700 ಸಂಚಿಕೆ ಪೂರೈಸಿದ 'ಎಡೆಯೂರು ಶ್ರೀ ಸಿದ್ದಲಿಂಗೇಶ್ವರ'.. ಹೊಸ ಅಧ್ಯಾಯಕ್ಕೆ ನಾಂದಿ..!

By ಎಸ್ ಸುಮಂತ್

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಎಡೆಯೂರು ಶ್ರೀ ಸಿದ್ಧಲಿಂಗೇಶ್ವರ ಧಾರಾವಾಹಿ ಅದ್ಭುತವಾಗಿ ಮೂಡಿ ಬರುತ್ತಿದೆ. ಪೌರಾಣಿಕ ಧಾರಾವಾಹಿಯಾಗಿರುವ ಕಾರಣ ಈ ಧಾರಾವಾಹಿ ಎಲ್ಲರ ಗಮನ ಸೆಳೆಯುತ್ತಿದೆ. ಟಿಆರ್‌ಪಿ ವಿಚಾರದಲ್ಲೂ ಸ್ಟಾರ್ ಸುವರ್ಣ ವಾಹಿನಿಯ ಎಲ್ಲಾ‌ ಧಾರಾವಾಹಿಗಳಿಗಿಂತ ಮೊದಲ ಸ್ಥಾನದಲ್ಲಿದೆ. ಸಿದ್ದಲಿಂಗೇಶ್ವರರ ಜೀವನ ಚರಿತ್ರೆಯನ್ನು ಈ ಧಾರಾವಾಹಿ ಮೂಲಕ ಬಿಂಬಿಸಲಾಗುತ್ತಿದೆ.

ಸದ್ಯ ಧಾರಾವಾಹಿ ಮಹತ್ವದ ತಿರುವು ಪಡೆಯುವ ಹಂತಕ್ಕೆ ಬಂದು ನಿಂತಿದೆ. ಇಷ್ಟು ದಿನ ಸಿದ್ದಲಿಂಗನಿಗೆ ಜನರ ಸೇವೆಯೇ ಮುಖ್ಯವಾಗಿತ್ತು. ಈಗ ಪ್ರಪಂಚ ಬೇರೆಯದ್ದಾಗಿಯೇ ತೆರೆದುಕೊಳ್ಳಲಿದೆ. ಸದ್ಯ 700 ಸಂಚಿಕೆ‌ಗಳ ಸಂಭ್ರಮದಲ್ಲಿದೆ 'ಎಡೆಯೂರು ಶ್ರೀ ಸಿದ್ಧಲಿಂಗೇಶ್ವರ' ಧಾರಾವಾಹಿ.

Yediyur Shree Siddhalingeshwara completes 700 episodes and new chapter has began


ಸಿದ್ದಲಿಂಗನಿಗೆ ಎದುರಾಗಿದೆ ಹೊಸ ಸವಾಲು

ಸಿದ್ದಲಿಂಗನಿಗೆ ಹುಟ್ಟಿದಾಗಿನಿಂದಲೂ ಸವಾಲುಗಳು ಕಡಿಮೆ ಏನು ಇಲ್ಲ. ಸಾಕಷ್ಟು ಜನರ ಜೀವ ಕಾಪಾಡಿರುವುದು ಇದೇ ಸಿದ್ದಲಿಂಗ. ಸವಾಲುಗಳನ್ನು ಸ್ವೀಕರಿಸುತ್ತಲೇ ಬೆಳೆದಿರುವ ಸಿದ್ದಲಿಂಗನಿಗೆ ಇದೊಂದು ಕಷ್ಟದ ಸನ್ನಿವೇಶ ಎದುರಾಗಿದೆ. ಅದುವೇ ತಮ್ಮ ಬುದ್ಧಿಯವರ ಪ್ರಾಣ ಉಳಿಸುವ ಸವಾಲು. ಬುದ್ದಿಯವರಿಗೆ ಅನಾರೋಗ್ಯ ಕಾಡುತ್ತಿದೆ. ಏನೇ ಮಾಡಿದರೂ ವಾಸಿಯಾಗುತ್ತಿಲ್ಲ. ಏನೇನೋ ಸಮಸ್ಯೆಯನ್ನು ಬಗೆಹರಿಸುವ ಸಿದ್ಧಲಿಂಗನಿಗೆ ಬುದ್ದಿಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಆಗದೆ ಒದ್ದಾಡುತ್ತಿದ್ದಾರೆ. ಹಲವು ದಾರಿಗಳಲ್ಲೂ ಉಪಾಯವನ್ನು ಹುಡುಕುತ್ತಿದ್ದಾರೆ.

ಗುರುಗಳ ಮಾತು ನೆನೆಸಿಕೊಂಡ ಸಿದ್ದಲಿಂಗ

ಅನಾರೋಗ್ಯ ಬಾಧಿಸಿದರೆ ಸಿದ್ದಲಿಂಗ ಬಳಿ ಒಂದು ಔಷಧಿಯ ಚಕ್ಕೆ ಇದೆ. ಅದನ್ನು ನೀಡಿದರೆ ಬಹಳ ಬೇಗ ಗುಣಮುಖರಾಗುತ್ತಾರೆ. ಆದರೆ ಬುದ್ದಿಗಳಿಗೆ ಚಕ್ಕೆಯನ್ನು ನೀಡಿದರೂ ಗುಣಮುಖರಾಗುತ್ತಿಲ್ಲ ಯಾಕೆ? ಎಂಬ ಪ್ರಶ್ನೆ ಸಿದ್ದಲಿಂಗನದ್ದು. ಆಗ ತಮ್ಮ ಗುರುಗಳು ಬಸವಣ್ಣ ಹೇಳಿದ್ದನ್ನು ನೆನೆಸಿಕೊಂಡಿದ್ದಾರೆ. ಚಕ್ಕೆ ಕುಡಿಸಿದರೂ ಗುಣಮುಖರಾಗದೆ ಹೋದರೆ ಅವರ ಆತ್ಮ ದೇಹದಿಂದ ದೂರವಾಗಬೇಕು ಅಂತ ಬಯಸುತ್ತಾ ಇರುತ್ತದೆ ಎಂಬುದನ್ನು ವಿವರಿಸಿದ್ದಾರೆ. ಅದನ್ನು ನೆನೆದು ಸಿದ್ದಲಿಂಗ ಆತಂಕಗೊಂಡಿದ್ದಾರೆ. ಎಷ್ಟೇ ತಡೆದುಕೊಂಡರೂ ದುಃಖ ಬರುತ್ತಲೇ ಇದೆ.

