»   » ರಾಧಿಕಾ ಪಂಡಿತ್ ಎದುರಲ್ಲೇ ಯಶ್ ಗೆ ಗೂಗ್ಲಿ ಹಾಕಿದ ಅಭಿಮಾನಿ.!

ರಾಧಿಕಾ ಪಂಡಿತ್ ಎದುರಲ್ಲೇ ಯಶ್ ಗೆ ಗೂಗ್ಲಿ ಹಾಕಿದ ಅಭಿಮಾನಿ.!

Posted By:
Subscribe to Filmibeat Kannada
Yash faces a confusing question from his fan in Yashas Vinayaka, Special programme

ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಮದುವೆ ಆಗಿದ್ರೂ ಕೂಡ ಯಶ್ ಮೇಲೆ ಕಣ್ಣು ಹಾಕೋರ ಸಂಖ್ಯೆ ಕಡಿಮೆ ಆಗಿಲ್ಲ. ಇತ್ತೀಚೆಗಷ್ಟೇ ರಾಧಿಕಾ ಪಂಡಿತ್ ಗೆ ಟ್ವಿಟ್ಟರ್ ನಲ್ಲಿ ಅಭಿಮಾನಿಯೊಬ್ಬರು, ''ಯಶ್ ಅವರನ್ನ ನಾನು ಮದುವೆ ಆಗ್ಲಾ'' ಎಂದು ಕೇಳಿದ್ದರು.

ಈಗ ಅಭಿಮಾನಿಯೊಬ್ಬರು ರಾಧಿಕಾ ಪಂಡಿತ್ ಎದುರಿಗೆ ಯಶ್ ಗೆ ಗೂಗ್ಲಿ ಹಾಕಿರುವ ಘಟನೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ 'ಯಶಸ್ ವಿನಾಯಕ' ವಿಶೇಷ ಕಾರ್ಯಕ್ರಮ ಸಾಕ್ಷಿಯಾಗಿದೆ.

ಹೌದು, 'ಯಶಸ್ ವಿನಾಯಕ' ಕಾರ್ಯಕ್ರಮದಲ್ಲಿ ಅಭಿಮಾನಿಯೊಬ್ಬರು ಯಶ್ ಅವರಿಗೆ ಪ್ರಶ್ನೆಯೊಂದನ್ನ ಕೇಳಿ ಸಂಕಷ್ಟಕ್ಕೆ ಸಿಲುಕಿಸಿದ್ದಾರೆ. ಈ ಪ್ರಶ್ನೆ ಕೇಳಿ ರಾಧಿಕಾ ಪಂಡಿತ್ ಕೂಡ ಶಾಕ್ ಆಗಿದ್ದಾರೆ. ಹಾಗಿದ್ರೆ, ಆ ಪ್ರಶ್ನೆ ಏನು? ಯಶ್ ಕೊಟ್ಟ ಉತ್ತರವೇನು? ಮುಂದೆ ಓದಿ.....

ಯಶ್ ಗೆ ಗೂಗ್ಲಿ ಎಸೆದ ಅಭಿಮಾನಿ

ಸಾವಿರಾರು ಅಭಿಮಾನಿಗಳು ಹಾಗೂ ರಾಧಿಕಾ ಪಂಡಿತ್ ಎದುರಿಗೆ ''ನಿಮಗೆ ರಾಧಿಕಾ ಪಂಡಿತ್ ಇಷ್ಟನಾ ಅಥವಾ ಈ ಅಭಿಮಾನಿಗಳು ಇಷ್ಟನಾ'' ಎಂದು ಕೇಳುವ ಮೂಲಕ ಯಶ್ ಅವರನ್ನ ಅಭಿಮಾನಿಯೊಬ್ಬರು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ.

'ಯಶ್ ಜೊತೆ ಮದುವೆ ಆಗ್ಲಾ' ಎಂದ ಯುವತಿಗೆ ರಾಧಿಕಾ ಕೊಟ್ಟ ಉತ್ತರ

ರಾಧಿಕಾ ಪಂಡಿತ್ ಶಾಕ್!

ಅಭಿಮಾನಿ ಕೇಳಿದ ಈ ಪ್ರಶ್ನೆಯಿಂದ ಸ್ವತಃ ರಾಧಿಕಾ ಪಂಡಿತ್ ಅವರು ಕೂಡ ಒಂದು ಕ್ಷಣ ಶಾಕ್ ಆದರು. ಯಶ್ ಅವರು ಏನು ಉತ್ತರ ಕೊಡಲಿದ್ದಾರೆ ಎಂಬ ಕುತೂಹಲ ಸ್ವತಃ ರಾಧಿಕಾ ಅವರಿಗೂ ಕಾಡಿತು.

ಯಶ್ ಕೊಟ್ಟ ಉತ್ತರವೇನು?

ಅಭಿಮಾನಿಯ ಈ ಪ್ರಶ್ನೆ ಕೇಳಿ ರಾಕಿಂಗ್ ಸ್ಟಾರ್ ಯಶ್ ಕೂಡ ಒಂದು ಕ್ಷಣ ಆಶ್ಚರ್ಯವಾದರೂ, ಏನು ಉತ್ತರ ಕೊಡಬೇಕು ಎಂದು ಯೋಚಿಸುತ್ತಾ ನಿಂತರು. ಆದ್ರೆ, ಏನು ಉತ್ತರ ಕೊಟ್ಟಿದ್ದಾರೆ ಎನ್ನುವುದು ಕುತೂಹಲ. ಯಾಕಂದ್ರೆ, ಇದು ಬರಿ ಪ್ರೋಮೋ ಮಾತ್ರ. ಎಪಿಸೋಡ್ ಇನ್ನೂ ಪ್ರಸಾರವಾಗಿಲ್ಲ.

ರಾಕಿಂಗ್ ಸುದ್ದಿ: ಟಿವಿ ಆಂಕರ್ ಆಗಿ ಕಿರುತೆರೆ ಕಡೆ ಮುಖ ಮಾಡಿದ ಯಶ್

ಅಭಿಮಾನಿಯ ಗೂಗ್ಲಿಗೆ ಯಶ್ ಉತ್ತರವೇನಿರಬಹುದು?

ಒಂದು ಕಡೆ ಅಭಿಮಾನಿಗಳು, ಮತ್ತೊಂದೆಡೆ ಪತ್ನಿ.....ಹಾಗಿದ್ರೆ, ಈ ಪ್ರಶ್ನೆಗೆ ಯಶ್ ಕೊಟ್ಟ ಉತ್ತರವೇನಿರಬಹುದು? ಅಭಿಮಾನಿ ಎಸೆದ ಗೂಗ್ಲಿಯನ್ನ ಯಶ್ ಹೇಗೆ ಎದುರಿಸಿದ್ದಾರೆ ಎನ್ನುವುದನ್ನ ಇದೇ ಭಾನುವಾರ ಸಂಜೆ 6 ಗಂಟೆಗೆ ಪ್ರಸಾರವಾಗುವ 'ಯಶಸ್ ವಿನಾಯಕ' ವಿಶೇಷ ಕಾರ್ಯಕ್ರಮದಲ್ಲಿ ನೋಡಬೇಕಿದೆ.

ಯಶ್ ಗೆ ಅಭಿಮಾನಿ ಎಸೆದ ಗೂಗ್ಲಿ ವಿಡಿಯೋ ಇಲ್ಲಿದೆ ನೋಡಿ

English summary
Rocking Star Yash and Radhika Pandit participated in 'Yashas Vinayaka' Special Programme in Colours Kannada channel.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada