ಸೋಶಿಯಲ್ ಮೀಡಿಯಾ ಮೂಲಕ ವಿಚ್ಛೇದನ ಘೋಷಿಸಿದ ಖ್ಯಾತ ನಟಿ..!
ಮದುವೆ ಮಕ್ಕಳಾಟಿಕೆ ಅಲ್ಲ. ಮದುವೆ ಎನ್ನುವುದು ಜೀವನದ ಅತೀ ಮಹತ್ವದ ಘಟ್ಟ. ಮದುವೆ ಎನ್ನುವುದು ಗಂಡು ಹೆಣ್ಣಿನ ಮಿಲನ ಅಷ್ಟೇ ಅಲ್ಲ. ಅದೊಂದು ಪವಿತ್ರ ಬಂಧನ. ಮದುವೆಯೆಂಬ ವ್ಯವಸ್ಥೆಯಿಂದ ಸಮಾಜದಲ್ಲಿ ಒಂದು ಶಿಸ್ತುಬದ್ಧ ಜೀವನವಿರುತ್ತದೆ. ನಮ್ಮದೇ ಆದ ಕೆಲವು ಕೌಟುಂಬಿಕ ಕರ್ತವ್ಯಗಳೆಲ್ಲವೂ ಸರಾಗವಾಗಿ ನಡೆಯಲು ಮದುವೆ ಎಂಬ ಸಾಂಸ್ಥಿಕ ವ್ಯವಸ್ಥೆ ಅತಿ ಅಗತ್ಯ. ಆದರೆ ಈಗ..
ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಹಸೆಮಣೆ ಏರಿದಷ್ಟೇ ವೇಗವಾಗಿ ನ್ಯಾಯಾಲಯದ ಮೆಟ್ಟಿಲೇರುತ್ತಾರೆ. ಅದರಲ್ಲಿಯೂ ಬಣ್ಣದ ಲೋಕದಲ್ಲಿ ಅಂತೂ ಪ್ರೀತಿ ಅನ್ನುವ ಪದಕ್ಕೆ ಅರ್ಥ ಇಲ್ಲ. ಮದುವೆಯೆಂಬ ಪವಿತ್ರ ಬಂಧನಕ್ಕೆ ಬೆಲೆಯೂ ಇಲ್ಲ.

ಇದಕ್ಕೆ ಕೈಗನ್ನಡಿ ಎಂಬಂತೆ ಕಳೆದ ಎರಡು ಮೂರು ವರ್ಷಗಳಲ್ಲಿ ಅನೇಕ ತಾರೆಯರು ವಿಚ್ಛೇದನ ಪಡೆದಿದ್ದಾರೆ. ಈ ಸಾಲಿಗೆ ಈಗ ಈ ಸಾಲಿಗೆ ಈಗ ಲತಾ ಸಬರ್ವಾಲ್ ಮತ್ತು ಸಂಜೀವ್ ಸೇಠ್ ಸೇರಿಕೊಂಡಿದ್ದಾರೆ.
ಹೌದು.. ಲತಾ ಸಬರ್ವಾಲ್ ಮತ್ತು ಸಂಜೀವ್ ಸೇಠ್.. ಹಿಂದಿ ಕಿರುತೆರೆ ಪ್ರೇಕ್ಷಕರಿಗೆ ತುಂಬಾನೇ ಚಿರಪರಿಚಿತರು. 'ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ' ಧಾರಾವಾಹಿಯಲ್ಲಿ ಜೊತೆಯಲ್ಲಿ ತೆರೆ ಹಂಚಿಕೊಂಡಿದ್ದ ಇಬ್ಬರು ಪ್ರೇಕ್ಷಕರ ಮೇಲೆ ಮೋಡಿಯನ್ನು ಮಾಡಿದ್ದರು. ಇದಕ್ಕೆ ಕೈಗನ್ನಡಿ ಎಂಬಂತೆ ಹಲವು ವರ್ಷಗಳ ಕಾಲ ಈ ಧಾರಾವಾಹಿ ಕಿರುತೆರೆಯಲ್ಲಿ ಪ್ರಸಾರವಾಗಿತ್ತು. ದಾಖಳೆಯನ್ನು ಕೂಡ ಬರೆದಿತ್ತು.
ಹೀಗೆ ಧಾರಾವಾಹಿಯಲ್ಲಿ ಜೊತೆ ಜೊತೆಯಲ್ಲಿ ಅಭಿನಯಿಸಲು ಶುರು ಮಾಡಿದ ಇಬ್ಬರು ಆ ನಂತರ ಮದುವೆಯ ಬಂಧನಕ್ಕೊಳಗಾದರು. 2009ರಲ್ಲಿ ಸಪ್ತಪದಿಯನ್ನು ತುಳಿದರು. ಅಲ್ಲಿಂದ ಇಲ್ಲಿಯವರೆಗೆ.. ಹೆಚ್ಚು ಕಡಿಮೆ 15 ವರ್ಷ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಸಂಸಾರದ ನೌಕೆಯಲ್ಲಿ ವಿಹರಿಸಿದ ಇಬ್ಬರು ಇದೀಗ ದೂರವಾಗುವ ನಿರ್ಧಾರವನ್ನು ಮಾಡಿದ್ದಾರೆ. ಆನ್‌ಲೈನ್‌ನಲ್ಲಿ ವಿಚ್ಛೇದನ ಕೂಡ ಘೋಷಿಸಿದ್ದಾರೆ.
ಈ ಕುರಿತು ತಮ್ಮ ಸೋಶೀಯಲ್ ಮೀಡಿಯಾ ಮೂಲಕ ಅಧಿಕೃತವಾದ ಮಾಹಿತಿಯನ್ನು ಹಂಚಿಕೊಂಡಿರುವ ಲತಾ ನಾನು ನನ್ನ ಪತಿಯಿಂದ { ಸಂಜೀವ್ ಸೇಠ್ } ಅವರಿಂದ ದೂರವಾಗುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಮುದ್ದಾದ ಮಗುವನ್ನು ತಮಗೆ ನೀಡಿದ್ದಕ್ಕೆ ತಮ್ಮ ಪತಿಗೆ ಧನ್ಯವಾದವನ್ನು ಕೂಡ ಹೇಳಿದ್ದಾರೆ. ಅವರ ಮುಂದಿನ ಜೀವನಕ್ಕೆ ನಾನು ಶುಭ ಹಾರೈಸುತ್ತೇನೆ ಎಂದು ಹೇಳಿದ್ದಾರೆ.

