ಎಡೆಯೂರು ಶ್ರೀ ಸಿದ್ದಲಿಂಗೇಶ್ವರ: ನಾಗ ಪಂಚಮಿಗಾಗಿ ಸ್ಟಾರ್ ಸುವರ್ಣದಲ್ಲಿ ನಾಗಮಣಿ ರಹಸ್ಯ ಬಯಲು

By ಎಸ್ ಸುಮಂತ್

ಸ್ಟಾರ್ ಸುವರ್ಣ ವಾಹಿನಿಯಲ್ಲಿ 'ಎಡೆಯೂರು ಶ್ರೀ ಸಿದ್ದಲಿಂಗ' ಎಂಬ ಧಾರಾವಾಹಿ‌ ಮೂಡಿ ಬರುತ್ತಿದ್ದು, ಈಗಾಗಲೇ ಎಲ್ಲರನ್ನು ಭಕ್ತಿ ಭಾವದಿಂದ ಸೆಳೆದಿದೆ. ಶಿವನ ಬಗ್ಗೆ ಸಿದ್ದಲಿಂಗನಿಗೆ ಇರುವ ಭಕ್ತಿಯನ್ನು ತುಂಬಾ ಅದ್ಭುತವಾಗಿ ತೋರಿಸಲಾಗಿದೆ. ಇದೀಗ ಎಡೆಯೂರು ಶ್ರೀ ಸಿದ್ದಲಿಂಗೇಶ್ವರ ಧಾರಾವಾಹಿಯಲ್ಲಿಯೇ ವಿಶೇಷ ಎಪಿಸೋಡ್ ಮಾಡಲಾಗಿದೆ. ಅದು ನಾಗರಪಂಚಮಿಯ ದಿನಕ್ಕಾಗಿ.

ನಾಗಮಣಿ ರಹಸ್ಯದ ಬಗೆದಷ್ಟು ಪುರಾಣಗಳು ಸಿಗುತ್ತಾ ಹೋಗುತ್ತವೆ. ಹಲವು ವಾಹಿನಿಗಳಲ್ಲಿ ನಾಗಮಣಿ ರಹಸ್ಯಕ್ಕೆ ಸಂಬಂಧಪಟ್ಟಂತೆ ಧಾರಾವಾಹಿಗಳು ಬಂದಿವೆ, ಬರುತ್ತಿವೆ. ಆದರೂ ನಾಗಮಣಿ ರಹಸ್ಯ ತಿಳಿಯುವಾಗ ಎಲ್ಲಿಯೂ ಬೋರ್ ಹೊಡೆಸಲ್ಲ. ಇದೀಗ ಸ್ಟಾರ್ ಸುವರ್ಣ ವಾಹಿನಿಯಲ್ಲೂ ನಾಗಮಣಿ ರಹಸ್ಯದ ಸ್ಪೆಷಲ್ ಎಪಿಸೋಡ್ ಆರಂಭಿಸಿದ್ದು, ಹಿರಿಯ ಕಲಾವಿದರು ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಹಂಸ ನಾಗ ಅರಸಿಯಾಗಿ ಎಂಟ್ರಿ

ಹಂಸ ನಾಗ ಅರಸಿಯಾಗಿ ಎಂಟ್ರಿ

ಎಡೆಯೂರು ಶ್ರೀ ಸಿದ್ದಲಿಂಗೇಶ್ವರ ಧಾರಾವಾಹಿಯಲ್ಲಿ ನಾಗಪಂಚಮಿಯ ವಿಶೇಷತೆಗೆ ನಾಗಮಣಿ ರಹಸ್ಯದ ಎಪಿಸೋಡ್ ತರಲಾಗಿದೆ. ಅದರಲ್ಲಿ ನಾಗ ಅರಸಿಯಾಗಿ ಹಂಸ ನಟಿಸಿದ್ದು ಅನುಭವ ಹಂಚಿಕೊಂಡಿದ್ದು ಹೀಗೆ, "ಈ ಹಿಂದೆಯೆಲ್ಲಾ ನಾನು ಪೌರಾಣಿಕ ಪಾತ್ರದಲ್ಲಿ ಅಭಿನಯಿಸಿದ್ದೇನೆ. ಆದರೆ ಈ ಧಾರಾವಾಹಿಯ ಪಾತ್ರ ಒಂದು ರೀತಿಯ ವಿಭಿನ್ನ ಪಾತ್ರ. ಈ ಧಾರಾವಾಹಿಯಲ್ಲಿ ಹಲವಾರು ಅನುಭವಿ ಕಲಾವಿದರಿದ್ದಾರೆ. ಕಲ್ಲು ನಾಗರಕ್ಕೆ ಪೂಜೆ ಮಾಡುತ್ತೇವೆ. ಆದರೆ ನಿಜವಾದ ಹಾವು ಎದುರಿಗೆ ಬಂದರೆ ಭಯ ಪಡುತ್ತೇವೆ. ಹಾವು ಕಂಡರೆ ಭಯ ಪಡುತ್ತಿದ್ದವಳು, ಈಗ ಹಾವಿನ ಅಮ್ಮನಾಗಿ ಅಭಿನಯಿಸುತ್ತಿದ್ದೇನೆ. ಹಾವಿನ ಸಬ್ಜೆಕ್ಟ್ ನಲ್ಲಿ ನಟಿಸಬೇಕೆಂದರೇನೆ ತುಂಬಾ ಖುಷಿಯಾಗುತ್ತೆ" ಎಂದಿದ್ದಾರೆ.

