ಬಹುದಿನಗಳ ಕನಸು ನನಸಾಗಿದೆ ಎಂದ ನಟಿ ಯಮುನಾ ಶ್ರೀನಿಧಿ: ಅದೇನು ಗೊತ್ತಾ?

By ಅನಿತಾ ಬನಾರಿ

ತನ್ನ ನಟನಾ ಕೌಶಲದಿಂದ ಕನ್ನಡ ಪ್ರೇಕ್ಷಕರನ್ನು ಆಕರ್ಷಿಸಿದ ನಂತರ, ನಟಿ ಯಮುನಾ ಶ್ರೀನಿಧಿ ಇದೀಗ ತೆಲುಗಿನ ಧಾರಾವಾಹಿಯೊಂದಕ್ಕೆ ಸಹಿ ಹಾಕಿರುವುದು ವೀಕ್ಷಕರಿಗೆ ತಿಳಿದೇ ಇದೆ. ಹೌದು, ಕನ್ನಡದ ಶ್ರೀನಿಧಿ ಹೊಸದಾಗಿ ಆರಂಭವಾಗಿರುವ 'ಅನು ಅನೆ ನೇನು' ಧಾರಾವಾಹಿಯ ಮೂಲಕ ತೆಲುಗು ಕಿರುತೆರೆಗೆ ಕಾಲಿಟ್ಟಿದ್ದಾರೆ.

ಯಮುನಾ ಶ್ರೀನಿಧಿ ಕನ್ನಡ ಅದೆಷ್ಟೋ ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇವರು ತಮ್ಮ ಪಾತ್ರಗಳಿಂದಲೇ ಕಿರುತೆರೆ ವೀಕ್ಷಕರನ್ನು ಗಮನ ಸೆಳೆದಿದ್ದಾರೆ. ಇಷ್ಟು ದಿನ ಕನ್ನಡದ ಧಾರಾವಾಹಿಗಳಲ್ಲಿ ಮಿಂಚಿದ ಬಳಿಕ ಈಗ ತೆಲುಗು ಕಿರುತೆರೆ ಲೋಕಕ್ಕೆ ಕಾಲಿಟ್ಟಿದ್ದಾರೆ.

Yamuna Srinidhi said that her long-time dream has come true Do you know what?

ಸ್ನೇಹಿತರ ಆಸೆ ಈಡೇರಿಸಿದೆ

ಕಿರುತೆರೆ ನಟಿ ಯಮುನಾ ಶ್ರೀನಿಧಿಯ ಸ್ನೇಹಿತರಿಗೊಂದು ಆಸೆಯಿತ್ತು. ಇವರು ತೆಲುಗು ಧಾರಾವಾಹಿಗಳಲ್ಲಿ ನಟಿಸಬೇಕು ಎಂಬ ಆಸೆಯಿತ್ತು. ಈಗ ತೆಲುಗಿನ ಹೊಸ ಧಾರಾವಾಹಿಯಲ್ಲಿ ನಟಿಸುತ್ತಿರುವುದರಿಂದ ಸ್ನೇಹಿತರ ಆಸೆ ಈಡೇರಿದಂತೆ ಆಗಿದೆ. ಅಲ್ಲದೆ ತೆಲುಗು ಧಾರಾವಾಹಿಯ ಚಿತ್ರೀಕರಣ ಬೆಂಗಳೂರಿನಲ್ಲಿಯೇ ನಡೆಯುತ್ತಿದೆ ಈ ಕಾರಣಕ್ಕೆ ಯಮುನಾ ಶ್ರೀನಿಧಿ ಈ ಧಾರಾವಾಹಿಯಲ್ಲಿ ನಟಿಸಲು ಒಪ್ಪಿಕೊಂಡಿದ್ದಾಗಿ ತಿಳಿಸಿದ್ದಾರೆ.

ಬಹುದಿನಗಳ ಕನಸು ನನಸಾಯಿತು

ಅಂದ್ಹಾಗೆ, ಯಮುನಾ ಅವರಿಗೆ ತೆಲುಗು ಕಿರುತೆರೆಗೆ ಪಾದರ್ಪಣೆ ಮಾಡುವುದು ಬಹುದಿನಗಳ ಕನಸಾಗಿತ್ತಂತೆ. ಹಲವಾರು ಅವಕಾಶಗಳು ದೊರೆತರೂ, ಆದ್ಯತೆಗಳ ಕಾರಣದಿಂದ ಅದನ್ನೆಲ್ಲಾ ಒಪ್ಪಿಕೊಳ್ಳಲು ಹಿಂದೇಟು ಹಾಕುತ್ತಿದ್ದರು. ಈಗ ಅವರು ಅಂದ್ಕೊಂಡಂತೆ ಎಲ್ಲಾ ಈಡೇರಿದೆ. ಹೀಗಾಗಿ ತೆಲುಗು ಕಿರುತೆರೆಗ ಎಂಟ್ರಿ ಕೊಡುತ್ತಿದ್ದಾರೆ.

