twitter
    For Quick Alerts
    ALLOW NOTIFICATIONS  
    For Daily Alerts

    400 ಸಂಚಿಕೆಗಳ ಯಶಸ್ಸಿನ ಹಾದಿಯಲ್ಲಿದೆ ಎಡೆಯೂರು ಸಿದ್ದಲಿಂಗೇಶ್ವರ ಧಾರಾವಾಹಿ!

    By ಎಸ್ ಸುಮಂತ್
    |

    ಎಡೆಯೂರು ಶ್ರೀ ಸಿದ್ದಲಿಂಗೇಶ್ವರನಿಗೆ ಭಕ್ತರು ಲಕ್ಷಾಂತರ ಮಂದಿ. ಕುಣಿಗಲ್ ಬಳಿ ಇರುವ ಈ ದೇವಸ್ಥಾನಕ್ಕೆ ಸಾಕಷ್ಟು ಭಕ್ತರು ಭೇಟಿ ಕೊಡುತ್ತಲೆ ಇರುತ್ತಾರೆ. ಆ ಸ್ವಾಮಿಯ ಇತಿಹಾಸವನ್ನು ಧಾರಾವಾಹಿ ಮೂಲಕ ಸಾರುತ್ತಿದ್ದಾರೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಮೂಡಿ ಬರುತ್ತಿರುವ ಭಕ್ತಿ ಪ್ರಧಾನ ಧಾರಾವಾಹಿ ಎಡೆಯೂರು ಸಿದ್ದಲಿಂಗದಲ್ಲಿ ಹಲವು ವಿಚಾರಗಳ ಅನಾವರಣವಾಗುತ್ತಿದೆ. ಇದೀಗ ಈ ಧಾರಾವಾಹಿ 400 ಸಂಚಿಕೆಗಳ ಯಶಸ್ವಿ ಹಾದಿಯಲ್ಲಿದೆ.

    ಪ್ರತಿ ದಿನ ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ. ಧಾರಾವಾಹಿಯಲ್ಲಿ ಹಿರಿಯ ನಟ-ನಟಿಯರು ನಟಿಸಿದ್ದಾರೆ. ನವೀನ್ ಕೃಷ್ಣ ಧಾರಾವಾಹಿಯ ನಿರ್ದೇಶನ ಮಾಡುತ್ತಿದ್ದು, ನಂದಿ ಮೂವೀಸ್ ಬ್ಯಾನರ್ ನಲ್ಲಿ ಧಾರಾವಾಹಿಯ ನಿರ್ಮಾಣವಾಗುತ್ತಿದೆ. ಮೊದಲಿನಿಂದಲೂ ಧಾರಾವಾಹಿಯನ್ನು ಭಕ್ತಿಯಿಂದಲೇ ಜನ ನೋಡುತ್ತಿದ್ದಾರೆ. ಅದರಲ್ಲಿ ಬರುವ ಪಾತ್ರಗಳು ಸಹ ಅಷ್ಟರಮಟ್ಟಿಗೆ ರಂಜಿಸುತ್ತಿದ್ದಾರೆ. ಜುಲೈ 4ಕ್ಕೆ 400ರ ಸಂಭ್ರಮದ ಸಂಚಿಕೆ ಪ್ರಸಾರವಾಗಲಿದೆ.

    ಗೌತಮಿ ಜಾದವ್: ಪರ್ಪಲ್ ಲೆಹೆಂಗಾದಲ್ಲಿ ಮಿಂಚಿದ ಸತ್ಯಗೌತಮಿ ಜಾದವ್: ಪರ್ಪಲ್ ಲೆಹೆಂಗಾದಲ್ಲಿ ಮಿಂಚಿದ ಸತ್ಯ

