twitter
    For Quick Alerts
    ALLOW NOTIFICATIONS  
    For Daily Alerts

    'ಕನ್ನಡದ ಕೋಟ್ಯಾಧಿಪತಿ' ಆಗ್ತಾರ ರಾಕಿಂಗ್ ಸ್ಟಾರ್ ಯಶ್ !

    By Naveen
    |

    Recommended Video

    ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮವನ್ನ ನಿರೂಪಣೆ ಮಾಡ್ತಾರಾ ಯಶ್? | FIlmibeat Kannada

    ಕನ್ನಡ ಕಿರುತೆರೆಯ ಜನಪ್ರಿಯ ಕಾರ್ಯಕ್ರಮಗಳ ಪೈಕಿ 'ಕನ್ನಡದ ಕೋಟ್ಯಾಧಿಪತಿ' ಕೂಡ ಒಂದು. ಎರಡು ಯಶಸ್ವಿ ಸೀಸನ್ ಬಳಿಕ ಈ ಕಾರ್ಯಕ್ರಮ ಮತ್ತೆ ಈಗ ಬರಲಿದೆ ಎನ್ನುವ ಸುದ್ದಿ ಕೆಲ ದಿನಗಳಿಂದ ಹರಿದಾಡಿತ್ತು.

    ವಿಶೇಷ ಅಂದರೆ ನಟ ಪುನೀತ್ ರಾಜ್ ಕುಮಾರ್ ಬದಲು ಈ ಬಾರಿ ಯಶ್ ಸಾರಥ್ಯದಲ್ಲಿ 'ಕನ್ನಡದ ಕೋಟ್ಯಾಧಿಪತಿ' ಕಾರ್ಯಕ್ರಮ ಬರಲಿದೆ ಎನ್ನುವ ಗುಸು ಗುಸು ಕೇಳಿ ಬಂದಿತ್ತು. ಆದರೆ ಈ ಬಗ್ಗೆ ಸ್ವತಃ ಯಶ್ ಇದೀಗ ಮಾತನಾಡಿದ್ದಾರೆ. 'ಕನ್ನಡದ ಕೋಟ್ಯಾಧಿಪತಿ'ಗೆ ತಮಗೆ ಆಫರ್ ಬಂದಿರುವ ವಿಷಯದ ಬಗ್ಗೆ ಯಶ್ ಸ್ಪಷ್ಟಪಡಿಸಿದ್ದಾರೆ. ಮುಂದೆ ಓದಿ...

    'ಕನ್ನಡದ ಕೋಟ್ಯಾಧಿಪತಿ' ಬಗ್ಗೆ ಯಶ್ ಮಾತು

    'ಕನ್ನಡದ ಕೋಟ್ಯಾಧಿಪತಿ' ಬಗ್ಗೆ ಯಶ್ ಮಾತು

    ನಟ ಯಶ್ ಇದೀಗ 'ಕನ್ನಡ ಕೋಟ್ಯಾಧಿಪತಿ' ನಿರೂಪಣೆ ಮಾಡುವ ಬಗ್ಗೆ ಇದ್ದ ಎಲ್ಲ ಗಾಸಿಪ್ ಗಳನ್ನು ನಿವಾರಿಸಿದ್ದಾರೆ.

    ಆಫರ್ ಬಂದಿದ್ದು ನಿಜ

    ಆಫರ್ ಬಂದಿದ್ದು ನಿಜ

    ''ಕನ್ನಡದ ಕೋಟ್ಯಾಧಿಪತಿ' ಕಾರ್ಯಕ್ರಮ ನಿರೂಪಣೆಗಾಗಿ ಸುವರ್ಣ ವಾಹಿನಿ ಆಫರ್ ನೀಡಿದ್ದು ನಿಜ'' - ಯಶ್, ನಟ

