For Quick Alerts
  ALLOW NOTIFICATIONS  
  For Daily Alerts

  'ಕೆಜಿಎಫ್ 2' ಟಿವಿಯಲ್ಲಿ ಗ್ರ್ಯಾಂಡ್‌ ಪ್ರೀಮಿಯರ್‌ಗೆ ವೇದಿಕೆ ಸಜ್ಜು: ಇನ್ನು ನಾಲ್ಕೇ ದಿನ ಬಾಕಿ!

  |

  ಸ್ಯಾಂಡಲ್‌ವುಡ್‌ಗೆ ಹೊಸ ಖದರ್ ಕೊಟ್ಟ ಸಿನಿಮಾ 'ಕೆಜಿಎಫ್ ಚಾಪ್ಟರ್ 2'. ಇಡೀ ದೇಶವೇ ಬೆಚ್ಚಿಬೀಳುವಂತೆ ಬಾಕ್ಸಾಫೀಸ್ ಲೂಟಿ ಮಾಡಿದ್ದ ಸಿನಿಮಾವಿದು. ಬಹುತೇಕ ಮಂದಿ ಈಗಾಗಲೇ ಈ ಸಿನಿಮಾ ನೋಡಿ ಶಿಳ್ಳೆ ಹೊಡೆದಿದ್ದಾರೆ. ಹಾಗಿದ್ದರೂ, ಇನ್ನೂ ಸಿನಿಮಾ ನೋಡದೆ ಇರೋರು ಬಹಳ ಮಂದಿ ಇದ್ದಾರೆ. ಅಂತಹವರಿಗಾಗಿ ಶುಭ ಶುದ್ದಿಯೊಂದಿದೆ.

  'ಕೆಜಿಎಫ್ ಚಾಪ್ಟರ್ 2' ರಿಲೀಸ್ ಆದಂತೆಯೇ ಕಿರುತೆರೆಯಲ್ಲೂ ಅದ್ಧೂರಿಯಾಗಿ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. 'ಕೆಜಿಎಫ್ 2' ಹೇಳಿ- ಕೇಳಿ ಪ್ಯಾನ್ ಇಂಡಿಯಾ ಸಿನಿಮಾ ಆಗಿರುವುದರಿಂದ ಕಿರುತೆರೆಯಲ್ಲಿ ಪ್ರಸಾರ ಮಾಡುವುದಕ್ಕೆ ವೇದಿಕೆ ರೆಡಿ ಮಾಡಿಕೊಂಡಿದೆ.

  ತಂದೆ ಹುಟ್ಟುಹಬ್ಬದ ಹಿನ್ನೆಲೆ ಕಣ್ಣಿನ ಆಸ್ಪತ್ರೆ 50 ಲಕ್ಷ ರೂ. ನೀಡಿದ ಪ್ರಶಾಂತ್ ನೀಲ್ತಂದೆ ಹುಟ್ಟುಹಬ್ಬದ ಹಿನ್ನೆಲೆ ಕಣ್ಣಿನ ಆಸ್ಪತ್ರೆ 50 ಲಕ್ಷ ರೂ. ನೀಡಿದ ಪ್ರಶಾಂತ್ ನೀಲ್

  'ಕೆಜಿಎಫ್ 2' ಸಿನಿಮಾವನ್ನು ಟಿವಿಯಲ್ಲಿ ಪ್ರಸಾರ ಮಾಡುವುದಕ್ಕೆ ಜೀ ಕನ್ನಡ ಸಕಲ ಸಿದ್ಧತೆಗಳನ್ನೂ ಮಾಡಿಕೊಂಡಿದೆ. ಭಾರತ ಚಿತ್ರರಂಗವೇ ಕರ್ನಾಟಕದತ್ತ ತಿರುಗಿ ನೋಡುವಂತೆ ಮಾಡಿದ ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ 'ಕೆಜಿಎಫ್ ಚಾಪ್ಟರ್ 2' ಈಗ ಟಿವಿಯಲ್ಲಿ ಸದ್ದು ಮಾಡುವುದಕ್ಕೆ ಮುಹೂರ್ತ ಫಿಕ್ಸ್ ಮಾಡಿಕೊಂಡಿದೆ.

