BBK 11: ಯಮುನಾ ಶ್ರೀನಿಧಿ ಫುಲ್ ಟ್ರೋಲ್; ಹೆಣ್ಣಾಗಿ ಹೆಣ್ಣನ್ನೆ ಹಿಯಾಳಿಸೋದಾ?

ಬಿಗ್ ಬಾಸ್ ಕನ್ನಡ ಸೀಸನ್ 11 ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಸ್ವರ್ಗ ಮತ್ತು ನರಕ ಎಬ ಕಾನ್ಸೆಪ್ಟ್ ನಲ್ಲಿ ಆರಂಭಗೊಂಡಿದ್ದ ಬಿಗ್ ಬಾಸ್ ಈಗ ನರಕವೂ ಇಲ್ಲ ಸ್ವರ್ಗವೂ ಇಲ್ಲ. ಎಲ್ಲರೂ ದೊಡ್ಮನೆಯ ಸದಸ್ಯರಷ್ಟೇ. ಈಗೇನಿದ್ದರೂ ಗೆಲ್ಲುವುದಕ್ಕೆ ತಮ್ಮ ತಮ್ಮ ಆಟ, ಎಂಟರ್ಟೈನ್ಮೆಂಟ್ ತೋರಿಸಬೇಕು, ಜನರ ಮನಸ್ಸನ್ನ ಗೆಲ್ಲಬೇಕು ಅಷ್ಟೇ. ಹೀಗಾಗಿ ಮನೆಯೊಳಗಡೆ ಕಾಂಪೀಟೇಷನ್ ಶುರುವಾಗಿದೆ. ಒಬ್ಬರಿಗೊಬ್ಬರ ನಡುವೆ ಆಗಾಗ ಬೆಂಕಿಯೂ ಹೊತ್ತಿಕೊಳ್ಳುತ್ತಿದೆ.

ಬಿಗ್ ಬಾಸ್ ಮನೆಗೆ ಎಂಟ್ರಿಯಾಗಿದ್ದು ಹದಿನೇಳು ಮಂದಿ. ಅದರಲ್ಲಿ ಯಮುನಾ ಶ್ರೀನಿಧಿ ಕೂಡ ಒಬ್ಬರು. ಆದರೆ ಈಗ ಹದಿನಾರು ಮಂದಿಯಷ್ಟೇ ಉಳಿದುಕೊಂಡಿದ್ದಾರೆ. ಬಿಗ್ ಬಾಸ್ ಮನೆಯಿಂದ ಮೊದಲ ವಾರವೇ ಹೊರಗೆ ಬಂದಿದ್ದು ಮಾತ್ರ ಯಮುನಾ ಶ್ರೀನಿಧಿ. ಮನೆಯಿಂದ ಬಂದಾಗಿನಿಂದ ಯಮುನಾ ಟ್ರೋಲರ್ಸ್ ಬಾಯಿಗೆ ಆಹಾರವಾಗಿದ್ದಾರೆ. ಕಮೆಂಟಿಗರ ಕೈಗೆ ಸುಲಭವಾಗಿ ಸಿಕ್ಕಿದ್ದಾರೆ. ಅದರಲ್ಲೂ ಹೆಣ್ಣು ಮಕ್ಕಳೇ ನೆಗೆಟಿವ್ ಕಮೆಂಟ್ ಮಾಡುತ್ತಿರುವುದು ಆಶ್ಚರ್ಯವೇ ಸರಿ.

Yamuna Srinidhi Gets Trolled after evicted from bigg boss kannada 11 show

ಜೋರು ಮಾತಿನ ಯಮುನಾ

ಬಿಗ್ ಬಾಸ್ ಮನೆಗೆ ಆರಂಭದಲ್ಲಿಯೇ ಎಂಟ್ರಿ ಕೊಟ್ಟಿದ್ದ ಯಮುನಾ ಆರಂಭದಲ್ಲಿಯೇ ಹೊರಗೆ ಬಂದರು. ಆದರೆ ಬಿಗ್ ಬಾಸ್ ಮನೆಯೊಳಗೆ ಹೋದಾಗ ಎಲ್ಲರ ಜೊತೆಗೆ ಹೊಂದಿಕೊಳ್ಳುವುದಕ್ಕೆ ಸ್ವಲ್ಪ ಆದರೂ ಸಮಯ ಬೇಕಾಗುತ್ತದೆ. ಯಮುನಾ ಅವರು ಕೂಡ ಹೊಂದಿಕೊಳ್ಳುವ ಪ್ರಯತ್ನದ ಜೊತೆಗೆ ಸ್ವಲ್ಪ ಗಲಾಟೆಗೂ ಇಳಿದು ಬಿಡುತ್ತಿದ್ದರು. ಹೀಗಾಗಿ ಮೊದಲ ವಾರದಲ್ಲಿಯೇ ಜನರ ಮನಸ್ಸನ್ನು ಗೆಲ್ಲುವಲ್ಲಿ ವಿಫಲವಾದರೂ, ಹೊರಗೆ ಬಂದರು.