Yediyur Shree Siddhalingeshwara completes 700 episodes and new chapter has began


ಬುದ್ದಿ ಬಳಿ ಅಳುತ್ತಾ ಕೂತ ಸಿದ್ಧಲಿಂಗ

ಎಷ್ಟೇ ಪ್ರಯತ್ನ ಪಟ್ಟರು ಬುದ್ದಿಗಳು ಉಳಿಯಲಿಲ್ಲ ಎಂದಾಗ ಗುರುವಿನ ಮಾತು ಅರಿವಿಗೆ ಬರುತ್ತದೆ. ಆಗ ಸಿದ್ದಲಿಂಗ ಕೂಡ ಯೋಚನೆ ಮಾಡ್ತಾರೆ. ಇರಬಹುದು ಬುದ್ದಿಗಳ ಆಯಸ್ಸು ಮುಗಿದಿರಬಹುದು ಎಂದು ಸೀದಾ ಬುದ್ಧಿಗಳ ಬಳಿ ಬರುತ್ತಾರೆ. ಬುದ್ದಿಗಳನ್ನು ನೋಡಿದ ಕೂಡಲೇ ಅಳುವುದಕ್ಕೆ ಶುರು ಮಾಡುತ್ತಾರೆ. ವಿಚಾರ ಏನು ಅಂತಾನೂ ಹೇಳಲ್ಲ. ಸುಮ್ಮನೆ ಅಳುತ್ತಾ ಕೂತು ಬಿಡುತ್ತಾರೆ. ಬುದ್ದಿಗಳಿಗೆ ಸಿದ್ದಲಿಂಗ ಅಳುತ್ತಿದ್ದರೆ ಮಗುವಿನಂತೆ ಫೀಲ್ ಆಗ್ತಾರೆ. ಆದರೆ ಕಾರಣ ಏನು ಎಂಬುದು ಗೊತ್ತಾಗುತ್ತಿಲ್ಲ. ಸಿದ್ದಲಿಂಗರ ಜೊತೆಗೆ ಬುದ್ದಿಗಳು ಅಳುತ್ತಾ ಕೂತಿದ್ದಾರೆ.

700 ಸಂಚಿಕೆ ಪೂರೈಸಿದ ಸಿದ್ಧಲಿಂಗ

ಸದ್ಯ 'ಎಡೆಯೂರು ಶ್ರೀ ಸಿದ್ಧಲಿಂಗೇಶ್ವರ' ಧಾರಾವಾಹಿ ಒಂದು ಮೈಲಿಗಲ್ಲನ್ನೇ ದಾಟಿದೆ ಎಂದರೆ ತಪ್ಪಾಗುವುದಿಲ್ಲ. ಯಾಕಂದ್ರೆ, ಒಂದು ಧಾರಾವಾಹಿ ಪ್ರೇಕ್ಷಕರಿಗೆ ಬೇಸರ ಮೂಡಿಸದೆ 100 ಸಂಚಿಕೆಗಳನ್ನೇ ದಾಟುವುದು ಕಷ್ಟ. ಅಂತದ್ರಲ್ಲಿ 700 ಸಂಚಿಕೆಗಳನ್ನು ಪೂರೈಸಿದೆ 'ಎಡೆಯೂರು ಶ್ರೀ ಸಿದ್ಧಲಿಂಗೇಶ್ವರ' ಧಾರಾವಾಹಿ. ಹೊಸತನದೊಂದಿಗೆ ಪ್ರೇಕ್ಷಕರನ್ನು ಈ ಧಾರಾವಾಹಿ ಸೆಳೆದಿದೆ. ಸಿದ್ದಲಿಂಗೇಶ್ವರರು ಹುಟ್ಟಿ ಬೆಳೆದ ರೀತಿ ನೀತಿಯನ್ನು ಕಥೆ ರೂಪದಲ್ಲಿ ಕಟ್ಟಿಕೊಡುತ್ತಿದ್ದಾರೆ. ಈಗ 700 ಸಂಚಿಕೆಗಳ ಸಂಭ್ರಮಕ್ಕೆ ಹೊಸತನದೊಂದಿಗೆ ಧಾರಾವಾಹಿ ಅಪ್ಡೇಟ್ ಆಗಿದೆ. ಅಂದ್ರೆ, ಸಿದ್ಧಲಿಂಗ ಅವರ ಮತ್ತೊಂದು ಮಗುಲು ಆರಂಭವಾಗುತ್ತಿದೆ. ಗಡ್ಡಧಾರಿಯಾಗಿ ಸಿದ್ಧಲಿಂಗ ಅವರು ಇನ್ಮುಂದೆ ಕಾಣಿಸಿಕೊಳ್ಳಲಿದ್ದಾರೆ.

More from Filmibeat

English summary
Star Suvarna serial Yediyur Shree Siddhalingeshwara completes 700 episodes and new chapter has began, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X