  ಕಿರುತೆರೆಯಲ್ಲಿ 'ಕೆಜಿಎಫ್ 2'

  ಕಿರುತೆರೆಯಲ್ಲಿ 'ಕೆಜಿಎಫ್ 2'

  ಯಶ್ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ಕಿರುತೆರೆಗೆ ಲಗ್ಗೆ ಇಡಲು ತುದಿಗಾಲಲ್ಲಿ ನಿಂತಿದೆ. ಕಳೆದ ಕೆಲವು ದಿನಗಳಿಂದ ಈ ಸಿನಿಮಾ ಬಿಡುಗಡೆ ಬಗ್ಗೆ ಪ್ರಚಾರ ಮಾಡಲಾಗುತ್ತಲೇ ಇತ್ತು. ಕೊನೆಗೂ ಈಗ 'ಕೆಜಿಎಫ್ 2' ಸಿನಿಮಾವನ್ನು ಕಿರುತೆರೆಯಲ್ಲಿ ಯಾವಾಗ ಬಿಡುಗಡೆ ಆಗುತ್ತೆ ಎನ್ನುವುದನ್ನು ರಿವೀಲ್ ಮಾಡಿದೆ. ಇದೇ ಆಗಸ್ಟ್ 20 ರಂದು ಸಂಜೆ 7 ಗಂಟೆಗೆ ಜೀ ಕನ್ನಡ 'ಕೆಜಿಎಫ್ 2' ಸಿನಿಮಾವನ್ನು ಪ್ರಸಾರ ಮಾಡುತ್ತಿದೆ.

  ಟಿವಿಯಲ್ಲಿ 'ಕೆಜಿಎಫ್ 2' ಪ್ರಸಾರ: 80 ಅಡಿ ಬ್ಯಾನರ್ ಬಿಟ್ಟು ಭರ್ಜರಿ ಪ್ರಚಾರ!ಟಿವಿಯಲ್ಲಿ 'ಕೆಜಿಎಫ್ 2' ಪ್ರಸಾರ: 80 ಅಡಿ ಬ್ಯಾನರ್ ಬಿಟ್ಟು ಭರ್ಜರಿ ಪ್ರಚಾರ!

  'ಕೆಜಿಎಫ್ 2' ಕಿರುತೆರೆ ದಾಖಲೆ ಮೇಲೆ ಕಣ್ಣು!

  'ಕೆಜಿಎಫ್ 2' ಕಿರುತೆರೆ ದಾಖಲೆ ಮೇಲೆ ಕಣ್ಣು!

  'ಕೆಜಿಎಫ್ ಚಾಪ್ಟರ್ 2' ಸಿನಿಮಾ ಮೇಲೆ ಇಡೀ ದೇಶವೇ ಕಣ್ಣಿಟ್ಟಿದೆ. ಥಿಯೇಟರ್‌ಗಳಲ್ಲಿ ದಾಖಲೆ ಬರೆದಿದ್ದಾಗಿದೆ. ಓಟಿಟಿಯಲ್ಲೂ 'ಕೆಜಿಎಫ್ 2' ಹವಾ ಇನ್ನೂ ನಿಂತಿಲ್ಲ. ಈಗ ಕಿರುತೆರೆಗೆ ಲಗ್ಗೆ ಇಡುತ್ತಿದ್ದು, ಮೊದಲ ಪ್ರಸಾರದಲ್ಲಿ ಎಷ್ಟು ರೇಟಿಂಗ್ ಗಿಟ್ಟಿಸಿಕೊಳ್ಳಬಹುದು ಎಂಬ ಕುತೂಹಲವಿದೆ. ಯಶ್, ಸಂಜಯ್ ದತ್, ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ ಅಭಿನಯದ ಈ ಸಿನಿಮಾ ಟಿಆರ್‌ಪಿಯಲ್ಲೂ ದಾಖಲೆ ಬರೆಯುತ್ತಾ? ಅನ್ನೋದನ್ನು ಎದುರು ನೋಡಲಾಗುತ್ತಿದೆ.

