twitter
    For Quick Alerts
    ALLOW NOTIFICATIONS  
    For Daily Alerts

    ಟಿವಿಯಲ್ಲಿ 'ಕೆಜಿಎಫ್' ಪ್ರಸಾರ ಮಾಡ್ತಿರೋದಕ್ಕೆ ಬೇಸರಗೊಂಡ ಅಭಿಮಾನಿಗಳು

    |

    Recommended Video

    KGF Movie: ಬೇಸರಗೊಂಡ 'ಕೆಜಿಎಫ್' ಅಭಿಮಾನಿಗಳು | FILMIBEAT KANNADA

    ಟಿವಿಯಲ್ಲಿ ಹೊಸ ಸಿನಿಮಾ ಪ್ರಸಾರವಾಗ್ತಿದೆ ಅಂದ್ರೆ ಖುಷಿ ಪಡೋ ಜನ್ರೇ ಹೆಚ್ಚು. ಅದರಲ್ಲೂ ಸ್ಟಾರ್ ನಟರ ಚಿತ್ರಗಳು ಬಂದ್ರೆ ಮನೆ ಮಂದಿಯಲ್ಲ ಕೂತು ನೋಡೋ ಮಜಾನೇ ಬೇರೆ. ಇದೀಗ, ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 1 ಹಿಂದಿ ಸಿನಿಮಾ ಕಿರುತೆರೆಯಲ್ಲಿ ಪ್ರಸಾರವಾಗಲಿದೆ.

    ಸೋನಿ ಮ್ಯಾಕ್ಸ್ ಚಾನಲ್ ನಲ್ಲಿ ಕೆಜಿಎಫ್ ಸಿನಿಮಾ ಟೆಲಿಕಾಸ್ಟ್ ಆಗಲಿದ್ದು, ಪ್ರೋಮೋಗಳು ಪ್ರಸಾರವಾಗ್ತಿದೆ. ಇದನ್ನ ಗಮನಿಸಿದ ಕೆಲವು ರಾಕಿಂಗ್ ಸ್ಟಾರ್ ಹಾಗೂ ಕನ್ನಡ ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

    ಟಿವಿಯಲ್ಲಿ ಬಂದೇ ಬಿಡ್ತು 'ಕೆಜಿಎಫ್ ಚಾಪ್ಟರ್ 1' ಟಿವಿಯಲ್ಲಿ ಬಂದೇ ಬಿಡ್ತು 'ಕೆಜಿಎಫ್ ಚಾಪ್ಟರ್ 1'

    ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಹೊಸ ದಾಖಲೆಗಳನ್ನ ಸೃಷ್ಟಿಸಿದ ಕೆಜಿಎಫ್ ನೂರು ಕೋಟಿ ಗಳಿಸಿತ್ತು. ಕನ್ನಡ ಚಿತ್ರರಂಗದ ಕೀರ್ತಿ ಪತಾಕೆಯನ್ನ ದೇಶ ಹಾಗೂ ವಿದೇಶ ಮಟ್ಟದಲ್ಲಿ ಹೆಚ್ಚಿಸುತ್ತು ಅಂದ್ರೆ ತಪ್ಪಾಗಲಾರದು. ಇಂತಹ ಸಿನಿಮಾ ಈಗ ಟಿವಿಯಲ್ಲಿ ಬರ್ತಿರೋದಕ್ಕೆ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಾಕೆ ಎಂದು ತಿಳಿಯಲು ಮುಂದೆ ಓದಿ.....

    ಇಷ್ಟು ಬೇಗ ಯಾಕೆ?

    ಇಷ್ಟು ಬೇಗ ಯಾಕೆ?

    ಸಾಮಾನ್ಯವಾಗಿ ಹೊಸ ಸಿನಿಮಾಗಳು ಚಿತ್ರಮಂದಿರದಲ್ಲಿ ಬಿಡುಗಡೆಯಾಗಿ ಮೂರ್ನಾಲ್ಕು ತಿಂಗಳು ನಂತರ ಟಿವಿಯಲ್ಲಿ ಪ್ರಸಾರ ಮಾಡಲಾಗುತ್ತೆ. ಅದರಲ್ಲೂ ಹಿಟ್ ಸಿನಿಮಾ ಅಂದ್ಮೇಲೆ ಸ್ವಲ್ಪ ಲೇಟ್ ಆಗಿ ಅಂದ್ರೆ, ಥಿಯೇಟರ್ ನಿಂದ ಎತ್ತಂಗಡಿ ಆದ್ಮೇಲೆ ಟೆಲಿಕಾಸ್ಟ್ ಆಗುತ್ತೆ. ಬಟ್, ಕೆಜಿಎಫ್ ಸಿನಿಮಾ ಇನ್ನು ಚಿತ್ರಮಂದಿರದಲ್ಲಿ ಪ್ರದರ್ಶನವಾಗ್ತಿದೆ. ಅಷ್ಟರಲ್ಲೇ ಹಿಂದಿ ವರ್ಷನ್ ಸಿನಿಮಾ ಕಿರುತೆರೆಯಲ್ಲಿ ಬರ್ತಿರೋದು ಉತ್ತಮವಲ್ಲ ಎಂಬುದು ಕೆಲವರ ಅಭಿಪ್ರಾಯ.

