ರಾಕಿಂಗ್ ಸ್ಟಾರ್ ಯಶ್ ಗೆ ಟಿ ಎಸ್ ನಾಗಾಭರಣ ಹ್ಯಾಟ್ಸಾಫ್ ಹೇಳಿದ್ದೇಕೆ?

Recommended Video

Weekend With Ramesh Season 4: ನಾಗಾಭರಣ, ಯಶ್‍ಗೂ ಇದೆ ಅವಿನಾಭಾವ ಸಂಬಂಧ

ರಾಕಿಂಗ್ ಸ್ಟಾರ್ ಯಶ್ ಸಿನಿಮಾ ಮಾಡುವುದಕ್ಕೂ ಮುಂಚೆ ಸೀರಿಯಲ್ ಮಾಡುತ್ತಿದ್ದರು. ರಾಧಿಕಾ ಪಂಡಿತ್ ಮತ್ತು ಯಶ್ ಅಭಿನಯಿಸಿದ್ದ 'ನಂದಗೋಕುಲ' ಧಾರಾವಾಹಿ ಮೂಲಕ ಇಬ್ಬರು ಖ್ಯಾತಿ ಗಳಿಸಿಕೊಂಡಿದ್ದರು. ಅದಕ್ಕೂ ಮೊದಲು ರಂಗಭೂಮಿಯಲ್ಲಿ ಯಶ್ ಕೆಲಸ ಮಾಡಿದ್ದರು ಎಂಬುದು ಹಲವರಿಗೆ ಗೊತ್ತಿದೆ.

ಬೆನಕ ತಂಡದಲ್ಲಿ ಕೆಲಸ ಮಾಡಿದ್ದ ಯಶ್ ಗೆ ನಿರ್ದೇಶಕ ಟಿ ಎಸ್ ನಾಗಾಭರಣ ಅವರು ಮಾರ್ಗದರ್ಶಕರಾಗಿ, ಗುರುಗಳಾಗಿ ಉತ್ತೇಜನ ನೀಡಿದ್ದರು. ಜೀ ಕನ್ನಡದಲ್ಲಿ ಪ್ರಸಾರವಾಗುವ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಖ್ಯಾತ ನಿರ್ದೇಶಕ ಟಿ ಎಸ್ ನಾಗಾಭರಣ ಸಾಧಕರಾಗಿ ಭಾಗವಹಿಸಿದ್ದರು.

ಟಿಎಸ್ ನಾಗಾಭರಣ ಬಗ್ಗೆ ಖುಷಿ ವ್ಯಕ್ತಪಡಿಸಿದ ಯಶ್, ತನಗೆ ಆರಂಭ ದಿನದಲ್ಲಿ ನಾಗಾಭರಣ ಅವರ ನೀಡಿದ ಬೆಂಬಲವನ್ನ ಸ್ಮರಿಸಿದರು. ಬಳಿಕ ಯಶ್ ಅವರ ಬಗ್ಗೆಯೂ ನಿರ್ದೇಶಕರು ಹೆಮ್ಮೆ ವ್ಯಕ್ತಪಡಿಸಿದರು. ಅಷ್ಟಕ್ಕೂ, ಯಶ್ ಏನಂದ್ರು? ಟಿಎಸ್ ನಾಗಾಭರಣ ಹ್ಯಾಟ್ಸಾಫ್ ಹೇಳಿದ್ದೇಕೆ? ಮುಂದೆ ಓದಿ.......

ಮಾರ್ಗದರ್ಶಕ, ಗುರುಗಳು

ಮಾರ್ಗದರ್ಶಕ, ಗುರುಗಳು

ಯಶ್ ಬೆನಕ ತಂಡದಲ್ಲಿರಬೇಕಾದರೆ ಟಿಎಸ್ ನಾಗಾಭರಣ ಅವರು ಕೂಡ ಅಲ್ಲಿದ್ದರು. ಒಬ್ಬ ಹಿರಿಯರಾಗಿ, ಮಾರ್ಗದರ್ಶಕರಾಗಿ ಯಶ್ ಅವರಿಗೆ ಸಾಕಷ್ಟು ಸಪೋರ್ಟ್ ಮಾಡಿದ್ದಾರಂತೆ. ''ನಿಮ್ಮ ಮಾರ್ಗದರ್ಶನದಲ್ಲಿ, ನೀವು ತೋರಿದ ಹಾದಿಯಲ್ಲಿ ನಾವು ಬಂದು. ನಿಮ್ಮನ್ನ ನೋಡಿ ಕಲಿತು ಈ ಮಟ್ಟಕ್ಕೆ ಖುಷಿಯಾಗಿದ್ದೀವಿ'' ಎಂದು ಯಶ್ ಹೇಳಿಕೊಂಡಿದ್ದಾರೆ.

