ಮೈಸೂರ್ ಸ್ಯಾಂಡಲ್ ಸೋಪ್ ಎಷ್ಟು ದಿನ ಬಳಸ್ತೀರಾ? ಮಹಾರಾಜರಿಗೆ ಸೃಜನ್ ಪ್ರಶ್ನೆ

By ಎಸ್ ಸುಮಂತ್

ಕಲರ್ಸ್ ಕನ್ನಡದಲ್ಲಿ ಅನುಬಂಧ ಅವಾರ್ಡ್ ಕಾರ್ಯಕ್ರಮ ಇತ್ತೀಚೆಗಷ್ಟೇ ಅದ್ದೂರಿಯಾಗಿ ನಡೀತು. ಈ ಅವಾರ್ಡ್ ಕಾರ್ಯಕ್ರಮದಲ್ಲಿ ಸಾಕಷ್ಟು ಭಾವನಾತ್ಮಕ ಸನ್ನಿವೇಶಗಳು ಅನಾವರಣವಾಗಿವೆ. ಜನ ಮೆಚ್ಚಿದ ಪಾತ್ರಗಳಿಗೆ ಅವಾರ್ಡ್ ಕೂಡ ಧಕ್ಕಿದೆ. ನೋಡುಗರಿಗೆ ಮನರಂಜನೆಯ ಸಿಕ್ಕಿದೆ. ಹಾಡು, ಡ್ಯಾನ್ಸ್, ಕಾಮಿಡಿ ಎಲ್ಲವೂ ಒಂದೇ ವೇದಿಕೆ ಸಿಕ್ಕಂತಾಗಿದೆ.

ಅನುಬಂಧ ಅವಾರ್ಡ್ ಕಾರ್ಯಕ್ರಮದಲ್ಲಿ ಕಲರ್ಸ್ ಕನ್ನಡದ ಇಡೀ ಫ್ಯಾಮಿಲಿಯ ಕಲಾವಿದರು ಹಾಜರಿದ್ದರು. ಅದರ ಜೊತೆಗೆ ವಿಶೇಷ ಅತಿಥಿಗಳನ್ನು ಕರೆಸಲಾಗಿತ್ತು. ಅದರಲ್ಲಿ ಸಂಸದರಾದ ಯದುವೀರ್ ಒಡೆಯರ್ ಕೂಡ ಒಬ್ಬರು. ಯದುವೀರ್ ಅವರನ್ನು ಕಂಡು ಬಹಳಷ್ಟು ಹಿರಿಯ ಕಲಾವಿದರು ಮಹಾರಾಜ ವಂಶದ ಬಗ್ಗೆ ಹಾಡಿ ಹೊಗಳಿದ್ದಾರೆ. ಇದೇ ಸಂದರ್ಭದಲ್ಲಿ ಯದುವೀರ್ ಅವರಿಗೆ ಫನ್ನಿ ಪ್ರಶ್ನೆಗಳು ಎದುರಾಗಿವೆ.

Yaduveer Wadiyar and srujan Lokesh Hilarious Chit Chat On colors kannada anubhandha awards Stage

ವೇದಿಕೆಗೆ ಸಂಸದ ಯದುವೀರ್

ಮೈಸೂರು-ಕೊಡಗು ಸಂಸದ ಯದುವೀರ್ ಅವರನ್ನು ಅನುಬಂಧ ಅವಾರ್ಡ್ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯನ್ನಾಗಿ ಕರೆಸಿದ್ದರು. ರಾಜ ಮರ್ಯಾದೆಯನ್ನೇ ನೀಡಿ ಅವರಿಗೆ ಸ್ವಾಗತ ಮಾಡಲಾಗಿತ್ತು. ಕಳಸ ಹೊತ್ತು, ವಾದ್ಯಗಳ ಜೊತೆಗೆ ಯದುವೀರ್ ಅವರನ್ನು ಸ್ವಾಗತಿಸಿದರು. ಯದುವೀರ್ ಅವರು ಕೂಡ ದೊಡ್ಡಣ್ಣನವರಿಗೆ ಅವಾರ್ಡ್ ನೀಡಿ ಸನ್ಮಾನಿಸಿದರು.