    'ಕೆಜಿಎಫ್' ಹಿಟ್ ಆದ್ಮೇಲೆ ನಮ್ ಇಂಡಸ್ಟ್ರಿಯಲ್ಲಾದ 5 ಬದಲಾವಣೆ.! 'ಕೆಜಿಎಫ್' ಹಿಟ್ ಆದ್ಮೇಲೆ ನಮ್ ಇಂಡಸ್ಟ್ರಿಯಲ್ಲಾದ 5 ಬದಲಾವಣೆ.!

    ಅದಕ್ಕೆ ಹಿಂದಿಗೆ ಡಬ್ ಮಾಡಬಾರದು

    ಅದಕ್ಕೆ ಹಿಂದಿಗೆ ಡಬ್ ಮಾಡಬಾರದು

    ಕನ್ನಡದಲ್ಲಿ ಈ ಸಂಸ್ಕೃತಿ ಅಪರೂಪವಾದರೂ, ಪರಭಾಷೆಗಳಲ್ಲಿ ಇದು ಸಾಮಾನ್ಯ. ಹೊಸ ಸಿನಿಮಾ ರಿಲೀಸ್ ಆದ ಒಂದು ಅಥವಾ ಎರಡು ತಿಂಗಳಲ್ಲೇ ಟೆಲಿಕಾಸ್ಟ್ ಮಾಡ್ತಾರೆ. ಇದು ಹಿಂದಿಯಲ್ಲಿ ಹೆಚ್ಚು. ಹಾಗಾಗಿಯೇ ಈಗ ಕೆಜಿಎಫ್ ಸಿನಿಮಾವನ್ನ ಹಿಂದಿ ಭಾಷೆಯವರು ಬೇಗ ಟೆಲಿಕಾಸ್ಟ್ ಮಾಡ್ತಿದ್ದಾರೆ. ಇದನ್ನ ಅರಿತ ಕೆಲವರು ಹಿಂದಿಗೆ ಡಬ್ ಮಾಡಬಾರದು ಅಂತಿದ್ದಾರೆ.

    10 ವರ್ಷದ ಬಾಲಿವುಡ್ ನಲ್ಲಿ ವಿಶೇಷ ಸ್ಥಾನ ಪಡೆದ 'ಕೆಜಿಎಫ್' ಮತ್ತು 'ಬಾಹುಬಲಿ' 10 ವರ್ಷದ ಬಾಲಿವುಡ್ ನಲ್ಲಿ ವಿಶೇಷ ಸ್ಥಾನ ಪಡೆದ 'ಕೆಜಿಎಫ್' ಮತ್ತು 'ಬಾಹುಬಲಿ'

    ಬಾಹುಬಲಿನೂ ಹಾಗೆ ಮಾಡಿದ್ರು

    ಬಾಹುಬಲಿನೂ ಹಾಗೆ ಮಾಡಿದ್ರು

    ಹಿಂದಿ ಇಂಡಸ್ಟ್ರಿಯವರು ಯಾವಾಗಲೂ ಹೀಗೆ ಮಾಡ್ತಾರೆ. ಬಾಹುಬಲಿ ಸಿನಿಮಾ ರಿಲೀಸ್ ಆಗಿ 50 ದಿನ ಆಗಿದ್ದಾಗ ಟೆಲಿಕಾಸ್ಟ್ ಮಾಡಿದ್ರು. ಈಗ ಕೆಜಿಎಫ್ ಸಿನಿಮಾಗೂ ಹಾಗೆ ಮಾಡ್ತಿದ್ದಾರೆ. ಅದಕ್ಕೆ ಹಿಂದಿಗೆ ಸಿನಿಮಾ ಡಬ್ ಮಾಡಬಾರದು ಎಂದು ಕಿಡಿಕಾರಿದ್ದಾರೆ.