ನಮಗೆ ಸ್ಫೂರ್ತಿ ಎಂದ ಯಶ್

ನಮಗೆ ಸ್ಫೂರ್ತಿ ಎಂದ ಯಶ್

''ನೀವು ನಮಗೆ ಗುರುಗಳು, ಮಾರ್ಗದರ್ಶಕರು, ನಮಗೆಲ್ಲ ಸ್ಫೂರ್ತಿ. ನಾನು ರಂಗಭೂಮಿಯಲ್ಲಿ ನಾನು ಕಲಿತ್ತಿದ್ದೇನೆ. ಹೀರೋ ಅಂತ ಫೀಲ್ ಆಗಲ್ಲ. ರಂಗಭೂಮಿ ಕಲಾವಿದ ಅಂತಾನೆ ಎಲ್ಲ ರಂಗದಲ್ಲೂ ತೊಡಗಿಸಿಕೊಳ್ಳುತ್ತೇನೆ. ಜನರಿಗೆ ಮನರಂಜನೆ ಕೊಡ್ತೀವಿ'' ಎಂದು ನಾಗಾಭರಣ ಅವರಿಗೆ ಧನ್ಯವಾದ ತಿಳಿಸಿದರು.

ಆ ಪಾತ್ರಕ್ಕೆ ನನ್ನನ್ನು ಸೂಚಿಸಿದ್ದರು

ಆ ಪಾತ್ರಕ್ಕೆ ನನ್ನನ್ನು ಸೂಚಿಸಿದ್ದರು

''ಒಂದು ಸಲ ತಬರನ ಕಥೆ ನಾಟಕ ಮಾಡುವಾಗ, ನಾನು ಬ್ಯಾಕ್ ಸ್ಟೇಜ್ ನಲ್ಲಿ ಕೆಲಸ ಮಾಡ್ತಿದ್ದೆ. ಆಗ ಇನ್ಸ್ ಪೆಕ್ಟರ್ ಪಾತ್ರ ಕೊಟ್ಟರು. ನಾನು ಬೇಡ ಎಂದು ನಿರಾಕರಿಸಿದೆ. ನನಗೆ ಪ್ರಾಕ್ಟೀಸ್ ಇಲ್ಲ, ಭಯ ಬೇರೆ. ಆದರೂ ಮಾಡು ಮಾಡು ಅಂತ ಒತ್ತಾಯ ಮಾಡಿ ಕೊಟ್ಟರು. ನಾಗಾಭರಣ ಅವರ ಜೊತೆ ಆಕ್ಟ್ ಮಾಡಿದೆ. ಡೈಲಾಗ್ ಬೇರೆ ಮರೆತುಹೋಗಿದ್ದೆ. ಆಮೇಲೆ ಅವರೇ ಡೈಲಾಗ್ ಎತ್ತು ಕೊಟ್ಟರು'' ಎಂದು ನೆನಪು ಮೆಲುಕು ಹಾಕಿದರು.

ಕನ್ನಡದ ದೈತ್ಯ ಪ್ರತಿಭೆ

ಕನ್ನಡದ ದೈತ್ಯ ಪ್ರತಿಭೆ

''ಅವರು ಬೆಳೆದ ಬಂದ ಹಾದಿಯನ್ನ ನೆನಪಿನಲ್ಲಿ ಇಟ್ಟುಕೊಳ್ಳುವುದು ಮುಖ್ಯ. ಯಶ್ ಬಹಳ ನಂಬಿಕೆ, ದೃಡವಾಗಿ ಕೆಲಸ ಮಾಡಿಕೊಂಡು ಬಂದಿದ್ದಾರೆ. ಆ ನಂಬಿಕೆ ಇಲ್ಲಿಗೆ ತಂದು ನಿಲ್ಲಿಸಿದೆ. ನಿಜಕ್ಕೂ ಅವರಿಗೆ ಹ್ಯಾಟ್ಸಾಫ್. ಯಾಕಂದ್ರೆ ಕನ್ನಡದಲ್ಲಿ ಅದ್ಭುತವಾದ ದೈತ್ಯ ಪ್ರತಿಭೆ. ಖುಷಿಯಾಗುತ್ತೆ'' ಎಂದು ಟಿಎಸ್ ನಾಗಾಭರಣ ಅಭಿಪ್ರಾಯ ವ್ಯಕ್ತಪಡಿಸಿದರು.

More from Filmibeat

English summary
Kannada actor, rocking star yash spoke about legendary director TS nagabharana in weekend with ramesh 4.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X