For Quick Alerts
  ALLOW NOTIFICATIONS  
  For Daily Alerts

  ಡೇಟಿಂಗ್, ಮದುವೆ ಬಗ್ಗೆ 'ಅರ್ಜುನ' ಪಾತ್ರದ ಖ್ಯಾತಿಯ ನಟ ಶಾಹೀರ್ ಹೇಳಿದ್ದೇನು?

  |

  ಹಿಂದಿ ಕಿರುತೆರೆ ಲೋಕದ ಖ್ಯಾತ ನಟ ಶಾಹೀರ್ ಶೇಖ್ ಕನ್ನಡ ಪ್ರೇಕ್ಷಕರಿಗೂ ಚಿರಪರಿಚಿತ. ಶಾಹೀರ್ ಶೇಖ್ ಹೆಸರಿಗಿಂತ, ಕನ್ನಡ ಪ್ರೇಕ್ಷಕರ ಮನಗೆದ್ದಿರುವ 'ಮಹಾಭಾರತ'ದ ಅರ್ಜುನ ಎಂದರೆ ಥಟ್ ಅಂತ ನೆನಪಾಗುತ್ತೆ. ಅಷ್ಟರ ಮಟ್ಟಿಗೆ ಅರ್ಜುನ ಪಾತ್ರ ಕನ್ನಡದಲ್ಲಿಯೂ ಖ್ಯಾತಿಗಳಿಸಿದೆ.

  'ಮಹಾಭಾರತ' ಧಾರಾವಾಹಿ ಮೂಲಕ ಅಪಾರ ಸಂಖ್ಯೆಯ ಅಭಿಮಾನಿ ಬಳಗ ಹೊಂದಿರುವ ಶಾಹೀರ್ ಸದ್ಯ ''ಯೇ ರಿಶ್ತಾ ಹೇ ಪ್ಯಾರ್ ಕಿ' ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಮೂಲತಹ ಕಾಶ್ಮೀರದವರಾದ ಶಾಹೀರ್ 2009ರಲ್ಲಿ ಕಿರುತೆರೆ ಲೋಕಕ್ಕೆ ಕಾಲಿಟ್ಟಿದ್ದಾರೆ. ಚಿಕ್ಕ ಪುಟ್ಟ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದ್ದ ಶಹೀರ್ ಗೆ ದೊಡ್ಡ ಮಟ್ಟದ ಖ್ಯಾತಿ ತಂದು ಕೊಟ್ಟಿದ್ದು 2014ರಲ್ಲಿ ಬಂದ 'ಮಹಾಭಾರತ' ಧಾರಾವಾಹಿಯ ಅರ್ಜುನ ಪಾತ್ರ. ಮುಂದೆ ಓದಿ..

  5 ಕೋಟಿ ಗೆದ್ದು ಬೀದಿಗೆ ಬಂದ 'ಕರೋಡ್ ಪತಿ' ವಿನ್ನರ್ ಸುಶೀಲ್ ಕುಮಾರ್ ಜೀವನದ ಕಹಿ ಘಟನೆ

  ಅಪಾರ ಸಂಖ್ಯೆಯ ಫಾಲೋವರ್ಸ್ ಹೊಂದಿರುವ ನಟ

  ಅಪಾರ ಸಂಖ್ಯೆಯ ಫಾಲೋವರ್ಸ್ ಹೊಂದಿರುವ ನಟ

  ಸಾಮಾಜಿಕ ಜಾಲತಾಣದಲ್ಲಿ ಅಪಾರ ಫಾಲೋವರ್ಸ್ ಹೊಂದಿರುವ ಶಾಹೀರ್ ಗೆ ಮಹಿಳಾ ಅಭಿಮಾನಿಗಳ ಸಂಖ್ಯೆಯೇ ಹೆಚ್ಚು. ಈ ಹ್ಯಾಂಡ್ ಸಮ್ ಹಂಕ್ ಒಂದು ಧಾರಾವಾಹಿ ಮುಗಿಯುತ್ತಿದ್ದಂತೆ ಮತ್ತೊಂದು ಧಾರಾವಾಹಿ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಾ, ಮಹಿಳಾ ಅಭಿಮಾನಿಗಳ ಹಾರ್ಟ್ ಬೀಟ್ ಹೆಚ್ಚಿಸುತ್ತಿದ್ದಾರೆ.

