'ಕೋಟ್ಯಾಧಿಪತಿ'ಯಲ್ಲಿ ಗೆದ್ದ ಹಣದಿಂದ ಯಶ್ ಮಾಡುವ ಕೆಲಸ ಇದು!
Recommended Video

ನಟ ರಮೇಶ್ ಅರವಿಂದ್ ನಡೆಸಿಕೊಡುವ ಕನ್ನಡದ 'ಕೋಟ್ಯಾಧಿಪತಿ' ರಿಯಾಲಿಟಿ ಶೋ ನಲ್ಲಿ ವಾರಾಂತ್ಯದ ದಿನದಂದು ಸ್ಯಾಂಡಲ್ ವುಡ್ ಸ್ಟಾರ್ ಗಳು ಭಾಗಿ ಆಗುತ್ತಿದ್ದಾರೆ. ಬರ್ತಡೇ ಸ್ಪೆಷಲ್ ಆಗಿ ಗೋಲ್ಡನ್ ಸ್ಟಾರ್ ಗಣೇಶ್ ಕೂಡ ಕೋಟ್ಯಾಧಿಪತಿಯಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ಈಗ ರಾಕಿಂಗ್ ಸ್ಟಾರ್ ಅವರ ಸರದಿ.
ರಾಕಿಂಗ್ ಸ್ಟಾರ್ ಯಶ್ 'ಕೋಟ್ಯಾಧಿಪತಿ' ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದು ಇಲ್ಲಿ ಗೆಲ್ಲುವ ಹಣವನ್ನು ಉತ್ತಮ ಕೆಲಸಕ್ಕೆ ಬಳಸುವುದಾಗಿ ತಿಳಿಸಿದ್ದಾರೆ. ಈಗಾಗಲೇ ಎಲ್ಲರಿಗೂ ತಿಳಿದಿರುವಂತೆ ಯಶ್ 'ಯಶೋಮಾರ್ಗ' ಎನ್ನುವ ಟ್ರಸ್ಟ್ ನಡೆಸುತ್ತಿದ್ದಾರೆ.
ಹಾಗಾಗಿ 'ಕೋಟ್ಯಾಧಿಪತಿ' ಶೋ ನಲ್ಲಿ ಗೆಲ್ಲುವ ಹಣವನ್ನು ಟ್ರಸ್ಟ್ ನಿಂದಾಗುವ ಒಳ್ಳೆಯ ಕಾರ್ಯಗಳಿಗೆ ಬಳಸುತ್ತಾರಂತೆ. ಯಶ್ ಅವರ ಪ್ರೋಮೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಇದೇ ಶುಕ್ರವಾರ ಯಶ್ ಕೋಟ್ಯಾಧಿಪತಿ ಕಾರ್ಯಕ್ರಮ ಪ್ರಸಾರ ಆಗಲಿದೆ.

ಸಾಮಾನ್ಯ ಜನರು ಹಣ ಗೆದ್ದು ಸಂಭ್ರಮ ಪಡುವುದರ ಜೊತೆಯಲ್ಲಿ ಸ್ಟಾರ್ ಗಳು ಕಾರ್ಯಕ್ರಮದಲ್ಲಿ ಭಾಗಿ ಆಗಿ ಹಣ ಗೆಲ್ಲುವುದರಿಂದ ಟ್ರಸ್ಟ್ ಗಳ ಮೂಲಕ ಮತ್ತಷ್ಟು ಜನರಿಗೆ ಉಪಯೋಗವಾಗುತ್ತೆ.


Click it and Unblock the Notifications











