Yash in Silli Lalli Serial: ʻಸಿಲ್ಲಿ ಲಲ್ಲಿʼ ಧಾರಾವಾಹಿಯಲ್ಲಿ ಯಶ್ ಬಣ್ಣ ಹಚ್ಚಿದ ಪಾತ್ರದ ಹೆಸರು ಇದೇನೆ!

By ಎಸ್ ಸುಮಂತ್

ಯಶ್ ಈಗ ಪ್ಯಾನ್ ಇಂಡಿಯಾ ಸ್ಟಾರ್.. ಆದರೆ ಅಂದು ಯಾರು ಕೂಡ ಯಶ್ ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆಯುತ್ತಾರೆ ಎಂಬ ಊಹೆಯನ್ನು ಮಾಡಿರಲಿಲ್ಲ. ಎಲ್ಲರ ಊಹೆಯನ್ನು ಈಗ ತಲೆಕೆಳಗೆ ಮಾಡಿ ಬೆಳೆದು ನಿಂತಿದ್ದಾರೆ. ಅಂದು ಕಿರುತೆರೆಗೆ ಎಂಟ್ರಿ ಕೊಟ್ಟಾಗ ಸಾಮಾನ್ಯರಲ್ಲಿ ಸಾಮಾನ್ಯನಾಗಿ ನಟಿಸಿದ್ದರು. ಆದರೆ ಇಂದು ಎಲ್ಲರೂ ಸ್ಯಾಂಡಲ್‌ವುಡ್‌ನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಹೇಳಿದಂತೆ ಮಾಡ್ತೀನಿ, ಮಾಡುವುದನ್ನೇ ಹೇಳ್ತೀನಿ ಅನ್ನುವ ಡೈಲಾಗ್ ಯಶ್‌ಗೆ ಸಂಪೂರ್ಣವಾಗಿ ಮ್ಯಾಚ್ ಆಗುತ್ತೆ.

'ಉತ್ತರಾಯಣ' ಎಂಬ ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟಿದ್ದ ನವೀನ್ ಕುಮಾರ್ ಇಂದು 'ಕೆಜಿಎಫ್' ಸಿನಿಮಾ ಮೂಲಕ ಇಡೀ ದೇಶವೇ ಕೊಂಡಾಡುವಂತೆ ಬೆಳೆದು ನಿಂತಿದ್ದಾರೆ. ಒಂದು ಕ್ಷಣ ಯಶ್ ಧಾರಾವಾಹಿ ಜರ್ನಿಯನ್ನು ಹಿಂತಿರುಗಿ ನೋಡಿದರೆ ಒಂದು ರೀತಿಯ ಮಿರಾಕಲ್ ಅಂತ ಅನಿಸುತ್ತೆ. ಅಂದು ಯಶ್ ಜೊತೆ ನಟಿಸಿದವರಿಗೂ ಇದೊಂದು ಹೆಮ್ಮೆಯ ವಿಷಯವೇ.

'ಸಿಲ್ಲಿಲಲ್ಲಿ' ಯಶ್ ಪಾತ್ರವೇನು?

'ಸಿಲ್ಲಿಲಲ್ಲಿ' ಯಶ್ ಪಾತ್ರವೇನು?

'ಸಿಲ್ಲಿಲಲ್ಲಿ' ಧಾರಾವಾಹಿ ಅಂದರೆ ಎಲ್ಲರಿಗೂ ನೆನಪು ಇದ್ದೇ ಇರುತ್ತೆ. ಆ ಧಾರಾವಾಹಿಯನ್ನು 'ತೋತಾಪುರಿ' ಸಿನಿಮಾ ನಿರ್ದೇಶಕ ವಿಜಯ್ ಪ್ರಸಾದ್ ಆಕ್ಷನ್ ಕಟ್ ಹೇಳಿದ್ದರು. ಕಾಮಿಡಿ ಕಾನ್ಸೆಪ್ಟ್ ನಲ್ಲಿ ರನ್ ಆಗುತ್ತಿದ್ದ ಧಾರಾವಾಹಿ ಸಿಕ್ಕಾಪಟ್ಟೆ ಜನಪ್ರಿಯವಾಗಿತ್ತು. ಅದರಲ್ಲಿ ಬರುವ ಒಂದೊಂದು ಪಾತ್ರವೂ ಅತ್ಯದ್ಭುತವಾಗಿ ಎಲ್ಲರ ಗಮನ ಸೆಳೆದಿತ್ತು. ಸಮಾಜಸೇವಕಿ ಲಲಿತಾಂಬಾ ಆಗಿ ಮಂಜು ಭಾಷಿಣಿ, ಡಾಕ್ಟರ್ ವಿಠ್ಹಲ್ ರಾವ್ ಆಗಿ ರವಿಶಂಕರ್, ಸುನೇತ್ರಾ, ರೂಪಾ ಪ್ರಭಾಕರ್ ಹೀಗೆ ಹೆಸರಾಂತ ಕಲಾವಿದರೇ ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದರು. ಈ ಧಾರಾವಾಹಿಯಲ್ಲಿ ರಾಜು ಹೊಂಗೆತೊಪ್ಪು ಅನ್ನೋ ಪಾತ್ರದಲ್ಲಿ ಯಶ್ ಕಾಣಿಸಿಕೊಂಡಿದ್ದರು.

