'ನಾನು ಅಜ್ಜಿ ಆಗೋದು ಯಾವಾಗ' ಎಂದು ಕೇಳಿದ ಯಶ್ ತಾಯಿ.? ಯಶ್ ಏನಂದ್ರು.?
Recommended Video

ರಾಕಿಂಗ್ ಸ್ಟಾರ್ ಯಶ್ 'ಕನ್ನಡದ ಕೋಟ್ಯಧಿಪತಿ' ಮೂರನೇ ಆವೃತ್ತಿಯಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದಾರೆ. ಐದು ಪ್ರಶ್ನೆಗಳಿಗೆ ಉತ್ತರ ನೀಡಿರುವ 'ರಾಜಾಹುಲಿ' ಸೋಮವಾರಕ್ಕೆ ಆಟವನ್ನ ಕಾಯ್ದುಕೊಂಡಿದ್ದಾರೆ.
ಈ ಸಂಚಿಕೆಯಲ್ಲಿ ಯಶ್ ಗೆ ವಿಶೇಷವಾದ ಪ್ರಶ್ನೆಯೊಂದು ಎದುರಾಗಿದೆ. ಈ ಪ್ರಶ್ನೆಯನ್ನ ನಿರೂಪಕ ರಮೇಶ್ ಅರವಿಂದ್ ಕೇಳಿದ್ದಲ್ಲ. ಯಶ್ ಅವರ ತಾಯಿ ಕೇಳಿದ ಪ್ರಶ್ನೆ. ರಾಕಿಂಗ್ ಸ್ಟಾರ್ ತಾಯಿ ಕೇಳಿದ ಪ್ರಶ್ನೆ ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ತುಂಬಾ ಮನರಂಜನೆಯಿಂದ ಆಟವಾಡ್ತಿರುವ ರಾಕಿಂಗ್ ಸ್ಟಾರ್ ಕಾರ್ಯಕ್ರಮ ಈ ಆಟದಲ್ಲಿ ಎಷ್ಟು ಗೆಲ್ತಾರೆ ಎನ್ನುವುದಕ್ಕಿಂತ, ಅವರ ತಾಯಿ ಕೇಳಿದ ಪ್ರಶ್ನೆಗೆ ಏನು ಉತ್ತರ ಕೊಟ್ದಿದ್ದಾರೆ ಎಂಬುದೇ ದೊಡ್ಡ ಕುತೂಹಲಕ್ಕೆ ಕಾರಣವಾಗಿದೆ. ಹಾಗಿದ್ರೆ, ಯಶ್ ಗೆ ಅವರ ಅಮ್ಮ ಕೇಳಿದ ಪ್ರಶ್ನೆ ಏನು.? ಯಶ್ ಕೊಟ್ಟ ಉತ್ತರವೇನು.? ಮುಂದೆ ಓದಿ.....

'ರಾಕಿಂಗ್' ಪ್ರಶ್ನೆ.?
'ಕನ್ನಡದ ಕೋಟ್ಯಧಿಪತಿ'ಯ ಹಾಟ್ ಸೀಟ್ ನಲ್ಲಿ ಕೂತಿರುವ ಯಶ್ ಅವರಿಗೆ ಅವರ ತಾಯಿ ಒಂದು ಪ್ರಶ್ನೆ ಕೇಳಿದ್ದಾರೆ. 'ಇದು ಒಬ್ಬ ತಾಯಿಯಾಗಲ್ಲ, ಒಬ್ಬ ಅಭಿಮಾನಿಯಾಗಿ ಕೇಳ್ತಿದ್ದೀನಿ' ಅಂತ ಹೇಳುವ ಮೂಲಕ ''ಯಶ್ ನಾನು ಅಜ್ಜಿ ಆಗೋದು ಯಾವಾಗ.? ಎಂದಿದ್ದಾರೆ.

ಶಾಕ್ ಆದ ಯಶ್
ಇಷ್ಟು ದಿನ ಹೋದಲ್ಲಿ ಬಂದಲ್ಲೆಲ್ಲ ಯಶ್ ಗಡ್ಡ ಯಾವಾಗ ತೆಗಿತೀರಾ ಎಂದು ಕೇಳುತ್ತಿದ್ರು. ಈಗ ಯಶ್ ಅವರಿಗೆ ಅದಕ್ಕಿಂತ ಕ್ಲಿಷ್ಟಕರವಾದ ಪ್ರಶ್ನೆ ಎದುರಾಗಿದೆ. ಅವರ ತಾಯಿ ಕೇಳಿದ ಈ ಪ್ರಶ್ನೆಗೆ ಸ್ವತಃ ರಾಕಿಂಗ್ ಸ್ಟಾರ್ ಕೆಲ ಸೆಕೆಂಡ್ ಗಳು ಅಚ್ಚರಿಗೆ ಒಳಗಾದರು

ಉತ್ತರ ಏನಿತ್ತು.?
ಯಶ್ ಅವರ ತಾಯಿ ಕೇಳಿದ ಪ್ರಶ್ನೆಗೆ ಯಶ್ ಏನೆಂದು ಉತ್ತರ ಕೊಟ್ಟರು ಎಂಬುದನ್ನ ನೋಡಬೇಕು ಅಂದ್ರೆ ಸೋಮವಾರದ ಎಪಿಸೋಡ್ ವರೆಗೂ ಕಾಯಬೇಕಿದೆ. ಯಾಕಂದ್ರೆ, ಇದು ಪ್ರೋಮೋ ಮಾತ್ರ. ಪಿಕ್ಚರ್ ಅಭಿ ಬಾಕಿ ಹೈ.
ರಾಧಿಕಾ ಕಾಲೆಳೆದ ಯಶ್
ಕಾರ್ಯಕ್ರಮದ ಮಧ್ಯೆ 'ಫೋನ್-ಎ-ಫ್ರೆಂಡ್' ಲೈಫ್ ಲೈನ್ ಬಳಸಿದ್ದ ಯಶ್ ತಮ್ಮ ಮಡದಿ ರಾಧಿಕಾ ಪಂಡಿತ್ ಅವರಿಗೆ ಫೋನ್ ಮಾಡಿದ್ದರು. ಈ ವೇಳೆ ಪ್ರಶ್ನೆಗೆ ಉತ್ತರ ಕೇಳದೇ, ರಾಧಿಕಾ ಅವರ ಕಾಲೆಳೆದಿದ್ದಾರೆ. ಇದು ಕೂಡ ಸೋಮವಾರವೇ ಟೆಲಿಕಾಸ್ಟ್ ಆಗಲಿದೆ.


Click it and Unblock the Notifications