    ಯಾವ ಯಾವ ದೇಶಗಳಲ್ಲಿ 'ಕೆ.ಜಿ.ಎಫ್' ವಿಜಯ ಪತಾಕೆ ಹಾರಿಸಿದೆ ಗೊತ್ತಾ.?ಯಾವ ಯಾವ ದೇಶಗಳಲ್ಲಿ 'ಕೆ.ಜಿ.ಎಫ್' ವಿಜಯ ಪತಾಕೆ ಹಾರಿಸಿದೆ ಗೊತ್ತಾ.?

    ಕನ್ನಡದಲ್ಲಿ ಮೊದಲು ಬರಲಿ

    ಕನ್ನಡದಲ್ಲಿ ಮೊದಲು ಬರಲಿ

    ಕೆಜಿಎಫ್ ಟಿವಿಯಲ್ಲಿ ಬರ್ತಿದೆ ಎಂಬ ಖುಷಿ ಅನೇಕರಲ್ಲಿದೆ. ಬಟ್, ಚಿತ್ರರಂಗಕ್ಕೆ ಇದು ಮಾರಕ ಎಂದು ಬೇಡ ಎನ್ನುವವರು ಕೂಡ ಇದ್ದಾರೆ. ಕನ್ನಡದಲ್ಲಿ ಮೊದಲ ಬರಲಿ, ಆಮೇಲೆ ಹಿಂದಿಯಲ್ಲಿ ಟೆಲಿಕಾಸ್ಟ್ ಮಾಡಲಿ. ಇಷ್ಟು ಬೇಗ ಹಾಕಬೇಡಿ ಎಂದು ಕಾಮೆಂಟ್ ಮೂಲಕ ತಮ್ಮ ಅಭಿಪ್ರಾಯಗಳನ್ನ ವ್ಯಕ್ತಪಡಿಸುತ್ತಿದ್ದಾರೆ.

    'ಕೆಜಿಎಫ್' ನಂತರ ತಮಿಳಿನಲ್ಲಿ ಯಶ್ ಗಾಗಿ ತಯಾರಾಗಿದೆ ಮೆಗಾ ಸಿನಿಮಾ.!'ಕೆಜಿಎಫ್' ನಂತರ ತಮಿಳಿನಲ್ಲಿ ಯಶ್ ಗಾಗಿ ತಯಾರಾಗಿದೆ ಮೆಗಾ ಸಿನಿಮಾ.!

    ದಿನ ಮತ್ತು ಸಮಯ ಪಕ್ಕಾ ಆಗಿಲ್ಲ

    ದಿನ ಮತ್ತು ಸಮಯ ಪಕ್ಕಾ ಆಗಿಲ್ಲ

    ಸದ್ಯ, ಸೋನಿ ಮ್ಯಾಕ್ಸ್ ಚಾನಲ್ ನಲ್ಲಿ ಎರಡು ಪ್ರೋಮೋ ಪ್ರಸಾರವಾಗ್ತಿದೆ. ನಿಖರವಾದ ಸಮಯ ಮತ್ತು ದಿನವನ್ನ ಬಹಿರಂಗಪಡಿಸಿಲ್ಲ. ಅತಿ ಶೀಘ್ರದಲ್ಲಿ ಎಂದು ಜಾಹೀರಾತು ನೀಡಲಾಗಿದೆ. ಬಹುಶಃ ಫೆಬ್ರವರಿ ಅಂತ್ಯಕ್ಕೆ ಕೆಜಿಎಫ್ ಹಿಂದಿ ಸಿನಿಮಾ ಕಿರುತೆರೆಯಲ್ಲಿ ಬರಬಹುದು.

    ಕರ್ನಾಟಕದಲ್ಲಿ 'ಬಾಹುಬಲಿ' ದಾಖಲೆ ಉಡೀಸ್ ಮಾಡಿದ 'ಕೆಜಿಎಫ್'.!ಕರ್ನಾಟಕದಲ್ಲಿ 'ಬಾಹುಬಲಿ' ದಾಖಲೆ ಉಡೀಸ್ ಮಾಡಿದ 'ಕೆಜಿಎಫ್'.!

    English summary
    Kannada actor, rocking star yash starrer kgf chapter 1 hindi version movie telecasting in sony max channel for the first time. but, some of the Yash fans opposed KGF hindi broadcast.
    Tuesday, January 29, 2019, 16:42
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X