ಇಂದಿನ 'ಬಿಗ್ ಬಾಸ್' ಶೋನಲ್ಲಿ ಇರ್ತಾರೆ ಮೂರು ನಟಿಯರು
ಕಲರ್ಸ್ ಸೂಪರ್ ವಾಹಿನಿಯ 'ಬಿಗ್ ಬಾಸ್' ಕಾರ್ಯಕ್ರಮಕ್ಕೆ ಈಗ ಮೂರು ನಟಿಯರು ಹೋಗುತ್ತಿದ್ದಾರೆ. ಹಾಗೆಂದ ಮಾತ್ರಕ್ಕೆ ಅವರು ಕಾರ್ಯಕ್ರಮ ಹೊಸ ಸ್ಪರ್ಧಿಗಳಲ್ಲ, ವಾರಾಂತ್ಯದ ಅತಿಥಿಗಳು.
ಪ್ರತಿ ವಾರ ಕೂಡ 'ಸೂಪರ್ ಸಂಡೆ ವಿತ್ ಸುದೀಪ್' ಸಂಚಿಕೆಯಲ್ಲಿ ವಿಶೇಷ ಅತಿಥಿಗಳು ಇರುತ್ತಾರೆ. ಈ ವಾರ ಕನ್ನಡದ ಯುವ ನಟಿಯರಾದ ವೈಭವಿ, ವೈನಿಧಿ ಹಾಗೂ ವೈಸಿರಿ ಆಗಮಿಸುತ್ತಿದ್ದಾರೆ. 'ಯಾನ' ಸಿನಿಮಾದ ಪ್ರಮೋಷನ್ ಗಾಗಿ ಈ ನಟಿಯರು ಬಿಗ್ ಬಾಸ್ ವೇದಿಕೆ ಏರಲಿದ್ದಾರೆ.
ಕಾರ್ಯಕ್ರಮದಲ್ಲಿ ಮೂರು ನಟಿಯರ ಜೊತೆಗೆ ಅವರ ತಾಯಿ ನಿರ್ದೇಶಕಿ ವಿಜಯ ಲಕ್ಷ್ಮಿ ಸಿಂಗ್, ನಟ ಜೈ ಜಗದೀಶ್ ಹಾಗೂ 'ಯಾನ' ಚಿತ್ರದ ನಾಯಕ ಸಹ ಭಾಗಿಯಾಗಿದ್ದಾರೆ.

'ಯಾನ' ಸಿನಿಮಾದ ಹಾಡು ಮತ್ತು ಪ್ರಮೋವನ್ನು ಸುದೀಪ್ ಬಿಡುಗಡೆ ಮಾಡಿದ್ದು, ಈಗ ಸುದೀಪ್ ಕಾರ್ಯಕ್ರಮದಲ್ಲಿಯೇ ಚಿತ್ರದ ಪ್ರಚಾರ ಕಾರ್ಯವೂ ನಡೆಯುತ್ತಿದೆ.
ಅಂದಹಾಗೆ, ಕಳೆದ ವಾರ 'ಬಿಗ್ ಬಾಸ್' ಕಾರ್ಯಕ್ರಮಕ್ಕೆ ನಟ ರಮೇಶ್ ಅರವಿಂದ್ ಹಾಗೂ ಪಾರೂಲ್ ಯಾದವ್ ಆಗಮಿಸಿದ್ದರು.
English summary
Yaana movie team in 'Bigg Boss Kannada 6 program .


Click it and Unblock the Notifications