Just In
Don't Miss!
- News
ಕೋವಿಡ್ ಲಸಿಕೆ: ಉತ್ತರ ಕನ್ನಡಕ್ಕೆ ರಾಜ್ಯದಲ್ಲಿ 2ನೇ ಸ್ಥಾನ
- Sports
ಭಾರತ vs ಆಸ್ಟ್ರೇಲಿಯಾ: 4ನೇ ಟೆಸ್ಟ್ ಬ್ರಿಸ್ಬೇನ್, ದಿನ 3, Live ಸ್ಕೋರ್
- Lifestyle
"ಭಾನುವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್ಯ "
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Automobiles
ಟಾಟಾ ಆಲ್ಟ್ರೊಜ್ ಐಟರ್ಬೋ ಕಾರಿನ ಟೀಸರ್ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್
- Finance
ಬಜೆಟ್ 2021: MSME ವಲಯಕ್ಕೆ ಏನು ಸಿಗಬಹುದು?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕಿರುತೆರೆಯಲ್ಲಿ ಪ್ರಸಾರ ಆಗ್ತಿದೆ 'ಯಜಮಾನ' ಸಿನಿಮಾ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಯಜಮಾನ' ಸಿನಿಮಾ ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸಿದ್ದು ಆಗಿದೆ. ಹಿರಿತೆರೆಯ ಬಳಿಕ ಈಗ ಕಿರುತೆರೆಗೆ ಈ ಸಿನಿಮಾ ಬಂದಿದೆ.
ಸ್ಟಾರ್ ಸುವರ್ಣ ವಾಹಿನಿಯಲ್ಲಿ 'ಯಜಮಾನ' ಸಿನಿಮಾ ಪ್ರಸಾರ ಅಗುತ್ತಿದೆ. ಚಿತ್ರದ ಪ್ರೊಮೋಗಳನ್ನು ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ಪ್ರಸಾರದ ಸುದ್ದಿಯನ್ನು ಸ್ಟಾರ್ ಸುವರ್ಣ ವಾಹಿನಿ ತಿಳಿಸಿದೆ. ಸದ್ಯಕ್ಕೆ ಪ್ರಸಾರ ದಿನಾಂಕವನ್ನು ಗುಪ್ತವಾಗಿ ಇಟ್ಟಿರುವ ವಾಹಿನಿ ಶೀಘ್ರದಲ್ಲಿ ಸಿನಿಮಾ ತೋರಿಸುವುದಾಗಿ ತಿಳಿಸಿದೆ.
Yajamana Review : ಮನೆಗೆ ಯಜಮಾನ.. ಮಾರ್ಕೆಟ್ ಗೆ ಸುಲ್ತಾನ..
'ಯಜಮಾನ' ಸಿನಿಮಾ ಮಾರ್ಚ್ 1 ರಂದು ಬಿಡುಗಡೆಯಾಗಿತ್ತು. ರಿಲೀಸ್ ಆದ ನಾಲ್ಕು ತಿಂಗಳುಗಳ ನಂತರ ಚಿತ್ರ ಕಿರುತೆರೆಗೆ ಬಂದಿದೆ. ಇಪ್ಪತೈದು ಕೋಟಿಯಲ್ಲಿ ನಿರ್ಮಾಣವಾದ ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಗಳಿಕೆ ಮಾಡಿತ್ತು.
ವಿ ಹರಿಕೃಷ್ಣ ನಿರ್ದೇಶನದ ಮೊದಲ ಸಿನಿಮಾ ಇದಾಗಿದೆ. ಹರಿಕೃಷ್ಣ ಹಾಗೂ ಪಿ ಕುಮಾರ್ ಇಬ್ಬರೂ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ದರ್ಶನ್ ಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ಹಾಗೂ ತಾನ್ಯ ಹೋಪ್ ಕಾಣಿಸಿಕೊಂಡಿದ್ದರು.
ಇದು ಓದುಗರ ವಿಮರ್ಶೆ : 'ನಾ ನೋಡಿದ ಯಜಮಾನ'
ಮಾಸ್ ಅಂಶಗಳ ಜೊತೆಗೆ ರೈತನೇ ಯಜಮಾನ ಎಂಬ ಸಂದೇಶ ನೀಡಿದ್ದ ಈ ಸಿನಿಮಾ ಸಾಮಾನ್ಯ ಪ್ರೇಕ್ಷಕರಿಗೆ ಬಹಳ ಇಷ್ಟ ಆಗಿತ್ತು. ಸಿನಿಮಾದ ಗೆಲುವಿನಲ್ಲಿ ಹಾಡುಗಳು ಪ್ರಮುಖ ಪಾತ್ರ ವಹಿಸಿದ್ದವು. ಚಿತ್ರದ ಎಲ್ಲ ಹಾಡುಗಳು ಸೂಪರ್ ಹಿಟ್ ಆಗಿವೆ.