  'ಕೆಜಿಎಫ್ 2' ಕ್ರೇಜ್ ಇನ್ನೂ ಕಮ್ಮಿಯಾಗಿಲ್ಲ

  'ಕೆಜಿಎಫ್ 2' ಕ್ರೇಜ್ ಇನ್ನೂ ಕಮ್ಮಿಯಾಗಿಲ್ಲ

  ರಾಕಿಂಗ್ ಸ್ಟಾರ್ ಯಶ್‌ ಅನ್ನು ಪ್ಯಾನ್ ಇಂಡಿಯಾ ಸ್ಟಾರ್ ಮಾಡಿದ ಸಿನಿಮಾ 'ಕೆಜಿಎಫ್ 2'. ಈ ಸಿನಿಮಾವನ್ನು ಮತ್ತೆ ಕಿರುತೆರೆಯಲ್ಲಿ ನೋಡುವುದಕ್ಕೆ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಕನ್ನಡ ಅಷ್ಟೇ ಅಲ್ಲ. ತೆಲುಗು, ತಮಿಳು ಹಾಗೂ ಮಲಯಾಳಂ ಕಿರುತೆರೆಯಲ್ಲೂ 'ಕೆಜಿಎಫ್ 2' ರಾರಾಜಿಸಲಿದೆ. ಬಾಕ್ಸಾಫೀಸ್‌ನಲ್ಲಿ 'ಕೆಜಿಎಫ್ 2' ಸಿನಿಮಾ ಕ್ರೇಜ್ ಏನೂ ಕಮ್ಮಿಯಾಗಿಲ್ಲ. ವಿಶ್ವದಾದ್ಯಂತ ಈ ಸಿನಿಮಾ 1250 ಕೋಟಿ ರೂ. ಅನ್ನು ಕಲೆಹಾಕಿತ್ತು. ಕನ್ನಡ ಸಿನಿಮಾ ಮಟ್ಟಿಗೆ ಈ ಸಿನಿಮಾ ದಾಖಲೆಯೇ ಸರಿ.

  'ಕೆಜಿಎಫ್ 3' ಕಥೆಯೇನು?

  'ಕೆಜಿಎಫ್ 3' ಕಥೆಯೇನು?

  'ಕೆಜಿಎಫ್ ಚಾಪ್ಟರ್ 2' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಗೆಲ್ಲುತ್ತಿದ್ದಂತೆ 'ಕೆಜಿಎಫ್ 3' ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಇನ್ನೊಂದು ಕಡೆ ಯಶ್ 'ಕೆಜಿಎಫ್ 3'ಗಾಗಿ ಕಾದು ಕೂತಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿವೆ. ಈ ಸಿನಿಮಾ ಯಾವಾಗ ಸೆಟ್ಟೇರುತ್ತೋ ಗೊತ್ತಿಲ್ಲ. ಆದರೆ, ಸಿನಿಮಾ ಸೆಟ್ಟೇರುವುದಂತೂ ನಿಜ. ಇನ್ನೊಂದು ಕಡೆ ಯಶ್ ಮುಂದಿನ ಸಿನಿಮಾದ ಬಗ್ಗೆನೂ ಚರ್ಚೆಯಾಗುತ್ತಿದೆ. ಯಶ್ ಮಾತ್ರ ಯಾವ ಸುಳಿವನ್ನೂ ಬಿಟ್ಟು ಕೊಡುತ್ತಿಲ್ಲ.

  English summary
  Yash Starrer KGF Chapter 2 World Premier On August 20th On Zee Kannada, Know More.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X