    ಶಿವಲಿಂಗವನ್ನು ಮರೆಮಾಚುತ್ತಿರುವ ಅಘೋರ

    ಶಿವಲಿಂಗವನ್ನು ಮರೆಮಾಚುತ್ತಿರುವ ಅಘೋರ

    ಪೌರಾಣಿಕ ಧಾರಾವಾಹಿಗಳಲ್ಲಿ ವಿಲನ್‌ಗಳು ಒಂದು ರೀತಿಯಲ್ಲಿ ವಿಕಾರವಾಗಿಯೇ ಇರುತ್ತಾರೆ. ದೇವಾನು ದೇವತೆಗಳಿಗೆ, ಅವರ ಭಕ್ತರಿಗೆ ಕಾಟ ಕೊಡುತ್ತಲೆ ಇರುತ್ತಾರೆ. ಅದರಂತೆ ಈ ಧಾರಾವಾಹಿಯಲ್ಲೂ ಅಘೋರ ಎಂಬ ಪಾತ್ರ ಸಿದ್ದಲಿಂಗಶ್ರೀಗಳಿಗೆ ಯಾವಾಗಲೂ ತೊಂದರೆ ಕೊಡುವುದರಲ್ಲಿಯೇ ನಿರತರಾಗಿರುತ್ತಾರೆ. ಇದೀಗ ಸಿದ್ದಲಿಂಗರು ತುಂಬಾನೆ ಇಷ್ಟಪಡುವ ಶಿವಲಿಂಗದ ಮೇಲೆ ಆತನ ಕಣ್ಣು ಬಿದ್ದಿದೆ. ಆಶ್ರಮದ ವ್ಯಕ್ತಿಯೊಬ್ಬನ ಮೇಲೆ ತನ್ನ ಮಂತ್ರಶಕ್ತಿಯ ಪ್ರಭಾವ ಬೀರಿ, ಶಿವಲಿಂಗವನ್ನು ಮರೆಮಾಚುವಂತಹ ಕೆಲಸ ಮಾಡಿದ್ದಾನೆ.

    ಸಿದ್ದಲಿಂಗನ ಭಕ್ತಿ ಮುಂದೆ ನಡೆಯಲ್ಲ ಅಘೋರನ ಕೆಟ್ಟತನ

    ಸಿದ್ದಲಿಂಗನ ಭಕ್ತಿ ಮುಂದೆ ನಡೆಯಲ್ಲ ಅಘೋರನ ಕೆಟ್ಟತನ

    ಒಳ್ಳೆಯದ್ದು ಇದ್ದ ಕಡೆ ಕೆಟ್ಟದ್ದು ಇದ್ದೆ ಇರುತ್ತೆ. ದೇವರುಗಳಿಗೆ ಕೆಟ್ಟದ್ದನ್ನು ಮಾಡಲೆಂದೆ ರಾಕ್ಷಸರು ಜನ್ಮ ತಾಳಿರುತ್ತಾರೆ. ಅವರ ಕೆಟ್ಟತನದ ತೀವ್ರತೆ ಎಷ್ಟಿರುತ್ತೆ ಎಂದರೆ, ದೇವರ ತಾಳ್ಮೆಯನ್ನು ಕದಡುವ ತನಕ ಇರುತ್ತದೆ. ಎಡೆಯೂರು ಸಿದ್ದಲಿಂಗ ಧಾರಾವಾಹಿಯಲ್ಲೂ ಅಘೋರ ಎಂಬ ಪಾತ್ರ ಶಿವನಿಗೆ ತೊಂದರೆ ಕೊಡುತ್ತಲೆ ಇರುತ್ತಾನೆ. ಇದೀಗ ಆತನ ಭಕ್ತನ ಆಶ್ರಮಕ್ಕೂ ಹಾವು, ಚೇಳು ಬಿಡುವ ಮೂಲಕ ತೊಂದರೆ ಕೊಟ್ಟಿದ್ದಾನೆ. ಆದರೆ ನಿಜವಾದ ಭಕ್ತಿಯ ಮುಂದೆ ಯಾವ ಕೆಟ್ಟದ್ದು ಉಳಿಯುವುದಿಲ್ಲ ಎಂಬುದಕ್ಕೆ ಇದೊಂದು ಉದಾಹರಣೆ. ಸಿದ್ಧಲಿಂಗ ತನ್ನ ಭಕ್ತಿ ಪರಾಕಷ್ಟೆಯಿಂದ ಅಘೋರ ಬಿಟ್ಟಿದ್ದ ಹಾವು ಚೇಳನ್ನು ಓಡಿಸಿದ್ದಾನೆ.