Yamuna Srinidhi said that her long-time dream has come true Do you know what?

ತಿಂಗಳುಗಟ್ಟಲೇ ಮಕ್ಕಳನ್ನು ಬಿಟ್ಟಿರಲು ಕಷ್ಟ

ನನ್ನ ಮಕ್ಕಳನ್ನು ಮನೆಯಲ್ಲಿ ಬಿಟ್ಟು ಹೋಗುವುದು ನನಗೆ ಆರಾಮವೆನಿಸುವುದಿಲ್ಲ. ಶೂಟಿಂಗ್‌ಗಾಗಿ ಹೈದರಾಬಾದ್‌ಗೆ ತೆರಳುವಾಗಲೆಲ್ಲಾ ಅವರು ಬೆಂಗಳೂರಿನಲ್ಲಿ ದಿನಗಟ್ಟಲೆ ಮನೆಯಲ್ಲಿದ್ದರು. ನನ್ನ ಮಕ್ಕಳು ಯಾವಾಗಲೂ ನನ್ನ ಆದ್ಯತೆಯಾಗಿರುತ್ತಾರೆ. ಆದರೆ, ಅನು ಅನೆ ನೇನುಗಾಗಿ ನನ್ನನ್ನು ಸಂಪರ್ಕಿಸಿದಾಗ, ನಾನು ಅದಕ್ಕೆ ಒಪ್ಪಿಗೆಯನ್ನು ಸೂಚಿಸಿದ್ದೇನೆ. ಏಕೆಂದರೆ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯುತ್ತಿದೆ ಎಂದು ಖುಷಿಯನ್ನು ವ್ಯಕ್ತಪಡಿಸಿದರು.

ಉತ್ತಮ ಟಿ ಆರ್ ಪಿ ಪಡೆದುಕೊಂಡಿದೆ

ಅಂದ ಹಾಗೆ ಧಾರಾವಾಹಿಯಲ್ಲಿ ಒಂದು ಸುಂದರವಾದ ಪಾತ್ರದಲ್ಲಿ ನಟಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಧಾರಾವಾಹಿ ಆರಂಭವಾಗಿ ಕೆಲವೇ ದಿನಗಳಾಗಿದ್ದು, ವೀಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅಲ್ಲದೆ TRP ರೇಟಿಂಗ್‌ನಲ್ಲೂ ಉತ್ತಮ ಸಾಧನೆಯನ್ನು ಮಾಡಿದೆ.

ತೆಲುಗು ಸಿನಿಮಾದಲ್ಲೂ ನಟನೆ

ತೆಲುಗಿನ ಪ್ರಸಿದ್ಧ ನಟ ನಾನಿಯೊಂದಿಗೆ 'ದೇವದಾಸ್' ಅಲ್ಲದೇ 'ರಾಜರಥಂ' ಹಾಗೂ 'ಜಾಗ್ವಾರ್‌' ಸೇರಿ ತೆಲುಗು ಚಲನಚಿತ್ರಗಳಲ್ಲಿ ನಟಿಸಿದ್ದರೂ ಕೂಡ 'ಅನು ಅನೆ ನಾನು' ಮೂಲಕ ತೆಲುಗು ಕಿರುತೆರೆಗೆ ಪಾದಾರ್ಪಣೆ ಮಾಡುತ್ತಿರುವುದು ನಿಜಕ್ಕೂ ನಟನಾ ವೃತ್ತಿಯಲ್ಲಿ ಸಿಕ್ಕಿರುವ ಬಹುದೊಡ್ಡ ಕೊಡುಗೆ ಅನ್ನೋ ಅಭಿಪ್ರಾಯ ಶ್ರೀನಿಧಿಯವರದ್ದು.

More from Filmibeat

English summary
TV actress Yamuna Srinidhi is happy to finally get her friend's wish. Look at that wish
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X