ಯಮುನಾಗೆ ಕೆಟ್ಟ ಕಮೆಂಟ್

ಟ್ರೋಲರ್ಸ್ ಆಗಲಿ, ಸೋಷಿಯಲ್ ಮೀಡಿಯಾದಲ್ಲಿ ಅನ್ನಿಸಿದ್ದನ್ನು ಕಮೆಂಟ್ ಮಾಡುವವರಾಗಲಿ ಅವರಿಗೆ ಮೊದಲು ಸಿಗುವುದೇ ಸೆಲೆಬ್ರಿಟಿಗಳು. ತಮ್ಮ ಮನಸ್ಸಿಗೆ ಬಂದದ್ದು, ತಮ್ಮ ಮನಸ್ಸಿಗೆ ಅನ್ನಿಸಿದ್ದನ್ನೇ ಕಮೆಂಟ್ ಹಾಕುತ್ತಾರೆ. ಈಗ ಯಮುನಾ ಶ್ರೀನಿಧಿ ಅವರ ವಿಚಾರದಲ್ಲೂ ಅಷ್ಟೇ ಸೋಷಿಯಲ್ ಮೀಡಿಯಾದಲ್ಲಿ ಕೆಟ್ಟ ಕಮೆಂಟ್ಸ್‌ ಹಾಕಿದ್ದಾರೆ.

Yamuna Srinidhi Gets Trolled after evicted from bigg boss kannada 11 show

ಯಮುನಾಗೆ ಅಜ್ಜಿ ಎಂದು ಕಮೆಂಟ್

ಇನ್ನು ಯಮುನಾ ಅವರಿಗೆ ಬಂದಿರುವ ಅತಿ ಹೆಚ್ಚು ಕಮೆಂಟ್‌ಗಳಲ್ಲಿ ಅಜ್ಜಿ ಎಂಬ ಪದ ಬಳಕೆಯಾಗಿದೆ. ಅಜ್ಜಿಗೆ ಯಾಕೆ ಬೇಕಿತ್ತು ಬಿಗ್ ಬಾಸ್, ಈ ಅಜ್ಜಿ ಬಿಗ್ ಬಾಸ್ ಮನೆಗೆ ಹೋದಾಗಲೇ ನಮಗೆ ಅನುಮಾನವಿತ್ತು. ಮೊದಲ ವಾರದಲ್ಲೇ ಹೊರಗೆ ಬರ್ತಾರೆ ಅಂತ, ಯಾವ್ಯಾವ ವಯಸ್ಸಲ್ಲಿ ಏನೇನು ಮಾಡಬೇಕೋ ಅದನ್ನೇ ಮಾಡಬೇಕು' ಹೀಗೆ ಬರೀ ನೆಗೆಟಿವ್ ಕಮೆಂಟ್‌ಗಳೇ ಬಂದಿವೆ. ಆದರೆ ಯಮುನಾ ಶ್ರೀನಿಧಿ ಅವರನ್ನು ನೋಡಿದಾಗ ಏಜ್ ಅನ್ನೋದು ಜಸ್ಟ್ ಎ ನಂಬರ್ ಎಂಬಂತೆಯೇ ಫೀಲ್ ಆಗುತ್ತದೆ. ಅಜ್ಜಿ ಎನ್ನುವ ರೀತಿ ಕಾಣಿಸುವುದೇ ಇಲ್ಲ. ಒಳ್ಳೆ ಫಿಟ್ನೆಸ್ ಅಂಡ್ ಬ್ಯೂಟಿ ಮೆಂಟೈನ್ ಮಾಡಿದ್ದಾರೆ.

ಆ ಯುವತಿಗೆ ವಯಸ್ಸಾಗಲ್ವಾ?

ಯಮುನಾ ಶ್ರೀನಿಧಿ ಅವರು ದೊಡ್ಮನೆಯಿಂದ ಹೊರಗೆ ಬಂದ ಮೇಲೆ ಹಲವರು ಪಾಸಿಟಿವ್ ಆಗಿಯೂ ಕಮೆಂಟ್ ಮಾಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಇನ್ನು ಸ್ವಲ್ಪ ದಿನಗಳ ಕಾಲ ನೀವೂ ಇರಬೇಕಿತ್ತು ಎಂದವರಿದ್ದಾರೆ. ಆದರೆ ಇದರ ನಡುವೆ ಅಜ್ಜಿ ಅಜ್ಜಿ ಅಂತ ಹಂಗಿಸಿರೋದು ಮಾತ್ರ ಮಹಿಳೆಯರೇ ಎಂಬುದು ಬೇಸರದ ಸಂಗತಿ. ಇದಕ್ಕೆ ಹಲವರ ವಿರೋಧ ಕೂಡ ವ್ಯಕ್ತವಾಗಿದೆ. ನಿಮಗೂ ಒಂದಿನ ವಯಸ್ಸಾಗುತ್ತೆ ಎಂಬುದನ್ನು ಮರೆಯದಿರಿ ಎಂದಿದ್ದಾರೆ.

More from Filmibeat

English summary
Bigboss kannada 11: Here is the details about Negative comments for Yamuna Srinidhi posts;
Read more about: sumanth bigg boss kannada 11 tv
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X