ನಾಗಿಣಿಯಾದ ಸಂಗೀತ ಭಟ್

ನಾಗಿಣಿಯಾದ ಸಂಗೀತ ಭಟ್

ಮೊದಲೇ ಹೇಳಿದಂತೆ ಈ ವಿಶೇಷ ಎಪಿಸೋಡಿನಲ್ಲಿ ದೊಡ್ಡ ದೊಡ್ಡ ಕಲಾವಿದರ ಬಳಗವನ್ನೇ ತಂದು ಕೂರಿಸಿದ್ದಾರೆ. ನಾಗಮಣಿ ರಹಸ್ಯದಲ್ಲಿ ಪ್ರಮುಖ ಪಾತ್ರವಹಿಸುವುದು ನಾಗಿಣಿ. ಖ್ಯಾತ ನಟಿ ಸಂಗೀತ ಭಟ್ ಈ ಪಾತ್ರ ನಿರ್ವಹಿಸುತ್ತಿದ್ದಾರೆ. ಈ ಬಗ್ಗೆ ಅನುಭವ ಹಂಚಿಕೊಂಡಿರುವ ಸಂಗೀತ ಭಟ್, ಒಂಥರ ಸ್ಪೆಷಲ್ ಎಕ್ಸಪೀರಿಯನ್ಸ್ ಇದು. ಗ್ರೀನ್ ಮ್ಯಾಟ್‌ನಲ್ಲಿಯೇ ಪ್ರೋಮೋ ಶೂಟ್ ಮಾಡಿದ್ದಾರೆ. ನನಗೆ ಇದು ಮೊದಲ ಅನುಭವ. ತುಂಬಾ ವರ್ಷದಿಂದ ನಾಗಿಣಿ ಎಂಬ ಪಾತ್ರವನ್ನು ಮಾಡಬೇಕು ಎಂಬ ಆಸೆ ಇತ್ತು. ಅದು ಇಜ ಮೂಲಕ ಈಡೇರಿದೆ" ಎಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಕಾಮಿಡಿಗೂ ಸೈ ವಿಲನ್ ಗೂ ಜೈ

ಕಾಮಿಡಿಗೂ ಸೈ ವಿಲನ್ ಗೂ ಜೈ

ನಯನಾ ಅವರನ್ನು ಇಷ್ಟು ದಿನ ಕಾಮಿಡಿ ಸ್ಟಾರ್ ಆಗಿಯೇ ನೋಡಿದ್ದುಂಟು. ಆದರೆ ವಿಲನ್ ಆದಾಗ ಹೇಗೆ ಕಾಣುತ್ತಾರೆ. ಇದನ್ನು ಕಂಡು ಅವರ ಫ್ಯಾನ್ಸ್ ಕೂಡ ದಂಗಾಗಿದ್ದರು. ಈ ಬಗ್ಗೆ ನಯನಾ ಹೇಳಿದ್ದು ಹೀಗೆ, "ಸ್ಟಾರ್ ಸುವರ್ಣದಲ್ಲಿ 'ಎಡೆಯೂರು ಸಿದ್ದಲಿಂಗೇಶ್ವರ' ಧಾರಾವಾಹಿಯ ನಾಗಮಣಿ ರಹಸ್ಯದಲ್ಲಿ ಒನ್ ಆಫ್ ದಿ ವಿಲನ್ ಅಂತ ಗೊತ್ತಿರಲಿಲ್ಲ. ನಾನು ಕೆಲಸದವಳಂತೆ ಇದ್ದು ಕೊಲೆ ಮಾಡಬೇಕು. ಅದು ಆ ಪುಟಾಣಿ ಮಗು ಮುದ್ದು ಮುದ್ದಾಗಿರುತ್ತೆ. ಆ ಮಗು ಮೇಲೆ ಕೋಪ ಮಾಡಿಕೊಳ್ಳುವುದಕ್ಕೆ ತುಂಬಾನೇ ಕಷ್ಟ ಆಯ್ತು. ಮೊದಲ ಬಾರಿಗೆ ಈ ರೀತಿ ಪೌರಾಣಿಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದು. ಆದರೆ ವಿಲನ್ ಪಾತ್ರದಲ್ಲಿ ನಟಿಸುವುದಕ್ಕೆ ಟೀಂ ಸಪೋರ್ಟ್ ತುಂಬಾ ಇತ್ತು ಎಂದಿದ್ದಾರೆ.

ಯಾರು ಯಾವೆಲ್ಲಾ ಪಾತ್ರ ?

ನಾಗಮಣಿ ರಹಸ್ಯ ಒಂದು ಸ್ಪೆಷಲ್ ಎಪಿಸೋಡ್. ಆ ಎಪಿಸೋಡಿನಲ್ಲಿ ಮುಗ್ಧ ಹುಡುಗಿಯಾಗಿ, ಮನೆಯವರಿಗೆಲ್ಲಾ ಅಚ್ಚುಮೆಚ್ಚಿನ ಮಗಳಾಗಿ ಅಂಬಿಕಾ ಪಾತ್ರ ಬರುತ್ತದೆ. ಅಂಬಿಕಾಳ ಅಣ್ಣ ಸುದರ್ಶನನ ಪಾತ್ರ, ಅಂಬಿಕಾಳ ತಂದೆಯಾಗಿ ಸುದರ್ಶನಯ್ಯ, ಅಂಬಿಕಾಳ ತಾಯಿಯಾಗಿ ಲಲಿತಾ ಕಾಣಿಸಿಕೊಂಡಿದ್ದು ಮಕ್ಕಳೇ ಇವಳಿಗೆ ಮುತ್ತು ರತ್ನಗಳು.

More from Filmibeat

English summary
Yedeyuru Shri Siddalingeshwara Serial July 31st Episode Written Update. Here is the details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X