'ಲಕುಮಿ' ಸುಷ್ಮಾಗೆ ಅನಾರೋಗ್ಯ; ಕೂದಲು ಉದುರಿ, ತೆಳ್ಳಗಾಗಲು ಅದೇ ಕಾರಣ!
'ಲಕುಮಿ' ಧಾರಾವಾಹಿ ಎಂದರೆ ಈಗಲೂ ಎಲ್ಲರಿಗೂ ಇಷ್ಟ. ಲಕುಮಿ ಎಂದು ಬರೋ ಟೈಟಲ್ ಕಾರ್ಡ್ ಎಲ್ಲರ ಕಿವಿಯಲ್ಲೂ ಗುನುಗುತ್ತಿರುತ್ತದೆ. ಈ ಧಾರಾವಾಹಿಯಲ್ಲಿ ಲಕುಮಿಯಾಗಿ ಗಮನ ಸೆಳೆದದ್ದು ಸುಷ್ಮಾ ಶೇಖರ್.
'ಲಕುಮಿ' ಧಾರಾವಾಹಿಯಲ್ಲಿ ಮುಗ್ಧ ಪಾತ್ರದಲ್ಲಿ ನಟಿಸಿದ್ದ ಸುಷ್ಮಾ, ಬಳಿಕ ಹಲವು ಧಾರಾವಾಹಿಗಳಲ್ಲಿ ಗಮನ ಸೆಳೆದರು. ಅದರಲ್ಲೂ ಜೀ ಕನ್ನಡದಲ್ಲಿ ಪ್ರಸಾರವಾದಂತ ಯಾರೇ ನೀ ಮೋಹಿನಿ ಧಾರಾವಾಹಿಯಲ್ಲೂ ತಮ್ಮ ಪಾತ್ರ ಹಾಗೂ ಅದ್ಭುತ ಅಭಿನಯದಿಂದ ಹೆಚ್ಚು ಗಮನ ಸೆಳೆದರು.

ಬೆಳ್ಳಿ ಎಂಬ ಪಾತ್ರದ ಮೂಲಕ ಮಾವನನ್ನು ಕಾಪಾಡುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ತೀರಾ ಇತ್ತೀಚೆಗೆ ಟಿವಿ ಸ್ಕ್ರೀನ್ ಮೇಲೆ ಅಷ್ಟೊಂದು ಕಾಣಿಸಿಕೊಳ್ಳುತ್ತಿಲ್ಲ. ಬದಲಿಗೆ ಸೋಷಿಯಲ್ ಮೀಡಿಯಾದಲ್ಲಷ್ಟೇ ಮಿಂಚುತ್ತಿದ್ದಾರೆ. ಆದರೆ ಮುದ್ದು ಮುದ್ದಾಗಿ, ಗುಂಡಾಗಿದ್ದ ಬೆಳ್ಳಿ ಈಗ ತೀರಾ ತೆಳ್ಳಗೆ ಆಗಿದ್ದಾರೆ. ಅದಕ್ಕೆ ಕಾರಣ ಅವರಿಗೆ ಕಾಡಿದ ಅನಾರೋಗ್ಯ.
ತೆಳ್ಳಗಾಗಿರುವ ಸುಷ್ಮಾ ಶೇಖರ್
ಸುಷ್ಮಾ ಶೇಖರ್ ಸೋಷಿಯಲ್ ಮೀಡಿಯಾದಲ್ಲಿ ಫುಲ್ ಆಕ್ಟೀವ್ ಆಗಿದ್ದಾರೆ. ಟ್ರೆಂಡಿಂಗ್ ಸಾಂಗ್ಸ್‌ಗಳಿಗೆ ಹೆಜ್ಜೆ ಹಾಕುತ್ತಾ ಆ ವಿಡಿಯೋಗಳನ್ನ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುತ್ತಾ ಇರುತ್ತಾರೆ. ಮೊನ್ನೆವರೆಗೂ ಹಾಕಿದಂತೆ ರೀಲ್ಸ್ ನಲ್ಲಿ ಆಶ್ಚರ್ಯ ಪಡುವಂತ ವ್ಯತ್ಯಾಸವೇನು ಇರಲಿಲ್ಲ. ಆದರೆ ಬ್ಲಾಕ್ ಕಲರ್ ಡ್ರೆಸ್‌ನಲ್ಲಿ ಮಾಡಿರುವ ವಿಡಿಯೋವೊಂದು ಅಭಿಮಾನಿಗಳಿಗೆ ಶಾಕ್ ಆಗುವಂತೆ ಮಾಡಿದೆ.