  'ಯೇ ರಿಶ್ತಾ ಹೇ ಪ್ಯಾರ್ ಕಿ' ಧಾರಾವಾಹಿಯಲ್ಲಿ ಅಭಿನಯ

  'ಯೇ ರಿಶ್ತಾ ಹೇ ಪ್ಯಾರ್ ಕಿ' ಧಾರಾವಾಹಿಯಲ್ಲಿ ಅಭಿನಯ

  ಇದೀಗ ಶಾಹೀರ್ ಹಿಂದಿ ಕಿರುತೆರೆಯಲ್ಲೇ ಹೆಚ್ಚು ಖ್ಯಾತಿ ಗಳಿಸಿರುವ 'ಯೇ ರಿಶ್ತಾ ಹೇ ಪ್ಯಾರ್ ಕಿ' ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಅಷ್ಟಕ್ಕು ಶಾಹೀರ್ ಶೇಖ್ ಬಗ್ಗೆ ಈಗ್ಯಾಕೆ ಅಂತೀರಾ? ಶಾಹೀರ್ ಇತ್ತೀಚಿಗೆ ಮದುವೆ ಮತ್ತು ಡೇಟಿಂಗ್ ಬಗ್ಗೆ ಮಾತನಾಡಿದ್ದಾರೆ.

  ಮದುವೆ ಬಗ್ಗೆ ಶಾಹೀರ್ ಹೇಳಿದ್ದೇನು?

  ಮದುವೆ ಬಗ್ಗೆ ಶಾಹೀರ್ ಹೇಳಿದ್ದೇನು?

  ಖಾಸಗಿ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಶಾಹೀರ್ ಮದುವೆ ಬಗ್ಗೆ ರಿವೀಲ್ ಮಾಡಿದ್ದಾರೆ. ಮದುವೆ ಆಗುವ ಮೊದಲು ಒಂದಿಷ್ಟು ಯೋಜನೆಗಳು ಬಾಕಿ. ಆ ನಂತರ ಮದುವೆ ಎನ್ನುತ್ತಿದ್ದಾರೆ. ಏನದು ಯೋಜನೆ ಅಂತೀರಾ? ಮದುವೆಗೂ ಮೊದಲು ಶಾಹೀರ್ ದೊಡ್ಡ ಮನೆಯನ್ನು ಕಟ್ಟಬೇಕಂತೆ. ಈಗಾಗಲೇ ಮನೆಯ ಕಟ್ಟುವ ಬಗ್ಗೆ ಪ್ಲಾನ್ ನಡೆಯುತ್ತಿದೆಯಂತೆ. ಕನಸಿನ ಮನೆ ನಿರ್ಮಾಣವಾದ ಬಳಿಕವೇ ಮದುವೆ ಆಗುವುದಾಗಿ ಹೇಳಿದ್ದಾರೆ.

  ಡೆಲ್ಲಿಯಿಂದ ಟೀಮ್ ಬಂದ್ರೇನೇ ಇವರ ಬಂಡವಾಳ ಗೊತ್ತಾಗೋದು | Oneindia Kannada
  ಡೇಟಿಂಗ್ ಬಗ್ಗೆ ಹೇಳಲು ನಿರಾಕರಿಸಿದ ಶಾಹೀರ್

  ಡೇಟಿಂಗ್ ಬಗ್ಗೆ ಹೇಳಲು ನಿರಾಕರಿಸಿದ ಶಾಹೀರ್

  ಲಾಕ್ ಡೌನ್ ನಿಂದ ಎಲ್ಲಾ ಯೋಜನೆಗಳು ಮುಂದಕ್ಕೆ ಹೋದ ಕಾರಣ ಮದುವೆ ಕೂಡ ಇನ್ನೂ ಎರಡು ವರ್ಷಕ್ಕೆ ಮುಂದಕ್ಕೆ ಹಾಕಿರುವುದಾಗಿ ಶಾಹೀರ್ ಹೇಳಿದ್ದಾರೆ. ಡೇಟಿಂಗ್ ಮತ್ತು ಪ್ರೀತಿಯ ಬಗ್ಗೆ ಮಾತನಾಡಲು ಶಾಹೀರ್ ನಿರಾಕರಿಸಿದ್ದಾರೆ. ಮದುವೆ ಯಾವಾಗ ಆಗುತ್ತೋ ಆಗ ಜಗತ್ತಿಗೆ ತಿಳಿಯಲಿದೆ ಎಂದಿದ್ದಾರೆ.

  English summary
  Mahabharata serial Arjuna actor Shaheer Sheikh talks about his relationship and marriage plans.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X