'ಕೋಟ್ಯಧಿಪತಿ'ಗೆ ಹೋಗುವ ಮುಂಚೆ ರಾಕಿಂಗ್ ಸ್ಟಾರ್ ಏನಂದ್ರು.?

By Bharath Kumar

Recommended Video

Kannadada Kotyadipathi season 3 : ಕೋಟ್ಯಾಧಿಪತಿಯಲ್ಲಿ ಶಾಲಾ ದಿನಗಳನ್ನು ನೆನೆದ ರಾಕಿಂಗ್ ಸ್ಟಾರ್..!!

'ಕನ್ನಡದ ಕೋಟ್ಯಧಿಪತಿ' ಮೂರನೇ ಆವೃತ್ತಿಯಲ್ಲಿ ರಾಕಿಂಗ್ ಸ್ಟಾರ್ ಯಶ್ ಭಾಗವಹಿಸಿದ್ದಾರೆ. ಈಗಾಗಲೇ ಹಾಟ್ ಸೀಟ್ ನಲ್ಲಿ ಯಶ್ ಕೂತಿರುವ ಪ್ರೋಮೋಗಳು ಕಾರ್ಯಕ್ರಮದ ಬಗ್ಗೆ ಕುತೂಹಲ ಹೆಚ್ಚಿಸಿದೆ.

'ಕೋಟ್ಯಧಿಪತಿ' ಕಾರ್ಯಕ್ರಮದಲ್ಲಿ ರಾಜಾಹುಲಿ ಎಷ್ಟು ಹಣ ಗೆಲ್ತಾರೆ ಎಂಬುದು ಜನಸಾಮಾನ್ಯರನ್ನ ಕಾಡುತ್ತಿದೆ. ಮತ್ತೊಂದೆಡೆ ಯಶ್ ಎಷ್ಟು ಗೆದ್ರು ಅನ್ನೊದಕ್ಕಿಂತ ಈ ಎಪಿಸೋಡ್ ಎಷ್ಟು ಮನರಂಜನೆ ನೀಡಲಿದೆ ಎಂಬುದು ವಿಶೇಷ.

ಅಂದ್ಹಾಗೆ, 'ಕೋಟ್ಯಧಿಪತಿ'ಯಲ್ಲಿ ರಾಕಿಂಗ್ ಸ್ಟಾರ್ ಎಪಿಸೋಡ್ ಶೂಟ್ ಆಗಿದೆ. ಈಗೇನಿದ್ರು ಪ್ರಸಾರವಾಗಬೇಕಿದೆ ಅಷ್ಟೇ. ಹಾಟ್ ಸೀಟ್ ನಲ್ಲಿ ಕೂರುವುದಕ್ಕೂ ಮುಂಚೆ ಯಶ್ ಸ್ಟಾರ್ ಸುವರ್ಣ ಫೇಸ್ ಬುಕ್ ನಲ್ಲಿ ಮಾತನಾಡಿದ್ದರು. ಅಲ್ಲಿ ಹಲವು ವಿಷ್ಯಗಳನ್ನ ಹಂಚಿಕೊಂಡಿದ್ದಾರೆ. ಏನಂದ್ರು.? ಮುಂದೆ ಓದಿ.....

ಈ ಶೋನಲ್ಲಿ ಎಷ್ಟು ಹಣ ಗೆಲ್ಲಬಹುದು.?

ಈ ಶೋನಲ್ಲಿ ಎಷ್ಟು ಹಣ ಗೆಲ್ಲಬಹುದು.?

''ಎಷ್ಟು ಗೆಲ್ಲಬಹುದು ಅಂತ ಗೊತ್ತಿಲ್ಲ. ನನ್ನ ಪ್ರಕಾರ ಡೀಸೆಂಟ್ ಮೊತ್ತ ಗೆಲ್ಲಬಹುದು ಅಂತ ಅನಿಸ್ತಿದೆ. ಹಣ ಗೆಲ್ಲವುದಕ್ಕಿಂತ ಸಖತ್ ಆಗಿ ಎಂಜಾಯ್ ಮಾಡಬೇಕು ಅಂದುಕೊಂಡಿದ್ದೇನೆ. ಈ ಕಾರ್ಯಕ್ರಮ ನೋಡ್ತಿದ್ದೆ ಅಲ್ವಾ, ಕಾತುರನಾಗಿದ್ದೇನೆ'' ಎಂದು ಯಶ್ ಸಂತಸ ವ್ಯಕ್ತಪಡಿಸಿದ್ದಾರೆ.

ಗೆಲ್ಲೋ ಹಣವನ್ನ ಏನ್ ಮಾಡ್ತೀರಾ.?

ಗೆಲ್ಲೋ ಹಣವನ್ನ ಏನ್ ಮಾಡ್ತೀರಾ.?