ಸಾಹಿತಿ ಲುಕ್ ಕೊಟ್ಟಿದ್ದ ಯಶ್

ಸಾಹಿತಿ ಲುಕ್ ಕೊಟ್ಟಿದ್ದ ಯಶ್

ಆಗಿನ್ನೂ ಯಶ್ ಕೂಡ ಬಣ್ಣದ ಲೋಕಕ್ಕೆ ಪರಿಚಯವಾಗಿದ್ದ ಕಾಲ. ನಾಟಕದ ಮೂಲಕ ನಟನೆಯ ಬಗ್ಗೆ ಆಸಕ್ತಿ ಪಡೆದುಕೊಂಡಿದ್ದವರು ಯಶ್. ಆಗ ಟಾಪ್‌ನಲ್ಲಿದ್ದ 'ಸಿಲ್ಲಿಲಲ್ಲಿ' ಧಾರಾವಾಹಿಗೂ ಆಯ್ಕೆಯಾಗಿದ್ದರು. ರಾಜು ಅನ್ನೋ ಪಾತ್ರದಾರಿಯಾಗಿ ಎಲ್ಲರನ್ನೂ ನಕ್ಕು ನಲಿಸಿದ್ದರು. ಸಾಕಷ್ಟು ಎಪಿಸೋಡಿನಲ್ಲಿ ಯಶ್ ಬಂದು ಹೋಗಿದ್ದರು. ಧಾರಾವಾಹಿ ಡಾಕ್ಟರ್ ಕುಟುಂಬದಲ್ಲೇ ಸುತ್ತುತ್ತಿದ್ದರಿಂದ ಯಶ್ ಎಂಟ್ರಿ ಕೂಡ ಡಾಕ್ಟರ್ ಮನೆಯಲ್ಲೇ ಇರುತ್ತಿತ್ತು. ಪಕ್ಕಾ ಸಾಹಿತಿಯಂತೆ ಬ್ಯಾಗ್‌ವೊಂದನ್ನು ತಗಲಾಕಿಕೊಂಡು, ಕನ್ನಡಕ ಹಾಕಿಕೊಂಡು ಸಿಲ್ಲಿ ಮತ್ತು ಡಾಕ್ಟರ್ ವಿಠ್ಹಲ್ ರಾವ್ ಪಕ್ಕಾ ಕೂತಿರುವ ಫೋಟೊ ಒಂದು ವೈರಲ್ ಆಗಿದೆ. ಸದ್ಯ ಯಶ್ ನಟನೆಯ ಎಪಿಸೋಡ್ ಯೂಟ್ಯೂಬ್‌ನಲ್ಲಿ ಕೂಡ ಸಿಗುತ್ತಿಲ್ಲ. ಫೋಟೊದಲ್ಲಷ್ಟೇ ಯಶ್ ಪಾತ್ರದ ಗುರುತು ಸಿಗುತ್ತಿದೆ.

ಯಶ್ ಬಗ್ಗೆ ಹಾಸ್ಯ ನಟ ಮಿತ್ರ ಹೇಳಿದ್ದೇನು?

ಯಶ್ ಬಗ್ಗೆ ಹಾಸ್ಯ ನಟ ಮಿತ್ರ ಹೇಳಿದ್ದೇನು?