ಇಷ್ಟೇ ಅಲ್ಲದೇ ನನ್ನ ಮತ್ತು ನನ್ನ ಕುಟುಂಬದ ಪ್ರೈವೇಸಿಗೆ ಬೆಲೆ ನೀಡಿ, ನಮಗೆ ಯಾವ ಪ್ರಶ್ನೆಗಳನ್ನು ಕೇಳಬೇಡಿ ನಮಗೆ ಕರೆಯನ್ನು ಕೂಡ ಮಾಡಬೇಡಿ ಎಂದು ಮನವಿಯನ್ನು ಕೂಡ ಲತಾ ಸಬರ್ವಾಲ್ ಮಾಡಿಕೊಂಡಿದ್ದಾರೆ.
ಲತಾ ಸಬರ್ವಾಲ್ ಮತ್ತು ಸಂಜೀವ್ ಸೇಠ್ ಅವರ ಈ ನಿರ್ಧಾರದಿಂದ ಸಹಜವಾಗಿ ಇವರ ಅಭಿಮಾನಿಗಳು ಆತಂಕಕ್ಕೀಡಾಗಿದ್ದಾರೆ. ಮತ್ತೊಮ್ಮೆ ನೀವು ತೆಗೆದುಕೊಂಡಿರುವ ನಿರ್ಧಾರದ ಕುರಿತು ಆಲೋಚನೆ ಮಾಡಿ ಎನ್ನುವ ಸಲಹೆಯನ್ನು ಕೂಡ ನೀಡುತ್ತಿದ್ಧಾರೆ. ಇನ್ನು ಕೆಲವರು ಮುಂದಿನ ಜೀವನ ಚೆನ್ನಾಗಿರಲಿ ಎಂದು ಹಾರೈಸುತ್ತಿದ್ದಾರೆ.
ಅಂದ್ಹಾಗೇ ಸಂಜೀವ್ ಸೇಠ್ ಅವರಿಂದ ದೂರವಾದ ಲತಾ ಸಬರ್ವಾಲ್ ಅವರಿಗೆ ಸದ್ಯ 45ರ ಹರೆಯ. ಮತ್ತೊಂದು ಕಡೆ ನಟನಾಗಿ ಗುರುತಿಸಿಕೊಳ್ಳುವುದಲ್ಲದೇ ಕಂಟೆಂಟ್ ಕ್ರಿಯೇಟರ್ ಮತ್ತು ಫುಡ್ ವ್ಲಾಗರ್ ಆಗಿ ಗುರುತಿಸಿಕೊಂಡಿರುವ ಸಂಜೀವ್ ಸೇಠ್ ಅವರಿಗೆ ಸದ್ಯ 59 ವರ್ಷ. ಇಬ್ಬರ ನಡುವೆ 14 ವರ್ಷಗಳ ಅಂತರ ಇದೆ.
ಇನ್ನು ಸಂಜೀವ್ ಸೇಠ್ ಅವರಿಗೆ ಇದು ಮೊದಲ ಮದುವೆ ಅಲ್ಲ. ಬದಲಿಗೆ ಇದು ಅವರ ಎರಡನೇ ಮದುವೆಯಾಗಿತ್ತು. ಈ ಹಿಂದೆ ನಟಿ ರೇಷಮ್ ಟಿಪ್ನಿಸ್ ಅವರ ಜೊತೆ ಸಂಜೀವ್ ಸಪ್ತಪದಿ ತುಳಿದಿದ್ದರು. 1993ರಿಂದ 2004ರವೆರೆಗೆ ಸಂಸಾರವನ್ನು ನಡೆಸಿದ್ದರು. ಇವರ ಪ್ರೀತಿಯ ಸಂಕೇತವಾಗಿ ಈ ಜೋಡಿಗೆ ಇಬ್ಬರು ಮಕ್ಕಳಿದ್ದಾರೆ.


Click it and Unblock the Notifications