    ಇನ್ನು ಒಪ್ಪಿಕೊಂಡಿಲ್ಲ

    ಇನ್ನು ಒಪ್ಪಿಕೊಂಡಿಲ್ಲ

    ''ಆದರೆ ಸುವರ್ಣ ವಾಹಿನಿ ಕಡೆಯಿಂದ ಬಂದಿರುವ ಆಫರ್ ಅನ್ನು ನಾನು ಇನ್ನು ಒಪ್ಪಿಕೊಂಡಿಲ್ಲ.'' - ಯಶ್, ನಟ

    ಯಶ್ 'KGF' ಅಡ್ಡದಿಂದ ಹೊರಬಂದ 'ಪಾರ್ಟ್-2' ಕಥೆ ಇದು.!ಯಶ್ 'KGF' ಅಡ್ಡದಿಂದ ಹೊರಬಂದ 'ಪಾರ್ಟ್-2' ಕಥೆ ಇದು.!

    ಮುಂದೆ ಗೊತ್ತಿಲ್ಲ

    ಮುಂದೆ ಗೊತ್ತಿಲ್ಲ

    ''ಸದ್ಯಕ್ಕೆ ಕಾರ್ಯಕ್ರಮವನ್ನು ನಾನು ಒಪ್ಪಿಕೊಂಡಿಲ್ಲ. ಆದರೆ ಮುಂದಿನ ದಿನದಲ್ಲಿ ಏನಾಗುತ್ತದೆ ಎನ್ನುವುದು ಗೊತ್ತಿಲ್ಲ.'' - ಯಶ್, ನಟ

    ಆಹಾ... ಯಶ್ ಗೆ ಎಂಥಾ ಕೆಲಸ ಕೊಟ್ರಮ್ಮ ಹುಡುಗೀರಾ.!ಆಹಾ... ಯಶ್ ಗೆ ಎಂಥಾ ಕೆಲಸ ಕೊಟ್ರಮ್ಮ ಹುಡುಗೀರಾ.!

    ಪುನೀತ್ ಬದಲು ಯಶ್

    ಪುನೀತ್ ಬದಲು ಯಶ್

    ಪುನೀತ್ ಸದ್ಯ ಕಲರ್ಸ್ ಕನ್ನಡ ವಾಹಿನಿಗೆ 'ಫ್ಯಾಮಿಲಿ ಪವರ್' ಎಂಬ ಹೊಸ ಕಾರ್ಯಕ್ರಮವನ್ನು ಮಾಡುತ್ತಿದ್ದು, ಇದರಿಂದ ಯಶ್ ಗೆ 'ಕನ್ನಡ ಕೋಟ್ಯಾಧಿಪತಿ'ಯ ಆಫರ್ ನೀಡಲಾಗಿದೆ.

    ಮೌನವಾಗಿದ್ದ ಯಶ್-ಯೋಗಿಯ ಸ್ನೇಹ ಮತ್ತೆ ಮಾತಾಡಿದೆ.!ಮೌನವಾಗಿದ್ದ ಯಶ್-ಯೋಗಿಯ ಸ್ನೇಹ ಮತ್ತೆ ಮಾತಾಡಿದೆ.!

    ಯಶ್ ಒಪ್ಪುತ್ತಾರಾ

    ಯಶ್ ಒಪ್ಪುತ್ತಾರಾ

    ಸದ್ಯ ಯಶ್ ತಮ್ಮ ಮಹತ್ವಾಕಾಂಕ್ಷೆಯ 'ಕೆ.ಜಿ.ಎಫ್' ಸಿನಿಮಾದಲ್ಲಿ ಬಿಜಿ ಇದ್ದು, ಇದರೊಂದಿಗೆ 'ಕನ್ನಡ ಕೋಟ್ಯಾಧಿಪತಿ' ಕಾರ್ಯಕ್ರಮವನ್ನು ನಿರೂಪಣೆ ಮಾಡುತ್ತಾರಾ ಎನ್ನುವುದು ದೊಡ್ಡ ಪ್ರಶ್ನೆಯಾಗಿದೆ.

    English summary
    Actor Yash spoke about Suvarna Channel popular show 'Kannadada Kotyadhipathi 3'.
    Saturday, November 4, 2017, 12:50
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X