ನಟ ಮಿತ್ರ ಕೂಡ 'ಸಿಲ್ಲಿಲಲ್ಲಿ' ಧಾರಾವಾಹಿಯಲ್ಲಿ ನಟಿಸಿದ್ದರು. ಲಲಿತಾಗೆ ಸಹಾಯಕನಾಗಿ ನಟಿಸಿದ್ದ ಮಿತ್ರ, ಯಶ್ ಬಗ್ಗೆ ಆಗಲೇ ದೊಡ್ಡ ಸ್ಟಾರ್ ಆಗುತ್ತಾರೆ ಎಂದುಕೊಂಡಿದ್ದರಂತೆ. ಆ ಬಗ್ಗೆ ಯೂಟ್ಯೂಬ್ ಚಾನೆಲ್‌ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಮಿತ್ರ, ನವೀನ್ ಎಂಬ ನಟ ದೊಡ್ಡಮಟ್ಟದ ಹೆಸರು ಮಾಡುತ್ತಾರೆ. 'ಸಿಲ್ಲಿಲಲ್ಲಿ'ಯಲ್ಲಿ ಅದ್ಭುತವಾಗಿ ಮಾಡಿದ್ದವರು. ಆ ಬಳಿಕ ಸಿನಿಮಾದಲ್ಲಿ ನಟಿಸಿದ್ದರು. ಆಗಲೂ ನಾನು ಅವರಿಗೆ ಸಪೋರ್ಟ್ ಮಾಡಿದ್ದೆ. ಅದನ್ನೆಲ್ಲಾ ಯಶ್ ಮರೆಯುವಂತವರಲ್ಲ. 'ಸಿಲ್ಲಿಲಲ್ಲಿ' ಧಾರಾವಾಹಿ ಮಾಡುವಾಗಲೇ ದೊಡ್ಡ ಮಟ್ಟಕ್ಕೆ ಬೆಳೆಯುತ್ತಾರೆ ಎಂದುಕೊಂಡಿದ್ದೆ ಎಂದು ನಟ ಮಿತ್ರ, ಯಶ್ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಮಿತ್ರ ಇದೇ ಧಾರಾವಾಹಿಯಲ್ಲಿ ಜಾಣೇಶ ಎಂಬ ಪಾತ್ರವನ್ನು ಮಾಡಿದ್ದರು.

'ಸಿಲ್ಲಿ ಲಲ್ಲಿ'ಯಲ್ಲಿ ಪಾತ್ರ ಸಿಗೋದು ಕಷ್ಟ

'ಸಿಲ್ಲಿ ಲಲ್ಲಿ'ಯಲ್ಲಿ ಪಾತ್ರ ಸಿಗೋದು ಕಷ್ಟ

ಮೊದಲೇ ಹೇಳಿದಂತೆ 'ಸಿಲ್ಲಿ ಲಲ್ಲಿ' ಧಾರಾವಾಹಿ ಆಗ ಟಾಪ್‌ನಲ್ಲಿದ್ದಂತ ಧಾರಾವಾಹಿ. ಆ ಧಾರಾವಾಹಿಗೆ ಕಲಾವಿದರ ಆಯ್ಕೆಯನ್ನು ಅಷ್ಟೆ ಎಚ್ಚರದಿಂದ ಮಾಡುತ್ತಿದ್ದರು. ಈ ಧಾರಾವಾಹಿಯಲ್ಲಿ ಅವಕಾಶ ಸಿಗುವುದು ಅದೃಷ್ಟ ಎಂದೇ ಕಲಾವಿದರು ಭಾವಿಸಿದ್ದರು. ಈ ಬಗ್ಗೆ ರಾಕಿಂಗ್ ಸ್ಟಾರ್ ಯಶ್ ಕೂಡ ಒಮ್ಮೆ ವೇದಿಕೆ ಮೇಲೆ ಮಾತಾಡುವಾಗ ತಮ್ಮ ಅನುಭವ ಹಂಚಿಕೊಂಡಿದ್ದಾರೆ. 'ಸಿಲ್ಲಿ ಲಲ್ಲಿ' ಧಾರಾವಾಹಿಯಲ್ಲೂ ಒಂದು ಪಾತ್ರ ಸಿಗೋದು ಕಷ್ಟನೇ ಆಗಿತ್ತು. ಆಗ ಅಷ್ಟು ಪಾಪುಲರ್ ಆಗಿತ್ತು ಆ ಧಾರಾವಾಹಿ.

More from Filmibeat

English summary
Etv Kannada Serial Silli Lalli Written Update on Yash Episode. Here Is The Details About Yash Play Raju Hongethoppa Role.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X