ಸಿನ ಮಾತನ್ನ ಹಂಚಿಕೊಳ್ಳುತ್ತಿದ್ದಾರೆ.

   ಬದಲಾವಣೆಗೆ ದಾರಿ

  ಬದಲಾವಣೆಗೆ ದಾರಿ

  ಕಾರ್ಯಕ್ರಮದ ಬಳಿಕ ಅನೇಕರು ಸಂತೋಷ್ ಹೆಗ್ಡೆ ಅವರ ಬಗ್ಗೆ ಬರೆದಿದ್ದಾರೆ. ಸಾಧಕರ ಸೀಟ್ ನಲ್ಲಿ ಆಡಿದ ಅವರ ಮಾತುಗಳನ್ನ ಕೇಳಿ ಯುವಕರು ಭ್ರಷ್ಟಚಾರದ ವಿರುದ್ಧ ಸಮರ ಸಾರುವ ಮನಸ್ಸು ಮಾಡಿದ್ದಾರೆ.

  ನಿಜವಾದ ಸ್ಫೂರ್ತಿ

  ನಿಜವಾದ ಸ್ಫೂರ್ತಿ

  ಕಾಶೀನಾಥ್ ಹಾಗೂ ಸಂತೋಷ್ ಹೆಗ್ಡೆ ಸಂಚಿಕೆ ಸಾಧನೆ ಮಾಡುವವರಿಗೆ ನಿಜವಾದ ಸ್ಫೂರ್ತಿ ನೀಡಿದೆ ಎನ್ನುವುದು ಅನೇಕರ ಅಭಿಪ್ರಾಯ.

  ಮಾತು ಕೊಟ್ಟಿದ್ದ ರಾಘವೇಂದ್ರ ಹುಣಸೂರು

  ಮಾತು ಕೊಟ್ಟಿದ್ದ ರಾಘವೇಂದ್ರ ಹುಣಸೂರು

  'ಜೀ ಕನ್ನಡ' ವಾಹಿನಿಯ ಬಿಸಿನೆಸ್ ಹೆಡ್ ರಾಘವೇಂದ್ರ ಹುಣಸೂರು ಹಿಂದೆ ಮಾತು ಕೊಟ್ಟಿದ್ದರು. 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ನಿಮ್ಮ ಮೆಚ್ಚಿನ ಸಾಧಕರನ್ನ ಕರೆಸಲು ಹೆಚ್ಚಿನ ಪ್ರಯತ್ನ ಮಾಡುತ್ತಿದ್ದೀವಿ ಅಂತ ಹೇಳಿದ್ದು ಈಗ ನಿಜವಾಗಿದೆ.

  ಮುಂದುವರೆಸಿಕೊಂಡು ಹೋಗಬೇಕು

  ಮುಂದುವರೆಸಿಕೊಂಡು ಹೋಗಬೇಕು

  'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದ ಮೇಲೆ ಪ್ರೇಕ್ಷಕರಿಗೆ ಇದ್ದ ಬೇಸರವನ್ನ ಈ ಎರಡು ಸಂಚಿಕೆಗಳು ದೂರ ಮಾಡಿದೆ. ಇನ್ನು ಮುಂದೆ ಸಹ ಇದೇ ರೀತಿ ಮುಂದುವರೆಸಿಕೊಂಡು ಹೋಗಬೇಕು ಅನ್ನುವುದು ವೀಕ್ಷಕರ ಅಭಿಮತ.

  English summary
  Viewers are happy with Kannada Actor Kashinath and Santosh Hegde's episodes of Weekend with Ramesh-3.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X