For Quick Alerts
  ALLOW NOTIFICATIONS  
  For Daily Alerts

  ಕಿರುತೆರೆಯಲ್ಲಿ ರಾಕಿ ಭಾಯ್ ತಾಯಿ- ಪುತ್ರನಿಗೆ ಇಷ್ಟವಾದ ಬೊಂಬಾಟ್ ಅಡುಗೆ ಮಾಡಿದ ಯಶ್ ಅಮ್ಮ

  |

  ಸ್ಯಾಂಡಲ್ ವುಡ್ ರಾಕಿಂಗ್ ಸ್ಟಾರ್, ಅಭಿಮಾನಿಗಳ ಪ್ರೀತಿಯ ರಾಕಿ ಭಾಯ್ ಇತ್ತೀಚಿಗಷ್ಟೆ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. 35ನೇ ವಸಂತಕ್ಕೆ ಕಾಲಿಟ್ಟಿರುವ ನಟ ಯಶ್ ಈ ಬಾರಿ ಸರಳವಾಗಿ ಹುಟ್ಟುಹಬ್ಬ ಆಚರಿಸಿದ್ದಾರೆ. ಪ್ಯಾನ್ ಇಂಡಿಯಾ ಸ್ಟಾರ್ ಗುರುತಿಸಿಕೊಂಡಿರುವ ಯಶ್ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

  ರಾಕಿಂಗ್ ಸ್ಟಾರ್ ಗೆ ಶುಭಾಶಯಗಳ ಸುರಿಮಳೆಯೇ ಹರಿದುಬಂದಿದೆ. ರಾಕಿಂಗ್ ಹುಟ್ಟುಹಬ್ಬವನ್ನು ಅನೇಕರು ವಿವಿಧ ರೀತಿಯಲ್ಲಿ ಆಚರಣೆ ಮಾಡಿದ್ದಾರೆ. ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಬೊಂಬಾಟ್ ಭೋಜನ ಅಡುಗೆ ಕಾರ್ಯಕ್ರಮ ಮತ್ತಷ್ಟು ವಿಭಿನ್ನವಾಗಿ ಯಶ್ ಹುಟ್ಟುಹಬ್ಬವನ್ನು ಆಚರಿಸಿದೆ. ಹಿರಿಯ ನಟ ಸಿಹಿ ಕಹಿ ಚಂದ್ರು ನಡೆಸಿಕೊಡುತ್ತಿರುವ ಬೊಂಬಾಟ್ ಭೋಜನ ಅಡುಗೆ ಕಾರ್ಯಕ್ರಮದಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರ ತಾಯಿಯನ್ನು ವಿಶೇಷ ಅತಿಥಿಯಾಗಿ ಕರೆಸಲಾಗಿತ್ತು.

  'ಕೆಜಿಎಫ್-2' ಬಳಿಕ ಹೊಸ ಸಾಹಸಕ್ಕೆ ಕೈಹಾಕಿದ ರಾಕಿಂಗ್ ಸ್ಟಾರ್ ಯಶ್

  ಯಶ್ ಇಷ್ಟದ ತಿನಿಸು ಮಾಡಿದ ತಾಯಿ ಪುಷ್ಪಾ

  ಯಶ್ ಇಷ್ಟದ ತಿನಿಸು ಮಾಡಿದ ತಾಯಿ ಪುಷ್ಪಾ

  ಸಿಹಿ ಕಹಿ ಚಂದ್ರು ಅವರ ಬೊಬಾಂಟ್ ಭೋಜನ ಕಾರ್ಯಕ್ರಮದಲ್ಲಿ ಯಶ್ ತಾಯಿ ಪುಷ್ಪಾ ಕಾಣಿಸಿಕೊಂಡಿದ್ದರು. ವಿಶೇಷ ಎಂದರೆ ಮಗನಿಗೆ ಇಷ್ಟವಾದ ತಿನಿಸನ್ನು ಮಾಡಿದ್ದಾರೆ. ಮಗನಿಗೆ ಮಾತ್ರವಲ್ಲದೆ ಈ ಖಾದ್ಯ ಸೊಸೆ ರಾಧಿಕಾ ಮತ್ತು ಮೊಮ್ಮಗಳು ಐರಾಗೂ ತುಂಬಾ ಇಷ್ಟ ಎಂದು ಹೇಳಿದ್ದಾರೆ.