ಸೋಪ್ ಬಗ್ಗೆ ಫನ್ನಿ ಪ್ರಶ್ನೆ

ಯದುವೀರ್ ಅವರು ಈ ಅವಾರ್ಡ್ ಪ್ರೊಗ್ರಾಂಗೆ ಸ್ಪೆಷಲ್ ಗೆಸ್ಟ್. ಹೀಗಾಗಿ ಒಂದಷ್ಟು ಮಾಹಿತಿಯನ್ನು ಅವರಿಂದ ತಿಳಿಯುವ ಪ್ರಯತ್ನ ಕಲರ್ಸ್ ಕನ್ನಡ ಮಾಡಿದೆ. ಒಂದಷ್ಟು ಮನರಂಜಿಸುವ ಕೆಲಸವನ್ನು ಮಾಡಿದೆ. ಅಂದ್ರೆ ಯದುವೀರ್ ಅವರಿಗೆ ಸೃಜನ್ ಸೋಪಿನ ಬಗ್ಗೆ ಪ್ರಶ್ನೆ ಕೇಳಿದ್ದಾರೆ. ಮಹಾರಾಜರ ವಂಶಸ್ಥರೆಲ್ಲ ಮೈಸೂರು ಸ್ಯಾಂಡಲ್ ಸೋಪ್ ಬಳಕೆ ಮಾಡುತ್ತಾರೆ. ಹೀಗಾಗಿ ಅವರೆಲ್ಲ ಒಂದು ಸೋಪನ್ನು ಎಷ್ಟು ದಿನ ಬಳಕೆ ಮಾಡುತ್ತಾರೆ ಎಂಬ ಕುತೂಹಲ ಎಲ್ಲರಿಗೂ ಇದೆ. ಈಗ ಅದೇ ಪ್ರಶ್ನೆಗೆ ಸೃಜನ್ ಉತ್ತರ ಪಡೆದಿದ್ದಾರೆ.

ಯದುವೀರ್ ಒಂದು ಸೋಪಿನ ಕಥೆ

ಯದುವೀರ್ ಅವರಿಗೆ ನೀವೂ ಒಂದು ಸೋಪನ್ನು ನೀವೂ ಎಷ್ಟು ದಿನ ಬಳಕೆ ಮಾಡುತ್ತೀರಿ ಎಂದು ಪ್ರಶ್ನೆ ಕೇಳಿದ್ದಾರೆ. ಪ್ರಶ್ನೆ ಕೇಳುವುದಕ್ಕೂ ಮುನ್ನ ಸೃಜನ್, ನಾವೂ ಒಂದು ಸೋಪನ್ನು ಅಂತ್ಯದವರೆಗೂ ಯೂಸ್ ಮಾಡುತ್ತೇವೆ, ನೀವೂ ಎಷ್ಟು ದಿನ ಯೂಸ್ ಮಾಡುತ್ತೀರಾ ಎಂದು ಕೇಳಿದ್ದಾರೆ. ಆಗ ಯದುವೀರ್ ಅವರು ಕೂಡ ಉತ್ತರಿಸಿದ್ದು, ನಾನು ಕೂಡ ಅಂತ್ಯದವರೆಗೂ ಸೋಪನ್ನು ಬಳಕೆ ಮಾಡುತ್ತೇವೆ ಎಂದು ಹೇಳುವ ಮೂಲಕ ನಾವೂ ಕೂಡ ಸಾಮಾನ್ಯ ಜನರ ರೀತಿಯೇ ಜೀವನ ಮಾಡುತ್ತೇವೆ ಎಂದು ಹೇಳಿದ್ದಾರೆ.

ಕಮೆಂಟ್ ಬಾಕ್ಸ್‌ನಲ್ಲಿ ಕಳ್ಳರ ಸುಳಿವು

'ನವಗ್ರಹ'ಚಿತ್ರದಲ್ಲಿ ಸೃಜನ್ ಲೋಕೇಶ್ ಕೂಡ ಅಭಿನಯಿಸಿದ್ದಾರೆ. ಅದರಲ್ಲೂ ಅಂಬಾರಿಯನ್ನು ಕದಿಯುವುದರಲ್ಲಿ ಭಾಗಿಯಾಗಿದ್ದರು. ಈ ವಿಡಿಯೋ ನೋಡಿದ ವೀಕ್ಷಕರು ಯದುವೀರ್ ಮಹಾರಾಜರಿಗೆ ನೋ,ಡಿ ನೋಡಿ ಅಂಬಾರಿ ಕದ್ದವರು ಅಲ್ಲೇ ಇದ್ದಾರೆ. ಬಿಡಬೇಡಿ ಅವರನ್ನ ಅಂತ ಕಮೆಂಟ್ ಹಾಕಿದ್ದಾರೆ‌. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಅನುಬಂಧ ಅವಾರ್ಡ್ ಕಾರ್ಯಕ್ರಮದಲ್ಲಿ ಎಲ್ಲರೂ ಖುಷಿಯಾಗಿ ಭಾಗಿಯಾಗಿದ್ದಾರೆ.

More from Filmibeat

English summary
colors kannada Award program Written Update on anubandha viral video episode. Here is the details about Srujan asked Yaduveer about soap;
Read more about: tv filmbeat original sumanth
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X