    ಅಘೋರನ ಆಟ ಶಿವನ ಮುಂದೆ ನಡೆಯಲ್ಲ

    ಅಘೋರನ ಆಟ ಶಿವನ ಮುಂದೆ ನಡೆಯಲ್ಲ

    ಅಘೋರ ತನ್ನ ಮಂತ್ರಶಕ್ತಿಯಿಂದ ಶಿವಲಿಂಗನನ್ನು ಮರೆಮಾಚಿದ್ದಾನೆ. ಈಗ ಶಿವಲಿಂಗವನ್ನು ಹುಡುಕುವ ಜವಾಬ್ದಾರಿ ಸಿದ್ದಲಿಂಗನ ಹೆಗಲ ಮೇಲಿದೆ. ಆಶ್ರಮದಲ್ಲಿದ್ದ ಭಕ್ತರೆಲ್ಲ ಸೇರಿ ಶಿವಲಿಂಗನನ್ನು ಹುಡುಕಲು ಹೊರಟಿದ್ದಾರೆ. ಆದರೆ ಈ ದಾರಿಯಲ್ಲಿಯೂ ಅಘೋರ ಆಟವಾಡುತ್ತಿದ್ದು ಆ ದಾರಿಯನ್ನೇ ಮರೆಸುತ್ತಿದ್ದಾನೆ. ಆದರೆ ಶಿವ ತನ್ನ ಭಕ್ತರನ್ನು ಎಲ್ಲಿ ಬಿಡುತ್ತಾನೆ. ಅವರಿಗಾಗಿ ದಾರಿಯನ್ನು ಮಾಡಿಕೊಡದೆ ಇರಲಾರ ಶಿವ. ಸಿದ್ದಲಿಂಗ ಕೂಡ ತನ್ನಿಷ್ಟದ ಶಿವನನ್ನು ಹುಡುಕದೆ ಬಿಡಲಾರ.

    ಧಾರಾವಾಹಿಯ ಕೊನೆಯಲ್ಲಿ ಬಸವಣ್ಣನ ವಚನಗಳು

    ಎಡೆಯೂರು ಸಿದ್ದಲಿಂಗ ಧಾರಾವಾಹಿಯಲ್ಲಿ ಭಕ್ತಿ ಭಾವ ಹೆಚ್ಚಾಗುವಂತ ದೃಶ್ಯಗಳು ಕಣ್ಣಿಗೆ ಕಟ್ಟುತ್ತಿವೆ. ಅಷ್ಟೇ ಅಲ್ಲ ಬಸವಣ್ಣನ ವಚನಗಳಿಂದ ಒಂದಷ್ಟು ತಿಳುವಳಿಕೆ ಮೂಡಿಸುವ ಕೆಲಸವಾಗುತ್ತಿದೆ. ಬಸವಣ್ಣನ ವಚನಗಳ ಅರ್ಥವನ್ನು ಅನುಸರಿಸಿದರೆ ಮನುಷ್ಯ ಪಾವನನಾಗಿ ಬಿಡುತ್ತಾನೆ. ಓದುವುದಕ್ಕೋ, ತಿಳಿದುಕೊಳ್ಳುವುದಕ್ಕೋ ಸಮಯವಿಲ್ಲದವರಿಗೆ ಈ ಧಾರಾವಾಹಿ ಮೂಲಕ ವಚನಾಮೃತ ನೀಡುವ ಕಾರ್ಯವಾಗುತ್ತಿದೆ. ಧಾರಾವಾಹಿ ಮುಗಿದ ಬಳಿಕ ಪ್ರತಿದಿನವೂ ಬಸವಣ್ಣನ ವಚನದಿಂದಲೇ ಧಾರಾವಾಹಿ ಮುಕ್ತಾಯವಾಗುತ್ತದೆ. ಇದು ಪ್ರೇಕ್ಷಕರ ಖುಷಿಗೆ ಕಾರಣವಾಗಿದೆ.

    English summary
    Yediyur Shree Siddhalingeshwara Written Update On July 1st Episodes. Here is the details.
    Saturday, July 2, 2022, 10:07
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X