''ನಾನು 'ಯಶೋಮಾರ್ಗ' ಎಂಬ ಫೌಂಡೇಶನ್ ನಲ್ಲಿ ಒಂದಿಷ್ಟು ಕೆಲಸ ಮಾಡ್ತಿದ್ದೀನಿ ಅಂತ ನಿಮಗೆ ಗೊತ್ತು. ಈ ಹಣದಿಂದ ಮತ್ತಷ್ಟು ಕೆಲಸ ಮಾಡ್ತೀನಿ'' - ರಾಕಿಂಗ್ ಸ್ಟಾರ್

ಯಾವುದಾದರೂ ಇನ್ನು ನೆರವೇರದ ಕನಸು ಇದೆಯಾ.?

ಯಾವುದಾದರೂ ಇನ್ನು ನೆರವೇರದ ಕನಸು ಇದೆಯಾ.?

''ಕನಸು ಎನ್ನುವುದು ಸಮಯಕ್ಕೆ ತಕ್ಕ ಹಾಗೆ ಬದಲಾಗುತ್ತೆ. ಒಂದು ಕನಸು ಪೂರ್ಣಗೊಂಡ ಮೇಲೆ ಮತ್ತೊಂದು ಕನಸು ಹುಟ್ಟುತ್ತೆ. ತುಂಬಾ ಕನಸುಗಳು ಹುಟ್ಟುತ್ತಿದೆ. ದೊಡ್ಡ ದೊಡ್ಡ ಆಸೆಗಳಿವೆ'' - ಯಶ್

ನಿಮ್ಮ ಜೀವನದಲ್ಲಿ 1 ಕೋಟಿ ಮುಖ್ಯ ಎಂಬ ಸಂದರ್ಭ ಯಾವುದು.?

ನಿಮ್ಮ ಜೀವನದಲ್ಲಿ 1 ಕೋಟಿ ಮುಖ್ಯ ಎಂಬ ಸಂದರ್ಭ ಯಾವುದು.?

''ಲಕ್ಷಗಳೇ ತುಂಬಾ ಮುಖ್ಯ ಎಂಬ ಸಂದರ್ಭಗಳೇ ಹೆಚ್ಚಿದೆ. ನನಗೆ ಕೋಟಿಗಳು ಸಿಗೋಕೆ ಶುರುವಾಗಿದ್ದು ಸಿನಿಮಾಗಳಿಂದ, ಸಿನಿಮಾಗೆ ಬಂದ ಮೇಲೆ. ಟಿವಿಯಲ್ಲಿ ಐನೂರು ರೂಪಾಯಿಗೂ ಕೆಲಸ ಮಾಡಿದ್ದೀನಿ. ನಾಟಕದಲ್ಲೂ ಐವತ್ತು ರೂಪಾಯಿಗೂ ಕೆಲಸ ಮಾಡಿದ್ದೀನಿ. ಕೋಟಿಗಳು ಜನಗಳು ಕೊಟ್ಟಿದ್ದು'' - ರಾಕಿಂಗ್ ಸ್ಟಾರ್

ಶಾಲೆಯಲ್ಲಿ ಹೇಗಿದ್ರಿ.?

ಶಾಲೆಯಲ್ಲಿ ಹೇಗಿದ್ರಿ.?

''ನಾನು ತುಂಬ ಓದುತ್ತಿರಲಿಲ್ಲ, ಪಾಠ ಏನ್ ಕೇಳ್ತಿದ್ದೆ ಅದು ಚೆನ್ನಾಗಿ ನೆನಪಿರುತ್ತಿತ್ತು. 8, 9 ನೇ ತರಗತಿವರೆಗೂ ಒಳ್ಳೆ ಮಾರ್ಕ್ಸ್ ತಗೊಳ್ತಿದ್ದೆ. ಆಮೇಲೆ ಸಾಂಸ್ಕ್ರತಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದಕ್ಕೆ ಆರಂಭಿಸಿದೆ. ಸ್ವಲ್ಪ ಕಮ್ಮಿ ಆಯ್ತು'' - ಯಶ್

ಪ್ರೀತಿ ಬಗ್ಗೆ ಒಂದು ಸಲಹೆ ಕೊಡುವುದಾದರೇ.?

ಪ್ರೀತಿ ಬಗ್ಗೆ ಒಂದು ಸಲಹೆ ಕೊಡುವುದಾದರೇ.?

''ಪ್ರೀತಿ ಎನ್ನುವುದು ನಿಜವಾಗಲೂ ಆಗ್ಬೇಕು. ಎಷ್ಟು ನೈಜವಾಗಿರುತ್ತೋ ಮಿಕ್ಕಿದ್ದೆಲ್ಲಾ ತಾನಾಗಿಯೇ ನಡೆದುಕೊಂಡು ಹೋಗುತ್ತೆ. ನಿಮ್ಮ ಗೆಳತಿ, ಗೆಳಯನ ಬಗ್ಗೆ ಗೌರವ ಇರಬೇಕು. ಪ್ರೀತಿ ಎನ್ನುವುದು ಒಂದು ರೀತಿಯ ತ್ಯಾಗನೂ ಇರಬೇಕು'' - ರಾಕಿಂಗ್ ಸ್ಟಾರ್

More from Filmibeat

English summary
Kannada actor Rocking Star Yash has been participate in Kannadada Kotyadipathi Reality show. the episode will telicast this week.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X