  ಸಿಹಿ ಕಹಿ ಚಂದ್ರು ಅವರ ಧಾರಾವಾಹಿಯಲ್ಲಿ ನಟಿಸಿದ್ದ ಯಶ್

  ಸಿಹಿ ಕಹಿ ಚಂದ್ರು ಅವರ ಧಾರಾವಾಹಿಯಲ್ಲಿ ನಟಿಸಿದ್ದ ಯಶ್

  ಈ ಸಮಯದಲ್ಲಿ ಯಶ್ ಮತ್ತು ಮಕ್ಕಳ ಜೊತೆಗಿನ ಬಾಂಧವ್ಯದ ಬಗ್ಗೆಯೂ ಮಾತನಾಡಿದ್ದಾರೆ. ಜೊತೆಗೆ ಸಿಹಿ ಕಹಿ ಚಂದ್ರು ಅವರ ಜೊತೆ ಯಶ್ ಒಂದು ಧಾರಾವಾಹಿಯಲ್ಲೂ ನಟಿಸಿರುವ ಬಗ್ಗೆ ಮಾತನಾಡಿದ್ದಾರೆ. ಯಶ್ ರೈತನ ಪಾತ್ರದ ಬಗ್ಗೆ ಈಗಲೂ ಮಾತನಾಡುತ್ತಾರೆ ಎಂದಿದ್ದಾರೆ. ಜೊತೆಗೆ ಹಳ್ಳಿಸೊಗಡಿನಲ್ಲಿ ವಿಶೇಷ ಖಾದ್ಯವನ್ನು ತಯಾರಿಸಿಕೊಂಡು ಬಂದಿರುವುದಾಗಿ ಹೇಳಿದ್ದಾರೆ.

  ಯಶ್ ಪ್ರೀತಿಯ ಗಿಣ್ಣು ಮಾಡಿದ ಪುಷ್ಪಾ

  ಯಶ್ ಪ್ರೀತಿಯ ಗಿಣ್ಣು ಮಾಡಿದ ಪುಷ್ಪಾ

  ಪುತ್ರನಿಗೆ ತುಂಬಾ ಇಷ್ಟವಾದ ಗಿಣ್ಣು ಮಾಡಿದ್ದಾರೆ. ಹಸು ಕರು ಹಾಕಿದ ಬಳಿಕ 5 ದಿನಗಳು ಕೊಡುವ ಹಾಲಿಗೆ ಗಿಣ್ಣು ಹಾಲು ಎಂದು ಕರೆಯುತ್ತಾರೆ. ತುಂಬಾ ಪ್ರೋಟೀನ್ ಇರುವ ಹಾಲು ಇದಾಗಿದೆ. ಆ ಹಾಲಿನಲ್ಲಿ ಸಿಹಿ ಮಾಡಿ ತೋರಿಸಿದ್ದಾರೆ ಪುಷ್ಪಾ. ಗಿಣ್ಣು ಹಾಲನ್ನು ತಂದಿದ್ದ ಯಶ್ ತಾಯಿ ಕಾರ್ಯಕ್ರಮದಲ್ಲಿ ಗಿಣ್ಣು ಮಾಡಿ ತೋರಿಸಿದ್ದಾರೆ.

  ಯಶ್ ಬಾಲ್ಯದ ಬಗ್ಗೆ ತಾಯಿಯ ಮಾತು

  ಯಶ್ ಬಾಲ್ಯದ ಬಗ್ಗೆ ತಾಯಿಯ ಮಾತು

  ಯಶ್ ಬಾಲ್ಯದ ಬಗ್ಗೆ ತಾಯಿ ಪುಷ್ಪಾ ರಿವೀಲ್ ಮಾಡಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ಯಶ್ ಗೆ ಡ್ಯಾನ್ಸ್ ಎಂದರೆ ತುಂಬಾ ಇಷ್ಟ ಎನ್ನುವುದನ್ನು ಬಹಿರಂಗ ಪಡಿಸಿದ್ದಾರೆ. ಹಾಡು ಹಾಕಿದ್ರೆ, ಮಲಗಿದ್ರೂ ಎದ್ದು ಮಾಡುತ್ತಿದ್ದ, ಮಗ ಸರಿಹೋಗುತ್ತಾನೆ ಅಂತ ಅಂದುಕೊಂಡಿದ್ವಿ ಎಂದು ಪುಷ್ಪಾ ಅವರು ಹಳಿದ್ದಾರೆ. ಯಶ್ ಸ್ಟೈಲ್, ಸ್ನೇಹಿತರು, ಚೆಸ್ ಬಗ್ಗೆ ಇರುವ ಆಸಕ್ತಿ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಪುಷ್ಪಾ ರಿವೀಲ್ ಮಾಡಿದ್ದಾರೆ.

  Read more about: yash tv ಯಶ್ ಟಿವಿ
  English summary
  Rocking star Yash mother Pushpa is special guest at the cookery show of Bombaat Bhojana.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X