ಸುಷ್ಮಾಗೆ ಅಭಿಮಾನಿ ಪ್ರಶ್ನೆ
ಸುಷ್ಮಾ ಹಂಚಿಕೊಂಡಿರುವ ಹೊಸ ವಿಡಿಯೋದಲ್ಲಿ ತೀರಾ ಸಣ್ಣಗೆ ಆಗಿದ್ದಾರೆ. ಮೊದಲೇ ಸುಷ್ಮಾ, ಗುಂಡು ಗುಂಡುಗೆ, ಮುದ್ದಾಗಿ ಕಾಣಿಸ್ತಾ ಇದ್ದರು. ಈ ಹೊಸ ವಿಡಿಯೋ ನೋಡಿದವರು ಫಿಟ್ನೆಸ್‌ಗಾಗಿ ವರ್ಕೌಟ್ ಏನಾದ್ರೂ ಮಾಡಿರಬೇಕು ಅಂತಾನೇ ಭಾವಿಸಿದ್ದರು. ಸ್ವಲ್ಪ ಗುಂಡಗಿದ್ದ ಸುಷ್ಮಾ ಇದ್ದಕ್ಕಿದ್ದ ಹಾಗೇ ಇಷ್ಟೊಂದು ಸಣ್ಣ ಆಗ್ಬಿಟ್ಟವರಲ್ಲ ಅಂತ ಒಂದು ಲೈಕ್ ಕೊಟ್ಟು, ಹಾರ್ಟ್ ಇಮೋಜಿ ಹಾಕಿ ಸುಮ್ಮನೆ ಆಗಿದ್ದರು. ಆದರೆ ಅಭಿಮಾನಿಯೊಬ್ಬನ ಮನಸ್ಸು ತಡೆಯದೆ ಕಮೆಂಟ್ ಬಾಕ್ಸ್‌ನಲ್ಲಿಯೇ ಪ್ರಶ್ನೆ ಕೇಳಿದ್ದಾರೆ.
ಸಮಸ್ಯೆ ಹೇಳಿಕೊಂಡ ಸುಷ್ಮಾ
'ಹಾಯ್ ಲಕುಮಿ ಹೇಗಿದ್ದೀಯಾ. ನೀನು ಮಾಡುವ ಪ್ರತಿಯೊಂದು ಸೀರಿಯಲ್ ನೋಡ್ತೀನಿ. ಆದ್ರೆ ಮುಂಚೆ ದಪ್ಪ ಇದ್ದೆ ಈಗ ಸಣ್ಣ ಆಗಿದ್ದೀಯಾ ಯಾಕೆ' ಎಂದು ಪ್ರಶ್ನೆ ಕೇಳಿದ್ದಾರೆ. ಅದಕ್ಕರ ಸ್ವಲ್ಪವೂ ಬೇಸರ ಮಾಡಿಕೊಳ್ಳದ ಸುಷ್ಮಾ, 'ಸ್ವಲ್ಪ ಅನಾರೋಗ್ಯದ ಸಮಸ್ಯೆ ಕಾಡಿದೆ. ಅದಕ್ಕೆ ಕೂದಲು ಉದುರುವಿಕೆ ಹಾಗೂ ತೂಕ ಇಳಿಕೆ ಆಗಿದೆ' ಎಂದು ಕಮೆಂಟ್‌ನಲ್ಲಿಯೇ ಉತ್ತರ ನೀಡಿದ್ದಾರೆ.
ಫ್ಯಾನ್ಸ್ ಪ್ರಾರ್ಥನೆ
ಇನ್ನು ಅಭಿಮಾನಿ ಮುಂದುವರೆದು ಪ್ರಶ್ನೆ ಕೇಳಿದ್ದು, ಈಗ ಆರೋಗ್ಯ ಹೇಗಿದೆ ಎಂದಾಗ ಅದಕ್ಕೆ ಉತ್ತರಿಸಿಲ್ಲ. ಆದರೆ ಅನಾರೋಗ್ಯ ಅಂತಷ್ಟೇ ಹೇಳಿದ ಲಕುಮಿ ಏನು ಸಮಸ್ಯೆ ಎಂಬುದನ್ನು ತಿಳಿಸಿಲ್ಲ. ಈ ವಿಚಾರ ಕೇಳಿದ ಅಭಿಮಾನಿಗಳಂತು ಶಾಕ್ ಅಂತು ಆಗಿದ್ದಾರೆ. ವೈಟ್ ಅಂಡ್ ಹೇರ್ ಲಾಸ್ ಆಗುವಂತದ್ದು ಏನಾಯ್ತು ಅಂತ ತಲೆ ಕೆಡಿಸಿಕೊಂಡಿದ್ದಾರೆ. ಜೊತೆಗೆ ಬೇಗ ಹುಷಾರಾಗಿ ಎಂದು ಹಾರೈಸುತ್ತಿದ್ದಾರೆ. ಕಮೆಂಟ್‌ನಲ್ಲಿ ಆದಷ್ಟು ಬೇಗ ಗುಣಮುಖರಾಗಿ, ಮೊದಲಿನಂತೆಯೇ ಆಗಿ ಎಂದು ಹಾರೈಸಿದ್ದಾರೆ.


Click it and Unblock the Notifications











